ಕನ್ವೆನ್ಷನ್ ಹಾಲ್‌ಗಳಲ್ಲಿ ಮದ್ಯ ಪೂರೈಸಲು ಅನುಮತಿ ನೀಡುವ ತಮಿಳುನಾಡು ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

ತಮಿಳುನಾಡು (Tamil Nadu)ಸರ್ಕಾರವು ಮದುವೆ/ಛತ್ರ ಹಾಗೂ ವಾಣಿಜ್ಯೇತರ ಆವರಣದಲ್ಲಿ ಮದ್ಯವನ್ನಿರಿಸಲು ಮತ್ತು ಬಡಿಸಲು ಅನುಮತಿಸುವ ವಿಶೇಷ ಪರವಾನಗಿಗಳನ್ನು ನೀಡುವ ನಿರ್ಧಾರವನ್ನು ಹಿಂತೆಗೆದುಕೊಂಡಿದೆ ಎಂದು ಘೋಷಿಸಿದ ಒಂದು ದಿನದ ನಂತರ ಹೈಕೋರ್ಟ್ ಈ ತಡೆ ನೀಡಿದೆ

ಕನ್ವೆನ್ಷನ್ ಹಾಲ್‌ಗಳಲ್ಲಿ ಮದ್ಯ ಪೂರೈಸಲು ಅನುಮತಿ ನೀಡುವ ತಮಿಳುನಾಡು ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ
ಮದ್ರಾಸ್ ಹೈಕೋರ್ಟ್
Follow us
|

Updated on:Apr 26, 2023 | 4:43 PM

ಚೆನ್ನೈ: ಅಂತರಾಷ್ಟ್ರೀಯ ಕಾರ್ಯಕ್ರಮಗಳ ವೇಳೆ ಕನ್ವೆನ್ಷನ್ ಹಾಲ್‌ಗಳಲ್ಲಿ ಮದ್ಯ ಪೂರೈಸಲು ಅನುಮತಿ ನೀಡುವ ರಾಜ್ಯ ಸರ್ಕಾರದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ (Madras High Court) ಬುಧವಾರ ತಡೆಯಾಜ್ಞೆ ನೀಡಿದೆ. ತಮಿಳುನಾಡು (Tamil Nadu)ಸರ್ಕಾರವು ಮದುವೆ/ಛತ್ರ ಹಾಗೂ ವಾಣಿಜ್ಯೇತರ ಆವರಣದಲ್ಲಿ ಮದ್ಯವನ್ನಿರಿಸಲು ಮತ್ತು ಬಡಿಸಲು ಅನುಮತಿಸುವ ವಿಶೇಷ ಪರವಾನಗಿಗಳನ್ನು ನೀಡುವ ನಿರ್ಧಾರವನ್ನು ಹಿಂತೆಗೆದುಕೊಂಡಿದೆ ಎಂದು ಘೋಷಿಸಿದ ಒಂದು ದಿನದ ನಂತರ ಹೈಕೋರ್ಟ್ ಈ ತಡೆ ನೀಡಿದೆ. ಏತನ್ಮಧ್ಯೆ, ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ (TASMAC) 500 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಅಬಕಾರಿ ಇಲಾಖೆ ಇತ್ತೀಚೆಗೆ ಸಮೀಕ್ಷೆಯನ್ನು ಪ್ರಾರಂಭಿಸಿದೆ. ರಾಜ್ಯದಲ್ಲಿ 500 ಮದ್ಯದಂಗಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗಿದೆ ಎಂದು  ಅಬಕಾರಿ ಸಚಿವ ವಿ.ಸೆಂಥಿಲ್ ಬಾಲಾಜಿ ಅವರು ಕೆಲ ದಿನಗಳ ಹಿಂದೆ ವಿಧಾನಸಭೆಯಲ್ಲಿ ಚರ್ಚೆಯ ವೇಳೆ ಹೇಳಿದ್ದರು.

ಸರ್ಕಾರದ  ಆದೇಶ ಸಿಂಧುತ್ವವನ್ನು ಪ್ರಶ್ನಿಸಿ ಸಾಮಾಜಿಕ ನ್ಯಾಯಕ್ಕಾಗಿ ವಕೀಲರ ವೇದಿಕೆಯ ಅಧ್ಯಕ್ಷ ಕೆ.ಬಾಲು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ವೈದ್ಯನಾಥನ್ ಮತ್ತು ಆರ್.ಕಲೈಮತಿ ಅವರು ಮಧ್ಯಂತರ ತಡೆಯಾಜ್ಞೆ ನೀಡಿದರು. ಮೇ ತಿಂಗಳಲ್ಲಿ ನ್ಯಾಯಾಲಯವು ಒಂದು ತಿಂಗಳ ಅವಧಿಯ ಬೇಸಿಗೆ ರಜೆಯಲ್ಲಿರುವ ಕಾರಣ ಜೂನ್‌ನಲ್ಲಿ ಹೆಚ್ಚಿನ ವಿಚಾರಣೆ ನಡೆಸಲಿದೆ.

ಅಡ್ವೊಕೇಟ್ ಜನರಲ್ ಆರ್.ಶುಣ್ಮುಗಸುಂದರಂ ಅವರು ಮಾರ್ಚ್ 18ರ ಆದೇಶ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಏಪ್ರಿಲ್ 24ರಂದು ಅದಕ್ಕೆ ತಿದ್ದುಪಡಿ ತರಲಾಗಿತ್ತು. ಮದುವೆ ಸಭಾಂಗಣಗಳಲ್ಲಿ ಮತ್ತು ಮನೆಯ ಆಚರಣೆಗಳು, ಸಮಾರಂಭಗಳು ಮತ್ತು ಪಾರ್ಟಿಗಳಲ್ಲಿ ನಡೆಸುವ ಕೆಲವು ಕಾರ್ಯಕ್ರಮಗಳಲ್ಲಿ ಮದ್ಯ ಬಡಿಸುವ ವಿಶೇಷ ಪರವಾನಗಿ ನೀಡಲಾಗಿತ್ತು. ಪರಿಷ್ಕೃತ ಆದೇಶದಲ್ಲಿ ಆ ಎಲ್ಲಾ ನಿಬಂಧನೆಗಳನ್ನು ಅಳಿಸಲಾಗಿದೆ ಎಂದು ಅವರು ಹೇಳಿದರು.

ಪ್ರಸ್ತುತ, ಸಮ್ಮೇಳನ ಸಭಾಂಗಣಗಳು, ಸಮಾವೇಶ ಕೇಂದ್ರಗಳು ಮತ್ತು ಕ್ರೀಡಾಂಗಣಗಳಲ್ಲಿ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮ್ಮೇಳನಗಳು, ಶೃಂಗಸಭೆಗಳು ಮತ್ತು ಕ್ರೀಡಾಕೂಟಗಳಲ್ಲಿ ಭಾಗವಹಿಸುವವರಿಗೆ ಮದ್ಯವನ್ನು ಪೂರೈಸಲು ಮಾತ್ರ ವಿಶೇಷ ಪರವಾನಗಿಯನ್ನು ಅನುಮತಿಸಲಾಗಿದೆ. ಆದ್ದರಿಂದ, ಅರ್ಜಿದಾರರು ಏಪ್ರಿಲ್ 24 ರ ಜಿಒ ಅನ್ನು ಪ್ರಶ್ನಿಸಿ ಹೊಸ ಪಿಐಎಲ್ ಅರ್ಜಿಯನ್ನು ಸಲ್ಲಿಸಬೇಕಾಗಬಹುದು ಎಂದು ಅಡ್ವೊಕೇಟ್ ಜನರಲ್ ಹೇಳಿದರು. ಹೊಸ ಆದೇಶಕ್ಕೆ ಸವಾಲು ಹಾಕಿ ಕಾರಣಗಳನ್ನು ತೋರಿಸಲಿ ಎಂದು ನ್ಯಾಯಾಲಯದಲ್ಲಿ ಹೇಳಿದ ಅವರು ಮಧ್ಯಂತರ ಆದೇಶಗಳನ್ನು ವಿರೋಧಿಸಿದರು.

ಇದನ್ನೂ ಓದಿ:  Mango Price: ಮಾವು ಪ್ರಿಯರಿಗೆ ಕಹಿ ಸುದ್ದಿ, ಈ ಬಾರಿ ಬೆಲೆ ದುಬಾರಿ: ದರ ಏರಿಕೆಯ ಸತ್ಯ ಇಲ್ಲಿದೆ

ಆದಾಗ್ಯೂ, ಮಾರ್ಚ್ 18 ಸರ್ಕಾರದ ಆದೇಶಕ್ಕೆ ಮಾಡಿದ ತಿದ್ದುಪಡಿಯನ್ನು ವಿವರಿಸಿ ದಾವೆದಾರರು ಈಗಾಗಲೇ ಹೆಚ್ಚುವರಿ ಅಫಿಡವಿಟ್ ಅನ್ನು ಸಲ್ಲಿಸಿರುವುದರಿಂದ ಹೊಸ ಅರ್ಜಿಯನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಪಿಐಎಲ್ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಂ.ಆರ್.ಜೋತಿಮಣಿಯನ್ ನ್ಯಾಯಾಲಯಕ್ಕೆ ತಿಳಿಸಿದರು. ರಾಷ್ಟ್ರೀಯ/ಅಂತರರಾಷ್ಟ್ರೀಯ ಕಾರ್ಯಕ್ರಮಗಳ ಸಂದರ್ಭದಲ್ಲಿ ಕನ್ವೆನ್ಷನ್ ಸೆಂಟರ್‌ಗಳು ಮತ್ತು ಕಾನ್ಫರೆನ್ಸ್ ಹಾಲ್‌ಗಳಲ್ಲಿ ಮದ್ಯವನ್ನು ಬಡಿಸಲು ಅವಕಾಶ ನೀಡುವುದು ವಸತಿ ಪ್ರದೇಶಗಳಲ್ಲಿ ತೊಂದರೆಗೆ ಕಾರಣವಾಗುತ್ತದೆ ಎಂದು ವಕೀಲರು ವಾದಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:19 pm, Wed, 26 April 23

ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​