ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ (Shirahatti Assembly constituency) ವಲಸಿಗರು ಗೆಲುವು ಸಾಧಿಸಿದ ಇತಿಹಾಸವಿಲ್ಲ. ಮಾಜಿ ಸಚಿವರಂಥ ಘಟಾನುಘಟಿ ನಾಯಕರೇ ನಿಂತ್ರೂ ಸೋಲುಂಡು ಓಡಿ ಹೋಗಿದ್ದಾರೆ. ಈಗ ಕಾಂಗ್ರೆಸ್ ಪಕ್ಷದ ಅಧಿನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ಎನ್ನಲಾದ, ದೂರದ ರಾಯಚೂರು ಮೂಲದ ಅಭ್ಯರ್ಥಿಯನ್ನು ಶಿರಹಟ್ಟಿಯಲ್ಲಿ ಕಣಕ್ಕೆ ಇಳಿಸಲು ಸಜ್ಜಾಗಿದೆ. ಹೈಕಮಾಂಡ ನಿರ್ಧಾರಕ್ಕೆ ಶಿರಹಟ್ಟಿ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಆಕ್ರೋಶ ಭುಗಿಲೆದ್ದಿದೆ. ಅಂಬಣ್ಣ ಗೋ ಬ್ಯಾಕ್ ಚಳುವಳಿ ಆರಂಭಿಸಿದ್ದಾರೆ. ಅಪ್ಪ, ಮಕ್ಕಳು ಎರಡು ಕ್ಷೇತ್ರಗಳನ್ನು ಇಟ್ಕೊಂಡಿದ್ದಾರೆ. ಅದರ ಪೈಕಿ ಒಂದರಲ್ಲಿ ಬಿಟ್ಟು ಕೊಡಲಿ ಅಂತಾ ಎಐಸಿಸಿ ಅಧ್ಯಕ್ಷ ಖರ್ಗೆಗೇ (Mallikarjun Kharge) ಸಡ್ಡು ಹೊಡೆದು, ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಒಂದು ವೇಳೆ ಹೊರಗಿನವ್ರಿಗೆ ಟಿಕೆಟ್ ಕೊಟ್ರೆ ಬಂಡಾಯ ಅಭ್ಯರ್ಥಿಯನ್ನು ಕಣಕ್ಕೆ ಬಿಡುವ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಮುಂಬರುವ ಅಸೆಂಬ್ಲಿ ಚುನಾವಣೆಗಾಗಿ (Karnataka Assembly Elections 2023) ನಿನ್ನೆ ಗುರುವಾರವಷ್ಟೇ ಕಾಂಗ್ರೆಸ್ ತನ್ನ ಸೆಕೆಂಡ್ ಲಿಸ್ಟ್ ರಿಲೀಸ್ ಮಾಡಿದೆ. ಗದಗ ಜಿಲ್ಲೆಯ ಶಿರಹಟ್ಟಿ ಮೀಸಲು ಕ್ಷೇತ್ರದ ಟಿಕೆಟ್ ಪೆಂಡಿಂಗ್ ಇಟ್ಟಿದೆ! ಇದರಿಂದ ಹೈಕಮಾಂಡ್ ನಿರ್ಧಾರಕ್ಕೆ ಶಿರಹಟ್ಟಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ! ಕಾಂಗ್ರೆಸ್ ಸಿಇಸಿ ಕಮಿಟಿ ಪಟ್ಟಿಯಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೆಸರು ಇದೆಯಾದರೂ ಘೋಷಣೆ ಮಾಡುವುದನ್ನು ಪೆಂಡಿಂಗ್ ಇಡಲಾಗಿದ್ದು, ಆಕ್ರೋಶ ವ್ಯಕ್ತವಾಗಿದೆ! ಕೊನೆಯ ಕ್ಷಣದಲ್ಲಿ ರಾಯಚೂರು ಮೂಲದ ಅಂಬ್ಬಣ್ಣ ಹೆಸರು ಪ್ರಕಟಿಸುವ ಲಕ್ಷಣಗಳಿದ್ದು, ಶಿರಹಟ್ಟಿ ಕ್ಷೇತ್ರದ ಜನರು ಕಿಡಿಕಾರಿದ್ದು, ಗೋ ಬ್ಯಾಕ್ ಅಂಬಣ್ಣಾ ಚಳುವಳಿ ಆರಂಭಿಸಿದ್ದಾರೆ.
ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಆಗ್ತಾಯಿದ್ದಂತೆ ಗದಗ ಜಿಲ್ಲೆಯ ಕಾಂಗ್ರೆಸ್ ನಲ್ಲಿ ಆಕ್ರೋಶ ಭುಗಿಲೆದ್ದಿದೆ. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಆಪ್ತ ರಾಮಕೃಷ್ಣ ದೊಡ್ಡಮನಿಗೆ ಎರಡನೇ ಲಿಸ್ಟ್ ನಲ್ಲಿ ಬಹುತೇಕ ಫೈನಲ್ ಆಗಿತ್ತು. ಆದ್ರೆ, ಕೊನೆಯ ಕ್ಷಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತ ಎನ್ನಲಾದ ರಾಯಚೂರು ಮೂಲದ ಅಂಬಣ್ಣ ಹೆಸ್ರು ಎಂಟ್ರಿಯಾಗಿದೆಯಂತೆ. ಹೀಗಾಗಿ ಶಿರಹಟ್ಟಿ ಕ್ಷೇತ್ರದ ಹೆಸರು ಘೋಷಣೆ ಪೆಂಡಿಂಗ್ ಉಳಿದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಲ್ಲಿ ಪ್ರತಿಭಟನೆ ಮಾಡಿ ಹೈಕಮಾಂಡ್ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ.
ವಲಸಿಗರು ತಮ್ಮ ಕ್ಷೇತ್ರಕ್ಕೆ ಬೇಡವೇ ಬೇಡ ಅಂತಿದ್ದಾರೆ. ಗೋ ಬ್ಯಾಕ್ ಅಂಬಣ್ಣಾ ಗೋ ಬ್ಯಾಕ್ ಅಂತ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಹೊರಗಿನವ್ರಿಗೆ ಟಿಕೆಟ್ ಕೊಟ್ರೆ ನಾವು ಒಪ್ಪಲ್ಲ ಅಂತ ಕಾಂಗ್ರೆಸ್ ಕಾರ್ಯಕರ್ತರು ಹೈಕಮಾಂಡಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಬೇಕು ಅಂತ ಒತ್ತಾಯಿಸಿದ್ದಾರೆ. ರಾಯಚೂರು ಮೂಲದ ಅಂಬಣ್ಣ ಎಂಬವರ ಹೆಸ್ರು ಏಕಾಏಕಿ ಮುಂಚೂಣಿಗೆ ಬಂದಿದೆ. ಎಐಸಿಸಿ ಅಧ್ಯಕ್ಷ ಖರ್ಗೆ ಆಪ್ತ ಅಂಬಣ್ಣಗೆ ಮಣೆ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಶಿರಹಟ್ಟಿ ಕ್ಷೇತ್ರದಲ್ಲಿ ಖರ್ಗೆ ಆಪ್ತ ಅಂಬಣ್ಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ. ನೀವು ಅಪ್ಪ, ಮಗ ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೀರಿ. ಒಂದು ಸ್ಥಾನ ಬಿಟ್ಟುಕೊಡಿ ಅಂತ ಖರ್ಗೆ ಕುಟುಂಬಕ್ಕೆ ಸವಾಲ್ ಹಾಕಿದ್ದಾರೆ. ಅದನ್ನು ಬಿಟ್ಟು ನಮ್ಮ ಕ್ಷೇತ್ರದ ಮೇಲೆ ಯಾಕೆ ಹೊರಗಿನವ್ರ ಹೊರೆ ಹಾಕ್ತೀರಿ ಅಂತ ಕಿಡಿಕಾರಿದ್ದಾರೆ. ಒಂದು ವೇಳೆ ಹೊರಗಿನವ್ರಿಗೆ ಟಿಕೆಟ್ ಕೊಟ್ರೆ ಬಂಡಾಯ ಅಭ್ಯರ್ಥಿಯನ್ನು ಕಣ್ಣಕ್ಕೆ ಇಳಿಸ್ತೀವಿ ಅಂತ ಎಚ್ಚರಿಕೆ ನೀಡಿದ್ದಾರೆ.
ಹೊರಗಿನವ್ರು ಬಂದು ನಮ್ಮನ್ನು ಆಳೋಕೆ ಬಿಡಲ್ಲ. ಈ ಹಿಂದೆ ಮಾಜಿ ಸಚಿವ ಅಲ್ಕೋಡ್ ಹನುಮಂತಪ್ಪ ಸೇರಿ ಹಲವು ಘಟಾನುಘಟಿಗಳು ಸ್ಪರ್ಧೆ ಮಾಡಿದ್ರು. ಎಲ್ಲರೂ ಸೋತು ಮನೆಗೆ ಹೋಗಿದ್ದಾರೆ ಅಂತ ಉದಾಹರಣೆ ನೀಡಿ ಹೈಕಮಾಂಡಗೆ ಶಿರಹಟ್ಟಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಅಂಬಣ್ಣಗೆ ಟಿಕೆಟ್ ಕೊಟ್ರೆ ಕಾಂಗ್ರೆಸ್ ಸೋಲು ಗ್ಯಾರಂಟಿ ಅನ್ನೋ ಸಂದೇಶವೂ ನೀಡಿದ್ದಾರೆ. ಸ್ಥಳೀಯರಿಗೆ ಯಾರಿಗಾದ್ರೂ ನೀಡಿ ಎಂದಿದ್ದಾರೆ.
ಸಿದ್ದರಾಮಯ್ಯ ಆಪ್ತ ರಾಮಕೃಷ್ಣ ದೊಡ್ಡಮನಿ ಹೆಸ್ರು ಪೆಂಡಿಂಗ್ ಉಳಿದಿದೆ. ರಾಮಕೃಷ್ಣ ದೊಡ್ಡಮನಿ ಹೆಸ್ರು ಬಹುತೇಕ ಫೈನಲ್ ಆಗಿತ್ತಂತೆ. ಇನ್ನೇನು ಘೋಷಣೆ ಮಾಡ್ತಾರೆ ಅನ್ನುವಷ್ಟರಲ್ಲಿ ಅಂಬಣ್ಣ ಹೆಸ್ರು ಎಂಟ್ರಿಯಾಗಿದೆ. ಹೀಗಾಗಿ ಶಿರಹಟ್ಟಿ ಕ್ಷೇತ್ರದ ಟಿಕೆಟ್ ಘೋಷಣೆ ಪೆಂಡಿಂಗ್ ಉಳಿದಿದೆ ಎನ್ನಲಾಗಿದೆ. ಬಂಡಾಯ, ಅಕ್ರೋಶದ ಸಮ್ಮುಖದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯರಿಗೆ ಮಣೆ ಹಾಕುತ್ತೋ.. ಖರ್ಗೆ ಆಪ್ತನಿಗೆ ಗಾಳ ಹಾಕುತ್ತೋ ಕಾದು ನೋಡಬೇಕು…!
ಕರ್ನಾಟಕ ಅಸೆಂಬ್ಲಿ ಚುನಾವಣೆ ಕುರಿತಾದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Fri, 7 April 23