ಶಕ್ತಿಧಾಮದ ಮಕ್ಕಳಿಗೆ ಲಾಲ್​ಬಾಗ್ ತೋರಿಸಿದ ಶಿವಣ್ಣ

ಶಕ್ತಿಧಾಮದ ಮಕ್ಕಳಿಗೆ ಲಾಲ್​ಬಾಗ್ ತೋರಿಸಿದ ಶಿವಣ್ಣ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 29, 2022 | 3:56 PM

ಶಿವರಾಜ್​ಕುಮಾರ್ ಅವರು ಶಕ್ತಿಧಾಮದ ಮಕ್ಕಳನ್ನು ಬೆಂಗಳೂರಿನ ಲಾಲ್​ಬಾಗ್​ಗೆ ಕರೆತಂದಿದ್ದಾರೆ. ಅವರಿಗೆ ಲಾಲ್​ಬಾಗ್​ ತೋರಿಸಿದ್ದಾರೆ.

ಶಿವರಾಜ್​ಕುಮಾರ್ (Shivarajkumar) ಅವರಿಗೆ ಶಕ್ತಿಧಾಮ ಮಕ್ಕಳ ಮೇಲೆ ಅಪಾರ ಪ್ರೀತಿ ಇದೆ. ಸಮಯ ಸಿಕ್ಕಾಗ ಅವರು ಮೈಸೂರಿಗೆ ತೆರಳಿ ಶಕ್ತಿಧಾಮದ ಮಕ್ಕಳನ್ನು ಭೇಟಿ ಮಾಡುತ್ತಾರೆ. ಇಂದು (ಜುಲೈ 29) ಶಿವರಾಜ್​ಕುಮಾರ್ ಅವರು ಶಕ್ತಿಧಾಮದ ಮಕ್ಕಳನ್ನು ಬೆಂಗಳೂರಿನ ಲಾಲ್​ಬಾಗ್​ಗೆ ಕರೆತಂದಿದ್ದಾರೆ. ಅವರಿಗೆ ಲಾಲ್​ಬಾಗ್​ (Lalbagh) ತೋರಿಸಿದ್ದಾರೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ರಾಜ್​ಕುಮಾರ್ ಅವರ ಗಾಜನೂರಿನ ಮನೆ ಸಿದ್ಧಗೊಳ್ಳಲಿದೆ. ಇದರ ಸಿದ್ಧತೆಯನ್ನೂ ಶಿವರಾಜ್​ಕುಮಾರ್ ಅವರು ವೀಕ್ಷಿಸಿದರು.