ಪ್ರಚೋದನಕಾರಿ ಹೇಳಿಕೆ ಆರೋಪ: ಸಂಸದೆ ಸುಮಲತಾ ಆಪ್ತನ ವಿರುದ್ಧ FIR ದಾಖಲು
ಪ್ರಚೋದನಕಾರಿ ಭಾಷಣ ಹಿನ್ನೆಲೆ ಸಂಸದೆ ಸುಮಲತಾ ಆಪ್ತನ ವಿರುದ್ಧ FIR ದಾಖಲು ಮಾಡಲಾಗಿದೆ. ಏ. 29ರಂದು ಬಹಿರಂಗ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ಪ್ರಚೋದನಕಾರಿ ಹೇಳಿಕೆ ಆರೋಪ ಮಾಡಲಾಗಿದೆ.
ಮಂಡ್ಯ: ಪ್ರಚೋದನಕಾರಿ ಭಾಷಣ ಹಿನ್ನೆಲೆ ಸಂಸದೆ ಸುಮಲತಾ (Sumalatha) ಆಪ್ತನ ವಿರುದ್ಧ FIR ದಾಖಲು ಮಾಡಲಾಗಿದೆ. ಏ. 29ರಂದು ಬಹಿರಂಗ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ಪ್ರಚೋದನಕಾರಿ ಹೇಳಿಕೆ ಆರೋಪ ಮಾಡಲಾಗಿದೆ. ಹಾಗಾಗಿ ಚುನಾವಣಾಧಿಕಾರಿ ರವೀಂದ್ರ ದೂರಿನಡಿ ಪೊಲೀಸರು ಕೇಸ್ ದಾಖಲಿಸಿಕೊಂಡು FIR ದಾಖಲು ಮಾಡಿದ್ದಾರೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ. ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ತೆರವುಗೊಳಿಸುವಂತೆ ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದರು. ಮಸೀದಿ ಸ್ಥಳದಲ್ಲಿ ಆಂಜನೇಯ ದೇವಸ್ಥಾನದ ನಿರ್ಮಾಣಕ್ಕೆ ಸಹಕರಿಸಿ ಎಂದಿದ್ದರು.
ಮುನಿರಾಜು ಪರ ಸುಮಲತಾ ಮತಯಾಚನೆ
ಸಂಸದೆ ಸುಮಲತಾ ಅಂಬರೀಷ್ರಿಂದ ಮತ ಶಿಕಾರಿ ಮುಂದುವರೆದಿದ್ದು, ಮಳವಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರಾಜು ಪರ ಇಂದು ಪ್ರಚಾರ ಮಾಡಿದರು. ಬಿಜೆಪಿ ಅಭ್ಯರ್ಥಿ ಮುನಿರಾಜು ಪರ ಮತಯಾಚಿಸಿದರು. ಸಂಸದೆಗೆ ಅಭ್ಯರ್ಥಿ ಮುನಿರಾಜು ಹಾಗೂ ಸ್ಥಳೀಯ ಮುಖಂಡರು ಸಾಥ್ ಕೊಟ್ಟರು. ಬಳಿಕ ಮಾತನಾಡಿದ ಅವರು, ನಾನು ಮಳವಳ್ಳಿಯ ಹುಚ್ಚೇಗೌಡರ ಸೊಸೆ ಎಂದು ಮಾತು ಪ್ರಾರಂಭಿಸಿದರು.
ಇದನ್ನೂ ಓದಿ: ಬಿಜೆಪಿ ನಾಯಕರು ಬೋಗಸ್ ಭರವಸೆಗಳನ್ನು ಕೊಡುತ್ತಾರೆ: ಬಿಜೆಪಿ ಪ್ರಣಾಳಿಕೆ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ
ದಳಪತಿಗಳ ವಿರುದ್ದ ಸುಮಲತಾ ವಾಗ್ದಾಳಿ
ಹುಚ್ಚೇಗೌಡ ದಿವಂಗತ ಅಂಬರೀಷ್ರ ತಂದೆ. ಮಹಿಳಾ ಮತಗಳಿಗೆ ಗಾಳ ಹಾಕಿದ ಸಂಸದೆ ಸುಮಲತಾ, ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೆ. ಸೋಲ್ತಿನೊ ಗೆಲ್ತಿನೊ ನನಿಗೆ ಗೊತ್ತಿರಲಿಲ್ಲ ಮುಂದಿನ ಜೀವನದ ಬಗ್ಗೆ ತಿಳಿದಿರಲಿಲ್ಲ. ನೀವು ಆಶೀರ್ವಾದ ಮಾಡಿ ಗೆಲ್ಲಿಸಿದ್ದೀರಾ ಅದಕ್ಕೆ ನಾ ರುಣಿ. ಕಳೆದ ನಾಲ್ಕು ವರ್ಷಗಳಿಂದಲೂ ನನಿಗೆ ತೊಂದರೆ ನೀಡುತ್ತಲೇ ಇದ್ದಾರೆ. ಎಷ್ಟೋ ಬಾರಿ ಮನೆಯಲ್ಲಿ ಕುಳಿತು ಕಣ್ಣೀರಾಗಿದ್ದು ಉಂಟು ಎಂದರು.
ಬಹಳ ಸಲ ನನ್ನ ಮಗ ಕೇಳಿದ್ದ ಅಮ್ಮ ನಿನಗೆ ಇದೆಲ್ಲಾ ಬೇಕಿತ್ತಾ ಎಂದು. ನಮಗೆ ರಾಜಕೀಯ ಬೇಕಾ ಅಂತ ನಾನು ಅಂಬರೀಷ್ರವರ ಹೆಸರನ್ನ ಉಳಿಸಬೇಕೆಂಬ ಛಲದಿಂದ ಬಂದಿರುವೆ ಎಂದು ಪರೋಕ್ಷವಾಗಿ ಪದೇ ಪದೇ ದಳಪತಿಗಳ ವಿರುದ್ದ ಸುಮಲತಾ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: BJP Manifesto: ಬಿಜೆಪಿ ಚುನಾವಣಾ ಪ್ರಣಾಳಿಕೆಗೆ ಮೆಚ್ಚುಗೆ ಸೂಚಿಸಿದ ಪ್ರಧಾನಿ ಮೋದಿ, ಕನ್ನಡದಲ್ಲೇ ಟ್ವೀಟ್
ಡಾ.ಕೆ ಅನ್ನಧಾನಿ ವಿರುದ್ದ ನೇರಾ ನೇರ ವಾಗ್ದಾಳಿ
ಮಳವಳ್ಳಿ ಜೆಡಿಎಸ್ ಶಾಸಕ ಡಾ.ಕೆ ಅನ್ನಧಾನಿ ವಿರುದ್ದ ನೇರಾ ನೇರ ವಾಗ್ದಾಳಿ ಮಾಡಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಪಡಿಸುವ ರಾಜಕಾರಣಿ ನಮಿಗೆ ಅವಶ್ಯಕತೆಯಿಲ್ಲ ಎಂದರು. ಇನ್ನು ಕಾಂಗ್ರೆಸ್ನ ಉಚಿತ ಯೋಜನೆ ಕುರಿತು ಪ್ರತಿಕ್ರಿಯಿಸಿದ್ದು, ಉಚಿತ ಯೋಜನೆ ಅಂತೀರಾ ಅದನ್ನ ಹೇಗೆ ಪೂರೈಸುತ್ತೀರಿ? ಸರ್ಕಾರಿ ನೌಕರರಿಗೆ ಹೇಗೆ ವೇತನ ನೀಡ್ತೀರಾ? ಮಳೆ ಬಂದು ಅತಿವೃಷ್ಠಿಯಾದ್ರೆ ಪರಿಹಾರ ಎಲ್ಲಿಂದ ತಂದು ಕೊಡುತ್ತೀರಾ ಎಂದು ಪ್ರಶ್ನೆಗಳ ಸುರಿಮಳೆಗೈದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:13 pm, Mon, 1 May 23