Fact Check: ಸೀರೆ ಹಂಚುವಾಗ ಹಿರಿಯ ಮಹಿಳೆ ಮೇಲೆ ಬಿಜೆಪಿ ನಾಯಕನಿಂದ ಹಲ್ಲೆ; ವೈರಲ್ ವಿಡಿಯೊ ಕರ್ನಾಟಕದ್ದಲ್ಲ

ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಗೆ ಎಲ್ಲ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿರುವ ಹೊತ್ತಲ್ಲಿ ಈ ರೀತಿ ತಪ್ಪುಮಾಹಿತಿಯೊಂದಿಗೆ ವಿಡಿಯೊ ವೈರಲ್ ಆಗಿದೆ.

Fact Check: ಸೀರೆ ಹಂಚುವಾಗ ಹಿರಿಯ ಮಹಿಳೆ ಮೇಲೆ ಬಿಜೆಪಿ ನಾಯಕನಿಂದ ಹಲ್ಲೆ; ವೈರಲ್ ವಿಡಿಯೊ ಕರ್ನಾಟಕದ್ದಲ್ಲ
ವೈರಲ್ ವಿಡಿಯೊ ಬಾಂಗ್ಲಾದೇಶದ್ದು
Follow us
|

Updated on: May 02, 2023 | 8:32 PM

ಕರ್ನಾಟಕದಲ್ಲಿ ಚುನಾವಣೆಗೆ (Karnataka Election 2023) ಭಾರೀ ಪ್ರಚಾರ ನಡೆಯುತ್ತಿದ್ದು ಈ ಹೊತ್ತಲ್ಲಿ ಬಿಜೆಪಿ(BJP) ಸದಸ್ಯರೊಬ್ಬರು ಹಿರಿಯ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಆದರೆ ವಾಸ್ತವ ಸಂಗತಿಯೇ ಬೇರೆ. ಬಾಂಗ್ಲಾದೇಶದಲ್ಲಿ (Bangladesh) ಚಾರಿಟಿ ಕಾರ್ಯಕ್ರಮವೊಂದರಲ್ಲಿ ಸ್ಥಳೀಯ ರಾಜಕೀಯ ಮುಖಂಡರೊಬ್ಬರು ಹಿರಿಯ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ವಿಡಿಯೊ ಇದಾಗಿದೆ. 2022 ರ ರಂಜಾನ್ ಸಮಯದಲ್ಲಿ ನಡೆದ ಬಟ್ಟೆ ವಿತರಣಾ ಸಮಾರಂಭದಲ್ಲಿ ಸ್ಥಳೀಯ ನಾಯಕ ಹಬೀಬುರ್ ರೆಹಮಾನ್ ಬಿಟು ಎಂಬಾತ ಮಹಿಳೆಯ ಮೇಲೆ ಹಲ್ಲೆ ಮಾಡಿದ ಘಟನೆಯ ವಿಡಿಯೊ ಇದಾಗಿದೆ. ಈ ವಿಡಿಯೊ ಬಾಂಗ್ಲಾದೇಶದ ಸತ್ಖಿರಾದ್ದು ಎಂದು ಎಂದು ಬೂಮ್ ಪತ್ತೆ ಹಚ್ಚಿದೆ.

ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಗೆ ಎಲ್ಲ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿರುವ ಹೊತ್ತಲ್ಲಿ ಈ ರೀತಿ ತಪ್ಪುಮಾಹಿತಿಯೊಂದಿಗೆ ವಿಡಿಯೊ ವೈರಲ್ ಆಗಿದೆ. ಕರ್ನಾಟಕದಲ್ಲಿ ಚುನಾವಣೆಗೆ ಮುನ್ನ ಈ ಪರಿಸ್ಥಿತಿ. ಪಕ್ಷದ ಪದಾಧಿಕಾರಿ ಬಡವರಿಗೆ ಬಟ್ಟೆ ಹಂಚುವಾಗ ನೋಡಿ ಬಿಜೆಪಿಯ ನಿಜವಾದ ಮುಖ. ಚುನಾವಣೆಯಲ್ಲಿ ಗೆದ್ದ ನಂತರ ನಿಮಗೆ ಅರ್ಥವಾಗುತ್ತದೆ. ಬಡವರ ಜೊತೆ ಈ ರೀತಿಯ ವರ್ತನೆ ಶೋಚನೀಯ ಎಂದು ಹಿಂದಿ ಬರಹದೊಂದಿಗೆ ಈ ವಿಡಿಯೊವನ್ನು ಹಲವಾರು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್ ಚೆಕ್

ಈ ವಿಡಿಯೊವನ್ನು ಸೂಕ್ಷ್ಮವಾಗಿ ನೋಡಿದಾಗ ಟಿಕ್ಕರ್​​ನಲ್ಲಿ ಬಾಂಗ್ಲಾ ಭಾಷೆಯಲ್ಲಿ ಬರೆದಿರುವುದು ಕಾಣುತ್ತದೆ. ಅದರಲ್ಲಿ ಹಬೀಬುರ್ ರೆಹಮಾನ್ (ಬಿಟು), ಸದಸ್ಯ ಮತ್ತು ಕಾರ್ಯದರ್ಶಿ, ನಂ 2 ವಾರ್ಡ್, ಅವಾಮಿ ಲೀಗ್ ಎಂದು ಬರೆದಿದೆ. ಗೂಗಲ್​​ನಲ್ಲಿ ಬಾಂಗ್ಲಾ ಭಾಷೆಯಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ಮಾರ್ಚ್ 2023 ರಲ್ಲಿ ಬಾಂಗ್ಲಾದೇಶದ ಹಲವಾರು YouTube ಬಳಕೆದಾರರು ವಿಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ಕಂಡುಬಂದಿದೆ.

ಮೇಲಿನ ಎಡ ಮೂಲೆಯಲ್ಲಿ ಲೋಗೋ ಮತ್ತು ಪಠ್ಯ ಎಸ್ ಬಿ ಸತ್ಖಿರಾ ಬುಲೆಟಿನ್ (SB Satkhira Bulletin) ಎಂದು ಬರೆದಿರುವುದನ್ನು ಕಾಣಬಹುದು.

ಫೇಸ್‌ಬುಕ್‌ನಲ್ಲಿ ಕೀವರ್ಡ್‌ಗಳನ್ನು ಬಳಸಿ ಹುಡುಕಿದಾಗ ಮಾರ್ಚ್ 20, 2023 ರಂದು ಬಾಂಗ್ಲಾದೇಶದ ಹೈಪರ್ ಲೋಕಲ್ ನ್ಯೂಸ್ ಔಟ್‌ಲೆಟ್ ‘ಸತ್ಖಿರಾ ಬುಲೆಟಿನ್’ನಲ್ಲಿ ಈ ವಿಡಿಯೊ ಪೋಸ್ಟ್ ಆಗಿರುವುದು ಸಿಕ್ಕಿದೆ.

ಇದನ್ನೂ ಓದಿFact Check: ಸಿಯಟ್ ಜಾಹೀರಾತಿಗೂ ಕರ್ನಾಟಕ ಚುನಾವಣೆಗೂ ಸಂಬಂಧವೇ ಇಲ್ಲ; ವೈರಲ್ ವಿಡಿಯೊ ಎಡಿಟ್ ಮಾಡಿದ್ದು!

ಶೀರ್ಷಿಕೆಯ ಪ್ರಕಾರ, ಹಬೀಬುರ್ ರೆಹಮಾನ್ (ಬಿಟು) ನಂತಹ ವ್ಯಕ್ತಿಯನ್ನು ರಾಷ್ಟ್ರೀಯ ಸಂಸತ್ತಿನ ಚುನಾವಣೆಗೆ ಮುಂಚಿತವಾಗಿ ಸತ್ಖಿರಾ ಪುರಸಭೆಯ ಅಡಿಯಲ್ಲಿ  2ನೇ ವಾರ್ಡ್‌ಗೆ ಸದಸ್ಯ ಮತ್ತು ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ ನಂತರ ಅವಾಮಿ ಲೀಗ್‌ನ ಬೆಂಬಲಿಗರು ನಿರಾಶೆಗೊಂಡಿದ್ದಾರೆ. ಅವರಂತಹ ವ್ಯಕ್ತಿ ತಳಮಟ್ಟದಲ್ಲಿ ನಿರ್ಣಾಯಕ ಹುದ್ದೆಯನ್ನು ಅಲಂಕರಿಸಿದರೆ ಪಕ್ಷವು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ ಮತ್ತು ಸದಸ್ಯರಹಿತವಾಗುತ್ತದೆ ಎಂದು ಅವಾಮಿ ಲೀಗ್‌ನ ಹಲವಾರು ನಾಯಕರು ಹೇಳಿದ್ದಾರೆ.

ಏಪ್ರಿಲ್ 2, 2023 ರಂದು ಬಾಂಗ್ಲಾದೇಶದ ದಿನಪತ್ರಿಕೆ ಜುಗಾಂತರ್ ಇದೇ ಘಟನೆಯನ್ನು ಅವಾಮಿ ಲೀಗ್‌ನ ಪ್ರಸ್ತುತ ಜಿಲ್ಲಾ ಅಧ್ಯಕ್ಷ ಮತ್ತು ಸತ್ಖಿರಾಗಾಗಿ ಜಿಲಾ ಪರಿಷತ್‌ನ ಅಧ್ಯಕ್ಷರಾದ ನಜ್ರುಲ್ ಇಸ್ಲಾಂ ಅವರನ್ನು ಉಲ್ಲೇಖಿಸಿ ವರದಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊ ಬಗ್ಗೆ ತನಗೆ ತಿಳಿದಿದೆ ಎಂದು ಇಸ್ಲಾಂ ಹೇಳಿದ್ದು, ವಿಡಿಯೋ ಸಾಕಷ್ಟು ಹಳೆಯದು ಎಂದು ಹೇಳಿಕೊಂಡಿದ್ದಾರೆ. ವರದಿಗಳ ಪ್ರಕಾರ ಮಹಿಳೆಯನ್ನು ಸತ್ಖಿರಾ ಪಟ್ಟಣದ ಮಜಿತ್‌ಪುರ ಪ್ರದೇಶದ ಬಾಬುಲ್ ಅವರ ಪತ್ನಿ ಮಾರ್ಗಿನಾ ಬೇಗಂ ಎಂದು ಗುರುತಿಸಲಾಗಿದೆ. ಆಕೆಯ ತಲೆಗೆ ಹಬೀಬುರ್ ರೆಹಮಾನ್ (ಬಿಟು) ಮೂರು ಬಾರಿ ಹೊಡೆದು ಆಮೇಲೆ ಸೀರೆ ನೀಡುತ್ತಿರುವುದು ವಿಡಿಯೊದಲ್ಲಿದೆ. ವಿಡಿಯೊಗೆ ಸಂಬಂಧಿಸಿದಂತೆ ರೆಹಮಾನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಿಗಲಿಲ್ಲ ಎಂದು ಬೂಮ್ ವರದಿ ಮಾಡಿದೆ. ಅದೇ ವೈರಲ್ ವಿಡಿಯೊವನ್ನು ಮಾರ್ಚ್ 31, 2023 ರಲ್ಲಿ ಢಾಕಾ ಟೈಮ್ಸ್ ವರದಿ ಮಾಡಿದೆ.

ಮಾರ್ಚ್ 31 ರಂದು ಸ್ಥಳೀಯ ಔಟ್‌ಲೆಟ್, ಸತ್ಖಿರಾ ಟ್ರಿಬ್ಯೂನ್‌ಗೆ ಮಾರ್ಜಿನಾ ಬೇಗಂ ನೀಡಿದ ಪ್ರತಿಕ್ರಿಯೆ ಪ್ರಕಾರ, ಘಟನೆ ಹಳೆಯದು.ಅವನು (ಹಬೀಬುರ್ ರೆಹಮಾನ್) ಜನರೊಂದಿಗೆ ತುಂಬಾ ಅಸಭ್ಯವಾಗಿ ವರ್ತಿಸುತ್ತಾನೆ, ಅವರು ಬಟ್ಟೆ ಹಂಚುವಾಗ, ನಾನು ಕೈಚಾಚಿದೆ. ಅವನು ನನಗೆ ಮೂರು ಬಾರಿ ಹೊಡೆದ. ನನಗೆ ಅಸ್ವಸ್ಥತೆ ಅನುಭವಕ್ಕೆ ಬಂದ ಕಾರಣ ನಾನು ಹೋಗಿ ಕುಳಿತುಕೊಂಡೆ. ನಂತರ ಅವನು ನನಗೆ ಸೀರೆ ಕೊಟ್ಟ. ನನಗೇನೂ ಹೇಳಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ