Gali Janardhan Reddy: ಆಂಧ್ರದ ಜಗನ್ ಹಾದಿಯಲ್ಲಿ ಜನಾರ್ದನ ರೆಡ್ಡಿ! ಪುತ್ರಿ ಬ್ರಹ್ಮಿಣಿಯನ್ನೂ ಕಣಕ್ಕಿಳಿಸಲು ಅಖಾಡ ಸಿದ್ದತೆ, 30-40 ಸೀಟು ಗೆಲ್ಲುವ ಗುರಿ!

| Updated By: ಸಾಧು ಶ್ರೀನಾಥ್​

Updated on: Feb 02, 2023 | 1:23 PM

daughter Brahmani : ಪತ್ನಿಯ ಮೂಲಕ ಅಣ್ಣನಿಗೆ ಡಿಚ್ಚಿ ಕೊಟ್ಟಿರೋ ಗಣಿಧಣಿ, ಪುತ್ರಿ ಬ್ರಹ್ಮಿಣಿ ಮೂಲಕ ಅದ್ಯಾರಿಗೆ ಆತಂಕ ತರ್ತಾರೆ ಅನ್ನೋ ಟೆನ್ಶನ್ ರಾಜಕೀಯ ವಲಯದಲ್ಲಿ ಶುರುವಾಗಿದೆ.

Gali Janardhan Reddy: ಆಂಧ್ರದ ಜಗನ್ ಹಾದಿಯಲ್ಲಿ ಜನಾರ್ದನ ರೆಡ್ಡಿ! ಪುತ್ರಿ ಬ್ರಹ್ಮಿಣಿಯನ್ನೂ ಕಣಕ್ಕಿಳಿಸಲು ಅಖಾಡ ಸಿದ್ದತೆ, 30-40 ಸೀಟು ಗೆಲ್ಲುವ ಗುರಿ!
ಆಂಧ್ರದ ಜಗನ್ ಹಾದಿಯಲ್ಲಿ ಜನಾರ್ದನ ರೆಡ್ಡಿ! ಪುತ್ರಿ ಬ್ರಹ್ಮಿಣಿಯನ್ನೂ ಕಣಕ್ಕಿಳಿಸಲು ಅಖಾಡ ಸಿದ್ದತೆ, 30-40 ಸೀಟು ಗೆಲ್ಲುವ ಗುರಿ!
Follow us on

12 ವರ್ಷ ವನವಾಸ, ತಮ್ಮ ಭದ್ರ ಕೋಟೆ ಬಳ್ಳಾರಿಯಿಂದ ದೂರವಾಗಿದ್ದ ಜನಾರ್ದನ ರೆಡ್ಡಿ (Gali Janardhan Reddy), ಕೊಪ್ಪಳದ ಭತ್ತದ ನಾಡು ಗಂಗಾವತಿಯಲ್ಲಿ ಮೂರು ಮನೆಗಳನ್ನು ಖರೀದಿಸುವ ಮೂಲಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRPP) ಸ್ಥಾಪನೆ ಮಾಡಿದ್ದಾರೆ. ರಾಜಕೀಯ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಸಹೋದರ ಸೋಮಶೇಖರ ರೆಡ್ಡಿ ವಿರುದ್ಧ ಪತ್ನಿ ಅರಣಾ ಲಕ್ಷ್ಮಿಯನ್ನು ಕಣಕ್ಕಿಳಿಸಿದ್ದಾರೆ. ಇದೀಗ ಪುತ್ರಿ ಬ್ರಹ್ಮಿಣಿ ಅವರನ್ನು (daughter Brahmani) ಸಹ ಕಣ್ಣಕ್ಕಿಳಿಸಲು ಸಿದ್ದತೆ ನಡೆಸಿದ್ದು ಹಲವರಲ್ಲಿ ಟೆನ್ಶನ್ ಶುರುವಾಗಿದೆ. ಹೌದು! ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅನುಭವಿಸಿದ ಸಂಕಷ್ಟವನ್ನು, ಗಾಲಿ ಜನಾರ್ದನ ರೆಡ್ಡಿ ಸಹ ಅನುಭವಿಸಿದ್ದು, ಜಗನ್ ಮೋಹನ್ ವೈಎಸ್ ಆರ್ ಪಕ್ಷದಂತೆ ಇದೀಗ ಕೆಆರ್ ಪಿಪಿ ಪಕ್ಷವನ್ನು ರೆಡ್ಡಿ ಸ್ಥಾಪಿಸಿದ್ದಾರೆ. ಪ್ರಾದೇಶಿಕ ಪಕ್ಷ ಸ್ಥಾಪಿಸೋ ಮೂಲಕ ರಾಷ್ಟ್ರೀಯ ಪಕ್ಷಗಳ ವಿರುದ್ಧ ರಾಜಕೀಯ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ (Karnataka Assembly Elections 2023).

ಅಂದು ಜಗನ್ ಮೋಹನ್ ರೆಡ್ಡಿಗೆ ಅವರ ತಾಯಿ ಹಾಗೂ ತಂಗಿ ತುಂಬಿದ ಧೈರ್ಯವನ್ನು ಇದೀಗ ಜನಾರ್ದನ ರೆಡ್ಡಿಗೆ ಪತ್ನಿ ಅರುಣಾ ಲಕ್ಷ್ಮಿ ಹಾಗೂ ಮಗಳು ಬ್ರಹ್ಮಿಣಿ ಧೈರ್ಯ ತುಂಬಿದ್ದು, ಈಗಾಗಲೇ ಪತ್ನಿಯನ್ನು ಸಹೋದರ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಬಳ್ಳಾರಿಯಲ್ಲಿ ಕಣ್ಣಕ್ಕಿಳಿಸಿ ತೊಡೆ ತಟ್ಡಿದ್ದಾರೆ. ಅಲ್ಲಿಗೆ ರಾಜಕೀಯದಲ್ಲಿ ತಾವೆಷ್ಟು ಸಿರಿಯಸ್ ಎನ್ನೋದನ್ನ ಹೇಳಿದ್ದಾರೆ. ಇದೀಗ ಪುತ್ರಿ ಬ್ರಹ್ಮಿಣಿಯನ್ನು ಕಣಕ್ಕಿಳಿಸಲು ಅಖಾಡ ಸಿದ್ದಗೊಳಿಸುತ್ತಿದ್ದಾರೆ.

ಈಗಾಗಲೇ ಹೊಸಪೇಟೆ, ರಾಯಚೂರು, ಗದಗ, ವಿಜಯಪುರ ಸುತ್ತಮುತ್ತಲ ಹಲವು ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ವೇ ಕಾರ್ಯ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಗೆಲ್ಲುವ ಯಾವುದಾದರೂ ಒಂದು ಕ್ಷೇತ್ರದಲ್ಲಿ ಮಗಳನ್ನು ಅಖಾಡಕ್ಕಿಳಿಸುವ ಸಾಧ್ಯತೆಯಿದ್ದು, ಬ್ರಹ್ಮಿಣಿ ಕೂಡ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವುದು ರೆಡ್ಡಿ ಆಪ್ತವಲಯದ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಒಟ್ಟಾರೆ 30 ರಿಂದ 40 ಸೀಟು ಗೆಲ್ಲುವ ನಿರೀಕ್ಷೆಯನ್ನು ಜನಾರ್ದನ ರೆಡ್ಡಿ ಅವರು ಹೊಂದಿದ್ದಾರೆ.

ಈಗಾಗಲೇ ತಮ್ಮ ಸ್ವಂತ ಪಾರ್ಟಿ ಕೆಆರ್ ಪಿಪಿಯಿಂದ ಬಳ್ಳಾರಿಯಿಂದ ಪತ್ನಿಯನ್ನ ಕಣಕ್ಕಿಳಿಸುವ ಮೂಲಕ ಅಣ್ಣನಿಗೆ ಸವಾಲ್ ಹಾಕಿದ್ದಾರೆ. ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಇತ್ತೀಚೆಗಷ್ಟೆ ಪುತ್ರಿಯನ್ನ ಪ್ರಚಾರಕ್ಕೆ ಕರೆ ತಂದಿದ್ದ ರೆಡ್ಡಿಗಾರು, ಮೊತ್ತೊಂದು ಮೆಗಾ ಫ್ಲ್ಯಾನ್ ಮಾಡಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ.

ಯಾಕೆಂದ್ರೆ ಮಗಳು ಬ್ರಹ್ಮಿಣಿಯನ್ನ ರಾಜಕೀಯಕ್ಕೆ ತರೋ ಚಿಂತನೆ ನಡೆಸಿದ್ದಾರೆನ್ನಲಾಗಿದೆ. ಈಗಾಗಲೇ ಪುತ್ರಿಗಾಗಿ ಕ್ಷೇತ್ರ ಹುಡುಕಾಟ ನಡೆಸಿರೋ ರೆಡ್ಡಿ, ಯಾವ ಕ್ಷೇತ್ರ ಸೇಫ್​ ಎನ್ನೋ ಮಾಹಿತಿ ಕಲೆ ಹಾಕುತ್ತಿದ್ದಾರೆ. ಒಂದೊಮ್ಮೆ ಕ್ಷೇತ್ರ ಸಿಕ್ಕರೆ ಕೆಲವೇ ದಿನಗಳಲ್ಲಿ ಪುತ್ರಿಯ ಹೆಸರನ್ನೂ ಅಸೆಂಬ್ಲಿ ಚುನಾವಣೆಗೆ ಘೋಷಣೆ ಮಾಡೋ ಸಾಧ್ಯತೆ ಇದೆ ಎನ್ನಲಾಗಿದೆ.

ಪತ್ನಿಯ ಮೂಲಕ ಅಣ್ಣನಿಗೆ ಡಿಚ್ಚಿ ಕೊಟ್ಟಿರೋ ಗಣಿಧಣಿ, ಪುತ್ರಿ ಬ್ರಹ್ಮಿಣಿ ಮೂಲಕ ಅದ್ಯಾರಿಗೆ ಆತಂಕ ತರ್ತಾರೆ ಅನ್ನೋ ಟೆನ್ಶನ್ ರಾಜಕೀಯ ವಲಯದಲ್ಲಿ ಶುರುವಾಗಿದೆ. ಅದೇನೇ ಇರಲಿ ರೆಡ್ಡಿ ರಾಜಕೀಯದಾಟ ಮತ್ತೊಮ್ಮೆ ಶುರುವಾಗೋ ಎಲ್ಲ ಲಕ್ಷಣಗಳೂ ಗೊಚರಿಸಿರುವುದಂತೂ ಸುಳ್ಳಲ್ಲ.

ವರದಿ: ದತ್ತಾತ್ರೇಯ ಪಾಟೀಲ್, ಟಿವಿ 9, ಕೊಪ್ಪಳ