Shivarajkumar: ‘ಶಕ್ತಿಧಾಮ ಬಗ್ಗೆ ನೀವು ಮಿಸ್ಟೇಕ್​ ಮಾಡ್ಕೊಂಡಿದ್ದೀರಿ, ಪುನೀತ್​ ಮಾಡಿದ ಸಹಾಯ ಬೇರೆ’: ಶಿವಣ್ಣ ಸ್ಪಷ್ಟನೆ

Shakthidhama: ‘ಮೊದಲಿನಿಂದಲೂ ಶಕ್ತಿಧಾಮದ ಜವಾಬ್ದಾರಿ ಇತ್ತು. ಈ ಕುರಿತಂತೆ ನೀವು ಮಿಸ್ಟೇಕ್​ ಮಾಡಿಕೊಂಡಿದ್ದೀರಿ’ ಎನ್ನುವ ಮೂಲಕ ಶಿವರಾಜ್​ಕುಮಾರ್​ ಅವರು ಕೆಲವು ಸ್ಪಷ್ಟನೆ ನೀಡಿದ್ದಾರೆ.

Follow us
ಮದನ್​ ಕುಮಾರ್​
|

Updated on:May 01, 2023 | 6:23 PM

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಗೀತಾ ಶಿವರಾಜ್​ಕುಮಾರ್​ ಅವರು ಕಾಂಗ್ರೆಸ್​ ಸೇರ್ಪಡೆ ಆದ ಬಳಿಕ ನಟ ಶಿವರಾಜ್​ಕುಮಾರ್​ (Shivarajkumar) ಅವರು ಕೆಲವು ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಈ ವೇಳೆ ಸುದ್ದಿಗೋಷ್ಠಿ ನಡೆಸಿದ ಅವರಿಗೆ ಶಕ್ತಿಧಾಮ ಬಗ್ಗೆ ಪ್ರಶ್ನೆ ಎದುರಾಯಿತು. ‘ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ನಿಧನದ ನಂತರ ಶಕ್ತಿಧಾಮದ ಜವಾಬ್ದಾರಿ ನಿಮ್ಮ ಮೇಲೆ ಜಾಸ್ತಿ ಆಗಿದೆಯೇ’ ಎಂದು ಕೇಳಿದ ಪ್ರಶ್ನೆಗೆ ಶಿವಣ್ಣ ಉತ್ತರ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಒಂದು ಸ್ಪಷ್ಟನೆ ನೀಡಿದ್ದಾರೆ. ‘ಮೊದಲಿನಿಂದಲೂ ಶಕ್ತಿಧಾಮದ ಜವಾಬ್ದಾರಿ ಇತ್ತು. ಈ ಕುರಿತಂತೆ ನೀವು ಮಿಸ್ಟೇಕ್​ ಮಾಡಿಕೊಂಡಿದ್ದೀರಿ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ. ಅಲ್ಲದೇ, ಶಕ್ತಿಧಾಮದ (Shakthidhama) ಹಿಂದಿನ ವಿವರಗಳನ್ನು ಅವರು ತಿಳಿಸಿದ್ದಾರೆ.

‘ಶಕ್ತಿಧಾಮ ಶುರುವಾಗಿದ್ದು 1998ರಲ್ಲಿ. ಆಗ ಅಮ್ಮ ಶುರು ಮಾಡಿದ್ದು ಇದು. ಅಂದಿನಿಂದ ಇಂದಿನ ತನಕ ಸಾಕಷ್ಟು ಜನ ಟ್ರಸ್ಟಿಗಳು ಆಗಿದ್ದಾರೆ. ಅಮ್ಮ ಪ್ರೆಸಿಡೆಂಟ್​ ಆಗಿದ್ದರು. ಕೆಂಪಯ್ಯ, ಸುಮನಾ, ಜಯದೇವ್​, ಕೋಮಲಮ್ಮ ಮುಂತಾದವರು ಇದ್ದಾರೆ. ದೊರೆ ಭಗವಾನ್​ ಕೂಡ ಇದ್ದರು. ಇವರೆಲ್ಲರೂ ನೋಡಿಕೊಳ್ಳುತ್ತಿದ್ದರು. ನಾನೇ ಹೋಗುತ್ತಿರಲಿಲ್ಲ. ಅಮ್ಮ ಯಾವಾಗಲೂ ಬಯ್ಯುತ್ತಿದ್ದರು. ಒಮ್ಮೆ ಹೋಗಿ ಬಾ ಅಂತ ಹೇಳುತ್ತಿದ್ದರು. ಕಷ್ಟದಲ್ಲಿ ಇರುವವರನ್ನು ನೋಡೋಕೆ ಆಗಲ್ಲ. ಬೇಕಿದ್ದರೆ ದುಡ್ಡು ಕೊಡುತ್ತೇನೆ ಅಂತ ನಾನು ಹೇಳುತ್ತಿದ್ದೆ. ಆಗ ನಾವೆಲ್ಲ ಯುವಕರು. ಶೂಟಿಂಗ್​ನಲ್ಲಿ ಬ್ಯುಸಿ ಇರುತ್ತಿದ್ದೆವು’ ಎಂದಿದ್ದಾರೆ ಶಿವಣ್ಣ.

ಇದನ್ನೂ ಓದಿ: Vishal: ‘ಶಕ್ತಿಧಾಮದ ಮಕ್ಕಳನ್ನು ದತ್ತು ಪಡೆಯಲು ಸಿದ್ಧನಿದ್ದೇನೆ, ಆದರೆ..’: ವಾಸ್ತವ ಸ್ಥಿತಿ ವಿವರಿಸಿದ ನಟ ವಿಶಾಲ್​

ಇದನ್ನೂ ಓದಿ
Image
Puneeth Rajkumar: ಪುನೀತ್​ ರಾಜ್​ಕುಮಾರ್ ಇಲ್ಲದೇ ಕಳೆಯಿತು 11 ತಿಂಗಳು; ಸಮಾಧಿ ಬಳಿ ಕಣ್ಣೀರು ಹಾಕಿದ ಫ್ಯಾನ್ಸ್​
Image
ಹೊಸಪೇಟೆ ಪುನೀತ್ ಪುತ್ಥಳಿಗೆ ವಿನಯ್ ರಾಜ್​ಕುಮಾರ್ ಮಾಲಾರ್ಪಣೆ
Image
Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ
Image
ಪುನೀತ್ ಜನ್ಮದಿನ ಇನ್ಮುಂದೆ ‘ಸ್ಫೂರ್ತಿ ದಿನ’; ಸಚಿವ ಸುನೀಲ್ ಕುಮಾರ್ ಮನವಿ ಪುರಸ್ಕರಿಸಿದ ಸಿಎಂ ಬೊಮ್ಮಾಯಿ

‘ಇದೆಲ್ಲ ಆವಾಗಿನಿಂದಲೇ ನಡೆಯುತ್ತಿದೆ. ಪುನೀತ್​ ಮಾಡುತ್ತಿದ್ದದ್ದು ಬೇರೆ. ಅವರು ಬೇರೆ ಶಾಲೆಗಳಿಗೆ ಸಹಾಯ ಮಾಡುತ್ತಿದ್ದರು. ಅಮ್ಮ ಮತ್ತು ಇತರೆ ಟ್ರಸ್ಟಿಗಳು ಶಕ್ತಿಧಾಮ ನೋಡಿಕೊಳ್ಳುತ್ತಿದ್ದರು. ಅಮ್ಮ ಹೋದ್ಮೇಲೆ 2016-17ರಲ್ಲಿ ಗೀತಾ ಅವರು ಪ್ರೆಸಿಡೆಂಟ್​ ಆಗಿ ಬೇರೆ ಥರ ಡೆವೆಲಪ್​ಮೆಂಟ್​ ಆಯಿತು. ಅಲ್ಲಿ ಶಾಲೆ ಕಟ್ಟಬೇಕು ಎಂಬ ಕನಸು ಕೆಂಪಯ್ಯ ಅವರದ್ದು. ನಮ್ಮದೇ ಆದಂತಹ ಶಾಲೆ ಇರಬೇಕು ಅಂತ ನಿರ್ಧಾರ ಮಾಡಿದ್ದು ಅವರು’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ಶಕ್ತಿಧಾಮದ ಮಕ್ಕಳಿಗೆ ಲಾಲ್​ಬಾಗ್ ತೋರಿಸಿದ ಶಿವಣ್ಣ

ಶಿವಣ್ಣ ರಾಜಕೀಯಕ್ಕೆ ಬರಲ್ಲ:

ಸಿನಿಮಾ ಕಲಾವಿದರು ರಾಜಕೀಯಕ್ಕೆ ಬರುವುದು ಕಾಮನ್​. ಆದರೆ ಶಿವರಾಜ್​ಕುಮಾರ್​ ಅವರು ರಾಜಕೀಯಕ್ಕೆ ಎಂಟ್ರಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ‘ಯಾರಾದರೂ ಕಷ್ಟ ಅಂತ ಬಂದು ಸಹಾಯ ಕೇಳಿದರೆ ದುಡ್ಡು ಕೊಡುತ್ತೇನೆ. ಆದರೆ ರಾಜಕೀಯಕ್ಕೆ ಬರಲ್ಲ. ನನ್ನ ಕೈಯಲ್ಲಿ ಆಗುವಷ್ಟು ಸಹಾಯ ಮಾಡ್ತೀನಿ. ಮಾರ್ನಿಂಗ್​ ವಾಕ್​ ಮಾಡುವಾಗ ಬಂದು ಸಹಾಯ ಕೇಳ್ತಾರೆ. ಕೆಲವರಿಗೆ 5 ಸಾವಿರ, ತುಂಬ ಕಷ್ಟ ಇದ್ದರೆ 10 ಸಾವಿರ ರೂಪಾಯಿ ಕೊಡುತ್ತೇನೆ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:45 pm, Mon, 1 May 23

Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ