Ukraine Russia War: ಉಕ್ರೇನ್ ನೆಲಕ್ಕೆ ರಷ್ಯಾದ ಹೊಸ T-14 ಅರ್ಮಾಟಾ ಯುದ್ಧ ಟ್ಯಾಂಕ್ ಆಗಮನ
ರಷ್ಯಾ ತನ್ನ ಹೊಸ T-14 ಅರ್ಮಾಟಾ ಯುದ್ಧ ಟ್ಯಾಂಕ್‌ಗಳನ್ನು ಬಳಸಲು ಪ್ರಾರಂಭಿಸಿದೆ. ಆದರೆ T-14 ಅರ್ಮಾಟಾ ಮೂಲಕ ಯಾವುದೇ ನೇರ ದಾಳಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿಲ್ಲ ಎಂದು RIA ರಾಜ್ಯ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.
ಉಕ್ರೇನ್ (Ukraine) ಮೇಲೆ ಮತ್ತೆ ದಾಳಿ ನಡೆಸಲು ರಷ್ಯಾ (Russia) ಮತ್ತೊಂದು ಅಸ್ತ್ರ ಪ್ರಯೋಗಕ್ಕೆ ಸಿದ್ಧತೆಯನ್ನು ನಡೆಸಿದೆ, ಉಕ್ರೇನ್ ಈಗಾಗಲೇ ಯುದ್ಧದಿಂದ ನಲುಗಿ ಹೋಗಿದೆ. ಇದೀಗ ರಷ್ಯಾ ತನ್ನ ಹೊಸ T-14 ಅರ್ಮಾಟಾ ಯುದ್ಧ ಟ್ಯಾಂಕ್‌ಗಳನ್ನು ಬಳಸಲು ಪ್ರಾರಂಭಿಸಿದೆ. ಆದರೆ T-14 ಅರ್ಮಾಟಾ ಮೂಲಕ ಯಾವುದೇ ನೇರ ದಾಳಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿಲ್ಲ ಎಂದು RIA ರಾಜ್ಯ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ. ಟ್ಯಾಂಕ್‌ಗಳನ್ನು ನಮ್ಮ ರಕ್ಷಣೆಗಾಗಿ ಕಾರ್ಯಚರಣೆಗೆ ತರಲಾಗಿದೆ ಮತ್ತು ಉಕ್ರೇನ್‌ನಲ್ಲಿನ ತರಬೇತಿ ಮೈದಾನದಲ್ಲಿ ಸಿಬ್ಬಂದಿಗಳು ಯುದ್ಧ ಕಲೆಗಳನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದು RIA ಹೇಳಿದೆ. T-14 ಟ್ಯಾಂಕ್ ಮಾನವರಹಿತ ತಿರುಗುವ ಗೋಪುರದಂತಹ ಟ್ಯಾಂಕ್, ಸಿಬ್ಬಂದಿ ಇದನ್ನು “ಹಲ್‌ನ ಮುಂಭಾಗದಲ್ಲಿರುವ ಪ್ರತ್ಯೇಕ ಶಸ್ತ್ರಸಜ್ಜಿತ ಕ್ಯಾಪ್ಸುಲ್” ಮೂಲಕ ದೂರದಿಂದ ಬರುವ ಶಸ್ತ್ರಾಸ್ತ್ರಗಳನ್ನು ನಿಯಂತ್ರಿಸಲು ಉಪಯೋಗ ಮಾಡುತ್ತಾರೆ.
ಪ್ರತಿ ಗಂಟೆಗೆ 80 ಕಿಲೋಮೀಟರ್ (50 ಮೈಲುಗಳು) ಹೆದ್ದಾರಿಯಲ್ಲಿ ಟ್ಯಾಂಕ್‌ಗಳು ಗರಿಷ್ಠ ವೇಗವನ್ನು ಹೊಂದಿವೆ ಎಂದು RIA ವರದಿ ಮಾಡಿದೆ. ಜನವರಿಯಲ್ಲಿ, ಬ್ರಿಟಿಷ್ ಮಿಲಿಟರಿ ಗುಪ್ತಚರವು ಉಕ್ರೇನ್‌ನಲ್ಲಿನ ರಷ್ಯಾದ ಪಡೆಗಳು ಕಳಪೆ ಮಟ್ಟದ ಟ್ಯಾಂಕ್‌ಗಳ ಮೊದಲ ಭಾಗವನ್ನು ಸ್ವೀಕರಿಸಲು ಇಷ್ಟವಿರಲಿಲ್ಲ ಎಂದು ವರದಿ ಮಾಡಿದೆ. T-14ರ ಯಾವುದೇ ನಿಯೋಜನೆಯು ರಷ್ಯಾಕ್ಕೆ ಹೆಚ್ಚಿನ ಅಪಾಯವನ್ನು ಉಂಟು ಮಾಡಬಹುದು ಮತ್ತು ರಷ್ಯಾ ಈ ಕ್ರಮವನ್ನು ಪ್ರಚಾರದ ಉದ್ದೇಶಗಳಿಗಾಗಿ ಮಾತ್ರ ಬಳಸುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Russia Ukraine War: ಮಾತುಕತೆಯಿಂದ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಿ: ಚೀನಾದಿಂದ ರಷ್ಯಾ-ಉಕ್ರೇನ್ಗೆ ಶಾಂತಿ ಪಾಠ
ರಷ್ಯಾ ಈ ಯುದ್ಧದಿಂದ ಹನ್ನೊಂದು ವರ್ಷಗಳ ಅಭಿವೃದ್ಧಿಯಲ್ಲಿ, ಹಲವು ಕಾರ್ಯಕ್ರಮಗಳು ವಿಳಂಬವಾಗಿದೆ. ಯೋಜಿತ ಫ್ಲೀಟ್ ಗಾತ್ರದಲ್ಲಿನ ಕಡಿತ ಮತ್ತು ಉತ್ಪಾದನಾ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಬ್ರಿಟಿಷ್ ಮಿಲಿಟರಿ ವರದಿ ಹೇಳುತ್ತಿದೆ. ಕ್ರೆಮ್ಲಿನ್ 2,300 ಟ್ಯಾಂಕ್‌ಗಳ ಉತ್ಪಾದನೆಗೆ ಆದೇಶ ನೀಡಿತು. ಮೊದಲು ಭಾಗವಾಗಿ 2015ರಲ್ಲಿ ಅನಾವರಣಗೊಳಿಸಲಾಯಿತು. 2ನೇ ಭಾಗವಾಗಿ 2020ರಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಯೋಜನೆ 2025ರವರೆಗೆ ವಿಸ್ತರಿಸಲಾಗಿತ್ತು ಎಂದು ರಷ್ಯಾದ ಮಾಧ್ಯಮ ವರದಿಗಳು ತಿಳಿಸಿವೆ. 2021ರ ಡಿಸೆಂಬರ್‌ನಲ್ಲಿ ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಪ್ರಕಾರ ರಾಜ್ಯ ಸಂಘಟಿತ ರೋಸ್ಟೆಕ್ ಸುಮಾರು 40 ಟ್ಯಾಂಕ್‌ಗಳ ಉತ್ಪಾದನೆಯನ್ನು ಪ್ರಾರಂಭಿಸಿದೆ, 2023ರ ನಂತರ ನಿರೀಕ್ಷಿತ ವಿತರಣೆ ಮಾಡಲಾಗಿದೆ ಎಂದು ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ