Russia Ukraine War: ಮಾತುಕತೆಯಿಂದ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಿ: ಚೀನಾದಿಂದ ರಷ್ಯಾ-ಉಕ್ರೇನ್ಗೆ ಶಾಂತಿ ಪಾಠ
ಎಲ್ಲಾ ಸಮಸ್ಯೆಗೂ ಪರಮಾಣು ಅಸ್ತ್ರವೇ ಪರಿಹಾರವಲ್ಲ ಶಾಂತಿಯುತ ಮಾತುಕತೆಯಿಂದ ಸಮಸ್ಯೆಯನ್ನು ಬರೆಹರಿಸಿಕೊಳ್ಳಿ ಎಂದು ರಷ್ಯಾ ಹಾಗೂ ಉಕ್ರೇನ್ಗೆ ಚೀನಾ ಪಾಠ ಮಾಡಿದೆ.
ಎಲ್ಲಾ ಸಮಸ್ಯೆಗೂ ಪರಮಾಣು ಅಸ್ತ್ರವೇ ಪರಿಹಾರವಲ್ಲ ಶಾಂತಿಯುತ ಮಾತುಕತೆಯಿಂದ ಸಮಸ್ಯೆಯನ್ನು ಬರೆಹರಿಸಿಕೊಳ್ಳಿ ಎಂದು ರಷ್ಯಾ ಹಾಗೂ ಉಕ್ರೇನ್ಗೆ ಚೀನಾ ಪಾಠ ಮಾಡಿದೆ. ಉಕ್ರೇನ್ನಲ್ಲಿ ನಡೆಯುತ್ತಿರುವ ಸಂಘರ್ಷವು ತೀವ್ರಗೊಳ್ಳುತ್ತಿದ್ದು, ಪರಿಸ್ಥಿತಿ ಕೈ ಮೀರುತ್ತಿದೆ ಎಂದು ಚೀನಾ ತೀವ್ರ ಕಳವಳ ವ್ಯಕ್ತಪಡಿಸಿದೆ. ರಷ್ಯಾ ಹಾಗೂ ಉಕ್ರೇನ್ ಯುದ್ಧ ಆರಂಭವಾಗಿ ಒಂದು ವರ್ಷ ಕಳೆದಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಬೆದರಿಕೆ ಹಾಕಿದ್ದಾರೆ.
ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ಮಾತ್ರವಲ್ಲ, ಅವುಗಳನ್ನು ನಿಯೋಜಿಸುವ ಬೆದರಿಕೆಗೂ ಚೀನಾ ತನ್ನ ವಿರೋಧವನ್ನು ಸ್ಪಷ್ಟಪಡಿಸಿದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಾರದು ಮತ್ತು ಪರಮಾಣು ಯುದ್ಧಗಳನ್ನು ಮಾಡಬಾರದು. ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆ ಅಥವಾ ಬಳಕೆಯನ್ನು ವಿರೋಧಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮತ್ತಷ್ಟು ಓದಿ: Ukraine Russia War: ಜೋ ಬೈಡನ್ ಉಕ್ರೇನ್ ಭೇಟಿ ಬೆನ್ನಲ್ಲೇ ಅಮೆರಿಕ ಜತೆಗಿನ ಮಹತ್ವ ಒಪ್ಪಂದ ಮುರಿದುಕೊಂಡ ರಷ್ಯಾ
ಆಯಕಟ್ಟಿನ ಮಿತ್ರ ರಷ್ಯಾದೊಂದಿಗೆ ನಿಕಟ ಸಂಬಂಧವನ್ನು ಉಳಿಸಿಕೊಂಡು ಸಂಘರ್ಷದಲ್ಲಿ ತಟಸ್ಥ ಪಕ್ಷವಾಗಿ ತನ್ನ ಸ್ಥಾನವನ್ನು ಪಡೆದುಕೊಳ್ಳಲು ಚೀನಾ ಪ್ರಯತ್ನಿಸಿದೆ. ಚೀನಾದ ಉನ್ನತ ರಾಜತಾಂತ್ರಿಕ ವಾಂಗ್ ಯಿ ಬುಧವಾರ ಮಾಸ್ಕೋದಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದರು.
ರಷ್ಯಾ ಸೇನೆಯು 2022ರ ಫೆಬ್ರವರಿ 24 ರಂದು ಉಕ್ರೇನ್ನಲ್ಲಿ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಸಂಘರ್ಷವು ಒಂದು ವರ್ಷ ಪೂರ್ಣಗೊಳ್ಳುತ್ತಿರುವುದನ್ನು ಉಲ್ಲೇಖಿಸಿದ ಕ್ವಿನ್, ಶಾಂತಿ ಮಾತುಕತೆಯನ್ನು ಉತ್ತೇಜಿಸುವುದನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ಉಕ್ರೇನ್ ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ವಾರ ಪ್ರಸ್ತಾವನೆಯನ್ನು ಪ್ರಕಟಿಸುವುದಾಗಿಯೂ ಅವರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ