ಆಡಿಯೋ ಕ್ಲಿಪ್ ವಿವಾದ: ಕೆ ಅಣ್ಣಾಮಲೈ ಹಾಗೂ ಸಚಿವ ಪಿಟಿಆರ್ ತ್ಯಾಗರಾಜನ್ ನಡುವೆ ಮುಗಿಯದ ವಾದ

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ (K Annamalai) ಅವರು 57 ಸೆಕೆಂಡ್ ಅವಧಿಯ ಎರಡನೇ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ.

ಆಡಿಯೋ ಕ್ಲಿಪ್ ವಿವಾದ: ಕೆ ಅಣ್ಣಾಮಲೈ ಹಾಗೂ ಸಚಿವ ಪಿಟಿಆರ್ ತ್ಯಾಗರಾಜನ್ ನಡುವೆ ಮುಗಿಯದ ವಾದ
ಕೆ ಅಣ್ಣಾಮಲೈ, ಪಿಟಿಆರ್ ತ್ಯಾಗರಾಜನ್
Follow us
ನಯನಾ ರಾಜೀವ್
|

Updated on: Apr 26, 2023 | 11:32 AM

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ (K Annamalai) ಅವರು 57 ಸೆಕೆಂಡ್ ಅವಧಿಯ ಎರಡನೇ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ. ಇದು ರಾಜ್ಯ ಹಣಕಾಸು ಸಚಿವ ಪಿಟಿಆರ್ ತ್ಯಾಗರಾಜನ್ ಅವರದು ಎಂದು ಅವರು ಹೇಳಿಕೊಂಡಿದ್ದಾರೆ. ಆಡಿಯೋ ಕ್ಲಿಪ್ ಪ್ರಕಾರ, ವ್ಯಕ್ತಿ ತಮಿಳುನಾಡಿನ ಡಿಎಂಕೆ ಆಡಳಿತದ ಬಗ್ಗೆ ದೂರುತ್ತಿರುವಂತೆ ತೋರುತ್ತಿದೆ. ಟ್ವೀಟ್‌ನಲ್ಲಿ ಬಿಜೆಪಿ ನಾಯಕ ಅಣ್ಣಾಮಲೈ, ಡಿಎಂಕೆಯು ಒಳಗಿನಿಂದ ಕುಸಿಯುತ್ತಿರುವುದನ್ನು ಆಲಿಸಿ ಎಂದು ಹೇಳಿದ್ದಾರೆ.

ಆಡಿಯೋ ಕ್ಲಿಪ್‌ನಲ್ಲಿ, ವ್ಯಕ್ತಿ ತಾನು ರಾಜಕೀಯಕ್ಕೆ ಪ್ರವೇಶಿಸಿದಾಗಿನಿಂದ ಒಬ್ಬ ವ್ಯಕ್ತಿ, ಒಂದು ಹುದ್ದೆಯ ಪ್ರತಿಪಾದಕನಾಗಿದ್ದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಕುಟುಂಬದ ಸದಸ್ಯರ ಆಸ್ತಿಗಳ ಕುರಿತು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು ಕೆಲವು ರಹಸ್ಯ ಬಿಚ್ಚಿಟ್ಟಿದ್ದಾರೆ ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಪಿಟಿಆರ್ ಇದೊಂದು ದುರುದ್ದೇಶಪೂರಿತ ಕೆಲಸವಾಗಿದ್ದು, ಆಡಿಯೋವನ್ನು ಯಾರೋ ಸೃಷ್ಟಿಸಿದ್ದಾರೆ ಎಂದಿದ್ದರು.

ಮತ್ತಷ್ಟು ಓದಿ: ಹೆಲಿಕಾಪ್ಟರ್​ನಲ್ಲಿ ಹಣದ ಗಂಟು ಹಿಡಿದುಕೊಂಡು ಬಂದಿದ್ದಾರೆ ಎನ್ನುವ ವಿನಯ್ ಕುಮಾರ್ ಸೊರಕೆ ಆರೋಪಕ್ಕೆ ಅಣ್ಣಾಮಲೈ ತಿರುಗೇಟು

ಇತ್ತೀಚೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಒಂದು ಆಡಿಯೋ ಕ್ಲಿಪ್​ ಅನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಹಾಗೂ ಅಳಿಯ ಶಬರೇಶನ್ ಅವರ ಆಸ್ತಿಗಳ ಬಗ್ಗೆ ಪಿಟಿಆರ್ ಕೆಲವು ರಹಸ್ಯ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ ಎಂದು ಹೇಳಿದ್ದರು. ಈ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಕೆಲವು ಆರೋಪಗಳನ್ನು ತಳ್ಳಿಹಾಕಿರುವ ಡಿಎಂಕೆ ಅಣ್ಣಾಮಲೈ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದೆ, ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ.

ಅಣ್ಣಾಮಲೈ ಅವರು ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ ಮತ್ತು ಅವರು ಯಾವುದೇ ಮಾನನಷ್ಟ ಕಾನೂನನ್ನು ಉಲ್ಲಂಘಿಸಿಲ್ಲ ಆಡಿಯೋ ಕ್ಲಿಪ್ ವಿಧಿವಿಜ್ಞಾನ ವಿಶ್ಲೇಷಣೆಗೆ ಒಳಪಡಿಸಿ ಎಂದಿದ್ದಾರೆ.

ಈ ಆಡಿಯೋ ಕ್ಲಿಪ್ ಯಾರೋ ಸಿದ್ಧಪಡಿಸಿದ್ದು, ನೀವು ಮಾತನಾಡಿಲ್ಲ ಎಂದಾದರೆ ಅದೇ ರೀತಿ ನನ್ನ ಆಡಿಯೋ ಕ್ಲಿಪ್​ ಅನ್ನು ಕೂಡ ಸಿದ್ಧಪಡಿಸಿ ಆಗ ಒಪ್ಪುತ್ತೇನೆ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ