Karnataka Assembly Elections 2023: ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದಿಂದ ದೂರ ಉಳಿದ ಪರಭಾಷೆ ಸ್ಟಾರ್​ಗಳು; ಕಾರಣ ಏನು?

ಕಳೆದ ಚುನಾವಣೆಗಳಲ್ಲಿ ಅಕ್ಕ-ಪಕ್ಕದ ರಾಜ್ಯಗಳ ಸೆಲೆಬ್ರಿಟಿಗಳು ಕರ್ನಾಟಕಕ್ಕೆ ಬಂದು ಕ್ಯಾಂಪೇನ್​ ಮಾಡಿದ್ದರು. ಆದರೆ ಈ ಬಾರಿ ಇತ್ತ ತಲೆ ಹಾಕಿಲ್ಲ.

Karnataka Assembly Elections 2023: ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದಿಂದ ದೂರ ಉಳಿದ ಪರಭಾಷೆ ಸ್ಟಾರ್​ಗಳು; ಕಾರಣ ಏನು?
ಪವನ್ ಕಲ್ಯಾಣ್
Follow us
ಮದನ್​ ಕುಮಾರ್​
|

Updated on: May 04, 2023 | 7:15 AM

ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲ ರಾಜಕೀಯ ಪಕ್ಷಗಳು ಪ್ರಯತ್ನ ನಡೆಸುತ್ತಿವೆ. ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬಹುಮತ ಸಿಗಲಿದೆ ಎಂಬುದನ್ನು ತಿಳಿಯುವ ಕೌತುಕ ಎಲ್ಲರಲ್ಲೂ ಇದೆ. ಪ್ರಮಖ ಪಕ್ಷಗಳು ಶಕ್ತಿಮೀರಿ ಪ್ರಚಾರ (Political Campaign) ಮಾಡುತ್ತಿವೆ. ಅದಕ್ಕಾಗಿ ಸಿನಿಮಾ ನಟ-ನಟಿಯರ ಸಹಾಯವನ್ನೂ ಪಡೆಯಲಾಗಿದೆ. ಇದೇನೂ ಹೊಸ ಬೆಳವಣಿಗೆ ಅಲ್ಲ. ಸಿನಿಮಾ ಮತ್ತು ರಾಜಕೀಯದ ನಡುವೆ ಮೊದಲಿನಿಂದಲೂ ಒಂದು ಬಗೆಯ ನಂಟು ಇದೆ. ಮತದಾರರನ್ನು ಸೆಳೆಯಲು ಸ್ಟಾರ್​ ನಟ-ನಟಿಯರನ್ನು ಮುಂದೆಬಿಡುವ ತಂತ್ರವನ್ನು ಪ್ರತಿ ಚುನಾವಣೆಯಲ್ಲೂ ಬಳಸಲಾಗುತ್ತದೆ. ಕೆಲವೊಮ್ಮೆ ಪರಭಾಷೆಯ ಸಿನಿಮಾ ಕಲಾವಿದರನ್ನು ಕರೆತರುವ ಕೆಲಸವೂ ಆಗಿದ್ದುಂಟು. ಆದರೆ ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Elections 2023) ಪ್ರಚಾರದಿಂದ ಪರಭಾಷೆ ಸೆಲೆಬ್ರಿಟಿಗಳು ದೂರ ಉಳಿದುಕೊಂಡಿದ್ದಾರೆ.

ಆಂಧ್ರ, ತೆಲಂಗಾಣದ ಗಡಿಗೆ ಅಂಟಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿ ತೆಲುಗು ಸಿನಿಮಾಗಳ ಕ್ರೇಜ್​ ಇದೆ. ಟಾಲಿವುಡ್​ ನಟರನ್ನು ಆರಾಧಿಸುವ ಮಂದಿ ಈ ಪ್ರದೇಶಗಳಲ್ಲಿ ಇದ್ದಾರೆ. ಅದನ್ನೇ ಎನ್​ಕ್ಯಾಶ್​ ಮಾಡಿಕೊಳ್ಳಲು ರಾಜಕಾರಣಿಗಳು ಪ್ರಯತ್ನಿಸುತ್ತಾರೆ. ಕಳೆದ ಚುನಾವಣೆಗಳಲ್ಲಿ ಬ್ರಹ್ಮಾನಂದಂ, ಅಲಿ, ಪವನ್​ ಕಲ್ಯಾಣ್​ ಮುಂತಾದ ಸ್ಟಾರ್​ ನಟರು ಬಂದು ಪ್ರಚಾರ ಮಾಡಿದ್ದರು. ಆದರೆ ಈ ಬಾರಿ ಅದು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಕಾಂಗ್ರೆಸ್​ ಸೇರಿದ ಗೀತಾ ಶಿವರಾಜ್​ಕುಮಾರ್​ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್

ಇದನ್ನೂ ಓದಿ
Image
Kichcha Sudep: ಕಿಚ್ಚ ಹೋದಲೆಲ್ಲ ಜನಸಾಗರ; ಸುದೀಪ್ ಕ್ರೇಜ್ ಹೇಗಿದೆ ನೋಡಿ..
Image
Shivarajkumar: ‘ನಾನು ನಟ ಮಾತ್ರ.. ರಾಜಕೀಯದ ಬಗ್ಗೆ ನನಗೆ ಗೊತ್ತಿಲ್ಲ’: ಚುನಾವಣಾ ಪ್ರಚಾರದ ವೇಳೆ ಶಿವಣ್ಣನ ನೇರ ಮಾತು
Image
Kichcha Sudeep: ರಾಜಕೀಯ ಪ್ರಚಾರದ ನಡುವೆಯೂ ಅಭಿಮಾನಿಗಳ ಪ್ರೀತಿ ಕಡೆಗೆ ಗಮನ ಹರಿಸಿದ ಸುದೀಪ್​
Image
ಕಾಂಗ್ರೆಸ್​ ಸೇರಿದ ಗೀತಾ ಶಿವರಾಜ್​ಕುಮಾರ್​ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್

ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದುಕೊಂಡಿವೆ. ಮೇ 8ರ ಬಳಿಕ ಬಹಿರಂಗ ಪ್ರಚಾರ ಮಾಡುವಂತಿಲ್ಲ. ಅಷ್ಟರೊಳಗೆ ಮತದಾರರನ್ನು ಸೆಳೆಯಬೇಕಿದೆ. ಹಾಗಿದ್ದರೂ ಕೂಡ ಅಕ್ಕ-ಪಕ್ಕದ ರಾಜ್ಯಗಳ ಸೆಲೆಬ್ರಿಟಿಗಳು ಕರ್ನಾಟಕದಲ್ಲಿ ಕ್ಯಾಂಪೇನ್​ ಮಾಡುವ ಲಕ್ಷಣ ಕಾಣಿಸುತ್ತಿಲ್ಲ. ಒಟ್ಟಿನಲ್ಲಿ ಅವರೆಲ್ಲರೂ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಬೆಳವಣಿಗೆಗೆ ಕಾರಣ ಏನು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: Shivarajkumar: ‘ನಾನು ನಟ ಮಾತ್ರ.. ರಾಜಕೀಯದ ಬಗ್ಗೆ ನನಗೆ ಗೊತ್ತಿಲ್ಲ’: ಚುನಾವಣಾ ಪ್ರಚಾರದ ವೇಳೆ ಶಿವಣ್ಣನ ನೇರ ಮಾತು

ಜನ ಸೇನಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪವನ್​ ಕಲ್ಯಾಣ್​ ಅವರು ಈ ಮೊದಲು ಬಿಜೆಪಿ ಜೊತೆ ಸ್ನೇಹ ಹೊಂದಿದ್ದರು. ಆದರೆ ನಂತರದ ಬೆಳವಣಿಗೆಗಳಿಂದ ಅವರಲ್ಲಿ ಅಸಮಾಧಾನ ಉಂಟಾಯಿತು. ಈಗ ಅವರು ಬಿಜೆಪಿ ಜೊತೆ ಮೊದಲಿನಂತೆ ಆಪ್ತವಾಗಿಲ್ಲ. ಹಾಗಾಗಿ ಅವರು ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವ ಸಾಧ್ಯತೆ ಬಹುತೇಕ ಇಲ್ಲ.

ಇದನ್ನೂ ಓದಿ: Kichcha Sudeep: ರಾಜಕೀಯ ಪ್ರಚಾರದ ನಡುವೆಯೂ ಅಭಿಮಾನಿಗಳ ಪ್ರೀತಿ ಕಡೆಗೆ ಗಮನ ಹರಿಸಿದ ಸುದೀಪ್​

ನಟ ಚಿರಂಜೀವಿ ಅವರಿಗೆ ಕರ್ನಾಟಕದಲ್ಲಿ ಫ್ಯಾನ್​ ಫಾಲೋಯಿಂಗ್​ ಇದೆ. ಆದರೆ ಅವರು ಈಗ ರಾಜಕೀಯ ಚಟುವಟಿಕೆಗಳಿಂದ ಹಿಂದೆ ಸರಿದಿದ್ದಾರೆ. ರಾಜಕೀಯಕ್ಕೆ ಗುಡ್​​ಬೈ ಹೇಳಿ ಸಿನಿಮಾ ಕೆಲಸಗಳಲ್ಲಿ ಸಂಪೂರ್ಣ ತೊಡಗಿಕೊಂಡಿದ್ದಾರೆ. ಹಾಗಾಗಿ ಅವರು ಕೂಡ ಕರ್ನಾಟಕದಲ್ಲಿ ಯಾವುದೇ ಅಭ್ಯರ್ಥಿಗಳ ಪರ ಕ್ಯಾಂಪೇನ್​ ಮಾಡುವುದಿಲ್ಲ.

ಇದನ್ನೂ ಓದಿ: Kichcha Sudep: ಕಿಚ್ಚ ಹೋದಲೆಲ್ಲ ಜನಸಾಗರ; ಸುದೀಪ್ ಕ್ರೇಜ್ ಹೇಗಿದೆ ನೋಡಿ..

ಬಾಲಿವುಡ್​ನ ಕೆಲವು ಸೆಲೆಬ್ರಿಟಿಗಳು ಕರ್ನಾಟಕದ ರಾಜಕಾರಣಿಗಳ ಜೊತೆ ಒಡನಾಟ ಹೊಂದಿದ್ದಾರೆ. ಈ ಹಿಂದೆ ಜಮೀರ್​ ಅಹ್ಮದ್​ ಖಾನ್​ ಅವರ ಬರ್ತ್​ಡೇ ಪಾರ್ಟಿಯಲ್ಲಿ ಸಂಜಯ್​ ದತ್​, ಜಾಕಿ ಶ್ರಾಫ್​, ಸಲ್ಮಾನ್ ಖಾನ್​ ಅವರ ಸಹೋದರ ಸೊಹೈಲ್​ ಖಾನ್​ ಮುಂತಾದವರು ಭಾಗವಹಿಸಿದ್ದರು. ಅಷ್ಟೆಲ್ಲ ಒಡನಾಟ ಇದ್ದರೂ ಕೂಡ ಚುನಾವಣಾ ಪ್ರಚಾರದಲ್ಲಿ ಅವರ‍್ಯಾರೂ ಕರ್ನಾಟಕಕ್ಕೆ ಬರುವ ಲಕ್ಷಣ ಕಾಣಿಸುತ್ತಿಲ್ಲ. ಒಟ್ಟಿನಲ್ಲಿ ಪರಭಾಷೆಯ ಸೆಲೆಬ್ರಿಟಿಗಳು ಕರುನಾಡಿನಲ್ಲಿ ಈ ಬಾರಿ ಯಾವುದೇ ಅಭ್ಯರ್ಥಿಯ ಪರ ಮತಬೇಟೆಗೆ ಇಳಿದಿಲ್ಲ.

ಇದನ್ನೂ ಓದಿ: ಧಾರವಾಡದಲ್ಲಿ ಕಿಚ್ಚನ ಕ್ರೇಜ್: ಸಿನಿಮಾ, ಚುನಾವಣಾ ಪ್ರಚಾರದ ನಡುವೆ ವ್ಯತ್ಯಾಸವಿಲ್ಲ ಎಂದ ನಟ ಸುದೀಪ್

ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳಲ್ಲಿ ಕೆಲವರು ಹುಮ್ಮಸ್ಸಿನಿಂದ ಕ್ಯಾಂಪೇನ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಿಚ್ಚ ಸುದೀಪ್​ ಅವರು ಬಸವರಾಜ ಬೊಮ್ಮಾಯಿ ಜೊತೆಗಿನ ಆಪ್ತತೆಯ ಕಾರಣದಿಂದ ‘ಕಮಲ’ ಪಾಳಯದ ಅಭ್ಯರ್ಥಿಗಳ ಪರವಾಗಿ ಮತ ಕೇಳುತ್ತಿದ್ದಾರೆ. ಗೀತಾ ಶಿವರಾಜ್​ಕುಮಾರ್​ ಅವರು ಕಾಂಗ್ರೆಸ್​ ಸೇರ್ಪಡೆ ಆಗಿರುವುದರಿಂದ ಶಿವರಾಜ್​ಕುಮಾರ್​ ಅವರು ‘ಕೈ’ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇನ್ನುಳಿದಂತೆ ಹರ್ಷಿಕಾ ಪೂಣಚ್ಚ, ಹರಿಪ್ರಿಯಾ, ಶ್ರುತಿ ಮುಂತಾದವರು ಕೂಡ ಕ್ಯಾಂಪೇನ್​ನಲ್ಲಿ ತೊಡಗಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ