Kichcha Sudeep: ‘ನಾನು ಯಾರಿಗೂ ಕ್ಷಮೆ ಕೇಳಿ ಎಂದಿಲ್ಲ’; ಆರೋಪಕ್ಕೆ ಸ್ಪಷ್ಟನೆ ನೀಡಿದ ಕಿಚ್ಚ ಸುದೀಪ್
‘ಎಲ್ಲಾ ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಅನ್ನೋದು ಹಳೆಯ ಮಾತು. ಅದು ನಾನು ಹೇಳಿದ್ದಲ್ಲ’ ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಕಿಚ್ಚ ಸುದೀಪ್ (Kichcha Sudeep) ಅವರು ಬಿಜೆಪಿ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಹಲವು ಕಡೆಗಳಲ್ಲಿ ತೆರಳಿ ಅವರು ಬಿಜೆಪಿ ನಾಯಕರ ಪರ ಪ್ರಚಾರ ಮಾಡುತ್ತಿದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎನ್ನುವ ಆರೋಪವೂ ಸುದೀಪ್ ಅಭಿಮಾನಿಗಳ ವಲಯದಲ್ಲಿ ಕೇಳಿಬಂದಿದೆ. ಈ ಮಧ್ಯೆ ಸುದೀಪ್ ಅವರು ಕೊಳ್ಳೇಗಾಲ ಶಾಸಕ ನಂಜುಡಸ್ವಾಮಿ ಮಗನಿಗೆ ಕರೆ ಮಾಡಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ ಎನ್ನುವ ಟ್ವೀಟ್ ವೈರಲ್ ಆಗಿತ್ತು. ಇದಕ್ಕೆ ಸ್ವತಃ ಸುದೀಪ್ ಅವರು ಉತ್ತರ ನೀಡಿದ್ದಾರೆ. ನಾನು ಯಾರಿಗೂ ಕರೆ ಮಾಡಿ ಕ್ಷಮೆ ಕೇಳಿ ಎಂದಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಜಿ.ಎನ್. ನಂಜುಂಡಸ್ವಾಮಿ ಈ ಬಾರಿ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿ ನಾಯಕ ಎನ್. ಮಹೇಶ್ ಪರ ಸುದೀಪ್ ಪ್ರಚಾರ ಮಾಡಲು ಬರುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಸಹಿಸಿಲ್ಲ. ಈ ಕಾರಣಕ್ಕೆ ಸುದೀಪ್ ಅವರನ್ನು ಅಣಕಿಸುವ ಕೆಲಸ ಆಗಿದೆ. ‘ಬಿಜೆಪಿ ಅಭ್ಯರ್ಥಿ ಎನ್. ಮಹೇಶ್ ಅವರು ಸುದೀಪ್ ಬರ್ತಾರೆ ಎನ್ನುತ್ತಲೇ ಇದ್ದಾರೆ. ಆದರೆ ನಮ್ಮಲ್ಲಿ ಯಾರೇ ಬಂದರೂ ಊಟ ಮಾಡಿ, ಜೇಬಿಗೆ ಹಾಕಿಕೊಂಡು ಹೋಗ್ತಾರೆ’ ಎಂದು ನಂಜುಡಸ್ವಾಮಿ ಮಗ ಜಿ.ಎನ್. ಲೋಕೇಶ್ ಹೇಳಿದ್ದರು.
ಇದು ಕಿಚ್ಚ ಅಭಿಮಾನಿಗಳನ್ನು ಕೆರಳಿಸಿತ್ತು. ಈ ವಿಚಾರದಲ್ಲಿ ಲೋಕೇಶ್ ಕ್ಷಮೆ ಕೇಳಬೇಕು ಎನ್ನುವ ಆಗ್ರಹ ಕೇಳಿ ಬಂತು. ಈ ಬೆನ್ನಲ್ಲೇ ಸುದೀಪ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ‘ಕಿಚ್ಚ ಸುದೀಪ್ ಅವರು ನಂಜುಂಡಸ್ವಾಮಿ ಮಗ ಲೋಕೇಶ್ಗೆ ಕರೆ ಮಾಡಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ’ ಎನ್ನುವ ಟ್ವೀಟ್ ವೈರಲ್ ಆಗಿತ್ತು.
ಇದನ್ನೂ ಓದಿ: Kichcha Sudeep: ‘ರಸ್ತೆಗೆ ಇಳಿದಾಗಲೇ ಅರ್ಹತೆ, ಯೋಗ್ಯತೆ ಗೊತ್ತಾಗೋದು’: ಕಿಚ್ಚ ಸುದೀಪ್
Extremely sorry to say j haven’t made any cals to to anyone asking them to apologize. Neither do I take pride in making someone apologize. Every action has an equivalent reaction is an old theory ,,,,and not something i design. ??? https://t.co/FHNDmJHCq8
— Kichcha Sudeepa (@KicchaSudeep) April 29, 2023
ಇದನ್ನು ಸುದೀಪ್ ರೀಟ್ವೀಟ್ ಮಾಡಿಕೊಂಡಿದ್ದಾರೆ. ‘ನಾನು ಯಾರಿಗೂ ಕರೆ ಮಾಡಿ ನನ್ನ ಬಳಿ ಕ್ಷಮೆ ಕೇಳಿ ಎಂದು ಹೇಳಿಲ್ಲ. ಯಾರ ಬಳಿಯೋ ಕ್ಷಮೆ ಕೇಳಿಸಿ ನಾನು ಹೆಮ್ಮೆಪಡಲ್ಲ. ಎಲ್ಲಾ ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಅನ್ನೋದು ಹಳೆಯ ಮಾತು. ಅದು ನಾನು ಹೇಳಿದ್ದಲ್ಲ’ ಎಂದು ಸುದೀಪ್ ಬರೆದುಕೊಂಡಿದ್ದಾರೆ. ಅನೇಕರು ಸುದೀಪ್ ಬೆಂಬಲಕ್ಕೆ ನಿಂತಿದ್ದಾರೆ.
ನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Sat, 29 April 23