ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka assembly elections) ಪ್ರಚಾರದ ವೇಳೆ ಮದ್ಯದ ಅಮಲಿನಲ್ಲಿರುವುದು ಎಂಬ ಬರಹದೊಂದಿಗೆ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಾಲುತ್ತಾ ನಡೆಯುತ್ತಿರುವ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿಯಂತೆ ಎಂಬ ಬರಹದೊಂದಿಗೆ ಹಲವಾರು ನೆಟ್ಟಿಗರು ಕಾಂಗ್ರೆಸ್ನ್ನು (Congress) ಟೀಕಿಸುತ್ತಾ ಈ ವಿಡಿಯೊ ಶೇರ್ ಮಾಡಿದ್ದಾರೆ. ಇನ್ನು ಕೆಲವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ಕರ್ನಾಟಕದ ಸಿಎಂ ಆಕಾಂಕ್ಷಿಯಾಗಿರುವ ಶಿವಕುಮಾರ್ ಮನೆ ಮನೆ ಪ್ರಚಾರದ ಸಮಯದಲ್ಲಿ ಮದ್ಯದ ಅಮಲಿನಲ್ಲಿರುವುದು ಎಂದು ಬರೆದುಕೊಂಡಿದ್ದಾರೆ.ಕರ್ನಾಟಕದಲ್ಲಿ ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲಿದೆ.
ವೈರಲ್ ವಿಡಿಯೊದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನಡೆದು ಬರುತ್ತಿರುವ ಡಿಕೆ ಶಿವಕುಮಾರ್ ಅವರನ್ನು ಕಾಣಬಹುದು. ಸುಸ್ತಾಗಿ ಹೆಜ್ಜೆ ಇಡಲು ಸಾಧ್ಯವಾಗದೇ ಇರುವ ಪರಿಸ್ಥಿತಿಯಲ್ಲಿ ಅವರು ಇದ್ದಾರೆ. ಡಿಕೆಶಿಯವರ ಈ ವೈರಲ್ ವಿಡಿಯೊ ಕರ್ನಾಟಕ ಚುನಾವಣೆಯ ಪ್ರಚಾರದ್ದು ಅಲ್ಲ. ವೈರಲ್ ವಿಡಿಯೊದ ಫ್ಯಾಕ್ಟ್ ಚೆಕ್ ನಡೆಸಿ ವರದಿ ಮಾಡಿರುವ ಬೂಮ್ ಇದು 2022 ಜನವರಿಯಲ್ಲಿನ ವಿಡಿಯೊ ಎಂದು ಹೇಳಿದೆ.
For those who were asking, here is the source of this Video.
DK Shivakumar : ಸುಸ್ತಾಗಿ ತಟ್ಟಾಡಿದ ಡಿಕೆಶಿ | Mekedatu Padayatre | NewsFirst Kannada January 9th 2022https://t.co/NfLJ2J1cXz
— Suresh ?? (@surnell) January 9, 2022
ವಿಡಿಯೊದ ಫ್ರೇಮ್ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಜನವರಿ 9, 2022ರಂದು ಮಾಡಿದ ಟ್ವೀಟೊಂದರಲ್ಲಿ ಈ ವಿಡಿಯೊ ಸಿಕ್ಕಿದೆ. ಈ ವಿಡಿಯೊ ನ್ಯೂಸ್‌ಫಸ್ಟ್ ‘ ಸುಸ್ತಾಗಿ ತಟ್ಟಾಡಿದ ಡಿಕೆಶಿ’ ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿದೆ.
ಇದನ್ನೂ ಓದಿ: Fact Check: ಸೀರೆ ಹಂಚುವಾಗ ಹಿರಿಯ ಮಹಿಳೆ ಮೇಲೆ ಬಿಜೆಪಿ ನಾಯಕನಿಂದ ಹಲ್ಲೆ; ವೈರಲ್ ವಿಡಿಯೊ ಕರ್ನಾಟಕದ್ದಲ್ಲ
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಜಲಾಶಯದ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕೋವಿಡ್-19 ನಿರ್ಬಂಧಗಳನ್ನು ಕಡೆಗಣಿಸಿ ಮೇಕೆದಾಟು ಪಾದಯಾತ್ರೆಯನ್ನು ಜನವರಿ 2021 ರಲ್ಲಿ ಆರಂಭಿಸಿತು. ವರದಿಗಳ ಪ್ರಕಾರ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೇಕೆದಾಟು ಪಾದಯಾತ್ರೆಯಲ್ಲಿ ಡಿಕೆಶಿ ಸುಸ್ತಾಗಿ ವಾಲುತ್ತಾ ನಡೆಯುತ್ತಿರುವ ವಿಡಿಯೊ ಇದಾಗಿದ್ದು, ಕರ್ನಾಟಕ ಚುನಾವಣೆಗಾಗಿ ಮನೆ ಮನೆ ಪ್ರಚಾರ ಅಭಿಯಾನದ ವೇಳೆಯಲ್ಲಿನ ವಿಡಿಯೊ ಇದಲ್ಲ.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ