ಆತಿಥ್ಯ ಕೊಡುವುದಕ್ಕೆ ಕನಕಪುರದವರು ಫೇಮಸ್: ಒಳ್ಳೆ ಆತಿಥ್ಯ ಕೊಡೋಣ: ಅಶೋಕ್​ಗೆ ಡಿಕೆ ಶಿವಕುಮಾರ್ ಟಾಂಗ್

ಸಾಮ್ರಾಟನಾದರೂ ಬರಲಿ, ಚಕ್ರವರ್ತಿಯಾದರೂ ಬರಲಿ. ಕನಕಪುರದಲ್ಲಿ ಆರ್​.ಅಶೋಕ್​ಗೆ ಒಳ್ಳೆಯ ಆತಿಥ್ಯ ಕೊಡೋಣ. ಕನಕಪುರದಲ್ಲಿ ಮಿಲಿಟರಿ ಹೋಟೆಲ್​​ಗಳು ಬಹಳಷ್ಟಿವೆ. -ಡಿಕೆ ಶಿವಕುಮಾರ್

ಆತಿಥ್ಯ ಕೊಡುವುದಕ್ಕೆ ಕನಕಪುರದವರು ಫೇಮಸ್: ಒಳ್ಳೆ ಆತಿಥ್ಯ ಕೊಡೋಣ: ಅಶೋಕ್​ಗೆ ಡಿಕೆ ಶಿವಕುಮಾರ್ ಟಾಂಗ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
Follow us
ಆಯೇಷಾ ಬಾನು
|

Updated on:Apr 12, 2023 | 2:03 PM

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ವಿರುದ್ಧ ಆರ್​.ಅಶೋಕ್(DK Shivakumar) ಸ್ಪರ್ಧೆ ಮಾಡಲಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಇಂದು ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ರಾಜಕಾರಣ ಫುಟ್ಬಾಲ್​ ಅಲ್ಲ, ಚೆಸ್​ ಗೇಮ್. ಚೆಸ್​ ಆಡ್ತಿದ್ದಾರೆ ಆಡಲಿ, ನನಗೆ ಹೋರಾಟ ಹೊಸದೇನು ಅಲ್ಲ. ಇಡೀ ಜೀವನ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಯಾರ ಹತ್ತಿರವೂ ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಆತಿಥ್ಯ ಕೊಡುವುದಕ್ಕೆ ಕನಕಪುರದವರು ಫೇಮಸ್. ಒಳ್ಳೆ ಆತಿಥ್ಯ ಕೊಡೋಣ ಎಂದು ಟಾಂಗ್ ಕೊಟ್ಟಿದ್ದಾರೆ.

ಸಾಮ್ರಾಟನಾದರೂ ಬರಲಿ, ಚಕ್ರವರ್ತಿಯಾದರೂ ಬರಲಿ. ಕನಕಪುರದಲ್ಲಿ ಆರ್​.ಅಶೋಕ್​ಗೆ ಒಳ್ಳೆಯ ಆತಿಥ್ಯ ಕೊಡೋಣ. ಕನಕಪುರದಲ್ಲಿ ಮಿಲಿಟರಿ ಹೋಟೆಲ್​​ಗಳು ಬಹಳಷ್ಟಿವೆ. ಒಳ್ಳೆಯ ಊಟ ಹಾಕಿಸಿ ಆತಿಥ್ಯ ಕೊಟ್ಟು ಕಳಿಸೋಣ. ನಾಮಪತ್ರ ದಿನ, ಮತ್ತೊಂದು ದಿನ ಕನಕಪುರಕ್ಕೆ ಹೋಗುತ್ತೇನೆ. ನನ್ನ, ಸಿದ್ದರಾಮಯ್ಯನವರನ್ನು ಬಿಜೆಪಿಯವರು ನಡುಗಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವ ವಿಚಾರಕ್ಕೆ ಸಂಬಂಧಿಸಿ ಸವದಿ ನನ್ನೊಂದಿಗೆ ಮಾತನಾಡಿಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ವಿಜಯಪುರ ಕ್ಷೇತ್ರದಲ್ಲಿ ಭುಗಿಲೆದ್ದ ಅಸಮಾಧಾನ; ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸ್ಪರ್ಧಿಸುವ ಸುಳಿವು ಕೊಟ್ಟ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ

ಪದ್ಮನಾಭನಗರ ಕ್ಷೇತ್ರದಲ್ಲೂ ಅಶೋಕ್ ಸೋಲ್ತಾರೆ

ಪದ್ಮನಾಭನಗರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಸ್ಪರ್ಧೆ ಮಾಡಬೇಕು ಎಂಬ ಒತ್ತಡವಿದೆ. ಆದ್ರೆ ಪದ್ಮನಾಭನಗರ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್​ ಅಭ್ಯರ್ಥಿಯಾಗಿ ರಘುನಾಥ ನಾಯ್ಡು ಸ್ಪರ್ಧಿಸ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಇಲ್ಲ. ಸದ್ಯಕ್ಕೆ ರಘುನಾಥ ನಾಯ್ಡು ಪದ್ಮನಾಭನಗರದ ನಮ್ಮ ಅಭ್ಯರ್ಥಿ. ಈ ಬಾರಿ ಪದ್ಮನಾಭನಗರ ಕ್ಷೇತ್ರದಲ್ಲೂ ಅಶೋಕ್ ಸೋಲ್ತಾರೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದರು.

ಕಾಂಗ್ರೆಸ್​ ಮೂರನೇ ಪಟ್ಟಿಯಲ್ಲಿ ಆಶ್ಚರ್ಯಕರ ಹೆಸರು ಬರಲಿದೆ. ಟಿಕೆಟ್​ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಬಿರುಗಾಳಿ ಶುರುವಾಗಿದೆ. BJP ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಸೇರುತ್ತಿದ್ದಾರೆ. ಇಂದಿನಿಂದ ಹೊಸಗಾಳಿ ಪ್ರಾರಂಭವಾಗಿದೆ. ಬಿಜೆಪಿ ಪಟ್ಟಿ ಬಗ್ಗೆ ನಾನು ಹೆಚ್ಚು ವ್ಯಾಖ್ಯಾನ ಮಾಡುವುದಿಲ್ಲ. ಇನ್ನಷ್ಟು ಬದಲಾವಣೆ ಆಗಲಿದೆ ನೋಡ್ತೀರಿ ಎಂದು ಡಿ.ಕೆ.ಶಿವಕುಮಾರ್ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ಚಿನ್ನ ಕದಿಯುವವರನ್ನ‌ನೋಡಿದ್ದೇವೆ. ಹಸು, ಕುರಿ‌ಕದಿಯುವವರನ್ನ ನೋಡಿದ್ದೇವೆ. ಆದರೆ ವೋಟು ಕದಿಯುವವರನ್ನ ನೋಡಿಲ್ಲ. ಇವತ್ತು ವ್ಯವಸ್ಥಿತವಾದ ಸಂಚು‌ ನಡೆಯುತ್ತಿದೆ. ಡಬಲ್ ಡಬಲ್ ವೋಟ್ ಮಾಡಲು ಸಂಚು ನಡೆದಿದೆ. ಎಲೆಕ್ಷನ್ ಅಧಿಕಾರಿಗಳ ಕಣ್ಣು ಮುಚ್ಚಿಸಿದ್ದಾರೆ. ಒಂದೊಂದು ಮತ ಮೂರು ಮೂರು‌ಮಾಡಿದ್ದಾರೆ. ಸಾಕ್ಷಿ ಸಮೇತ ನಾವು ಅದನ್ನ ಬಿಡ್ತಿದ್ದೇವೆ. ಮಹದೇವಪುರದ ವೋಟರ್ ಲೀಸ್ಟ್ ಇಲ್ಲಿದೆ. ಒಂದು ವೋಟು ಎರಡು, ಮೂರ ಕಡೆ ಮಾಡಿದ್ದಾರೆ. ಹೆಸರು, ತಂದೆ ಎಲ್ಲ ಮೂರು ಕಡೆ ಒಂದೇ ಇದೆ. ಆದರೆ ಫೋಟೋ ಮಾತ್ರ ಚೇಂಜ್ ಆಗಿದೆ. ಅರ್ಧದಷ್ಟು ಫೇಕ್ ವೋಟರ್ಸ್ ಕ್ರಿಯೇಟ್ ಮಾಡಿದ್ದಾರೆ. ಒಂದೇ ಫೋಟೋ ಮೂರು ಕಡೆ ಅಡ್ರೆಸ್. 40 ಸಾವಿರ ವೋಟರ್ಸ್ ಕ್ರಿಯೇಟ್ ಮಾಡಿದ್ದಾರೆ. ಫಾರಂ 7 ಇಲ್ಲ, ಫಾರಂ 8 ಕೂಡ ಇಲ್ಲ. ಬಿಎಲ್​ಒಗಳು ಇದಕ್ಕೆ ಸಹಿ ಹಾಕಿದ್ದಾರೆ. ಮಹದೇವಪುರದಲ್ಲಿ 9 ಲಕ್ಷ ಮತದಾರರಿದ್ದಾರೆ ಎಂದು ಸರ್ಕಾರದ ವಿರುದ್ಧ ಡಿಕೆಶಿ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:03 pm, Wed, 12 April 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್