ಖಾತೆ ಕ್ಯಾತೆ ಶುರು: ತಮ್ಮ ಸಮುದಾಯದ ಶಾಸಕರ ಪರ ಸ್ವಾಮೀಜಿಗಳ ಬ್ಯಾಟಿಂಗ್

|

Updated on: May 19, 2023 | 11:22 AM

ನೂತನ ಸಂಪುಟದಲ್ಲಿ ಸೇರಿಕೊಳ್ಳಲು ಈಗಾಗಲೆ ಸಾಂಭ್ಯವ್ಯ ಶಾಸಕರ ಪಟ್ಟಿ ಸಿದ್ದವಾಗಿದೆ. ತಮ್ಮ ಸಮುದಾಯದ ನಾಯಕರಿಗೆ ಕ್ಯಾಬಿನೆಟ್​​ನಲ್ಲಿ ಸ್ಥಾನ ನೀಡಿ ಎಂದು ಸ್ವಾಮೀಜಿಗಳು ಆಗ್ರಹ ಮಾಡುತ್ತಿದ್ದಾರೆ.

ಖಾತೆ ಕ್ಯಾತೆ ಶುರು: ತಮ್ಮ ಸಮುದಾಯದ ಶಾಸಕರ ಪರ ಸ್ವಾಮೀಜಿಗಳ ಬ್ಯಾಟಿಂಗ್
ಭಗೀರಥ ಮಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ
Follow us on

ಚಿತ್ರದುರ್ಗ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramiah) ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ​​ ಪದಗ್ರಹಣ ಮಾಡಲಿದ್ದಾರೆ. ಇವರೊಂದಿಗೆ ಕೆಲ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದು, ಈ ಸಂಬಂಧ ಶಾಸಕರ ಲಾಬಿ ಜೋರಾಗಿಯೇ ನಡೆಯುತ್ತದೆ. ಸಂಪುಟ ರಚನೆ ವಿಚಾರವಾಗಿ ಇಂದು (ಮೇ.19) ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ಹೈಕಮಾಂಡ್​ ನಾಯಕರನ್ನು ಭೇಟಿಯಾಗಲಿದ್ದಾರೆ. ಈ ಸಂಪುಟದಲ್ಲಿ ಸೇರಿಕೊಳ್ಳಲು ಈಗಾಗಲೆ ಸಾಂಭ್ಯವ್ಯ ಶಾಸಕರ ಪಟ್ಟಿ ಸಿದ್ದವಾಗಿದೆ. ತಮ್ಮ ಸಮುದಾಯದ ನಾಯಕರಿಗೆ ಕ್ಯಾಬಿನೆಟ್​​ನಲ್ಲಿ ಸ್ಥಾನ ನೀಡಿ ಎಂದು ಸ್ವಮೀಜಿಯವರು ರೆಕ್ಮೆಂಡ್​ ಮಾಡುತ್ತಿದ್ದಾರೆ.

ಉಪ್ಪಾರ ಸಮಾಜದ ಶಾಸಕರಿಗೆ ಮಂತ್ರಿ ಸ್ಥಾನ ನೀಡುವಂತೆ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿರುವ ಭಗೀರಥ ಮಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಆಗ್ರಹಿಸಿದ್ದಾರೆ. ಚಾಮರಾಜನಗರ ಶಾಸಕ, ಹಿಂದುಳಿದ ಸಮುದಾಯದ ಪುಟ್ಟರಂಗಶೆಟ್ಟಿ ಅವರಿಗೆ ಸಂಪುಟ ದರ್ಜೆ, ಉತ್ತಮ‌ ಖಾತೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ನಿರ್ಲಕ್ಷಿಸಿದರೆ ಜನ ಮುಂದಿನ ತೀರ್ಮಾನ ಮಾಡುತ್ತಾರೆಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ರಾಜಸ್ಥಾನ ಮಾದರಿ ಅಳವಡಿಸಿದ ಕಾಂಗ್ರೆಸ್; ಎದುರಾಗಬಹುದೇ ಹೊಸ ಸಂಕಷ್ಟ?

ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬೋವಿ ಸಮಾಜದ ಸ್ವಾಮೀಜಿ ಭೇಟಿ

ನಿಯೋಜಿತ ಡಿಸಿಎಂ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬೋವಿ ಸಮಾಜದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಬೋವಿ ಸಮುದಾಯದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.

ನಮ್ಮ ಸಮುದಾಯದಿಂದ 3 ಜನ ಶಾಸಕರಿದ್ದಾರೆ. ಹೀಗಾಗಿ ಸಚಿವ ಸ್ಥಾನ ಕೊಡುವಂತೆ ಕೇಳಿದ್ದೇನೆ. ಬಸವಣ್ಣನವರ ಪಾಲನೆ ಸಂಪುಟದಲ್ಲಿ ಹಾಗಬೇಕು. ಸಾಮಾಜಿಕ ನ್ಯಾಯದಡಿ ನಮ್ಮ ಸಮುದಾಯಕ್ಕೂ ಮಂತ್ರಿಗಿರಿ ಕೊಡಬೇಕು. ಸಾಮಾಜಿಕ ನ್ಯಾಯದಡಿ ಕೊಡುತ್ತೇವೆ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಚಿವ ಸ್ಥಾನ ಕೊಡುವ ವಿಶ್ವಾಸವಿದೆ. ನಮ್ಮ ಸಮುದಾಯದ ಪರವಾಗಿ ಸ್ವಾಮೀಜಿಗಳು ಕೇಳುವುದು ತಪ್ಪಿಲ್ಲ ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:56 am, Fri, 19 May 23