Kichcha Sudeep: ರಾಜಕೀಯ ಪ್ರಚಾರದ ನಡುವೆಯೂ ಅಭಿಮಾನಿಗಳ ಪ್ರೀತಿ ಕಡೆಗೆ ಗಮನ ಹರಿಸಿದ ಸುದೀಪ್​

‘ವಿಕ್ರಾಂತ್​ ರೋಣ’ ಸಿನಿಮಾದಲ್ಲಿನ ಸುದೀಪ್​ ಅವರ ಗೆಟಪ್​ ರೀತಿ ಈ ಪೇಂಟಿಂಗ್​ ಸಿದ್ಧವಾಗಿದೆ. ಆ ಕಲಾಕೃತಿ ಹೇಗೆ ಮೂಡಿಬಂತು ಎಂಬುದನ್ನು ವಿವರಿಸಲು ವಿಡಿಯೋ ಮಾಡಲಾಗಿದೆ.

Kichcha Sudeep: ರಾಜಕೀಯ ಪ್ರಚಾರದ ನಡುವೆಯೂ ಅಭಿಮಾನಿಗಳ ಪ್ರೀತಿ ಕಡೆಗೆ ಗಮನ ಹರಿಸಿದ ಸುದೀಪ್​
ಕಿಚ್ಚ ಸುದೀಪ್ ಪೇಂಟಿಂಗ್
Follow us
ಮದನ್​ ಕುಮಾರ್​
|

Updated on: May 01, 2023 | 3:20 PM

ನಟ ಕಿಚ್ಚ ಸುದೀಪ್​ (Kichcha Sudeep) ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿರುವ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಬೇರೆ ಬೇರೆ ಅಭಿಪ್ರಾಯ ಇದೆ. ಅದೇನೇ ಇದ್ದರೂ ಸುದೀಪ್​ ಮೇಲೆ ಫ್ಯಾನ್ಸ್​ (Kichcha Sudeep Fans) ಪ್ರೀತಿ ತೋರಿಸುವುದು ಕಡಿಮೆ ಆಗಿಲ್ಲ. ಅದಕ್ಕೆ ಇಲ್ಲೊಂದು ಲೇಟೆಸ್ಟ್​ ಉದಾಹರಣೆ ಸಿಕ್ಕಿದೆ. ಅಭಿಮಾನಿಯೊಬ್ಬರು ಸುದೀಪ್​ ಅವರ ಪೇಂಟಿಂಗ್​​ (Kichcha Sudeep Painting) ಮಾಡಿದ್ದಾರೆ. ಅದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅದಕ್ಕೆ ಸ್ವತಃ ಸುದೀಪ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇದ್ದರೂ ಕೂಡ ಅವರು ಫ್ಯಾನ್ಸ್​ ತೋರಿಸುವ ಪ್ರೀತಿಯ ಕಡೆಗೆ ಗಮನ ಹರಿಸಿದ್ದಾರೆ. ಅಭಿಮಾನಿ ಬರೆದ ಈ ಕಾಲಾಕೃತಿಯನ್ನು ಅವರು ಟ್ವಿಟರ್​ನಲ್ಲಿ ಹಂಚಿಕೊಂಡು, ಮೆಚ್ಚುಗೆ ಸೂಚಿಸಿದ್ದಾರೆ. ಕಲಾವಿದನ ಈ ಪ್ರೀತಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಕಿಚ್ಚ ಸುದೀಪ್​ ನಟಿಸಿದ ‘ವಿಕ್ರಾಂತ್​ ರೋಣ’ ಸಿನಿಮಾ ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ಆ ಸಿನಿಮಾದಲ್ಲಿನ ಅವರ ಲುಕ್​ ಹೆಚ್ಚು ಹೈಲೈಟ್​ ಆಗಿತ್ತು. ಆ ಗೆಟಪ್​ನಲ್ಲೇ ಈಗ ಅಭಿಮಾನಿಯೊಬ್ಬರು ಪೇಂಟಿಂಗ್​ ಮಾಡಿದ್ದಾರೆ. ಆ ಕಲಾಕೃತಿ ಹೇಗೆ ಮೂಡಿಬಂತು ಎಂಬುದನ್ನು ವಿವರಿಸಲು ವಿಡಿಯೋ ಮಾಡಲಾಗಿದೆ. ಅದನ್ನು ‘ಮಾಲೂರು ಸುದೀಪ್​ ಸೇನೆ’ ಟ್ವಿಟರ್ ಖಾತೆಯಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ. ಸುದೀಪ್​ ಅವರು ಅದನ್ನು ರೀಟ್ವೀಟ್​ ಮಾಡಿಕೊಂಡು ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ
Image
Kichcha Sudeep: ‘ನಾನು ಯಾರಿಗೂ ಕ್ಷಮೆ ಕೇಳಿ ಎಂದಿಲ್ಲ’; ಆರೋಪಕ್ಕೆ ಸ್ಪಷ್ಟನೆ ನೀಡಿದ ಕಿಚ್ಚ ಸುದೀಪ್
Image
ಕಾಂಗ್ರೆಸ್​ ಸೇರಿದ ಗೀತಾ ಶಿವರಾಜ್​ಕುಮಾರ್​ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್
Image
Ramya: ‘ರಮ್ಯಾ ಎಂದಿಗೂ ಆ ರೀತಿ ಮಾಡಲ್ಲ ಅನ್ನೋದು ಗೊತ್ತು’: ಸುದೀಪ್
Image
Kichcha Sudeep: ‘ರಸ್ತೆಗೆ ಇಳಿದಾಗಲೇ ಅರ್ಹತೆ, ಯೋಗ್ಯತೆ ಗೊತ್ತಾಗೋದು’: ಕಿಚ್ಚ ಸುದೀಪ್

ಇನ್ನು, ಸುದೀಪ್​ ಅವರ ಮುಂದಿನ ಸಿನಿಮಾದ ಬಗ್ಗೆ ಅಪ್​ಡೇಟ್​ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಸುದೀಪ್​ ಅವರು ಸಿನಿಮಾ ಕೆಲಸಗಳ ಬಗ್ಗೆಯೂ ಒಂದು ಕಣ್ಣಿಟ್ಟಿದ್ದಾರೆ. ಆ ಕುರಿತು ಅವರು ಇತ್ತೀಚೆಗೆ ಮಾಹಿತಿ ಹಂಚಿಕೊಂಡಿದ್ದರು. ಮೂರು ಸಿನಿಮಾಗಳ ಕಥೆ ಇಷ್ಟ ಆಗಿದೆ ಎಂದು ಅವರು ಹೇಳಿದ್ದರು. ಆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಇದನ್ನೂ ಓದಿ: Kichcha Sudeep: ‘ನಾನು ಯಾರಿಗೂ ಕ್ಷಮೆ ಕೇಳಿ ಎಂದಿಲ್ಲ’; ಆರೋಪಕ್ಕೆ ಸ್ಪಷ್ಟನೆ ನೀಡಿದ ಕಿಚ್ಚ ಸುದೀಪ್

‘ಬ್ರೇಕ್​ನಲ್ಲಿ ಹೊಸ ಸ್ಕ್ರಿಪ್ಟ್​ ಬಗ್ಗೆ ಚರ್ಚೆ ಮತ್ತು ಮೀಟಿಂಗ್​ಗಳು ಪ್ರತಿದಿನದ ಕೆಲಸ ಆಗಿತ್ತು. ಮೂರು ಸ್ಕ್ರಿಪ್ಟ್​ಗಳನ್ನು ಫೈನಲ್​ ಮಾಡಿದ್ದೇನೆ. ಅಂದರೆ, 3 ಸಿನಿಮಾಗಳನ್ನು ಆಯ್ಕೆ ಮಾಡಿದ್ದೇನೆ. ಇವುಗಳಿಗೆ ದೊಡ್ಡ ಮಟ್ಟದ ತಯಾರಿ ಬೇಕು. ಮೂರೂ ಚಿತ್ರಗಳಿಗೆ ಹೋಮ್​ವರ್ಕ್​ ನಡೆಯುತ್ತಿದೆ. ಆ ತಂಡದವರು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅನೌನ್ಸ್​ ಮಾಡುತ್ತೇನೆ’ ಎಂದು ಸುದೀಪ್​ ಹೇಳಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ ಸೇರಿದ ಗೀತಾ ಶಿವರಾಜ್​ಕುಮಾರ್​ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್

ಸುದೀಪ್​ ಒಪ್ಪಿಕೊಂಡಿರುವ ಮೂರು ಸಿನಿಮಾಗಳ ಪೈಕಿ ಒಂದರ ಪ್ರೋಮೋ ಶೂಟಿಂಗ್​ ಮೇ 22ರಂದು ನಡೆಯಲಿದೆ. ಜೂನ್​ 1ರಂದು ಆ ಸಿನಿಮಾ ಲಾಂಚ್​ ಆಗಲಿದೆ. ‘ಸ್ಕ್ರಿಪ್ಟ್​ ಮತ್ತು ಈ ಸಿನಿಮಾ ಶೈಲಿ ನನಗೆ ಇಷ್ಟ ಆಗಿದೆ. ಈ ಸಿನಿಮಾಗಾಗಿ ನಾನು ಕಾದಿದ್ದೇನೆ’ ಎಂದು ಸುದೀಪ್​ ಟ್ವೀಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ