Fact Check: ಸಿಯಟ್ ಜಾಹೀರಾತಿಗೂ ಕರ್ನಾಟಕ ಚುನಾವಣೆಗೂ ಸಂಬಂಧವೇ ಇಲ್ಲ; ವೈರಲ್ ವಿಡಿಯೊ ಎಡಿಟ್ ಮಾಡಿದ್ದು!

2017 ರಲ್ಲಿ ಪ್ರಸಾರವಾದ ಸಿಯಟ್ ಟೈರ್ಸ್ ಜಾಹೀರಾತನ್ನು ಎಡಿಟ್ ಮಾಡಿ  ಸಾಮಾಜಿಕ ಮಾಧ್ಯಗಳಲ್ಲಿ ಹರಿಬಿಡಲಾಗಿದೆ. ಮೂಲ ಜಾಹೀರಾತಿನಲ್ಲಿ ಬಿಜೆಪಿ ಅಥವಾ ನರೇಂದ್ರ ಮೋದಿ ವಿರುದ್ಧ ಯಾವುದೇ ಬರಹಗಳಾಗಲೀ ಘೋಷಣೆಗಳಾಗಲೀ ಇಲ್ಲ

Fact Check: ಸಿಯಟ್ ಜಾಹೀರಾತಿಗೂ ಕರ್ನಾಟಕ ಚುನಾವಣೆಗೂ ಸಂಬಂಧವೇ ಇಲ್ಲ; ವೈರಲ್ ವಿಡಿಯೊ ಎಡಿಟ್ ಮಾಡಿದ್ದು!
CEAT ಜಾಹೀರಾತು
Follow us
|

Updated on: Apr 29, 2023 | 8:57 PM

ಶಾಪಿಂಗ್ ಮಾಲ್​​ನಲ್ಲಿ ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿ ಹಣವನ್ನು ಪಾವತಿಸಲು ನಿರಾಕರಿಸುವ ವ್ಯಕ್ತಿ ತನ್ನ ಕೈಯಲ್ಲಿ, ಬಾಯಲ್ಲಿ ಸಾಮಾಗ್ರಿಗಳನ್ನು ಕೊಂಡೊಯ್ಯುವ ವಿಡಿಯೊ ಅದು. ಹೀಗೆ ಕೊಂಡೊಯ್ಯುವಾಗ ಪಾರ್ಕಿಂಗ್ ಸ್ಥಳದಲ್ಲಿ ಆತನ ಕುತ್ತಿಗೆಯಡಿಯಲ್ಲಿರಿಸಿದ ಕೆಚಪ್ ಬಾಟಲಿ ಜಾರಿ ಬೀಳುತ್ತದೆ. ಹಣ ಉಳಿತಾಯ ಮಾಡಲು ಈ ರೀತಿ ಕಸರತ್ತು ಮಾಡುತ್ತಿದ್ದೀರಾ ಎಂಬ ಹಿನ್ನಲೆ ದನಿ ಕೇಳುತ್ತದೆ. ನಂತರ ಸ್ಕ್ರೀನ್​​ನಲ್ಲಿ ಮೋದಿ (PM Modi) ಹಠಾವೋ ಪೈಸೆ ಬಚಾವೋ, ಹೀಗೆ ಹಲವು ಘೋಷಣೆಗಳು ಕಾಣಿಸಿಕೊಳ್ಳುತ್ತವೆ. ಕರ್ನಾಟಕದ ವಿಧಾನಸಭಾ ಚುನಾವಣೆಯು(Karnataka Elections 2023) ಮೇ 10, 2023 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಈ ಜಾಹೀರಾತು ವೈರಲ್ (Viral Video) ಆಗಿದೆ.

ಫ್ಯಾಕ್ಟ್ ಚೆಕ್

2017 ರಲ್ಲಿ ಪ್ರಸಾರವಾದ ಸಿಯಟ್ ಟೈರ್ಸ್ ಜಾಹೀರಾತನ್ನು ಎಡಿಟ್ ಮಾಡಿ  ಸಾಮಾಜಿಕ ಮಾಧ್ಯಗಳಲ್ಲಿ ಹರಿಬಿಡಲಾಗಿದೆ. ಮೂಲ ಜಾಹೀರಾತಿನಲ್ಲಿ ಬಿಜೆಪಿ ಅಥವಾ ನರೇಂದ್ರ ಮೋದಿ ವಿರುದ್ಧ ಯಾವುದೇ ಬರಹಗಳಾಗಲೀ ಘೋಷಣೆಗಳಾಗಲೀ ಇಲ್ಲ ಎಂದು ಬೂಮ್​​ಲೈವ್ ಫ್ಯಾಕ್ಟ್ ಚೆಕ್ ಮಾಡಿದೆ.

37 ಸೆಕೆಂಡ್‌ಗಳ ಮೂಲ ಜಾಹೀರಾತಿನ ಕೊನೆಯಲ್ಲಿ ವೈರಲ್ ವಿಡಿಯೊದಲ್ಲಿರುವಂತೆ ಮೋದಿ ಹಠಾವೋ ಎಂಬ ಟ್ಯಾಗ್‌ಲೈನ್ ಇಲ್ಲ. ಅದರ ಬದಲು ಹಣವನ್ನು ಉಳಿಸಲು CEAT ಟೈರ್‌ಗಳನ್ನು ಖರೀದಿಸಿ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Fact Check: ಬಿಜೆಪಿಗೆ ವೋಟ್ ಇಲ್ಲ ಎಂದ ಅನಿವಾಸಿ ಭಾರತೀಯರು; ವಿಡಿಯೊ ಅಭಿಯಾನ ಕರ್ನಾಟಕ ಚುನಾವಣೆಗೆ ಸಂಬಂಧಿಸಿದ್ದಲ್ಲ

ಈ ಜಾಹೀರಾತು ವಿಡಿಯೊವನ್ನು ಜೂನ್ 8, 2017 ರಂದು ಯೂಟ್ಯೂಬ್‌ನಲ್ಲಿ ಸಿಯಟ್ ಟೈರ್ಸ್ ಅಪ್‌ಲೋಡ್ ಮಾಡಿದೆ.

ಎಡಿಟ್ ಮಾಡಿದ ಈ ವಿಡಿಯೊವನ್ನು ಕರ್ನಾಟಕ ಚುನಾವಣೆಯ ಹ್ಯಾಷ್ ಟ್ಯಾಗ್ ಬಳಸಿ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗುತ್ತಿದೆ. ಮೂಲ ಜಾಹೀರಾತಿಗೂ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ