ಚುನಾವಣಾ ಆಯೋಗಕ್ಕೆ ತಲೆಬಿಸಿಯಾದ ಪೊರಕೆ, ಮತದಾನಕ್ಕೆ 48 ಗಂಟೆ ಮೊದಲೇ ಮತಗಟ್ಟೆ ಸುತ್ತಮುತ್ತ ಪೊರಕೆ ಬ್ಯಾನ್

ಮತಗಟ್ಟೆಯಲ್ಲಿಯೂ ಪೊರಕೆ ಇಡದಂತೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ. ಅಲ್ಲದೇ ಮತಗಟ್ಟೆ ಸುತ್ತಮುತ್ತ ಪೊರಕೆ ಬಳಸದಂತೆ ಹೇಳಿದ್ದಾರೆ.

ಚುನಾವಣಾ ಆಯೋಗಕ್ಕೆ ತಲೆಬಿಸಿಯಾದ ಪೊರಕೆ, ಮತದಾನಕ್ಕೆ 48 ಗಂಟೆ ಮೊದಲೇ ಮತಗಟ್ಟೆ ಸುತ್ತಮುತ್ತ ಪೊರಕೆ ಬ್ಯಾನ್
ಪೊರಕೆ
Follow us
ಆಯೇಷಾ ಬಾನು
|

Updated on:May 03, 2023 | 9:08 AM

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಇದೇ ಮೇ10ರಂದು ಮತದಾನ ನಡೆಯಲಿದ್ದು, ಇದಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಯಾವುದೇ ತೊಂದರೆಗಳಾಗದಂತೆ ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಆಯೋಗ(Election Commission) ಎಲ್ಲಾ ಕ್ರಮ ಕೈಗೊಂಡಿದೆ. ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡುವ ಮೂಲಕ ಹೇಗೆಲ್ಲ ಕಾರ್ಯನಿರ್ವಹಿಸಬೇಕು ಅಂತೆಲ್ಲ ತಿಳಿಸಿಕೊಟ್ಟಿದೆ. ಇನ್ನು ರಾಜಕೀಯ ಪಕ್ಷಗಳ ಮೇಲೂ ಆಯೋಗ ಹದ್ದಿನ ಕಣ್ಣು ಇಟ್ಟಿದ್ದು, ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದೆ. ಇನ್ನು ಯಾವುದೇ ಕಾರಣಕ್ಕೂ ಮತದಾರರಿಗೆ ಆಮಿಷ ತೋರಿಸಬಾರದು ಎಂದು ಹೇಳಿದೆ. ಆದ್ರೆ, ಇದೀಗ ಚುನಾವಣಾ ಆಯೋಗಕ್ಕೆ ಪೊರಕೆ ತಲೆಬಿಸಿ ಎದುರಾಗಿದೆ.

ಹೌದು… ಪೊರಕೆ ಚಿಹ್ನೆಯನ್ನು ಆಮ್ ಆದ್ಮಿ ಪಕ್ಷ ಹೊಂದಿದ್ದು, ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡ್ತಿದೆ. ಇದರಿಂದ ಮತದಾನದ ದಿನ ಈ ಪಕ್ಷದ ಚಿಹ್ನೆಯಾದ ಪೊರಕೆಯಾಗಲಿ ಅಥವಾ ಅದರ ಚಿತ್ರವನ್ನ ಮರೆಮಾಚಬೇಕಾದ ಅನಿವಾರ್ಯತೆ ಆಯೋಗಕ್ಕೆ ಎದುರಾಗಿದೆ. ಮತದಾನದ ನಡೆಯುವ ದಿನ ಮತಗಟ್ಟೆ ಹಾಗೂ ಅದರ ಸುತ್ತಮುತ್ತ ಎಲ್ಲೂ ಪೊರಕೆ ಅಥವಾ ಪೊರಕೆಯ ಚಿತ್ರ ಕಾಣದಂತೆ ನೋಡಿಕೊಳ್ಳಬೇಕಿದೆ. ಇದರಿಂದ ಸ್ವಚ್ಛತೆಗೆ ಬೇಕೆ ಬೇಕಿರುವ ಪೊರಕೆಯ ಬಗ್ಗೆ ಚುನಾವಣಾ ಆಯೋಗ ಟೆನ್ಷನ್ ಮಾಡಿಕೊಂಡಿದ್ದು, ನೀತಿ ಸಂಹಿತ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದೇ ಆಯೋಗಕ್ಕೆ ದೊಡ್ಡ ತಲೆಬಿಸಿಗೆ ಕಾರಣವಾಗಿದೆ. ಹೀಗಾಗಿ ಮತದಾನದ 48 ಗಂಟೆ ಮೊದಲು ಮತಗಟ್ಟೆ ಸುತ್ತಮುತ್ತ ಹಾಗೂ ಮತಗಟ್ಟೆಲ್ಲಿ ಸ್ವಚ್ಛತೆಗೆ ಬೇಕೆ ಬೇಕಿರುವ ಪೊರಕೆಗೆ ಚುನಾವಣಾ ಆಯೋಗ ಗೇಟ್ ಪಾಸ್ ನೀಡಿದೆ.

ಇದನ್ನೂ ಓದಿ: Karnataka Assembly Elction: ಮೇ.05ರಿಂದ ಪ್ರಧಾನಿ ಮೋದಿ ಮೂರು ದಿನ ರಾಜ್ಯ ಪ್ರವಾಸ; ಇಲ್ಲಿದೆ ವೇಳಾಪಟ್ಟಿ

ಪೊರಕೆ ಮರೆ ಮಾಚುವುದು ಆಯೋಗಕ್ಕೆ ನಿಜವಾಗಿಯೂ ಸವಾಲಿನ ಕೆಲಸವಾಗಿದೆ. ಮತಗಟ್ಟೆಯಲ್ಲಿಯೂ ಪೊರಕೆ ಇಡದಂತೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ. ಅಲ್ಲದೇ ಮತಗಟ್ಟೆ ಸುತ್ತಮುತ್ತ ಪೊರಕೆ ಬಳಸದಂತೆ ಹೇಳಿದ್ದಾರೆ. ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷಗಳ ಚಿಹ್ನೆಯಾಗಲಿ ಅಥವಾ ಪ್ರತಿನಿಧಿಸುವ ವಸ್ತು ಮತ್ತು ಚಿತ್ರಗಳನ್ನ ಮತದಾರರಿಂದ ಮರೆ ಮಾಚಬೇಕಿದೆ. ಹೀಗಾಗಿ ಚುನಾವಣೆಯ ನಿಯಮದ ಪ್ರಕಾರ ಮತದಾರರ ಮೇಲೆ ಪ್ರಭಾವ ಬೀರಬಾರದು ಎಂಬ ಕಾರಣಕ್ಕೆ ಈ ಸೂಚನೆ ಹೊರಡಿಸಿದ್ದಾರೆ.

ಕಾಂಗ್ರೆಸ್ ಚಿಹ್ನೆ ಕೈ ಎಂದು ಕೈ ಕತ್ತರಿಸಲಾಗುವುದೇ?

ಶಿವಮೊಗ್ಗ ಏರ್​ಪೋರ್ಟ್ ಕೂಡ ಕಮಲಾಕಾರದಲ್ಲಿದ್ದು ಅದು ಕೂಡ ಮತದಾರರ ಮೇಲೆ ಪ್ರಭಾವ ಬೀರಬಹುದು ಹಾಗಾಗಿ ಶಿವಮೊಗ್ಗ ಏರ್​ಪೋರ್ಟ್ ಅನ್ನು ಕಾಣದಂತೆ ಪರದೆ ಮುಚ್ಚಬೇಕು ಎಂಬ ಕೂಗು ಕೆಲ ದಿನಗಳ ಹಿಂದೆ ಜೋರಾಗಿತ್ತು. ಇದಕ್ಕೆ ಕೆಲವರು ಕಾಂಗ್ರೆಸ್ ಚಿಹ್ನೆ ಕೈ ಎಂದು ಕೈ ಕತ್ತರಿಸಲಾಗುವುದೇ? ಎಂದು ಟೀಕೆ ಮಾಡಿದ್ದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:57 am, Wed, 3 May 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ