ಅಂಬರೀಶ್ ನಿಧನರಾದಾಗ ಅಂತಿಮ ದರ್ಶನಕ್ಕೆ ಬರಲಿಲ್ಲವೇಕೆ? ರಮ್ಯಾ ಕೊಟ್ಟರು ಉತ್ತರ

Ambareesh: ರಮ್ಯಾ ತಮ್ಮ ಮೊದಲ ಚುನಾವಣೆಯಲ್ಲಿಯೇ ಗೆಲುವು ಸಾಧಿಸಲು ಪ್ರಮುಖ ಕಾರಣವಾಗಿದ್ದರು ಅಂಬರೀಶ್, ಆದರೆ ಅಂಬಿ ನಿಧನ ಹೊಂದಿದಾಗ ಅಂತಿಮ ದರ್ಶನಕ್ಕೆ ರಮ್ಯಾ ಬಂದಿರಲಿಲ್ಲ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ತಾವೇಕೆ ಅಂದು ಅಂಬಿ ಅಂತಿಮ ದರ್ಶನಕ್ಕೆ ಬರಲಿಲ್ಲ ಎಂಬ ಬಗ್ಗೆ ರಮ್ಯಾ ಇದೀಗ ಮಾತನಾಡಿದ್ದಾರೆ.

ಅಂಬರೀಶ್ ನಿಧನರಾದಾಗ ಅಂತಿಮ ದರ್ಶನಕ್ಕೆ ಬರಲಿಲ್ಲವೇಕೆ? ರಮ್ಯಾ ಕೊಟ್ಟರು ಉತ್ತರ
ರಮ್ಯಾ-ಅಂಬರೀಶ್
Follow us
ಮಂಜುನಾಥ ಸಿ.
|

Updated on:May 02, 2023 | 5:19 PM

ನಟಿ ರಮ್ಯಾ (Ramya) ಏಕಕಾಲಕ್ಕೆ ಸಿನಿಮಾ ಹಾಗೂ ರಾಜಕೀಯ (Politics) ಎರಡಕ್ಕೂ ಕಮ್​ಬ್ಯಾಕ್ ಮಾಡಿದ್ದಾರೆ. ನಿರ್ಮಾಣ ಸಂಸ್ಥೆಯನ್ನು ಕಟ್ಟಿ ಸಿನಿಮಾ ನಿರ್ಮಿಸಿರುವ ರಮ್ಯಾ, ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತದ್ದಾರೆ ಸಹ. ಇದರ ಜೊತೆಗೆ ರಾಜಕೀಯಕ್ಕೂ ಮರುಪ್ರವೇಶ ಮಾಡಿರುವ ನಟಿ ರಮ್ಯಾ, ಸ್ಟಾರ್ ಪ್ರಚಾರಕಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ. ಇಂದು ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ರಮ್ಯಾ, ತಾವೇಕೆ ಅಂಬರೀಶ್ (Ambareesh) ನಿಧನರಾದಾಗ ಅಂತಿಮದರ್ಶನಕ್ಕೆ ಆಗಮಿಸಲಿಲ್ಲ ಎಂಬುದನ್ನು ಹೇಳಿದ್ದಾರೆ.

ಅಂಬರೀಶ್ 2018 ರಲ್ಲಿ ನಿಧನರಾದರು. ರಮ್ಯಾರ ರಾಜಕೀಯ ಪ್ರವೇಶಕ್ಕೆ ಗಾಡ್ ಫಾದರ್ ಆಗಿದ್ದ ಹಾಗೂ ರಮ್ಯಾ ಸಹ ಜೀವನ ಕಟ್ಟಿಕೊಂಡಿರುವ ಚಿತ್ರರಂಗದ ಹಿರಿಯರಾಗಿದ್ದ ಅಂಬರೀಶ್ ಅಂತಿಮ ದರ್ಶನಕ್ಕೆ ರಮ್ಯಾ ಆಗಮಿಸಬೇಕಿತ್ತು. ಅಂತಿಮದರ್ಶನಕ್ಕೂ ಬಾರದಷ್ಟು ವೈಮನಸ್ಯ ಇಬ್ಬರ ನಡುವೆ ಇರಲಿಲ್ಲ. ಹಾಗಿದ್ದರೂ ರಮ್ಯಾ, ಅಂಬರೀಶ್ ಅಂತಿಮ ದರ್ಶನಕ್ಕೆ ಬರದೆ ಅಂತರ ಕಾಯ್ದುಕೊಂಡಿದ್ದರು. ಇದು ಮಂಡ್ಯದ ಜನರಿಗೆ ಬೇಸರ ಮೂಡಿಸಿತ್ತು, ಅಂಬರೀಶ್ ಅಭಿಮಾನಿಗಳು ರಮ್ಯಾ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ರಮ್ಯಾ, ಮಂಡ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ವೇಳೆ ಅಂಬರೀಶ್ ಅಭಿಮಾನಿಗಳು, ಹಳೆಯ ಘಟನೆಯ ನೆನಪಿಟ್ಟುಕೊಂಡು ರಮ್ಯಾ ಗೋ ಬ್ಯಾಕ್ ಅಭಿಯಾನ ಆರಂಭಿಸಿದ್ದಾರೆ. ಮಾಧ್ಯಮದವರು ಸಹ ನೀವೇಕೆ ಅಂಬರೀಶ್ ಅಂತಿಮ ದರ್ಶನಕ್ಕೆ ಬರಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ರಮ್ಯಾ, ”ಆ ಸಮಯದಲ್ಲಿ ನನಗೆ ಗಂಭೀರ ಆರೋಗ್ಯ ಸಮಸ್ಯೆಯಾಗಿತ್ತು. ನನಗೆ ಟ್ಯೂಮರ್ ಆಗಿತ್ತು, ಅದರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ, ಅದು ಮಾತ್ರವೇ ಅಲ್ಲದೆ ಆಟೊಇಮ್ಯೂನ್ ಸಮಸ್ಯೆಗೂ ತುತ್ತಾಗಿದ್ದೆ. ಆದರೆ ಇದನ್ನೆಲ್ಲ ನಾನು ಕ್ಯಾಮೆರಾ ಮುಂದೆ ಹಂಚಿಕೊಳ್ಳಲಲ್ಲ, ಹೀಗೆ ಸಮಸ್ಯೆಗಳನ್ನು ಹಂಚಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುವ ವ್ಯಕ್ತಿತ್ವ ನನ್ನದಲ್ಲ. ನಾನು ಮೊದಲಿನಿಂದಲೂ ನನ್ನ ಖಾಸಗಿ ಜೀವನವನ್ನು ಗೌಪ್ಯವಾಗಿಯೇ ಇಟ್ಟುಕೊಂಡಿದ್ದೇನೆ. ಆದರೆ ನನ್ನ ಪರಸ್ಥಿತಿ ಗೊತ್ತಿಲ್ಲದೆ ಕೆಲವರು ಅಪಪ್ರಚಾರ ಮಾಡಿದರು. ಅದು ಬೇಸರ ತಂದಿದ್ದು ನಿಜ” ಎಂದಿದ್ದಾರೆ ರಮ್ಯಾ.

ಇನ್ನು ಮಂಡ್ಯದಲ್ಲಿ ಮನೆ ಮಾಡುತ್ತೀರಿ ಎಂದು ಆಶ್ವಾಸನೆ ಕೊಟ್ಟಿದ್ದಿರಲ್ಲ ಅದೇನಾಯ್ತು? ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ ರಮ್ಯಾ, ”ನನ್ನ ತಾತನವರದು ಇಲ್ಲಿ ಒಂದು ತೊಟ್ಟಿ ಮನೆ ಇದೆ. ನನಗೂ ಇಲ್ಲಿ ಮನೆ ಮಾಡುವ ಆಸೆ ಈಗಲೂ ಇದೆ ಮಾಡ್ತೀನಿ. ಯಾರು ಏನೇ ಹೇಳಿದರು ನಾನು ಮಂಡ್ಯದವಳು, ನನ್ನ ತಾಯಿ, ತಂದೆ ಇಲ್ಲಿನವರು, ನಾನು ಮಂಡ್ಯ ಗೌಡ್ತಿ ಎಂಬುದನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಾನು ಸಂಕಷ್ಟದಲ್ಲಿ ಇದ್ದ ಸಮಯದಲ್ಲಿ ಇಲ್ಲಿನ ಜನ ಪ್ರೀತಿ ತೋರಿದ್ದಾರೆ. ಮಂಡ್ಯ ಜನರ ಬಗ್ಗೆ ಸದಾ ಗೌರವ ಇದೆ. ಮಂಡ್ಯದೊಟ್ಟಿಗೆ ನನ್ನದು ಕೇವಲ ರಾಜಕೀಯ ಸಂಬಂಧವಲ್ಲ. ನನ್ನ ಕುಟುಂಬ ಇಲ್ಲಿದೆ” ಎಂದಿದ್ದಾರೆ ರಮ್ಯಾ.

ಇದನ್ನೂ ಓದಿ: Ramya: ‘ರಮ್ಯಾ ಎಂದಿಗೂ ಆ ರೀತಿ ಮಾಡಲ್ಲ ಅನ್ನೋದು ಗೊತ್ತು’: ಸುದೀಪ್

ರಮ್ಯಾ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿಯೇ ಗೆಲುವು ಸಾಧಿಸಲು ಪ್ರಮುಖ ಕಾರಣ ಅಂಬರೀಶ್. ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸಿದ್ದ ರಮ್ಯಾರ ಬೆನ್ನಿಗೆ ನಿಂತಿದ್ದ ಅಂಬರೀಶ್, ಅವರೊಟ್ಟಿಗೆ ಪ್ರತಿದಿನ ಪ್ರಚಾರ ಮಾಡಿ ರಮ್ಯಾರನ್ನು ಗೆಲ್ಲಿಸಿ ಲೋಕಸಭೆಗೆ ಕಳಿಸಿದ್ದರು, ಆದರೆ ಅದಾದ ಬಳಿಕ ರಮ್ಯಾ ಹಾಗೂ ಅಂಬರೀಶ್ ನಡುವೆ ಭಿನ್ನಾಭಿಪ್ರಾಯಗಳು ತಲೆದೂರಿದವು. ನಂತರ 2014 ರ ಲೋಕಸಭೆ ಚುನಾವಣೆಯಲ್ಲಿ ಅಂಬರೀಶ್, ರಮ್ಯಾರಿಗೆ ಸೂಕ್ತ ಬೆಂಬಲ ನೀಡದ ಕಾರಣ ರಮ್ಯಾ ಸೋಲನುಭವಿಸಿದರು. ಆ ನಂತರ ಮಂಡ್ಯದಿಂದ ಹಾಗೂ ಅಂಬರೀಶ್ ಅವರಿಂದ ರಮ್ಯಾ ಅಂತರ ಕಾಯ್ದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Tue, 2 May 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ