ದೇವೇಗೌಡರ ಬಗ್ಗೆ ನನಗೆ ಇರುವಷ್ಟು ಗೌರವ ಅವರ ಮನೆಯವರಿಗೆ ಇಲ್ಲ: ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದ್ಯಾರಿಗೆ?

|

Updated on: Apr 27, 2023 | 11:21 AM

ಹೆಚ್​ಡಿ ದೇವೇಗೌಡರಿಗೆ ಪ್ರೀತಂಗೌಡ ಅಗೌರವ ತೋರಿದ್ದಾರೆ ಎಂಬ ಭವಾನಿ ರೇವಣ್ಣ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ. ದೇವೇಗೌಡರ ಬಗ್ಗೆ ನನಗೆ ಇರುವಷ್ಟು ಗೌರವ ಅವರ ಮನೆಯವರಿಗೆ ಇಲ್ಲ. ಹೆಚ್​​.ಡಿ.ದೇವೇಗೌಡ ಕೊನೆ ಚುನಾವಣೆಯಲ್ಲಿ ತುಮಕೂರಿಗೆ ಕಳಿಸಿದರು ಎಂದರು.

ದೇವೇಗೌಡರ ಬಗ್ಗೆ ನನಗೆ ಇರುವಷ್ಟು ಗೌರವ ಅವರ ಮನೆಯವರಿಗೆ ಇಲ್ಲ: ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದ್ಯಾರಿಗೆ?
ಪ್ರೀತಂಗೌಡ
Follow us on

ಹಾಸನ: ಹಾಸನ ನಗರದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಬೆಳ್ಳಂಬೆಳಗ್ಗೆ ಅಬ್ಬರದ ಪ್ರಚಾರ ಶುರು ಮಾಡಿದ್ದಾರೆ. ನಗರದ ಬೀರನಹಳ್ಳಿ, ಹೊಯ್ಸಳ ನಗರ, ಕೆ.ಆರ್.ಪುರಂ ಪ್ರದೇಶದಲ್ಲಿ ನಡೆಸುತ್ತಿದ್ದಾರೆ. ಪ್ರಚಾರದ ವೇಳೆ ಮಾತನಾಡಿದ ಅವರು, ಹೆಚ್​ಡಿ ದೇವೇಗೌಡರಿಗೆ ಪ್ರೀತಂಗೌಡ ಅಗೌರವ ತೋರಿದ್ದಾರೆ ಎಂಬ ಭವಾನಿ ರೇವಣ್ಣ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ. ದೇವೇಗೌಡರ ಬಗ್ಗೆ ನನಗೆ ಇರುವಷ್ಟು ಗೌರವ ಅವರ ಮನೆಯವರಿಗೆ ಇಲ್ಲ. ಹೆಚ್​​.ಡಿ.ದೇವೇಗೌಡ ಕೊನೆ ಚುನಾವಣೆಯಲ್ಲಿ ತುಮಕೂರಿಗೆ ಕಳಿಸಿದರು. ಹಾಸನ ಕ್ಷೇತ್ರದಲ್ಲಿ ಗೆಲ್ಲಿಸಬೇಕು ಎಂಬುದು ಕಾರ್ಯಕರ್ತರ ಆಸೆ ಆಗಿತ್ತು. ಆದ್ರೆ ಅವರ ಸ್ವಾರ್ಥಕ್ಕೆ ಹೆಚ್​.ಡಿ.ದೇವೇಗೌಡರನ್ನು ತುಮಕೂರಿಗೆ ಕಳಿಸಿದರು. ಇದು ಅವರ ಕುಟುಂಬದಲ್ಲೇ ವ್ಯಕ್ತವಾಗಿರುವ ಮಾತು ಎಂದು ಟಾಂಗ್ ಕೊಟ್ಟರು.

ಹಾಸನದಲ್ಲಿ ಪ್ರಚಾರದ ವೇಳೆ ಶಾಸಕ ಪ್ರೀತಂಗೌಡ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ಅವರು, ಮಳೆ ಬಂದಾಗ ಜನರು ನೆಮ್ಮದಿಯಿಂದ ಜೀವನ ಮಾಡಬೇಕು. ಇಲ್ಲಿ ರಾಜಕಾಲುವೆ ಮಾಡಬೇಕು ಎನ್ನೋ ಕಲ್ಪನೆ ಕೂಡ ಅವರಿಗೆ ಇರಲಿಲ್ಲ. ಈ ಕಲ್ಪನೆ ಪ್ರೀತಂಗೌಡಗೆ ಬಂದ ಕಾರಣ ಜನ ನನ್ನ ಜೊತೆ ಇದ್ದಾರೆ. ವಸತಿ ರಹಿತರನ್ನ ಒಕ್ಕಲೆಬ್ಬಿಸೊ ಕೆಲಸವನ್ನು ಜೆಡಿಎಸ್ ನವರು ಮಾಡಿದ್ದರು. ಅವರಿಗೆ ಹಕ್ಕು ಪತ್ರ ಕೊಟ್ಟು ಭದ್ರತೆ ಕೊಡೊ ಕೆಲಸ ನಾವು ಮಾಡಿದ್ದೀವಿ. ಇಲ್ಲಿನ ಚರಂಡಿ, ಪಾರ್ಕ್, ಮುಖ್ಯ ರಸ್ತೆ ಎಲ್ಲವನ್ನೂ ಮಾಡಿದ್ದು ನಾನು. ಅಭಿವೃದ್ಧಿ ಅಂದರೆ ಇದು ಎಂದು ಪ್ರೀತಂಗೌಡ ಗುಡುಗಿದರು.

ಇದನ್ನೂ ಓದಿ: ನಾನು ಸೋತರೆ ಊರು ಬಿಡಿಸ್ತಾರೆ, ನನ್ನ ಕೈ ಬಿಡಬೇಡಿ; ಭಾವನಾತ್ಮಕವಾಗಿ ಮತಭೇಟೆಗಿಳಿದ ಪ್ರೀತಂಗೌಡ

ಹೆಚ್​ಡಿ ದೇವೇಗೌಡರನ್ನು ತುಮಕೂರಿಗೆ ಕಳಿಸಿ ಸೋಲಿಸಿದ್ದನ್ನ ಯಾರೂ ಮರೆತಿಲ್ಲ

ಜೆಡಿಎಸ್ ಅಭ್ಯರ್ಥಿ, ಕಾಂಗ್ರೆಸ್ ಅಭ್ಯರ್ಥಿ ಬಂದಾಗ ಎಷ್ಟು ಜನ ಬರ್ತಾರೆ ನೋಡಿ. ಇದರ ಮೇಲೆ ಜನರ ಬೆಂಬಲ ಯಾರಿಗೆ ಇದೆ ಎನ್ನುವುದನ್ನು ನಿರ್ಧಾರ ಮಾಡಿ ಎಂದರು. ಇದೇ ವೇಳೆ ದೇವೇಗೌಡ, ರೇವಣ್ಣಗೆ ಪ್ರೀತಂಗೌಡ ಅಗೌರವ ಎಂಬ ಭವಾನಿ ರೇವಣ್ಣ ಹೇಳಿಕೆಗೆ ಪ್ರೀತಂಗೌಡ ತಿರುಗೇಟು ನೀಡಿದರು. ದೇವೇಗೌಡರ ಬಗ್ಗೆ ನನಗೆ ಇರುವಷ್ಟು ಗೌರವ ಅವರ ಮನೆಯವರಿಗೆ ಇಲ್ಲ. ಇಲ್ಲದ್ದಿದ್ದರೆ ಅವರನ್ನು ಅವರ ಕೊನೆ ಚುನಾವಣೆಯಲ್ಲಿ ತುಮಕೂರಿಗೆ ಕಳಿಸಿದ್ರು. ದೇವೇಗೌಡರು ಇಡೀ ದೇಶಕ್ಕೆ ಆಸ್ತಿ. ಅವರನ್ನು ಹಾಸನದಲ್ಲಿ ನಿಲ್ಲಿಸಿ ಗೆಲ್ಲಿಸಬೇಕು ಎಂಬುವುದು ಕಾರ್ಯಕರ್ತರ ಅಭಿಲಾಷೆ ಆಗಿತ್ತು. ಅದರೆ ಅವರ ಸ್ವಾರ್ಥಕ್ಕೆ, ಮಗನನ್ನ ಅಭ್ಯರ್ಥಿ ಮಾಡಲು ತುಮಕೂರಿಗೆ ಕಳಿಸಿದ್ರು. ಇದು ಅವರ ಕುಟುಂಬದಲ್ಲೇ ವ್ಯಕ್ತ ಆಗಿರುವ ಮಾತು. ಅವರನ್ನು ತುಮಕೂರಿಗೆ ಕಳಿಸೋ ಅಗತ್ಯ ಏನಿತ್ತು ಎಂದು ಅವರೇ ಯೋಚನೆ ಮಾಡಲಿ. ದೇವೇಗೌಡರ ಬಗ್ಗೆ ಹಾಸನದ ಜನ ಏನು ಗೌರವ ಇಟ್ಟಿದಾರೆ ಅದರ ಅರ್ಧಭಾಗ ಅವರ ಕುಟುಂಬ ಇಟ್ಟು ಕೊಂಡರೆ ಸಾಕು. ಅವರು ರಾಜಕಾರಣ ಲಾಭ ಬಿಟ್ಟು ಗೌರವ ಇಟ್ಟುಕೊಳ್ಳಲಿ. ಆಗ ದೇವೇಗೌಡರಿಗೆ ಒಂದು ನೆಮ್ಮದಿ. ಇಷ್ಟು ಸುದೀರ್ಘ ರಾಜಕಾರಣ ಮಾಡಿದ ಗೌಡರನ್ನು ತುಮಕೂರಿಗೆ ಕಳಿಸಿ ಸೋಲಿಸಿದ್ದನ್ನ ಯಾರೂ ಮರೆತಿಲ್ಲ. ನಾನು ವಿರೋಧ ಪಕ್ಷದಲ್ಲಿ ಇದ್ದರೂ ವ್ಯಕ್ತಿ ಬಗ್ಗೆ ಗೌರವ ಇಟ್ಟು ಕೊಂಡಿದ್ದೀನಿ. ದೇವೇಗೌಡರ ಬಗ್ಗೆ ಅವರಿಗಿಂತ ಹೆಚ್ಚಿನ ಗೌರವ ಹೊಂದಿದ್ದೀನಿ ಎಂದರು.

ಮಹಿಳೆಯರಿಗೆ ಪ್ರೀತಂಗೌಡ ಅಗೌರವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಪ್ರೀತಂಗೌಡ, ನಾನು ಮಹಿಳೆಯರ ಬಗ್ಗೆ ಎಷ್ಟು ಗೌರವ ಹೊಂದಿದ್ದೀನಿ ಎನ್ನುವುದಕ್ಕೆ ಇಲ್ಲಿ ಬಂದಿರೊ ಜನರೇ ಸಾಕ್ಷಿ. ಯಾರೋ ವ್ಯಕ್ತಿ ಬಗ್ಗೆ ಮಾತಾಡಿದ್ರೆ ಅದು ಅವರಿಗೆ ಸೀಮಿತ. ಸಮಸ್ತವಾಗಿ ನಾನು ಯಾರ ಬಗ್ಗೆ ಕೂಡ ಮಾತಾಡಿಲ್ಲ. ಈಗ ಚುನಾವಣೆ ಸಮಯ, ಅಭಿವೃದ್ಧಿ ವಿಚಾರ ಈಗ ಮುಖ್ಯ. ಭವಾನಿ ರೇವಣ್ಣ ನಶೆಯಲ್ಲಿ ಮಾತಾಡ್ತಾರೆ ಎಂದು ಶಾಸಕ ಪ್ರೀತಂಗೌಡ ಟೀಕೆ ಮಾಡಿದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:21 am, Thu, 27 April 23