1999ರಲ್ಲಿ ಧರಮ್ ಸಿಂಗ್ಗೆ ಕೈ ತಪ್ಪಿದ ಸಿಎಂ ಸ್ಥಾನ: ಇಂದು ಸಿದ್ಧರಾಮಯ್ಯಗೆ ಅದೇ ಗತಿ ಬರಬಹುದಾ?
ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂದು ಕಳೆದ ಮೂರು ದಿನದಿಂದ ಇದೇ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಮೀಟಿಂಗ್ ಮೇಲೆ ಮೀಟಿಂಗ್ ನಡೆಸಿದ್ರು ಸಮಸ್ಯೆ ಬಗೆಹರಿದಿಲ್ಲ.

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂದು ಕಳೆದ ಮೂರು ದಿನದಿಂದ ಇದೇ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಮೀಟಿಂಗ್ ಮೇಲೆ ಮೀಟಿಂಗ್ ನಡೆಸಿದ್ರು ಸಮಸ್ಯೆ ಬಗೆಹರಿದಿಲ್ಲ. ಇದೇ ವಿಷಯ ಈಗ ದೆಹಲಿ ಅಂಗಳ ತಲುಪಿದೆ. ಸಿದ್ಧರಾಮಯ್ಯ (Siddaramaiah) ಮತ್ತು ಡಿ.ಕೆ ಶಿವಕುಮಾರ್ (DK Shivakumar) ಇಬ್ಬರೂ ಘಟಾನುಘಟಿ ನಾಯಕರು ಸಿಎಂ ರೇಸ್ನಲ್ಲಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲೇ ಸುದೀರ್ಘ ಸಭೆ ನಡೆಸಿದ್ದ ಎಐಸಿಸಿ ವೀಕ್ಷಕರು ಕಾಂಗ್ರೆಸ್‌ನ 135 ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದರು. ಇದೇ ರೀತಿಯ ಒಂದು ವಿದ್ಯಮಾನ ರಾಜ್ಯ ರಾಜಕಾರಣದಲ್ಲಿ ಈ ಹಿಂದೆ 1999ರ ನಡೆದಿತ್ತು. ಆ ಕುರಿತು ಒಂದು ವರದಿ ಇಲ್ಲಿದೆ.
ಇಂದು ರಾಜ್ಯದಲ್ಲಿ ಸಿಎಂ ಆಯ್ಕೆ ಕಗ್ಗಂಟ್ಟಾಗಿದೆ. ಇದೇ ರೀತಿಯ ಒಂದು ಪರಿಸ್ಥಿತಿ 1999ರಲ್ಲಿ ನಡೆದಿತ್ತು. ಅಂದು ನಿತ್ಯವೂ ಸಿಎಂ ಆಯ್ಕೆ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ವಾದ- ಪ್ರತಿವಾದಗಳು, ಚರ್ಚೆಗಳು ಉಂಟಾಗಿದ್ದವು.
90ರ ದಶಕದಲ್ಲಿ ತಮ್ಮ ಪಕ್ಷ ಅಧಿಕಾರದಿಂದ ಹೊರಗುಳಿದ ಸಂದರ್ಭದಲ್ಲಿ ಧರಮ್ ಸಿಂಗ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. 1999ರಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಎಸ್ಎಂ ಕೃಷ್ಣ ಅವರಿಗೆ ವಹಿಸಲಾಯಿತು. ಆ ನಂತರ ಧರಮ್ ಸಿಂಗ್ ಅವರಿಗೆ ಯಾವುದೇ ಹುದ್ದೆ ನೀಡಿರಲಿಲ್ಲ. ಆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದರು. ಬಳಿಕ ಎಸ್ಎಂ ಕೃಷ್ಣ ನೇತೃತ್ವದಲ್ಲಿ ರಾಜ್ಯದಾದ್ಯಂತ ‘ಪಾಂಚಜನ್ಯ’ ಯಾತ್ರೆ ಕೈಗೊಂಡ ಕಾಂಗ್ರೆಸ್ ಪಕ್ಷವು ನಂತರದ ಚುನಾವಣೆಯಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಆಗಲೂ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆದಿತ್ತು. ಅಂತಿಮವಾಗಿ ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾದರು. ಧರಮ್ ಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಇಬ್ಬರಿಗೂ ಹಿನ್ನಡೆಯಾಯಿತು. ವಿಶೇಷವೆಂದರೆ, ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್ಎಂ ಕೃಷ್ಣ ಸಹ ಒಕ್ಕಲಿಗರಾದರೆ, ಇಂದು ಡಿಕೆ ಶಿವಕುಮಾರ್ ಸಹ ಒಕ್ಕಲಿಗರಾಗಿದ್ದಾರೆ. ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಖರ್ಗೆ ಇಂದು ಎಐಸಿಸಿ ಅಧ್ಯಕ್ಷರಾಗಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನ; ಪಟ್ಟುಬಿಡದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಬೆಂಬಲಿಗರು ಹೇಳೋದೇನು ನೋಡಿ
ಸದ್ಯ ರಾಜ್ಯದಲ್ಲಿ 1999ರ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದಾರೆ. ಪಕ್ಷದ ನಿಯಮದಡಿ ಡಿ.ಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕು ಎನ್ನುವ ಮಾತುಗಳು ಸಹ ಕೇಳಿಬಂದಿವೆ. ಸಿದ್ಧರಾಮಯ್ಯ ಅವರು ಈಗಾಗಲೇ ಒಂದು ಬಾರಿ ಸಿಎಂ ಆಗಿದ್ದಾರೆ. ಜೊತೆಗೆ ಸಿದ್ಧರಾಮಯ್ಯ ಅವರಿಗೆ 75 ವರ್ಷಗಳಾಗಿವೆ. ಆದರೂ ಕೂಡ ಅವರು ಸಿಎಂ ಸ್ಥಾನಕ್ಕೆ ಫೈಟ್ ಮಾಡುತ್ತಿದ್ದಾರೆ.
ಅದೇ ರೀತಿಯಾಗಿ ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಈ ಬಾರಿ ಇಡೀ ಒಕ್ಕಲಿಗ ಸಮುದಾಯ ನನ್ನ ಬೆನ್ನಿಗೆ ನಿಂತಿದೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳು ಬಂದಿವೆ. ಶೇಕಡಾ 5ರಷ್ಟು ಒಕ್ಕಲಿಗರ ಹೆಚ್ಚುವರಿ ವೋಟು ಕಾಂಗ್ರೆಸ್‌ಗೆ ಬಂದಿದೆ. ಒಕ್ಕಲಿಗರು ಸಿಎಂ ಆಗುವ ಅವಕಾಶ ಇರುವುದಕ್ಕೆ ಹೆಚ್ಚುವರಿ ಮತ ಬಂದಿದೆ.
ಇದನ್ನೂ ಓದಿ: ಸೋತ ಪ್ರಮುಖ ಸಚಿವರ ಮನೆ-ಮನೆಗೆ ಭೇಟಿ ನೀಡಿ ಧೈರ್ಯ ತುಂಬುತ್ತಿರುವ ಬಸವರಾಜ ಬೊಮ್ಮಾಯಿ
ಹೀಗಾಗಿ ನನಗೇ ಸಿಎಂ ಸ್ಥಾನ ಕೊಡಬೇಕು ಎಂದು ಡಿಕೆ ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒತ್ತಾಯಿಸಿದ್ದಾರೆ. ಇಲ್ಲಿ ಮುಖ್ಯವಾಗಿ ಒಂದು ವಿಷಯ ಗಮನಿಸಲೇಬೇಕು. ಅದು ಏನೆಂದರೆ ಎಸ್ಎಂ ಕೃಷ್ಣ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಒಕ್ಕಲಿಗ ಸಮುದಾಯದವರು.
1999ರಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಸಿಎಂ ಆಯ್ಕೆ ವಿಚಾರ ಬಂದಾಗ ಆವತ್ತು ಕೂಡ ಶಾಸಕರ ಅಭಿಪ್ರಾಯ ಕೇಳಲಾಗಿತ್ತು. ಆದರೆ ಅಂದು ಬ್ಯಾಲೆಟ್ ಪೇಪರ್ ವಿಧಾನವಿರಲಿಲ್ಲ. ಆದರೆ ಇಂದು ಸಿಎಂ ಆಯ್ಕೆ ವಿಚಾರಕ್ಕೆ ಈ ಬ್ಯಾಲೆಟ್ ಪೇಪರ್ ಕಗ್ಗಂಟಾಗಿದೆ.
ಸದ್ಯ ಶಾಸಕರ ಅಭಿಪ್ರಾಯ ವರದಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೈ ಸೇರಿದೆ. ಈ ವರದಿ ಪರಿಶೀಲನೆ ನಡೆಸಿರುವ ಹೈಕಮಾಂಡ್ ಅದರ ಆಧಾರದಲ್ಲೇ ಸಿಎಲ್‌ಪಿ ನಾಯಕ ಆಯ್ಕೆ ಮಾಡಲಿದೆ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:49 pm, Tue, 16 May 23




