Fact Check: ಬಿಜೆಪಿಗೆ ವೋಟ್ ಇಲ್ಲ ಎಂದ ಅನಿವಾಸಿ ಭಾರತೀಯರು; ವಿಡಿಯೊ ಅಭಿಯಾನ ಕರ್ನಾಟಕ ಚುನಾವಣೆಗೆ ಸಂಬಂಧಿಸಿದ್ದಲ್ಲ

ವೈರಲ್ ಆಗುತ್ತಿರುವ ವಿಡಿಯೊಗಳು ಮತ್ತು ಫೋಟೋಗಳು ಎರಡು ವರ್ಷಗಳಿಗಿಂತಲೂ ಹಳೆಯವು. ಫಲಕವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಬಾಂಗ್ಲಾ ಭಾಷೆಯಲ್ಲಿ ಬರೆದಿರುವುದು ಕಾಣಿಸುತ್ತದೆ.

Fact Check: ಬಿಜೆಪಿಗೆ ವೋಟ್ ಇಲ್ಲ ಎಂದ ಅನಿವಾಸಿ ಭಾರತೀಯರು; ವಿಡಿಯೊ ಅಭಿಯಾನ ಕರ್ನಾಟಕ ಚುನಾವಣೆಗೆ ಸಂಬಂಧಿಸಿದ್ದಲ್ಲ
ವೈರಲ್ ಆಗಿರುವ ವಿಡಿಯೊ
Follow us
ರಶ್ಮಿ ಕಲ್ಲಕಟ್ಟ
|

Updated on:Apr 26, 2023 | 7:23 PM

ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ (Karnataka Assembly Election 2023) ಮುಂಚಿತವಾಗಿ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಅನಿವಾಸಿ ಭಾರತೀಯರು (NRI) ಬಿಜೆಪಿಗೆ ಮತವಿಲ್ಲ (No Vote to BJP) ಎಂದು ಬೋರ್ಡ್ ಹಿಡಿದಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. 45 ಸೆಕೆಂಡುಗಳ ಈ ವಿಡಿಯೊದಲ್ಲಿ ಇಂಗ್ಲೆಂಡ್, ಫಿನ್‌ಲ್ಯಾಂಡ್, ಜರ್ಮನಿ ಮತ್ತು ಯುಎಸ್‌ನ ಕೆಲವು ಭಾಗಗಳಲ್ಲಿ ನೆಲೆಸಿರುವ ಭಾರತೀಯರು ಫಲಕ ಹಿಡಿದು ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತಿರುವುದನ್ನು ಕಾಣಬಹುದು.  ಈ ವಿಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಕಾಂಗ್ರೆಸ್ ನಾಯಕರು KarnatakaElections2023 ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಂಡಿದ್ದಾರೆ.

ಆದಾಗ್ಯೂ, ಟೈಮ್ಸ್ ನೌ ಈ ವಿಡಿಯೊದ ಫ್ಯಾಕ್ಟ್ ಚೆಕ್ ಮಾಡಿದಾಗ ಇದು ಹಳೆಯ ವಿಡಿಯೊ, ಇದು ಕರ್ನಾಟಕ ಚುನಾವಣೆಗೆ ಸಂಬಂಧಿಸಿದ್ದಲ್ಲ ಎಂಬುದು ತಿಳಿದು ಬಂದಿದೆ.

ಫ್ಯಾಕ್ಟ್ ಚೆಕ್

ವೈರಲ್ ಆಗುತ್ತಿರುವ ವಿಡಿಯೊಗಳು ಮತ್ತು ಫೋಟೋಗಳು ಎರಡು ವರ್ಷಗಳಿಗಿಂತಲೂ ಹಳೆಯವು. ಫಲಕವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಬಾಂಗ್ಲಾ ಭಾಷೆಯಲ್ಲಿ ಬರೆದಿರುವುದು ಕಾಣಿಸುತ್ತದೆ. ಬಂಗಾಳದಲ್ಲಿ ಯಾವುದೇ ವಿಭಜನೆ ಇಲ್ಲ ಎಂಬುದು ಇದರಲ್ಲಿ ಬರೆದಿದೆ. ಇದನ್ನು ನೋಡಿದರೆ ವಿಡಿಯೊ 2021 ರಲ್ಲಿ ನಡೆದ ಬಂಗಾಳ ಚುನಾವಣೆಗೆ ಸಂಬಂಧಿಸಿದ್ದು ಎಂಬುದು ಸ್ಪಷ್ಟ.

‘ಬಿಜೆಪಿಗೆ ಮತ ನೀಡಬೇಡಿ’ ಅಭಿಯಾನ

2021 ರಲ್ಲಿ ಬಂಗಾಳ ಚುನಾವಣೆಗೆ ಮುಂಚಿತವಾಗಿ, ಬಿಜೆಪಿ ವಿರುದ್ಧ ಪ್ರತಿಭಟನಾ ರ್ಯಾಲಿಯಲ್ಲಿ ಟಿಎಂಸಿ  ಕಾರ್ಯಕರ್ತರು ಬಿಜೆಪಿಗೆ ಮತ ನೀಡಬೇಡಿ ಎಂಬ ಘೋಷಣೆಗಳನ್ನು ಕೂಗಿದ್ದರು. ಪ್ರಮುಖ ದಿನಪತ್ರಿಕೆ ದಿ ಹಿಂದೂ ನಡೆಸಿದ ವಿಶ್ಲೇಷಣೆಯು “ಬಿಜೆಪಿಗೆ ಮತ ನೀಡುವುದಿಲ್ಲ” ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ದೊಡ್ಡ ರೀತಿಯಲ್ಲಿ ಸಹಾಯ ಮಾಡಿದೆ ಎಂದು ಹೇಳಿಕೊಂಡಿದೆ. ಪಶ್ಚಿಮ ಬಂಗಾಳ ವಿಧಾನಸಭೆಗೆ ಎಂಟು ಹಂತಗಳಲ್ಲಿ ಚುನಾವಣೆಗಳು ನಡೆದಿತ್ತು.

ಇದನ್ನೂ ಓದಿ:ತಮಿಳುನಾಡು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ ಡಿಎಂಕೆ ಫೈಲ್ಸ್ ; ಇದರಲ್ಲೇನಿದೆ?

ಮಮತಾಗೆ ಮತ ನೀಡುವುದಿಲ್ಲ

‘ಮಮತಾಗೆ ಮತ ಹಾಕಬೇಡಿ’ ಎಂಬ ಘೋಷಣೆ ಇರುವ ಬಿಳಿ ಟಿ-ಶರ್ಟ್ ಧರಿಸಿ, ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಫೋಟೊ ವೈರಲ್ ಆಗಿತ್ತು. ಪಂಚಾಯತ್ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಮತ ಚಲಾಯಿಸಿ ಆದರೆ ತೃಣಮೂಲ ಕಾಂಗ್ರೆಸ್ ಗೆ ಮತ ಹಾಕಬೇಡಿ ಎಂದಿದ್ದರು ಅವರು.

2021 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ‘ಬಿಜೆಪಿಗೆ ಮತ ನೀಡಬೇಡಿ’ ಅಭಿಯಾನವನ್ನು ಟೀಕಿಸಿದ ಸುವೇಂದು, ಮುರ್ಷಿದಾಬಾದ್ ಜಿಲ್ಲೆಯ ಸಾಗರ್ದಿಘಿ ಉಪಚುನಾವಣೆಯಲ್ಲಿ ‘ಮಮತಾಗೆ ಮತ ನೀಡಬೇಡಿ’ ಘೋಷಣೆ ಕೂಗಿದ್ದರು. ಕಳೆದ ತಿಂಗಳು ನಡೆದ ಉಪಚುನಾವಣೆಯಲ್ಲಿ ಎಡರಂಗದ ಬೆಂಬಲದೊಂದಿಗೆ ಕಾಂಗ್ರೆಸ್ ಗೆದ್ದು ತೃಣಮೂಲಕ್ಕೆ ಭಾರಿ ಹಿನ್ನಡೆಯಾಗಿತ್ತು.

ಮತ್ತಷ್ಟು ಫ್ಯಾಕ್ಟ್​​ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:21 pm, Wed, 26 April 23