Operation Kaveri: 72 ಗಂಟೆಗಳ ಕದನ ವಿರಾಮದ ನಡುವೆ ಸುಡಾನ್‌ನಿಂದ 534 ನಾಗರಿಕರನ್ನು ಸ್ಥಳಾಂತರಿಸಿದ ಭಾರತ
ಸ್ಥಳಾಂತರ ಪ್ರಯತ್ನಗಳ ಮೇಲ್ವಿಚಾರಣೆಗಾಗಿ ಮಂಗಳವಾರ ಜಿದ್ದಾಗೆ ಪ್ರಯಾಣಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಸೌದಿ ಬಂದರು ನಗರದಲ್ಲಿ ಭಾರತೀಯರನ್ನು ಬರಮಾಡಿಕೊಂಡರು. ಜಿದ್ದಾಗೆ ಆಗಮಿಸಿದ ಎಲ್ಲರನ್ನೂ ಶೀಘ್ರದಲ್ಲೇ ಭಾರತಕ್ಕೆ ಕರೆತರಲಾಗುವುದು ಎಂದು ಅವರು ಟ್ವೀಟ್ ಮಾಡಿದ್ದಾರೆ.
ದೆಹಲಿ: ಮಿಲಿಟರಿ ವಿಮಾನ ಮತ್ತು ಯುದ್ಧನೌಕೆಯನ್ನು ಬಳಸಿಕೊಂಡು ಭಾರತ 530 ಕ್ಕೂ ಹೆಚ್ಚು ನಾಗರಿಕರನ್ನು ಸುಡಾನ್‌ನಿಂದ (Sudan) ಸ್ಥಳಾಂತರಿಸಿದೆ (evacuation). ಸುಡಾನ್ ಸೇನಾಪಡೆ ಮತ್ತು ಬಂಡುಕೋರ ಅರೆಸೈನಿಕ ಪಡೆಗಳ ನಡುವಿನ ಹೋರಾಟದ ನಡುವೆ ಈಶಾನ್ಯ ಆಫ್ರಿಕನ್ ದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆದೊಯ್ಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಸುಡಾನ್ ಸೇನಾ ಮುಖ್ಯಸ್ಥ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅವರ ಪ್ರತಿಸ್ಪರ್ಧಿ, ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (RSF) ಮುಖ್ಯಸ್ಥ ಜನರಲ್ ಮೊಹಮ್ಮದ್ ಹಮ್ದಾನ್ ಡಗಾಲೊ ಅವರಿಗೆ ನಿಷ್ಠರಾಗಿರುವ ಪಡೆಗಳು 72 ಗಂಟೆ ರಾಷ್ಟ್ರವ್ಯಾಪಿ ಕದನ ವಿರಾಮ (ceasefire) ಒಪ್ಪಿಗೆ ನೀಡಿದ ನಂತರ ಮಂಗಳವಾರ ಸ್ಥಳಾಂತರಿಸುವ ಕಾರ್ಯ ಪ್ರಾರಂಭವಾಯಿತು.
ಐಎನ್‌ಎಸ್ ಸುಮೇಧಾ 278 ಭಾರತೀಯರ ಮೊದಲ ಬ್ಯಾಚ್ ಅನ್ನು ಪೋರ್ಟ್ ಸುಡಾನ್‌ನಿಂದ ಸೌದಿ ಅರೇಬಿಯಾದ ಜಿದ್ದಾಗೆ ಕರೆದೊಯ್ದಿದೆ. ಆಪರೇಷನ್ ಕಾವೇರಿ ಅಡಿಯಲ್ಲಿ, ಭಾರತೀಯ ವಾಯುಪಡೆಯ (IAF) C-130J ಸಾರಿಗೆ ವಿಮಾನದಲ್ಲಿ 121 ಜನರು ಮತ್ತು 135 ಜನರನ್ನು ಒಳಗೊಂಡಿರುವ ಎರಡು ಬ್ಯಾಚ್‌ಗಳನ್ನು ಪೋರ್ಟ್ ಸುಡಾನ್‌ನಿಂದ ಜಿದ್ದಾಗೆ ಕರೆದೊಯ್ಯಲಾಗಿದೆ. ಭಾರತವು ಭಾನುವಾರ ಜಿದ್ದಾದಲ್ಲಿ ಎರಡು C-130J ವಿಮಾನಗಳನ್ನು ಇರಿಸಿತ್ತು.
ಸ್ಥಳಾಂತರ ಪ್ರಯತ್ನಗಳ ಮೇಲ್ವಿಚಾರಣೆಗಾಗಿ ಮಂಗಳವಾರ ಜಿದ್ದಾಗೆ ಪ್ರಯಾಣಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಸೌದಿ ಬಂದರು ನಗರದಲ್ಲಿ ಭಾರತೀಯರನ್ನು ಬರಮಾಡಿಕೊಂಡರು. ಜಿದ್ದಾಗೆ ಆಗಮಿಸಿದ ಎಲ್ಲರನ್ನೂ ಶೀಘ್ರದಲ್ಲೇ ಭಾರತಕ್ಕೆ ಕರೆತರಲಾಗುವುದು ಎಂದು ಅವರು ಟ್ವೀಟ್ ಮಾಡಿದ್ದಾರೆ.
Third batch comprising 135 Indians from Port Sudan arrived in Jeddah by IAF C-130J aircraft.
Onward journey to India for all who arrived in Jeddah will commence shortly. #OperationKaveri pic.twitter.com/OHhC5G2Pg8
— V. Muraleedharan (@MOS_MEA) April 26, 2023
ಪೋರ್ಟ್ ಸುಡಾನ್‌ನಲ್ಲಿ ಮಂಗಳವಾರದವರೆಗೆ ಜಮಾಯಿಸಿದ್ದ ಹೆಚ್ಚಿನ ಭಾರತೀಯರನ್ನು ಈಗ ಸೌದಿ ಅರೇಬಿಯಾಕ್ಕೆ ಸ್ಥಳಾಂತರಿಸಲಾಗಿದೆ. ಅದೇ ವೇಳೆ ಖಾರ್ಟೂಮ್‌ನಲ್ಲಿ ಸಿಲುಕಿರುವ ನೂರಾರು ಜನರನ್ನು ಸ್ಥಳಾಂತರಿಸುವಲ್ಲಿ ಇನ್ನೂ ಸಮಸ್ಯೆಗಳಿವೆ ಎಂದು ಈ ಬಗ್ಗೆ ತಿಳಿದಿರುವ ಜನರು ಹೇಳಿದ್ದಾರೆ.
ರಾಜಧಾನಿ ನಗರದ ಸಮೀಪದಲ್ಲಿರುವ ಸೇನಾ ವಾಯುನೆಲೆಗಳ ಬಳಕೆ ಸೇರಿದಂತೆ ಖಾರ್ಟೂಮ್ ಮತ್ತು ಇತರ ಸ್ಥಳಗಳಿಂದ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತೀಯ ಅಧಿಕಾರಿಗಳು ವಿವಿಧ ಆಯ್ಕೆಗಳನ್ನು ಅನ್ವೇಷಿಸುತ್ತಿದ್ದಾರೆ.
ಸ್ಥಳಾಂತರಿಸುವ ಪ್ರಯತ್ನಗಳಿಗೆ ಅನುಕೂಲವಾಗುವಂತೆ ಜಿದ್ದಾದಲ್ಲಿ ಭಾರತವು ನಿಯಂತ್ರಣ ಕೊಠಡಿ ಮತ್ತು ಸಾರಿಗೆ ಸೌಲಭ್ಯವನ್ನು ಸ್ಥಾಪಿಸಿದೆ. ಸಾರಿಗೆ ಸೌಲಭ್ಯವು ಆಹಾರ ವಸ್ತುಗಳು, ಊಟ, ವೈದ್ಯಕೀಯ ಸೌಲಭ್ಯಗಳು ಮತ್ತು ಹಾಸಿಗೆಗಳನ್ನು ಹೊಂದಿದ್ದು, ಸುಡಾನ್‌ನಿಂದ ಕರೆತಂದಿರುವ ಭಾರತೀಯರನ್ನು ಮನೆಗೆ ಕಳುಹಿಸುವ ಮೊದಲು ಅಲ್ಲಿಯೇ ಇರಿಸಲಾಗುತ್ತದೆ.
ಇದನ್ನೂ ಓದಿ: Australia: ವಿಮಾನದಲ್ಲಿ ಪ್ರಯಾಣಿಕರ ಹೊಡೆದಾಟ ಬೇರೆ ದಾರಿ ತೋಚದೆ ತುರ್ತು ಭೂಸ್ಪರ್ಶ
ಏಪ್ರಿಲ್ 14 ರಂದು ಸುಡಾನ್‌ನಲ್ಲಿ ನಡೆದ ಹೋರಾಟದ ನಂತರ ಭಾರತದ ಕಡೆಯಿಂದ ನಿಕಟ ಸಂಪರ್ಕವನ್ನು ಸ್ಥಾಪಿಸಿದ ಸೌದಿ ಅರೇಬಿಯಾವು ಸ್ಥಳಾಂತರಿಸುವ ಪ್ರಯತ್ನಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ ಎಂದು ಈ ಬಗ್ಗೆ ತಿಳಿದಿರುವ ಜನರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಹೋರಾಟವು ಭುಗಿಲೆದ್ದಾಗ ಸುಡಾನ್‌ನಲ್ಲಿ ಸುಮಾರು 3,000 ಭಾರತೀಯ ನಾಗರಿಕರಿದ್ದರು, ಅವರಲ್ಲಿ ಹೆಚ್ಚಿನವರು ಖಾರ್ಟೂಮ್‌ನಲ್ಲಿ ಇದ್ದರು.ಯುಎನ್ ಏಜೆನ್ಸಿಗಳ ಪ್ರಕಾರ, ಹೋರಾಟದಲ್ಲಿ 459 ಜನರು ಸಾವನ್ನಪ್ಪಿದ್ದಾರೆ ಮತ್ತು 4,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುಡಾನ್‌ನ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಮತ್ತು ನೀರು ಇಲ್ಲ. ಖಾರ್ಟೂಮ್ ಮತ್ತು ಇತರ ನಗರಗಳಲ್ಲಿ ಆಹಾರದ ಕೊರತೆ ಕೂಡಾ ವರದಿಯಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Wed, 26 April 23