ಆಡಳಿತದಲ್ಲಿ ಗುಜರಾತ್ ಮಾಡೆಲ್, ಟಿಕೆಟ್ ಹಂಚಿಕೆಯಲ್ಲಿ ಗೆಲುವು ಮತ್ತು ಪಕ್ಷ ನಿಷ್ಠೆಯೇ ಮಾನದಂಡ : ಪ್ರಲ್ಹಾದ್ ಜೋಶಿ ಸ್ಪಷ್ಟೋಕ್ತಿ

| Updated By: ಸಾಧು ಶ್ರೀನಾಥ್​

Updated on: Dec 10, 2022 | 5:10 PM

ಆಡಳಿತ ವಿಚಾರದಲ್ಲಿ ಗುಜರಾತ್ ಮಾಡೆಲ್ ಅನುಸರಿಸುವುದು ಉತ್ತಮ. ಪ್ರಧಾನಿ ಮೋದಿ ಜೊತೆ 8 ವರ್ಷದಿಂದ ಕೆಲಸ ಮಾಡ್ತಿದ್ದೇನೆ. ಒಳ್ಳೆಯ ಸಂಗತಿ ಎಲ್ಲಿಯೇ ನಡೆದರು ತಗೋಬೇಕು. ಕರ್ನಾಟಕದ ಆಡಳಿತದಲ್ಲೂ ಅಂತಹ ಮಾದರಿ ಅನುಸರಿಸಲಾಗುವುದು -ಜೋಶಿ

ಆಡಳಿತದಲ್ಲಿ ಗುಜರಾತ್ ಮಾಡೆಲ್, ಟಿಕೆಟ್ ಹಂಚಿಕೆಯಲ್ಲಿ ಗೆಲುವು ಮತ್ತು ಪಕ್ಷ ನಿಷ್ಠೆಯೇ ಮಾನದಂಡ : ಪ್ರಲ್ಹಾದ್ ಜೋಶಿ ಸ್ಪಷ್ಟೋಕ್ತಿ
ಟಿಕೆಟ್ ಹಂಚಿಕೆಯಲ್ಲಿ ಪಕ್ಷ ನಿಷ್ಠೆ-ಗೆಲುವೇ ಮಾನದಂಡ : ಪ್ರಲ್ಹಾದ್ ಜೋಶಿ ಸ್ಪಷ್ಟೋಕ್ತಿ
Follow us on

ಧಾರವಾಡ: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ (BJP) ಗುಜರಾತ್ ಮಾಡೆಲ್ (Gujarat model) ಅನುಸರಿಸಲಿದೆ ಅಂತಾ ಈಗಲೇ ಲೆಕ್ಕಾಚಾರ ಹಾಕುವ ಅಗತ್ಯವಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಧಾರವಾಡದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಟಿಕೆಟ್ ಹಂಚಿಕೆಯಲ್ಲಿ (Ticket) ಪಕ್ಷ ನಿಷ್ಠೆ, ಗೆಲುವು ಹಾಗೂ ಪಕ್ಷದ ಸಿದ್ಧಾಂತಕ್ಕೆ ಬದ್ಧತೆಯೇ ಮುಖ್ಯ ಮಾನದಂಡವಾಗಲಿದೆ ಎಂದರು.

ಆಡಳಿತ ವಿಚಾರದಲ್ಲಿ ಗುಜರಾತ್ ಮಾಡೆಲ್ ಅನುಸರಿಸುವುದು ಉತ್ತಮ. ಕಳೆದ 8 ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನಾನು ಕೆಲಸ ಮಾಡ್ತಿದ್ದೇನೆ. ಒಳ್ಳೆಯ ಸಂಗತಿಗಳು ಎಲ್ಲಿಯೇ ನಡೆದರು ಅದನ್ನ ತೆಗೆದುಕೊಳ್ಳಬೇಕು. ಕರ್ನಾಟಕದ ಆಡಳಿತದಲ್ಲೂ ಅಂತಹ ಮಾದರಿಯನ್ನ ಅನುಸರಿಸಲಾಗುವುದು ಎಂದು ಜೋಶಿ ಹೇಳಿದರು.

‘ಗುಜರಾತ್‌ ಮಾಡೆಲ್‌’ಗೆ ಜನರಿಂದ ಅಧಿಕೃತ ಮುದ್ರೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅಭಿಮತ

ಗುಜರಾತ್‌ ಅಸೆಂಬ್ಲಿ ಚುನಾವಣೆಯಲ್ಲಿ ಇತ್ತೀಚೆಗೆ ತಮ್ಮ ಬಿಜೆಪಿ ಪಕ್ಷದ ಜಯ ಖಚಿತವಾಗುತ್ತಿದ್ದಂತೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮಾತನಾಡಿ ಇದು ‘ಗುಜರಾತ್‌ ಮಾಡೆಲ್‌’ಗೆ ಸಂದ ಜಯ ಎಂದು ಬಣ್ಣಿಸಿದ್ದರು. ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಲ್ಹಾದ್‌ ಜೋಶಿ, ‘ಗುಜರಾತ್‌ ಮಾಡೆಲ್‌’ಗೆ ಜನರಿಂದ ಅಧಿಕೃತ ಮುದ್ರೆ ದೊರೆತಿದೆ. ಈ ಐತಿಹಾಸಿಕ ಗೆಲುವನ್ನು ನಮಗೆ ವರದಾನವಾಗಿ ನೀಡಿರುವ ಗುಜರಾತ್‌ ಜನರಿಗೆ ನಾನು ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ, ದೇಶದ ಅಭಿವೃದ್ಧಿಗೆ ಬಿಜೆಪಿ ಪ್ರಸ್ತುತಪಡಿಸಿದ ‘ಗುಜರಾತ್‌ ಮಾಡೆಲ್‌’ನ್ನು ಜನರು ಮೆಚ್ಚಿಕೊಂಡಿದ್ದಾರೆ. ಇದೇ ಕಾರಣಕ್ಕೆ 27 ವರ್ಷಗಳ ಬಳಿಕ ಬಿಜೆಪಿ ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎಂಬ ವಿಶ್ಲೇಷಣೆಗಳೆಲ್ಲಾ ತಲೆ ಕೆಳಗಾಗಿದೆ. ಒಟ್ಟಿನಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಐತಿಹಾಸಿಕ ದಿಗ್ವಿಜಯ ದಾಖಲಿಸುತ್ತಿರುವುದು ಗುಜರಾತ್ ಮಾಡೆಲ್ ಗೆ ಸಿಕ್ಕ ಜನಮನ್ನಣೆ ಅಂತ ಪ್ರಲ್ಹಾದ ಜೋಶಿಯವರು ವ್ಯಾಖ್ಯಾನಿಸಿದ್ದರು.

ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲೂ ಪುನರಾವರ್ತನೆ: ಪ್ರಲ್ಹಾದ್ ಜೋಶಿ ವಿಶ್ವಾಸ

ನವದೆಹಲಿ: ಗುಜರಾತ್ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಮುಂಬರುವ ಕರ್ನಾಟಕ ವಿಧಾನ ಸಭೆ ಚುನಾವಣೆಯ ಮೇಲೂ ಗುಜರಾತ್ ಫಲಿತಾಂಶ ಪರಿಣಾಮ ಬೀರಲಿದೆ ಎಂದು ಕೇಂದ್ರ ಸಚಿವ ಜೋಶಿ ಅಭಿಪ್ರಾಯಪಟ್ಟಿದ್ದರು. ಇದೊಂದು ರೆಕಾರ್ಡ್ ಬ್ರೇಕ್ ಫಲಿತಾಂಶ. ಗುಜರಾತ್ ನಲ್ಲಿ ಬಿಜೆಪಿ ಇಷ್ಟೊಂದು ಸಂಖ್ಯೆಯ ಸ್ಥಾನ ಗಳಿಸಿರೋದು ಡಬಲ್ ಇಂಜಿನ್ ಸರ್ಕಾರಗಳ ಬಗ್ಗೆ ಜನರು ವಿಶ್ವಾಸ ಇಟ್ಟಿರೋದನ್ನ ತೋರಿಸುತ್ತೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ದೇಶದ ಜನರು ಮನ್ನಣೆ ನೀಡಿರೋದು ಗುಜರಾತ್ ಚುನಾವಣೆ ಫಲಿಂತಾಶ ತೋರ್ಪಡಿಸಿದೆ. ಕರ್ನಾಟಕದಲ್ಲೂ ಬಿಜೆಪಿ ಬಹುಮತ ಪಡೆಯುವ ವಿಶ್ವಾಸ ಕಾರ್ಯಕರ್ತಲ್ಲಿದೆ. ಗುಜರಾತ್ ಚುನಾವಣಾ ಫಲಿತಾಂಶ ಕಾರ್ಯಕರ್ತದಲ್ಲಿ ಇನ್ನಷ್ಟು ಉತ್ಸಾಹ ತುಂಬಲಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದರು.

Also Read:

IIT Dharwad: ಜ. 1ಕ್ಕೆ ಧಾರವಾಡ ಐಐಟಿ ಕಟ್ಟಡ ಉದ್ಘಾಟನೆ ತಯಾರಿಗೆ ಕೇಂದ್ರ ಸಚಿವ ಜೋಶಿ ಸೂಚನೆ -ಪ್ರಧಾನಿ ಮೋದಿಯವರಿಂದ ಉದ್ಘಾಟನೆ

Published On - 4:56 pm, Sat, 10 December 22