ಸಿಂಹಾಸನ ಗೆಲ್ಲಲು ಅಖಾಡಕ್ಕಿಳಿದ ದಳಪತಿಗಳು: ಹಾಸನ ಕ್ಷೇತ್ರದಲ್ಲಿಂದು ದೇವೇಗೌಡ ಕುಟುಂಬದ ಶಕ್ತಿ ಪ್ರದರ್ಶನ

ಹಾಸನ ಅಖಾಡದಲ್ಲಿ ದಳ ಪಾಳೆಯ ಒಗ್ಗಟ್ಟು ಪ್ರದರ್ಶನ ಮಾಡಿದೆ. ಟಿಕೆಟ್​​ಗಾಗಿ ಸ್ವರೂಪ್​ ಜೊತೆ ಜಟಾಪಟಿ ನಡೆಸುತ್ತಿದ್ದ ಭವಾನಿ ರೇವಣ್ಣ ಕಂಪ್ಲೀಟ್ ವರಸೆ ಬದಲಾಯಿಸಿ ಸ್ವರೂಪ್ ಪರ ನಿಂತಿದ್ದಾರೆ.

ಸಿಂಹಾಸನ ಗೆಲ್ಲಲು ಅಖಾಡಕ್ಕಿಳಿದ ದಳಪತಿಗಳು: ಹಾಸನ ಕ್ಷೇತ್ರದಲ್ಲಿಂದು ದೇವೇಗೌಡ ಕುಟುಂಬದ ಶಕ್ತಿ ಪ್ರದರ್ಶನ
ಹಾಸನ ಕ್ಷೇತ್ರದಲ್ಲಿಂದು ದೇವೇಗೌಡ ಕುಟುಂಬದ ಶಕ್ತಿ ಪ್ರದರ್ಶನ
Follow us
ಆಯೇಷಾ ಬಾನು
|

Updated on:Apr 20, 2023 | 7:29 AM

ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆ(Karnataka Assembly Elections 2023) ಹಾಸನ ಜೆಡಿಎಸ್ ಟಿಕೆಟ್(Hassan JDS Ticket) ಗೊಂದಲದ ಗೂಡಾಗಿತ್ತು. ಈ ಟಿಕೆಟ್​ಗಾಗಿ ಹೆಚ್​ಡಿ ದೇವೇಗೌಡರ(HD Deve Gowda) ಕುಟುಂಬದಲ್ಲಿ ಬಿರುಕು ಬಿಟ್ಟಿತ್ತು. ತಮ್ಮ ಹೆಂಡತಿ ಭವಾನಿ ರೇವಣ್ಣರನ್ನು ಸ್ಪರ್ಧೆಗೆ ಇಳಿಸಬೇಕು ಎಂದು ಹೆಚ್​ಡಿ ರೇವಣ್ಣ ಪಟ್ಟು ಹಿಡಿದಿದ್ದರು. ಆದ್ರೆ ಹೆಚ್​ಡಿ ಕುಮಾರಸ್ವಾಮಿ ಅವರು ಸ್ವರೂಪ್ ಮೇಲೆ ಒಲವು ತೋರಿಸಿದ್ದರು. ಹೀಗಾಗಿ ಇಬ್ಬರು ಸ್ಪರ್ಧಿಗಳ ನಡುವೆ ಜಟಾಪಟಿ ನಡೆಯುತ್ತಿತ್ತು. ಸದ್ಯ ಈಗ ಹಾಸನ ಜೆಡಿಎಸ್ ಟಿಕೆಟ್​​ನ್ನು ಸ್ವರೂಪ್​ ಅವರಿಗೆ ನೀಡಲಾಗಿದ್ದು ಎಲ್ಲಾ ಕೋಪವನ್ನು ಬಿಟ್ಟು ಹೆಚ್​ಡಿ ರೇವಣ್ಣ ಹಾಗೂ ಭವಾನಿಯವರು ಸ್ವರೂಪ್ ಪರ ಪ್ರಚಾರ ಮಾಡಲು ಅಖಾಡಕ್ಕೆ ಇಳಿದಿದ್ದಾರೆ. ಇಂದು ಸ್ವರೂಪ್ ನಾಮಪತ್ರ ಸಲ್ಲಿಸಲಿದ್ದು ಕ್ಷೇತ್ರದಲ್ಲಿಂದು ಗೌಡರ ಕುಟುಂಬದ ಶಕ್ತಿ ಪ್ರದರ್ಶನವಾಗಲಿದೆ.

ಹಾಸನ ಅಖಾಡದಲ್ಲಿ ದಳ ಪಾಳೆಯ ಒಗ್ಗಟ್ಟು ಪ್ರದರ್ಶನ ಮಾಡಿದೆ. ಟಿಕೆಟ್​​ಗಾಗಿ ಸ್ವರೂಪ್​ ಜೊತೆ ಜಟಾಪಟಿ ನಡೆಸುತ್ತಿದ್ದ ಭವಾನಿ ರೇವಣ್ಣ ಕಂಪ್ಲೀಟ್ ವರಸೆ ಬದಲಾಯಿಸಿ ಸ್ವರೂಪ್ ಪರ ನಿಂತಿದ್ದಾರೆ. ನಿನ್ನೆ(ಏಪ್ರಿಲ್ 19) ಹಾಸನದಲ್ಲಿ ನಡೆದ ಜೆಡಿಎಸ್​ ಸಭೆಯಲ್ಲಿ ಅಭ್ಯರ್ಥಿ ಸ್ವರೂಪ್ ಪರ ಭವಾನಿ ಪ್ರಚಾರ ಮಾಡಿದ್ರು. ಭವಾನಿ ಅವರು ಮಾತಿಗೆ ನಿಲ್ಲುತ್ತಿದ್ದಂತೆ ಪಕ್ಕದಲ್ಲೇ ನಿಂತ ಸ್ವರೂಪ್​, ಕಾಲಿಗೆ ಬಿದ್ದು ಆರ್ಶಿವಾದ ಪಡೆದಿದ್ರು. ಸದ್ಯ ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಸ್ವರೂಪ್ ನಾಮಪತ್ರ ಸಲ್ಲಿಸಲಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿಂದು ಗೌಡರ ಕುಟುಂಬದ ಶಕ್ತಿ ಪ್ರದರ್ಶನವಾಗಲಿದೆ. ಅಭ್ಯರ್ಥಿ ಸ್ವರೂಪ್ ಗೆಲ್ಲಿಸಲು ಗೌಡರ ಇಡೀ ಕುಟುಂಬ ಅಖಾಡಕ್ಕಿಳಿಯಲಿದೆ.

ಇದನ್ನೂ ಓದಿ: Karnataka Assembly Polls; ಸ್ವರೂಪ್ ಕೂಡ ನನ್ನ ಮಗ, ಅವನನ್ನು ಹಾಸನ ಮತದಾರರು ಗೆಲ್ಲಿಸಲೇಬೇಕು: ಭವಾನಿ ರೇವಣ್ಣ

ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ನೇತೃತ್ವದಲ್ಲಿ ಇಂದು ರೋಡ್ ಶೋ‌ ಮೂಲಕ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ನಾಮ ಪತ್ರ ಸಲ್ಲಿಸಲಿದ್ದಾರೆ. ರೋಡ್ ಶೋ‌ನಲ್ಲಿ ಹೆಚ್​ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ ಭಾಗಿಯಾಗಿ ಒಗ್ಗಟ್ಟಿನ ಪ್ರದರ್ಶನ ಮಾಡಲಿದ್ದಾರೆ. ಈ ಮೂಲಕ ಬಿಜೆಪಿಗೆ ಸೆಡ್ಡು ಹೊಡೆಯಲು ದಳಪತಿಗಳು ಸಜ್ಜಾಗಿದ್ದಾರೆ. ಸಾವಿರಾರು ಜನ ಸೇರಿಸಿ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ರಣ ಕಹಳೆ ಮೊಳಗಿಸಲಿದ್ದಾರೆ.

ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:21 am, Thu, 20 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ