Operation Kaveri: ಆಪರೇಷನ್ ಕಾವೇರಿ; ಸುಡಾನ್​​ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಆರಂಭ

INS ಸುಮೇಧಾ 278 ಜನರೊಂದಿಗೆ ಪೋರ್ಟ್ ಸುಡಾನ್‌ನಿಂದ ಜೆದ್ದಾಗೆ ಹೊರಟಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

Follow us
ರಶ್ಮಿ ಕಲ್ಲಕಟ್ಟ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 25, 2023 | 7:24 PM

ಸುಡಾನ್​​ನಲ್ಲಿ (Sudan) ಸಿಲುಕಿರುವ ಭಾರತೀಯರ ಸ್ಥಳಾಂತರ (evacuations) ಆರಂಭವಾಗಿದೆ. ಆಪರೇಷನ್ ಕಾವೇರಿ (Operation Kaveri) ಅಡಿಯಲ್ಲಿ ಭಾರತೀಯರ ಮೊದಲ ಬ್ಯಾಚ್  ಸುಡಾನ್‌ನಿಂದ ಹೊರಡಲಿದೆ. INS ಸುಮೇಧಾ 278 ಜನರೊಂದಿಗೆ ಪೋರ್ಟ್ ಸುಡಾನ್‌ನಿಂದ ಜೆದ್ದಾಗೆ ಹೊರಟಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಆಪರೇಷನ್ ಕಾವೇರಿ ಅಡಿಯಲ್ಲಿ ಭಾರತೀಯರ ಮೊದಲ ಬ್ಯಾಚ್ ಸುಡಾನ್‌ನಿಂದ ಹೊರಡುತ್ತದೆ. 278 ಜನರೊಂದಿಗೆ ಐಎನ್‌ಎಸ್ ಸುಮೇಧಾ ಜೆಡ್ಡಾಕ್ಕೆ ಪೋರ್ಟ್ ಸುಡಾನ್‌ನಿಂದ ಹೊರಡುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ. ಸೇನೆ ಮತ್ತು ಅರೆಸೇನಾ ಗುಂಪಿನ ನಡುವೆ ಭೀಕರ ಕಾಳಗ ನಡೆಯುತ್ತಿರುವ ಸುಡಾನ್‌ನಿಂದ ಸ್ಥಳಾಂತರಿಸಿದ ಭಾರತೀಯರ ಗುಂಪಿನಲ್ಲಿ ಮಕ್ಕಳೂ ಸೇರಿದ್ದಾರೆ.ಭಾರತವು ಎರಡು ಸಾರಿಗೆ ವಿಮಾನಗಳನ್ನು ಜೆದ್ದಾದಲ್ಲಿ ಮತ್ತು INS ಸುಮೇಧಾವನ್ನು ಪೋರ್ಟ್ ಸುಡಾನ್‌ನಲ್ಲಿ ಆಪರೇಷನ್ ಕಾವೇರಿಯ ಭಾಗವಾಗಿ ಇರಿಸಿತ್ತು.

ಸೇನೆ ಮತ್ತು ಅರೆಸೇನಾ ಪಡೆಗಳ ಮಧ್ಯೆ ಸಂಘರ್ಷ ನಡೆಯುತ್ತಿರುವ ಸುಡಾನ್​ನಲ್ಲಿ ಕನ್ನಡಿಗರೂ ಸೇರಿದಂತೆ ನೂರಾರು ಮಂದಿ ಭಾರತೀಯರು ಸಿಲುಕಿದ್ದಾರೆ. ಸುಡಾನ್‌ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ಮರಳಿ ಕರೆತರಲು ‘ಆಪರೇಷನ್ ಕಾವೇರಿ’ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸುಮಾರು 500 ಭಾರತೀಯರು ಸುಡಾನ್ ಬಂದರನ್ನು ತಲುಪಿದ್ದಾರೆ. ಅವರನ್ನು ಕರೆತರಲು ನಮ್ಮ ಹಡಗುಗಳು ಮತ್ತು ವಿಮಾನಗಳು ಸಜ್ಜಾಗಿವೆ. ಸುಡಾನ್‌ನಲ್ಲಿರುವ ನಮ್ಮ ಎಲ್ಲ ಸಹೋದರರಿಗೆ ಸಹಾಯ ಮಾಡಲು ಸರ್ಕಾರ ಬದ್ಧವಾಗಿದೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದರು

ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಸೌದಿ ಅರೇಬಿಯಾಕ್ಕೆ ಎರಡು ಹೆವಿ-ಲಿಫ್ಟ್ ವಿಮಾನಗಳನ್ನು ಮತ್ತು ಸುಡಾನ್ ಕರಾವಳಿಗೆ ಹಡಗನ್ನು ಕಳುಹಿಸಲಾಗಿದೆ ಎಂದು ಏಪ್ರಿಲ್ 23ರಂದು ವಿದೇಶಾಂಗ ಸಚಿವಾಲಯ ತಿಳಿಸಿತ್ತು.

ಸುಡಾನ್​ನಲ್ಲಿ ಮಹಿಳೆಯರೂ ಸೇರಿದಂತೆ ಕರ್ನಾಟಕದ ಹತ್ತಾರು ಮಂದಿ ಸಿಲುಕಿದ್ದಾರೆ. ಈ ಪೈಕಿ ಹೆಚ್ಚಿನವರು ರಾಜ್ಯದ ಹಕ್ಕಿಪಿಕ್ಕಿ ಜನಾಂಗದವರಾಗಿದ್ದಾರೆ. ಜತೆಗೆ ಇತರ ರಾಜ್ಯಗಳ ಅನೇಕ ಮಂದಿಯೂ ಸಿಲುಕಿದ್ದಾರೆ.

ಇದನ್ನೂ ಓದಿ: ಸುಡಾನ್​​ನಲ್ಲಿ 72 ಗಂಟೆಗಳ ಕದನ ವಿರಾಮ; ನಾಗರಿಕರನ್ನು ಸ್ಥಳಾಂತರಿಸಲು ಸುರಕ್ಷಿತ ದಾರಿ ಹುಡುಕುತ್ತಿದೆ ಭಾರತ

ಸುಡಾನ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ವಿದೇಶಾಂಗ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಸುಡಾನ್​​ಗಿರುವ ಭಾರತದ ರಾಯಭಾರಿ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಸುಡಾನ್​​ನಲ್ಲಿನ ಇತ್ತೀಚಿನ ವಿದ್ಯಮಾನಗಳ ಬಗ್ಗೆ ವರದಿಯನ್ನು ಕೇಳಿದ್ದ ಪ್ರಧಾನಿ, ಅಲ್ಲಿರುವ 3,000ಕ್ಕಿಂತಲೂ ಹೆಚ್ಚು ಭಾರತೀಯರ ಸುರಕ್ಷೆ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದರು. ಕಳೆದ ವಾರ ಸುಡಾನ್​​ನಲ್ಲಿ ಗುಂಡಿನ ದಾಳಿಗೆ ಬಲಿಯಾದ ಭಾರತೀಯರ ಸಾವಿಗೆ ಮೋದಿ ಸಂತಾಪ ಸೂಚಿಸಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Tue, 25 April 23