Karnataka Elections: ಮೀಸಲಾತಿ ಮುಟ್ಟಿದರೆ ಕ್ರಾಂತಿ ಆಗತ್ತದೆ: ಕಾಂಗ್ರೆಸ್ಗೆ ಎಚ್ಚರಿಕೆ ನೀಡಿದ ಸಿಎಂ ಬೊಮ್ಮಾಯಿ
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಎಸ್ಸಿ ಎಸ್ಟಿ ಅಭಿನಂದನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಸಿಎಂ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ: ಅಕಸ್ಮಾತ್ ಮೀಸಲಾತಿ ಮುಟ್ಟಿದ್ರೆ ಕ್ರಾಂತಿ ಆಗತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕಾಂಗ್ರೆಸ್ಗೆ ಎಚ್ಚರಿಕೆ ನೀಡಿದರು. ಜಿಲ್ಲೆಯ ನೆಹರೂ ಮೈದಾನದಲ್ಲಿ ನಡೆದ ಎಸ್ಸಿ ಎಸ್ಟಿ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಒಳಮೀಸಲಾತಿ (Internal Reservation) ಪರವೋ ಅಥವಾ ವಿರುದ್ಧವೋ ಎಂಬುದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ತಿಳಿಸಬೇಕು. ಒಳಮೀಸಲಾತಿ ಕುರಿತು ಸರ್ವ ಪಕ್ಷ ಸಭೆ ಕರೆದಾಗ ನೀವು ಮಾಡಿ ಅಂತ ಹೇಳಿದ್ದರು. ಇದೀಗ ಹೊರಗೆ ಬಂದಾಗ ಕಾಂಗ್ರೆಸ್ ನಾಯಕರು ವರಸೆ ಬದಲಾಯಿಸಿದ್ದಾರೆ. ಒಳಗೊಂದು ಹೊರಗೊಂದು ಮಾತನಾಡುವುದು ಕಾಂಗ್ರೆಸ್ ನೀತಿಯಾಗಿದೆ. ತಾಕತ್ತಿದ್ದರೆ ಕಾಂಗ್ರೆಸ್ ವಿರೋಧ ಮಾಡುತ್ತೇವೆ ಅಂತಾ ಹೇಳಲಿ ಎಂದು ಸವಾಲೆಸೆದರು.
ಕಾಂಗ್ರೆಸ್ ಒಳಮೀಸಲಾತಿ ಪರವಾಗಿ ಇದ್ದಾರೋ ಅಥವಾ ವಿರುದ್ಧವಾಗಿ ಇದ್ದಾರೋ ಎಂಬುದು ದಲಿತ ಬಾಂಧವರಿಗೆ ಗೊತ್ತಾಗಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು. ಮುಂದುವರಿದು ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ಯಾರೂ ಮಾಡಲು ಆಗಲ್ಲ ಎಂದ ರಾಜಕೀಯ ವಲಯದಲ್ಲಿ ಚರ್ಚೆ ಆಗ್ತಿತ್ತು. ಇದನ್ನು ಹೆಚ್ಚಳ ಮಾಡಿದರೆ ಭಸ್ಮ ಆಗುತ್ತಾರೆ ಅಂತ ಹೇಳಿದ್ದರು. ಆದರೆ ನಾನು ಯಾರಿಗೆ ಸಂವಿಧಾನ, ಯಾರಿಗೆ ಪ್ರಜಾಪ್ರಭುತ್ವ ಎಂಬುದನ್ನು ಅರಿತುಕೊಂಡೆ. ಸ್ಥಾನಮಾನ ಶಾಸ್ವತ ಅಲ್ಲ, ಆದರೆ ನಾನು ನಿಮ್ಮ ಹೃದಯದಲ್ಲಿದ್ದೇನೆ. ನನ್ನಿಂದ ದೊಡ್ಡ ಕೆಲಸ ಆಗಿಲ್ಲ, ನಿಮಗೆ ನ್ಯಾಯ ಕೊಡಿವ ಸಣ್ಣ ಕೆಲಸ ಮಾಡಿದ್ದೇನೆ ಎಂದರು.
ಬಡವರಾಗಿ ಹುಟ್ಟಬಹುದು ಆದರೆ ಬಡವರಾಗಿ ಸಾಯಬೇಕು ಅನ್ನೋ ಕಾನೂನು ಇಲ್ಲ. ಇಷ್ಟು ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಎಸ್ಸಿ ಎಸ್ಟಿ ಸಮುದಾಯವನ್ನ ಒತ್ತೆಯಾಳು ಮಾಡಿಕೊಂಡಿತ್ತು. 70 ವರ್ಷ ಅವರನ್ನು ಮತ ಬ್ಯಾಂಕ್ ಮಾಡಿಕೊಂಡಿತ್ತು. ಸಾಮಾಜಿಕ ನ್ಯಾಯ ಕೊಡುತ್ತೇನೆ ಅಂತ ಬರೀ ಬಾಷಣ ಬೀಗಿದರು. ಈಗಲೂ ಕಾಂಗ್ರೆಸ್ ವಂಚನೆ ಮಾಡಿವ ಅಟ ಆಡುತ್ತಿದೆ. ಈ ಬಗ್ಗೆ ಎಚ್ಚರಿಕೆ ಇರಲಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸಮಾಜ ಒಳೆದಾಡುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಕರ್ನಾಟಕದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಜಾತಿಜಾತಿಗಳ ನಡುವೆ ಬೆಂಕಿ ಹಚ್ಚಿ ಅದರಲ್ಲಿ ರೊಟ್ಟಿ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಸಿದ್ದರಾಮಣ್ಣ ಮುಖ್ಯಮಂತ್ರಿ ಆಗಿದ್ದಾಗ ಕೆಲವರಿಗೆ ಮಾತ್ರ ಕಾರ್ಯಕ್ರಮ ಜಾರಿ ಮಾಡುತ್ತಿದ್ದರು. ಇದ್ಯಾವ ನ್ಯಾಯ ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದರು.
ಇದುವೇ ಕಾಂಗ್ರೆಸ್ನ ಡಬಲ್ ಸ್ಟ್ಯಾಂಡರ್ಡ್ ಎಂದ ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಎಸ್ಸಿ ಎಸ್ಟಿ ಸಮುದಾಯದ ರಕ್ಷಣೆ ಮಾಡತ್ತದೆ ಎಂಬುದು ಬರೀ ಬಾಷಣವಷ್ಟೆ. ಹಿಂದೆ ಮೀಸಲಾತಿ ಹೋರಾಟ ಇದೇ ಮೈದಾನದಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಇಲ್ಲಿಗೆ ಬಂದು ದೀಪ ಹಚ್ಚಿ ಹೋಗಿದ್ದರು. ಏನೂ ಮಾತಾಡಲೇ ಇಲ್ಲ. ಒಂದು ವಿಡಿಯೋದಲ್ಲಿ ಸದಾಶಿವ ಆಯೋಗ ವರದಿ ಜಾರಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ಇನ್ನೊಂದು ವಿಡಿಯೋದಲ್ಲಿ ನಾವ ಮಾಡಲ್ಲ ಅಂತಾರೆ. ಇದು ಕಾಂಗ್ರೆಸ್ನ ಡಬಲ್ ಸ್ಟ್ಯಾಂಡರ್ಡ್ ಎಂದು ಬೊಮ್ಮಾಯಿ ಹೇಳಿದರು.
ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಪಕ್ಷ ಅಂದರೆ ಅದು ಕಾಂಗ್ರೆಸ್. ನಾನು ಕೆಲಸ ಮಾಡಿ ನಿಮ್ಮ ಮುಂದೆ ಬರುವ ಮುಖ್ಯಮಂತ್ರಿ, ನ್ಯಾಯ ಕೊಡುವಾಗ ಇನ್ನೊಬ್ಬರಿಗೆ ಅನ್ಯಾಯ ಆಗದಂತೆ ನಾವು ನ್ಯಾಯ ಕೊಟ್ಟಿದ್ದೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆಯುತ್ತೇವೆ ಎಂದು ಹೇಳುತ್ತಿದೆ. ನೀವು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ನೀವು ಮೊದಲು ಒಳ ಮೀಸಲಾತಿ ಪರವೋ ವಿರುದ್ಧವೋ ಹೇಳಬೇಕು ಎಂದು ಸವಾಲೆಸೆದರು.
ಇದನ್ನೂ ಓದಿ: ಬಿಜೆಪಿ ಪರ ಪ್ರಚಾರಕ್ಕಿಳಿದ ಕಿಚ್ಚ ಸುದೀಪ್: ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಡ್ಯಾಮೇಜ್!
ನನ್ನ ಅನ್ನದ ಮೊದಲ ತುತ್ತು ಅದು ದಲಿತ ಸಮುದಾಯಕ್ಕೆ ಮೀಸಲು. ಬಂಜಾರ, ಭೋವಿ, ಕುಂಚಾ, ಕೊರಮ ಬಂಧುಗಳ ಮೀಸಲಾತಿಯನ್ನು ಸೂರ್ಯ, ಚಂದ್ರ ಇರುವವರಗೂ ತೆಗೆಯುವುದಿಲ್ಲ. ನೀವು ಕಾಂಗ್ರೆಸ್ ಸುಳ್ಳನ್ನು ನಂಬಬೇಡಿ. ಬಜೆಟ್ನಲ್ಲಿ ಘೋಷಣೆ ಮಾಡಿದಂತೆ 7ಡಿ ಕಾನೂನನ್ನು ತೆಗೆದು ಹಾಕುತ್ತೇನೆ ಎಂದು ಭರವಸೆ ನೀಡಿದರು. ಅಲ್ಲದೆ, ದಲಿತ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವ ಕಾನೂನು ಸಿದ್ದರಾಮಯ್ಯ ಮಾಡಿದ್ದರು ಎಂದು ಆರೋಪಿಸಿದರು.
ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ
ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದಲಿತರಿಗೆ ಅನ್ಯಾಯ, ಅಂಬೇಡ್ಕರ್ಗೆ ಅವಮಾನ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ಮಲ್ಲಿಕಾರ್ಜುನ ಖರ್ಗೆಯನ್ನು ಮುಖ್ಯಮಂತ್ರಿಯನ್ನಾಗಿ ಮಾಡದಿರುವ ಪಾರ್ಟಿ ಕಾಂಗ್ರೆಸ್ ಎಂದರು. ಅಲ್ಲದೆ, ಬಿಜೆಪಿಯವರು ಮೀಸಲಾತಿ ತೆಗೆಯುತ್ತಾರೆ ಅಂತಾ ಹೇಳುತ್ತಿದ್ದರು. ಆದರೆ ಎಲ್ಲಾ ಸಮುದಾಯಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದೇವೆ. ನಿಮಗೆ ಮೀಸಲಾತಿ ತೆಗೆಯುವವರು ಬೇಕೋ ನೀಡಿರುವವರು ಬೇಕೋ ಎಂಬುದನ್ನು ಯೋಚಿಸಿ ಎಂದರು.
ಬಿಜೆಪಿ ಒತ್ತಾಯದ ಮೇರೆಗೆ ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಟ್ಟಿದೆ. ಕಾಂಗ್ರೆಸ್ ಸುಡುವ ಮನೆ, ದಲಿತರು ಯಾರೂ ಅಲ್ಲಿ ಹೋಗಬಾರದು ಎಂದು ಅಂಬೇಡ್ಕರ್ ಹೇಳಿದ್ದರು. ಜಗಜೀವನ ರಾಮ್ ಅವರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್. ಕರ್ನಾಟಕದಲ್ಲಿ ಮಾಜಿ ಗೃಹಸಚಿವ ಪರಮೇಶ್ವರ ಅವರ ರಾಜಕೀಯ ಜೀವನ ಕೆಡಸಿದ್ದು ಯಾರು? ಮುನಿಯಪ್ಪರನ್ನು ಮುಳುಗಿಸುದ್ದು ಯಾರು? ಎಂದು ಪ್ರಶ್ನಿಸಿದರು. ಅಲ್ಲದೆ, ಮೀಸಲಾತಿ ಕೊಟ್ಟ ಬೊಮ್ಮಾಯಿ ಸರ್ಕಾರಕ್ಕೆ ನೀವು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:58 pm, Thu, 6 April 23