ಮತದಾನ ಮುಗಿದ ಬೆನ್ನಲ್ಲೇ ರಿಲ್ಯಾಕ್ಸ್​ ಮೂಡ್​ಗೆ ಜಾರಿದ ಹೆಚ್​ಡಿ ಕುಮಾರಸ್ವಾಮಿ, ಸಿಂಗಾಪೂರ್​ಗೆ ಪ್ರಯಾಣ

ರಾಜ್ಯ ಚುನಾವಣಾ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಹೆಚ್​ಡಿ ಕುಮಾರಸ್ವಾಮಿ, ಸದ್ಯ ರಿಲ್ಯಾಕ್ಸ್ ಮೂಡ್​ಗೆ ಜಾರಿದ್ದಾರೆ. ತಮ್ಮ ಆಪ್ತರೊಂದಿಗೆ ಸಿಂಗಾಪೂರ್​ಗೆ ತೆರಳಿದ್ದಾರೆ.

ಮತದಾನ ಮುಗಿದ ಬೆನ್ನಲ್ಲೇ ರಿಲ್ಯಾಕ್ಸ್​ ಮೂಡ್​ಗೆ ಜಾರಿದ ಹೆಚ್​ಡಿ ಕುಮಾರಸ್ವಾಮಿ, ಸಿಂಗಾಪೂರ್​ಗೆ ಪ್ರಯಾಣ
ಹೆಚ್​​ ಡಿ ಕುಮಾರಸ್ವಾಮಿ Image Credit source: File photo
Follow us
|

Updated on: May 11, 2023 | 9:10 AM

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಮೇ 10ರಂದು ಯಶಸ್ವಿಯಾಗಿ ಮತದಾನ ನಡೆದಿದೆ. ಇನ್ನೇನು ಕೇವಲ ಮೂರು ದಿನಗಳಲ್ಲಿ ಫಲಿತಾಂಶ ಹೊರ ಬೀಳಲಿದೆ. ಹೀಗಾಗಿ ಮತದಾನ ಮುಕ್ತಾಯವಾಗುತ್ತಿದ್ದಂತೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು (HD Kumaraswamy) ವಿದೇಶಕ್ಕೆ ಹಾರಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನಿನ್ನೆ(ಮೇ 10) ಮಧ್ಯರಾತ್ರಿ ಆಪ್ತರ ಜೊತೆ ಬೆಂಗಳೂರಿನಿಂದ ಸಿಂಗಾಪೂರ್​ಗೆ ಹಾರಿದ್ದಾರೆ.

ರಾಜ್ಯ ಚುನಾವಣಾ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಹೆಚ್​ಡಿ ಕುಮಾರಸ್ವಾಮಿ, ಸದ್ಯ ರಿಲ್ಯಾಕ್ಸ್ ಮೂಡ್​ಗೆ ಜಾರಿದ್ದಾರೆ. ತಮ್ಮ ಆಪ್ತರೊಂದಿಗೆ ಸಿಂಗಾಪೂರ್​ಗೆ ತೆರಳಿದ್ದಾರೆ. ಇನ್ನು ಮೇ 13ರಂದು ಮಧ್ಯಾಹ್ನ ಮತ್ತೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎನ್ನಲಾಗಿದೆ. ಇನ್ನು ಮತ್ತೊಂದೆಡೆ ವಿಧಾನಸಭೆ ಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ ಮತದಾನೋತ್ತರ ಸಮೀಕ್ಷೆಯ ಅಂದಾಜು ಲೆಕ್ಕಾಚಾರ ಹೊರಬಿದ್ದಿವೆ. ಕೆಲ ಸಮೀಕ್ಷೆಗಳಲ್ಲಿ ಈ ಬಾರಿ ಅತಂತ್ರ ಫಲಿತಾಂಶ ಭವಿಷ್ಯ ನುಡಿದ್ರೆ, ಕೆಲ ಸಮೀಕ್ಷೆಗಳು ಸ್ವತಂತ್ರ ಸರ್ಕಾರದ ಫಲಿತಾಂಶ ಮಾಹಿತಿ ನೀಡಿವೆ.

ಇದನ್ನೂ ಓದಿ: ಲಕ್ಷ ಲಕ್ಷ ಹಣ ಖರ್ಚು ಮಾಡಿಕೊಂಡು ಅಮೆರಿಕಾದಿಂದ ಬಂದರೂ ಮತ ಹಾಕಲಾಗಲಿಲ್ಲ, ದಾವಣೆಗೆರೆಯಲ್ಲಿ ವ್ಯಕ್ತಿ ಬೇಸರ

ಟಿವಿ9 ಭಾರತ್ ವರ್ಷ್ ಪೋಲ್​ಸ್ಟ್ಯಾರ್ಟ್ ನಡೆಸಿದ ಮತದಾನೋತ್ತರ ಸಮೀಕ್ಷೆಯಲ್ಲಿ ಅತಂತ್ರ ಫಲಿತಾಂಶದ ಭವಿಷ್ಯ ಹೊರ ಬಿದ್ದಿದೆ. ಸಮೀಕ್ಷೆ ನೀಡಿದ ಮಾಹಿತಿಯಂತೆ ಬಿಜೆಪಿ ಈ ಬಾರಿ 88 ರಿಂದ 98 ಸ್ಥಾನಗಳನ್ನ ಗಳಿಸಬಹುದು ಅಂತಾ ಹೇಳಿದ್ರೆ, ಕಾಂಗ್ರೆಸ್ 99 ರಿಂದ 109ರವರೆಗೂ ಸ್ಥಾನ ಗಳಿಸಬಹುದು ಅಂತಾ ಅಂದಾಜು ಲೆಕ್ಕ ಮಾಡಲಾಗಿದೆ. ಇನ್ನು ಜೆಡಿಎಸ್ 24 ರಿಂದ 32 ಸ್ಥಾನಗಳನ್ನ ಗಳಿಸಬಹುದು ಅಂತಾ ಸಮೀಕ್ಷೆ ತಿಳಿಸಿದ್ರೆ, ಇಬ್ಬರಿಂದ 6 ಜನ ಪಕ್ಷೇತರ ಅಭ್ಯರ್ಥಿಗಳು ಗೆಲ್ಲಬಹುದು ಅಂತಾ ಸಮೀಕ್ಷೆ ಅಂದಾಜು ಮಾಡಿದೆ.

ಸಿ ವೋಟರ್ ಸಮೀಕ್ಷೆಯ ಪ್ರಕಾರ ಬಿಜೆಪಿ 83 ರಿಂದ 95 ಸ್ಥಾನ ಗಳಿಸಬಹುದು ಅಂತಾ ಅಂದಾಜು ಮಾಡಿದೆ. ಕಾಂಗ್ರೆಸ್ 100 ಸ್ಥಾನದಿಂದ 112 ಸ್ಥಾನ ಗಳಿಸುವ ಸಾಧ್ಯತೆ ಇದೆ ಅಂತಾ ತಿಳಿಸಿದೆ. ಇನ್ನು ಜೆಡಿಎಸ್ 21 ರಿಂದ 29 ಸ್ಥಾನ ಪಡೆಬಹುದು ಅಂತಾ ಹೇಳಿದ್ರೆ, ಪಕ್ಷೇತರ ಅಭ್ಯರ್ಥಿಗಳು ಇಬ್ಬರಿಂದ 6 ಜನ ಗೆಲ್ಲಬಹುದು ಅನ್ನೋ ಅಂದಾಜು ಲೆಕ್ಕ ನೀಡಿದೆ. ಅದರಂತೆ ರಿಪಬ್ಲಿಕ್ ಪಿ ಮಾರ್ಕ್ ಸಮೀಕ್ಷೆಯ ಪ್ರಕಾರ ಬಿಜೆಪಿ 85 ರಿಂದ 100 ಸ್ಥಾನ ಗಳಿಸಬಹುದು ಅಂತಾ ಹೇಳಿದ್ರೆ, ಕಾಂಗ್ರೆಸ್ 94 ರಿಂದ 108 ಸ್ಥಾನ ಗಳಿಸಬಹುದು ಅಂತಾ ತಿಳಿಸಿದೆ. ಇನ್ನು ಜೆಡಿಎಸ್ 24 ರಿಂದ 32 ಸ್ಥಾನ ಗಳಿಸಬಹುದು ಅಂತಾ ಇದ್ರೆ, ಪಕ್ಷೇತರ ಅಭ್ಯರ್ಥಿಗಳು ಸಹ ಇಬ್ಬರಿಂದ 6 ಜನ ಗೆಲ್ಲಬಹುದಂತೆ. ಇನ್ನು ಮತ್ತೊಂದು ಸಮೀಕ್ಷಾ ಸಂಸ್ಥೆ ಜನ್​ ಕೀ ಬಾತ್ ಪ್ರಕಾರ ಬಿಜೆಪಿ 94 ರಿಂದ 117 ಸ್ಥಾನದವರೆಗೂ ಗೆದ್ದು ಸರಳ ಬಹುಮತ ಪಡೆಯಬಹುದು ಅಂತಾ ತಿಳಿಸಿದ್ರೆ, ಕಾಂಗ್ರೆಸ್ 91 ರಿಂದ 106 ಸ್ಥಾನ ಗಳಿಸಬಹುದು ಅಂತಾ ಹೇಳಿದೆ. ಅಂತೆಯೇ ಜೆಡಿಎಸ್ 14 ರಿಂದ 24 ಸ್ಥಾನಗಳಿಸಬಹುದು, ಇಬ್ಬರು ಪಕ್ಷೇತರರು ಸ್ಥಾನ ಪಡೀಬಹುದು ಅಂತಾ ತಿಳಿಸಿದೆ.

ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ