ಹಾಸನ ಕ್ಷೇತ್ರದ ಟಿಕೆಟ್ ವಿಚಾರ ನನಗೆ ದೇವೇಗೌಡರಿಗೆ ಮಾತ್ರ ಗೊತ್ತು: ಕುಮಾರಸ್ವಾಮಿಗೆ ಹೆಚ್​ಡಿ ರೇವಣ್ಣ ಟಾಂಗ್

|

Updated on: Apr 12, 2023 | 3:12 PM

ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಅದು ನನಗೆ ದೇವೇಗೌಡರಿಗೆ ಮಾತ್ರ ಗೊತ್ತು ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಗೆ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಟಾಂಗ್​ ನೀಡಿದ್ದಾರೆ.

ಹಾಸನ ಕ್ಷೇತ್ರದ ಟಿಕೆಟ್ ವಿಚಾರ ನನಗೆ ದೇವೇಗೌಡರಿಗೆ ಮಾತ್ರ ಗೊತ್ತು: ಕುಮಾರಸ್ವಾಮಿಗೆ ಹೆಚ್​ಡಿ ರೇವಣ್ಣ ಟಾಂಗ್
ಕುಮಾರಸ್ವಾಮಿ,H.D.ರೇವಣ್ಣ,
Image Credit source: newindianexpress.com
Follow us on

ಹಾಸನ: ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಅದು ನನಗೆ ದೇವೇಗೌಡರಿಗೆ ಮಾತ್ರ ಗೊತ್ತು ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಗೆ ಮಾಜಿ ಸಚಿವ ಹೆಚ್​.ಡಿ.ರೇವಣ್ಣ (Hd Revanna) ಟಾಂಗ್​ ನೀಡಿದ್ದಾರೆ. ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ದೇವೇಗೌಡರು ಮಾತ್ರ ನಮಗೆ ಸರ್ವೊಚ್ಛ ನಾಯಕರು. ನಾನು ಈಗಾಗಲೇ ಅವರ ಬಳಿ ಹೇಳಿದ್ದೇನೆ. ಅವರು ಏನು ಹೇಳುತ್ತಾರೆ ಅದಕ್ಕೆ ನಾನು ಬದ್ಧನಾಗಿದ್ದೇನೆ. ದೇವೇಗೌಡರಿಗೆ 60 ವರ್ಷದ ರಾಜಕೀಯ ಅನುಭವ ಇದೆ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಅಂದರೆ ಓಕೆ. ನಾನು, ಹೆಚ್​.ಡಿ.ಕುಮಾರಸ್ವಾಮಿ ಮೊದಲೇ ಮಾತನಾಡಿಕೊಂಡಿದ್ದೇವೆ ಎಂದು ಹೇಳದಿರು. ಕಾಂಗ್ರೆಸ್ ನಾಯಕರ ಜೊತೆ ರೇವಣ್ಣ ಸಂಪರ್ಕ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನೇಕೆ ಕಾಂಗ್ರೆಸ್ ಸೇರಲು ಹೋಗಲಿ. ದೇವೇಗೌಡರು, ಕುಮಾರಣ್ಣ ಇಲ್ವಾ? ನಾನೇಕೆ ಕಾಂಗ್ರೆಸ್‌ಗೆ ಹೋಗಲಿ ಎಂದರು.

ಶಕುನಿಗಳು ತಲೆಕೆಡಿಸುತ್ತಿದ್ದಾರೆ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಅಂತಹ ಹೇಳಿಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವಂತಹ ವ್ಯಕ್ತಿಯಲ್ಲ. ಯಾರೂ ಕೂಡ ನನ್ನ ಕುಮಾರಣ್ಣನನ್ನು ಹೊಡೆದಾಡಿಸಲು ಸಾಧ್ಯವಿಲ್ಲ. ನಾನು ಕುಮಾರಸ್ವಾಮಿ ಬೆಳಗಾಗುವುದರೊಳಗೆ ಒಂದಾಗುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಈ ಬಾರಿ ವರುಣಾದಲ್ಲಿ ಸಚಿವ ಸೋಮಣ್ಣ ಸ್ಪರ್ಧೆ ಬಗ್ಗೆ ಅಪ್ಪ-ಮಗ ಹೇಳಿದ್ದೇನು?

ನಮ್ಮಲ್ಲೇ ಇದ್ದು ತಿಂದು ತೇಗಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ

ನಮ್ಮಲ್ಲೇ ಇದ್ದು ತಿಂದು ತೇಗಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಹುಣಸೆ ಬೀಜ ಆಯುತ್ತಿದ್ದವರನ್ನು ನಗರಸಭೆ ಸದಸ್ಯರಾಗಿ ಮಾಡಿದೆ. ಇನ್ನು 30 ದಿನ ಯಾರೂ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಹೆಚ್​.ಡಿ.ದೇವೇಗೌಡರ ಜತೆ ಮಾಜಿ ಸಚಿವ ಎ.ಮಂಜು ಬಂದಿದ್ದಾರೆ. ಏಪ್ರಿಲ್ 17ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ದೇವೇಗೌಡರನ್ನು ಹೊಗಳಿದ ರೇವಣ್ಣ  

ದೇವೇಗೌಡರು ಸಿಎಂ, ಪ್ರಧಾನಿಯಾಗಿ ಈ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ ಅವರು 485 ಕೋಟಿ ಹಣವನ್ನು ನೀರಾವರಿಗೆ ಕೊಟ್ಟಿದಾರೆ. ಶಾಂತಿಗ್ರಾಮ ಹೋಬಳಿಯ ಕೆರೆ ತುಂಬಿಸಲು ಐದು ನೂರು ಕೋಟಿ ಅನುದಾನ ಕೊಟ್ಟಿದಾರೆ. ಕೆಲವರು ಇವತ್ತು ಚುನಾವಣೆಗೆ ನಿಂತು ಹೋದರೆ ಮತ್ತೆ ಐದು ವರ್ಷ ಈಕಡೆಗೆ ಬರುವುದಿಲ್ಲ. ಈ ಕ್ಷೇತ್ರಕ್ಕೆ ಸಾವಿರಾರು ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ ಆಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ ಇಂಜಿನಿಯರಿಂಗ್ ಕಾಲೇಜು, ಲಾ ಕಾಲೇಜು ಕೂಡ ತೆರೆಯಲಾಗಿದೆ.

ಇದನ್ನೂ ಓದಿ: ಆತಿಥ್ಯ ಕೊಡುವುದಕ್ಕೆ ಕನಕಪುರದವರು ಫೇಮಸ್: ಒಳ್ಳೆ ಆತಿಥ್ಯ ಕೊಡೋಣ: ಅಶೋಕ್​ಗೆ ಡಿಕೆ ಶಿವಕುಮಾರ್ ಟಾಂಗ್

ಇಡೀ ರಾಜ್ಯದಲ್ಲಿ ಸುಸಜ್ಜಿತವಾದ ತಾಲ್ಲೂಕು ಆಸ್ಪತ್ರೆ ಸಾಲಿನಲ್ಲಿ ನಮ್ಮ ಹೊಳೆನರಸೀಪುರ ಮೊದಲ ಸ್ಥಾನದಲ್ಲಿದೆ. ಕುಮಾರಣ್ಣ ಅವರು ಹಾಸನದ ಇಂಜಿನಿಯರಿಂಗ್ ಕಾಲೇಜಿಗೆ, ಮೆಡಿಕಲ್ ಕಾಲೇಜಿಗೆ ಅನುದಾನ ಕೊಟ್ಟರು. ಜಿಲ್ಲೆಯ 580 ಕೋಟಿ ಸಾಲಾ ಮನ್ನ ಆಗಿದೆ. ಯಾರಾರು ಸ್ತ್ರೀ ಶಕ್ತಿ ಸಾಲಾ ಮಾಡಿದ್ದಾರೆ ಅವರ ಎಲ್ಲಾ ಸಾಲಾ ಮನ್ನಾ ಆಗುತ್ತೆ. 60 ವಯಸ್ಸು ಆದ ಎಲ್ಲರಿಗೂ ತಿಂಗಳಿಗೆ ಐದು ಸಾವಿರ ಗೌರವ ಧನ ಕೊಡುತ್ತೇನೆ ಎಂದು ತಿಳಿಸಿದರು.

ನಮ್ಮದೇ 123 ಸ್ಥಾನ ಬರುತ್ತೆ ಬರೆದಿಟ್ಟುಕೊಳ್ಳಿ ಭವಿಷ್ಯ ನುಡಿದ ರೇವಣ್ಣ 

ದೇವೇಗೌಡರು ಪ್ರಧಾನಿ ಆದಾಗ ಮಾಡಿದ ಅಭಿವೃದ್ಧಿ ಈಗ ಗಾರ್ಮೆಂಟ್ಸ್​ಗಳಲ್ಲಿ 60 ಸಾವಿರ ಮಹಿಳೆಯರು ಕೆಲಸ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲೂ ಕೂಡ 15 ಸಾವಿರ ಮಹಿಳೆಯರಿಗೆ ಉದ್ಯೋಗ ಕೊಡುವ ಗಾರ್ಮೆಂಟ್ಸ್ ಮಾಡಿಸುತ್ತೇವೆ. ಈ ರಾಜ್ಯದಲ್ಲಿ ಜೆಡಿಎಸ್ ಬಿಟ್ಟು ಯಾರೂ ಸರ್ಕಾರ ಮಾಡೋಕೆ ಆಗಲ್ಲ. ನಮ್ಮದೇ 123 ಸ್ಥಾನ ಬರುತ್ತೆ ಇವತ್ತೇ ಬರೆದಿಟ್ಟುಕೊಳ್ಳಿ ಎಂದು ರೇವಣ್ಣ ಭವಿಷ್ಯ ನುಡಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:11 pm, Wed, 12 April 23