ತಮಿಳುನಾಡು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ ಡಿಎಂಕೆ ಫೈಲ್ಸ್ ; ಇದರಲ್ಲೇನಿದೆ?
ಡಿಎಂಕೆ ಪ್ರಮುಖ ನಾಯಕರು ₹ 1.34 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಿ ಕೆ ಅಣ್ಣಾಮಲೈ ಅವರು ಏಪ್ರಿಲ್ 14 ರಂದು ‘ಡಿಎಂಕೆ ಫೈಲ್ಸ್’ ಬಿಡುಗಡೆ ಮಾಡಿದ್ದಾರೆ.
ಡಿಎಂಕೆ ಫೈಲ್ಸ್ (DMK Files) ತಮಿಳುನಾಡು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೀಡಾಗಿದ್ದು, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ (K Annamalai) ಮಂಗಳವಾರ ರಾಜ್ಯ ಹಣಕಾಸು ಸಚಿವ ಪಳನಿವೇಲ್ ತ್ಯಾಗ ರಾಜನ್ (PTR) ಅವರ ಎರಡನೇ ಆಡಿಯೊ ಕ್ಲಿಪ್ ಅನ್ನು ಬಿಡುಗಡೆ ಮಾಡಿದ್ದಾರೆ. 57 ಸೆಕೆಂಡ್‌ಗಳ ಆಡಿಯೋ ಕ್ಲಿಪ್‌ನಲ್ಲಿ ಪಿಟಿಆರ್ (ಆಪಾದಿತ) ಆಡಳಿತಾರೂಢ ಡಿಎಂಕೆ ಬಗ್ಗೆ ದೂರುತ್ತಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಡಿಎಂಕೆ ಒಳಗಿನಿಂದ ಕುಸಿಯುತ್ತಿರುವುದನ್ನು ಆಲಿಸಿ. ತಮಿಳುನಾಡಿನ ವಿತ್ತ ಸಚಿವ ಪಳನಿವೇಲ್ ತ್ಯಾಗ ರಾಜನ್ ಅವರ 2 ನೇ ಟೇಪ್. ಡಿಎಂಕೆ ಮತ್ತು ಬಿಜೆಪಿ ನಡುವೆ ಸರಿಯಾದ ವ್ಯತ್ಯಾಸವನ್ನು ತೋರಿಸಿದ್ದಕ್ಕಾಗಿ ಅವರಿಗೆ ವಿಶೇಷ ಧನ್ಯವಾದಗಳು #DMKFiles ಎಂದು ಆಡಿಯೊ ಬಿಡುಗಡೆ ಮಾಡಿದ ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ. ಕ್ಲಿಪ್‌ನಲ್ಲಿರುವ ವ್ಯಕ್ತಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು ಇದರಲ್ಲಿ ಕೇಳಬಹುದು.
ಡಿಎಂಕೆ ಫೈಲ್ಸ್ನಲ್ಲಿ ಏನಿದೆ?
- ಏಪ್ರಿಲ್ 20 ರಂದು, ಕೆ ಅಣ್ಣಾಮಲೈ ಅವರು ಸಾಮಾಜಿಕ ಮಾಧ್ಯಮದಲ್ಲಿ ಆಡಿಯೊ ಕ್ಲಿಪ್ ಬಗ್ಗೆ ಮಾತನಾಡಿದ್ದು, ಪಳನಿವೇಲ್ ತ್ಯಾಗ ರಾಜನ್ ಅವರು ಯಾರೊಂದಿಗೋ ಸಂಭಾಷಣೆ ನಡೆಸಿದಾಗ, ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಮತ್ತು ಅಳಿಯ ವಿ ಶಬರೇಶನ್ ಅವರು ಒಂದು ವರ್ಷದಲ್ಲಿ ₹ 30,000 ಕೋಟಿ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂದು ಹೇಳಿರುವುದಾಗಿ ಆರೋಪಿಸಿದ್ದಾರೆ.
- ಎರಡು ದಿನಗಳ ನಂತರ, ಪಳನಿವೇಲ್ ತ್ಯಾಗ ರಾಜನ್ ಹೇಳಿಕೆಯನ್ನು ನಿರಾಕರಿಸಿದರು. ಅಣ್ಣಾಮಲೈ ಹೇಳುತ್ತಿರುವ ಆಡಿಯೊ ಕ್ಲಿಪ್ ದುರುದ್ದೇಶಪೂರಿತ, ಕಪೋಲಕಲ್ಪಿತ ಎಂದು ತ್ಯಾಗ ರಾಜನ್ ಹೇಳಿದ್ದಾರೆ. ಡಿಎಂಕೆ ಕಾರ್ಯಕರ್ತರ ನಡುವೆ ಒಡಕು ಮೂಡಿಸಲು, ತ್ತು ಮುಖ್ಯಮಂತ್ರಿ ನಡುವೆ ಬಿರುಕು ಮೂಡಿಸಲಿರುವ ಸಂಚು ಇದು ಎಂದು ಅವರು ಹೇಳಿದ್ದಾರೆ.
- ಮಂಗಳವಾರ ಅಣ್ಣಾಮಲೈ ಅವರು ಪಳನಿವೇಲ್ ತ್ಯಾಗ ರಾಜನ್ ಅವರ ಧ್ವನಿಯನ್ನು ಹೊಂದಿರುವ ಎರಡನೇ ಕ್ಲಿಪ್ ಅನ್ನು ಬಿಡುಗಡೆ ಮಾಡಿದರು. ಪರಿಶೀಲಿಸಲು ಸಾಧ್ಯವಾಗದ ಕ್ಲಿಪ್‌ನಲ್ಲಿ, ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡುವುದನ್ನು ಕೇಳಬಹುದು.
- ಸಿಎಂ ಮಗ ಮತ್ತು ಅಳಿಯ ತುಂಬಾನೇ ತೆಗೆದುಕೊಂಡು ಹೋಗಿದ್ದಾರೆ ಎಂದು ಆಡಿಯೊ ಕ್ಲಿಪ್ ನಲ್ಲಿ ಹೇಳುತ್ತಿರುವುದನ್ನು ಕೇಳಬಹುದು. ಆ ವ್ಯಕ್ತಿ ಬಿಜೆಪಿಯ ಒಬ್ಬ ವ್ಯಕ್ತಿ, ಒಂದು ಹುದ್ದೆ ನಿಯಮವನ್ನು ಹೊಗಳುವುದನ್ನು ಮತ್ತು ಡಿಎಂಕೆಯನ್ನು ವ್ಯವಸ್ಥೆಯ ಕೊರತೆ ಎಂದು ಲೇವಡಿ ಮಾಡುವುದನ್ನು ಇದರಲ್ಲಿ ಕೇಳಬಹುದು.
- ಡಿಎಂಕೆ ಪ್ರಮುಖ ನಾಯಕರು ₹ 1.34 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಿ ಕೆ ಅಣ್ಣಾಮಲೈ ಅವರು ಏಪ್ರಿಲ್ 14 ರಂದು ‘ಡಿಎಂಕೆ ಫೈಲ್ಸ್’ ಬಿಡುಗಡೆ ಮಾಡಿದರು. ಚೆನ್ನೈ ಮೆಟ್ರೋ ರೈಲಿಗೆ ಬೋಗಿಗಳನ್ನು ಪೂರೈಸುವ ಗುತ್ತಿಗೆ ಪಡೆಯಲು ಖಾಸಗಿ ಕಂಪನಿಗೆ ಅನುಕೂಲ ಮಾಡಿಕೊಡಲು ಮುಖ್ಯಮಂತ್ರಿ ಸ್ಟಾಲಿನ್‌ಗೆ ₹ 200 ಕೋಟಿ ಲಂಚ ನೀಡಲಾಗಿದೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥರು ಆರೋಪಿಸಿದ್ದಾರೆ. ಡಿಎಂಕೆ ಮತ್ತು ಚೆನ್ನೈ ಮೆಟ್ರೋ ರೈಲು ಈ ಆರೋಪಗಳನ್ನು ನಿರಾಕರಿಸಿವೆ.
ಇದನ್ನೂ ಓದಿ: ನಾಮಪತ್ರ ವಾಪಸ್ ಪಡೆದ ಬಿಜೆಪಿ ಅಭ್ಯರ್ಥಿ, ದೆಹಲಿ ಮೇಯರ್ ಆಗಿ ಎಎಪಿಯ ಶೆಲ್ಲಿ ಒಬೆರಾಯ್ ಅವಿರೋಧ ಆಯ್ಕೆ
ಕ್ಲಿಪ್‌ನಲ್ಲಿರುವ ವ್ಯಕ್ತಿಯು ತಾನು ರಾಜಕೀಯಕ್ಕೆ ಪ್ರವೇಶಿಸಿದಾಗಿನಿಂದ “ಒಬ್ಬ ವ್ಯಕ್ತಿ, ಒಂದು ಹುದ್ದೆ” ನ ಪ್ರತಿಪಾದಕನಾಗಿದ್ದೆ ಎಂದು ಹೇಳುವುದನ್ನು ಕೇಳಬಹುದು. ಬಿಜೆಪಿಯಲ್ಲಿ ನಾನು ಇಷ್ಟಪಡುವುದೇ ಅದು. ಪಕ್ಷವನ್ನು ಯಾರು ನೋಡಿಕೊಳ್ಳುತ್ತಾರೆ, ಜನರನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಹೇಳುವುದು ಕೇಳಿಸುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ