AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾರ್ಥಿನಿ ಮೇಲೆ 1 ವರ್ಷ ನಿರಂತರ ಅತ್ಯಾಚಾರ: ಅಂಬೇಡ್ಕರ್ ವಿವಿ ಪ್ರಾಧ್ಯಾಪಕನ ವಿರುದ್ಧ ಆರೋಪ, ಎಫ್​ಐಆರ್​​ ದಾಖಲು

ನಾಟಕಶಾಸ್ತ್ರದ ಪ್ರಾಧ್ಯಾಪಕರೊಬ್ಬರು ಸಂತ್ರಸ್ಥೆ ಪ್ರಬಂಧ ತಯಾರಿ ನಡೆಸುತ್ತಿದ್ದಾಗ ಸಂಪರ್ಕಕ್ಕೆ ಬಂದಿದ್ದಾರೆ. ಆ ವೇಳೆ ಸಂತ್ರಸ್ಥೆಯ ವಿಶ್ವಾಸ ಗೆದ್ದು, ತನ್ನ ಕುಟುಂಬದೊಂದಿಗೆ ಔರಂಗಾಬಾದ್‌ನಲ್ಲಿರುವ ತನ್ನ ಮನೆಯಲ್ಲಿ ವಾಸಿಸುವಂತೆ ಮನವೊಲಿಸಿದ್ದರು ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿನಿ ಮೇಲೆ 1 ವರ್ಷ ನಿರಂತರ ಅತ್ಯಾಚಾರ: ಅಂಬೇಡ್ಕರ್ ವಿವಿ ಪ್ರಾಧ್ಯಾಪಕನ ವಿರುದ್ಧ ಆರೋಪ, ಎಫ್​ಐಆರ್​​ ದಾಖಲು
ವಿದ್ಯಾರ್ಥಿನಿಯ ಮೇಲೆ ನಿರಂತರ ಅತ್ಯಾಚಾರ
ಸಾಧು ಶ್ರೀನಾಥ್​
|

Updated on: Apr 26, 2023 | 3:01 PM

Share

ಔರಂಗಾಬಾದ್: ಮಹಾರಾಷ್ಟ್ರದ ಔರಂಗಾಬಾದ್ ನಗರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದ (Dr Babasaheb Ambedkar Marathwada University) ಪ್ರಾಧ್ಯಾಪಕರೊಬ್ಬರು (professor) ಒಂದು ವರ್ಷದಿಂದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ (rape) ಎಸಗಿದ್ದು, ಕುಕೃತ್ಯದ ಹಿನ್ನೆಲೆಯಲ್ಲಿ ಆಕೆಯ ಪೋಷಕರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್​​ ಅಧಿಕಾರಿಯೊಬ್ಬರು ಇಂದು ಬುಧವಾರ ತಿಳಿಸಿದ್ದಾರೆ. ಸಂತ್ರಸ್ತೆಯಿಂದ ಮಗನನ್ನು ಬಯಸುತ್ತಿರುವುದಾಗಿಯೂ ಹೇಳಿ ಆರೋಪಿ ಪ್ರೊಫೆಸರ್‌ಗೆ ಅಪರಾಧದಲ್ಲಿ ಬೆಂಬಲ ನೀಡಿದ್ದಕ್ಕಾಗಿ ಪ್ರೊಫೆಸರ್‌ನ ಹೆಂಡತಿಯನ್ನು ಸಹ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್ first information report -FIR)) ಹೆಸರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಬೇಗಂಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 376 (ಅತ್ಯಾಚಾರ), 109 (ಪ್ರಚೋದನೆ), 114 (ಅಪರಾಧ ನಡೆದಾಗ ಕುಮ್ಮಕ್ಕು ನೀಡುವವರು) ಮತ್ತು 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಎಫ್‌ಐಆರ್ ಅನ್ನು ದಾಖಲಿಸಲಾಗಿದೆ.

2019 ಮತ್ತು 2021 ರ ನಡುವೆ ಆನ್‌ಲೈನ್ ತರಗತಿಗಳನ್ನು ತೆಗೆದುಕೊಂಡ ನಾಟಕಶಾಸ್ತ್ರದ ಪ್ರಾಧ್ಯಾಪಕರು ಸಂತ್ರಸ್ಥೆಯು ಪ್ರಬಂಧಕ್ಕಾಗಿ ತಯಾರಿ ನಡೆಸುತ್ತಿದ್ದಾಗ ಸಂಪರ್ಕಕ್ಕೆ ಬಂದಿದ್ದಾರೆ. ಆ ವೇಳೆ ಸಂತ್ರಸ್ಥೆಯ ವಿಶ್ವಾಸವನ್ನು ಗೆದ್ದು, ತನ್ನ ಕುಟುಂಬದೊಂದಿಗೆ ಔರಂಗಾಬಾದ್‌ನಲ್ಲಿರುವ ತನ್ನ ಮನೆಯಲ್ಲಿ ವಾಸಿಸುವಂತೆ ಮನವೊಲಿಸಿದ್ದರು ಎಂದು ಅಧಿಕಾರಿ ಹೇಳಿದರು.

ಔರಂಗಾಬಾದ್‌ನಲ್ಲಿ ತಂಗಿದ್ದಾಗ ಆರೋಪಿ ಪ್ರಾಧ್ಯಾಪಕ ಫೆಬ್ರವರಿ 2022 ಮತ್ತು ಫೆಬ್ರವರಿ 2023 ರ ನಡುವೆ ಒಂದು ವರ್ಷದಲ್ಲಿ ಅನೇಕ ಸಂದರ್ಭಗಳಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಬಗ್ಗೆ ಸಂತ್ರಸ್ಥ ದೂರುದಾರರು ಪ್ರೊಫೆಸರ್ ಅವರ ಪತ್ನಿಗೆ ತಿಳಿಸಿದರು. ಆದರೆ ಅವರ ಪತ್ನಿಯು ತನ್ನಿಂದ (ಸಂತ್ರಸ್ಥೆ) ಮಗನನ್ನು ಬಯಸುವುದಾಗಿ ಆಘಾತಕಾರಿ ವಿಷಯ ಹೇಳಿದರು ಎಂದು ಎಫ್‌ಐಆರ್ ಅನ್ನು ಉಲ್ಲೇಖಿಸಿ ಅಧಿಕಾರಿ ತಿಳಿಸಿದ್ದಾರೆ.

ಸಂತ್ರಸ್ಥ ದೂರುದಾರರು ಅನಾರೋಗ್ಯದ ನಂತರ ಬುಲ್ಧಾನಾ ಜಿಲ್ಲೆಯ ತಮ್ಮ ಮನೆಗೆ ಮರಳಿದರು. ಆದರೆ ಪ್ರಾಧ್ಯಾಪಕರು ಆಕೆಗೆ ಫೋನ್‌ನಲ್ಲಿ ಕಿರುಕುಳ ನೀಡುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿ ಪ್ರೊಫೆಸರ್ ಕಡೆಯಿಂದ ದೂರವಾಣಿ ಕರೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ, ಆರೋಪಿಯು ತನ್ನ ತಂದೆಗೆ (ಸಂತ್ರಸ್ಥೆಯ ತಂದೆಗೆ) ಕರೆ ಮಾಡಲು ಪ್ರಾರಂಭಿಸಿದನು ಎಂದು ಅಧಿಕಾರಿ ಹೇಳಿದರು.

ಆ ವೇಳೆ ಬಾಧಿತ ಮಹಿಳೆಯು ತನ್ನ ಪ್ರಾಧ್ಯಾಪಕನ ಲೈಂಗಿಕ ದೌರ್ಜನ್ಯದ ಬಗ್ಗೆ ತನ್ನ ತಂದೆಗೆ ತಿಳಿಸಿದಳು. ಅದನ್ನು ಪೋಷಕರು ವಿಶ್ವವಿದ್ಯಾನಿಲಯದ ಗಮನಕ್ಕೆ ತಂದರು. ಅದರಂತೆ ಪ್ರಾಧ್ಯಾಪಕರನ್ನು ಕರೆಸಿದಾಗ, ಸಮಿತಿಯ ಮುಂದೆ ಹಾಜರಾಗುವುದಕ್ಕೂ ಮುನ್ನ ಸಂತ್ರಸ್ಥೆಯ ಪೋಷಕರ ಮನೆಗೆ ತೆರಳಿ, ಬೆದರಿಕೆ ಹಾಕಲು ಯತ್ನಿಸಿದರು ಎಂದು ಪೊಲೀಸರು ಹೇಳಿದರು.

ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯು ಇತ್ತೀಚೆಗೆ ದೂರುದಾರರಿಗೆ ಪತ್ರವೊಂದನ್ನು ಬರೆದಿದ್ದು, ಈ ವಿಷಯದಲ್ಲಿ ಅವರು ಪೊಲೀಸರನ್ನು ಸಂಪರ್ಕಿಸಬಹುದು ಎಂದು ಸಲಹೆ ನೀಡಿದ್ದರು. ಅದರಂತೆ ಪೋಷಕರು ಮತ್ತು ಸಂತ್ರಸ್ಥೆ ಪ್ರೊಫೆಸರ್ ವಿರುದ್ಧ ದೂರು ದಾಖಲಿಸಿದರು. ನಂತರ ಆರೋಪಿ ಪ್ರಾಧ್ಯಾಪಕನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ