Mango Price: ಮಾವು ಪ್ರಿಯರಿಗೆ ಕಹಿ ಸುದ್ದಿ, ಈ ಬಾರಿ ಬೆಲೆ ದುಬಾರಿ: ದರ ಏರಿಕೆಯ ಸತ್ಯ ಇಲ್ಲಿದೆ

Mango price hike: ಹವಾಮಾನ ಬದಲಾವಣೆ, ಅಕಾಲಿಕ ಮಳೆ ಮತ್ತು ಕೀಟಾಣುಗಳ ದಾಳಿಯಿಂದಾಗಿ ಮಾವಿನ ಹಣ್ಣಿನ ಉತ್ಪಾದನೆಯಲ್ಲಿ ತೀವ್ರ ಕುಸಿತ ಉಂಟಾಗಿದೆ. ಹಾಗಾಗಿ ಋತುವಿನಲ್ಲಿ ಮಾವಿನ ಹಣ್ಣಿನ ಬೆಲೆ  ದುಬಾರಿಯಾಗಿದೆ.

Mango Price: ಮಾವು ಪ್ರಿಯರಿಗೆ ಕಹಿ ಸುದ್ದಿ, ಈ ಬಾರಿ ಬೆಲೆ ದುಬಾರಿ: ದರ ಏರಿಕೆಯ ಸತ್ಯ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 26, 2023 | 4:05 PM

ಮಾವಿನ ಹಣ್ಣನ್ನು ಎಲ್ಲಾ ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಮಾವಿನ ಹಣ್ಣು (Mango) ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲಿಯೂ ಬೇಸಿಗೆಯ ದಿನಗಳಲ್ಲಿ ಮಾವಿನ ಹಣ್ಣನ್ನು ಎಲ್ಲರೂ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಈ ಮಾವಿನ ಹಣ್ಣು ಸದ್ಯ ಜನ ಸಾಮಾನ್ಯರಿಗೆ ಕೈಗೆಟುಕದಂತಾಗಿದೆ. ಕಾರಣ ಹಠಾತ್ ಹವಾಮಾನ ಬದಲಾವಣೆ, ಅಕಾಲಿಕ ಮಳೆ ಮತ್ತು ಕೀಟಾಣುಗಳ ದಾಳಿಯಿಂದಾಗಿ ಮಾವಿನ ಹಣ್ಣಿನ ಉತ್ಪಾದನೆಯಲ್ಲಿ ತೀವ್ರ ಕುಸಿತ ಉಂಟಾಗಿದೆ. ಹಾಗಾಗಿ ಋತುವಿನಲ್ಲಿ ಮಾವಿನ ಹಣ್ಣಿನ ಬೆಲೆ  ದುಬಾರಿಯಾಗಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಹಾಪುಸ್​,  ಕೊಂಕಣ ಮಾವು ಸೇರಿದಂತೆ ಇತರೆ ಮಾವು ತಳಿಗಳಲ್ಲಿ 40-50% ದುಬಾರಿ ಕಂಡುಬಂದಿದೆ. ಕೆಲ ಕಾರಣಗಳಿಂದ ಕಡಿಮೆ ಪ್ರಮಾಣ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ಉತ್ಪಾದನೆಯ ಪ್ರಮಾಣ ಕಡಿಮೆ ಆಗಿದ್ದು, ಸಹಜವಾಗಿಯೇ ಬೆಲೆಯಲ್ಲಿ ಏರಿಕೆಯಾಗಿ ಸಾಮಾನ್ಯ ವರ್ಗದ ಜನರ ಕೈಗೆಟುಕದಂತಾಗಿದೆ.

ಮಾವಿನ ಹಣ್ಣಿನ ದುಬಾರಿ ಬೆಲೆ ಏರಿಕೆ ಕುರಿತಾಗಿ ಟಿವಿ9 ಡಿಜಿಟಲ್​ ಜೊತೆ ಬೆಂಗಳೂರಿನ ಸಗಟು ವ್ಯಾಪಾರಿ ಸಮೀರ್​ ಮಾತನಾಡಿ, ಮಹಾರಾಷ್ರ ಭಾಗದಲ್ಲಿ ಜನವರಿ, ಫೆಬ್ರುವರಿಯಲ್ಲಿ ಉಂಟಾದ ಅಕಾಲಿಕ ಮಳೆಯಿಂದಾಗಿ ಈ ವರ್ಷ ಮಾವು ಬೆಳೆಯುವುದೇ ಕಡಿಮೆ ಆಗಿದೆ. ಈ ಹಿನ್ನೆಲೆ ಆರಂಭದಲ್ಲಿ ಮಾವು ಬೆಲೆ ದುಬಾರಿ ಆಗಿತ್ತು. ಅಕ್ಷಯ ತೃತೀಯ ಮುಗಿದ ಬಳಿಕ ಮಾವು ಬೆಲೆಯಲ್ಲಿ ಕುಸಿತ ಉಂಟಾಗಿದೆ. ಮೇ ತಿಂಗಳಲ್ಲಿ ಬೆಲೆ ಮತ್ತಷ್ಟು ಕಡಿಮೆ ಆಗುವುದರೊಂದಿಗೆ ಮಾವು ಸಿಗುವುದು ಕೂಡ ಕಷ್ಟ ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯಾದ್ಯಂತ ಶಾಲೆಗಳಲ್ಲಿ ಪಠ್ಯ ವಿಷಯವಾಗಿ ಕೃಷಿಯನ್ನು ಸೇರಿಸಲು ಆದೇಶ

ಸದ್ಯ ಬೆಂಗಳೂರಿನಲ್ಲಿ ಒಂದು ಡಜನ್​ ಮಾವಿಗೆ (ಸಾಮಾನ್ಯ 250 ಗ್ರಾಂ) 1000, 1200 ಬೆಲೆ ಇದೆ. ಅದೇ ಒಂದು ವೇಳೆ ನೀವು ಮಹಾರಾಷ್ಟ, ಪುಣೆ ಭಾಗಗಳಲ್ಲಿ ಒಂದು ಡಜನ್​ 700-800 ಬೆಲೆ ಇರಬಹುದು. ಬೆಂಗಳೂರಿನಲ್ಲಿ ಸಿಗುವಂತಹ ಮಾವನ್ನು ಹೆಚ್ಚಾಗಿ ಮಹಾರಾಷ್ಟ್ರದ ರತ್ನಗಿರಿಯಿಂದ ರಫ್ತು ಮಾಡಲಾಗುತ್ತದೆ ಎಂದು ಸಮೀರ್​ ಅವರು ತಿಳಿಸಿದರು.

ಇದನ್ನೂ ಓದಿ: Operation Kaveri: 72 ಗಂಟೆಗಳ ಕದನ ವಿರಾಮದ ನಡುವೆ ಸುಡಾನ್‌ನಿಂದ 534 ನಾಗರಿಕರನ್ನು ಸ್ಥಳಾಂತರಿಸಿದ ಭಾರತ

ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿನ ಮಾವಿನ ಹಣ್ಣಿನ ಬೆಲೆ ಹೀಗಿದೆ 

ದಾವಣಗೆರೆ: ಮಾವು- ಕನಿಷ್ಠ ಬೆಲೆ- 4000 ಗರಿಷ್ಠ- 5000

ಹಳಿಯಾಳ: ಹಾಪುಸ್​- ಕನಿಷ್ಠ ಬೆಲೆ- 4000 ಗರಿಷ್ಠ- 4000

ಕಲಬುರಗಿ: ಮಾವು- ಕನಿಷ್ಠ ಬೆಲೆ- 5200 ಗರಿಷ್ಠ- 7680

ಮೈಸೂರು: ಇತರೆ- ಕನಿಷ್ಠ ಬೆಲೆ- 2500 ಗರಿಷ್ಠ- 5000

ರಾಮನಗರ: ಬಾದಾಮಿ- ಕನಿಷ್ಠ ಬೆಲೆ- 3000 ಗರಿಷ್ಠ- 8300 ಇತರೆ- ಕನಿಷ್ಠ ಬೆಲೆ- 1400 ಗರಿಷ್ಠ- 3300 ರಸಪುರಿ- ಕನಿಷ್ಠ ಬೆಲೆ- 4400 ಗರಿಷ್ಠ-8000 ತೋತಾಪುರಿ- ಕನಿಷ್ಠ ಬೆಲೆ- 1000 ಗರಿಷ್ಠ-1600

ಉಡುಪಿ: ಮಾವು- ಕನಿಷ್ಠ ಬೆಲೆ- 4500 ಗರಿಷ್ಠ- 10000

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:59 pm, Wed, 26 April 23

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ