ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಘೋಷಣೆಯಾಗಿಲ್ಲ. ಈ ನಡುವೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿ ಹಬ್ಬಲು ಆರಂಭವಾಗಿದೆ. ಇದಕ್ಕೆ ಕಾರಣ, ಮಂಡ್ಯದಲ್ಲಿ ಕುಮಾರಸ್ವಾಮಿ ಅವರು ಹೆಚ್ಡಿಎಫ್ಸಿ (HDFC) ಬ್ಯಾಂಕ್ ಖಾತೆ ತರೆದಿರುವುದು. ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನಾನು ಚನ್ನಪಟ್ಟಣ ಅಭ್ಯರ್ಥಿಯಾಗಿದ್ದೇನೆ. ಚನ್ನಪಟ್ಟಣ (Channapatna) ಕ್ಷೇತ್ರದಿಂದ ನಾನು ಉಮೇದುವಾರಿಕೆ ಸಲ್ಲಿಸಿದ್ದೇನೆ. ಜನರಲ್ಲಿ ಗೊಂದಲ ಮೂಡಿಸುವ ಕೆಲಸಕ್ಕೆ ಮುಂದಾಗುವುದಿಲ್ಲ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದರು. ಚುನಾವಣೆವಂದಾರಗುಪ್ಪೆ ಬ್ರಾಂಚ್ನಲ್ಲಿ ಖಾತೆ ತೆರೆಯಲಾಗಿದೆ. ಆದರೆ ಆ ಬ್ರಾಂಚ್ ಮಂಡ್ಯಕ್ಕೆ ಸೇರುತ್ತದೆ. ಅದನ್ನೇ ಕಾಕ ತಾಳೀಯವಾಗಿ ಇದಕ್ಕೆ ಹೋಲಿಕೆ ಮಾಡಲಾಗುತ್ತಿದೆ ಎಂದರು. ಮತ್ತೆ ಸಂಸದೆ ಸುಮಲತಾ (Sumalatha Ambarish) ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದು, ನಾನು ಅವರ ಸಾವಲನ್ನ ನಿರಾಕರಣೆ ಮಾಡಿದ್ದೇನೆ ಎಂದರು.
ನಾನು ಸುಮಲತಾ ಅವರಷ್ಟು ದೊಡ್ಡ ವ್ಯಕ್ತಿಯಲ್ಲ, ಅವರಷ್ಟು ವರ್ಚಸ್ಸು ಕೂಡ ಇಲ್ಲ. ಅವರಷ್ಟು ಮಂಡ್ಯ ಜಿಲ್ಲೆಗೆ ನಮ್ಮಿಂದ ನಮ್ಮ ಪಕ್ಷದಿಂದ ಅಭಿವೃದ್ಧಿ ಆಗಿಲ್ಲ. ನಾನು ಅವರ ಸಾವಲನ್ನ ನಿರಾಕರಣೆ ಮಾಡಿದ್ದೇನೆ. ಮಂಡ್ಯ ಜಿಲ್ಲೆಯಲ್ಲಿ ಸಾಮಾನ್ಯ ಕಾರ್ಯಕರ್ತ ಅಥವಾ ಯಾರಾದರು ಓರ್ವ ರೈತ ಮಗ ಅಥವಾ ಮಗಳನ್ನ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತೇನೆ. ಮಂಡ್ಯದಲ್ಲಿ ಯಾವ ರೀತಿ ಚುನಾವಣೆ ಗೆಲ್ಲಬೇಕೆಂಬುದು ನನಿಗೆ ಗೊತ್ತಿದೆ ಎಂದರು.
ಇದನ್ನೂ ಓದಿ: ಒಂದು ಅವಕಾಶ ಕೊಡಿ, ಪ್ರತಿ ಕುಟುಂಬ ಸರಿಪಡಿಸದಿದ್ದರೆ ಜೆಡಿಎಸ್ ವಿಸರ್ಜನೆ: ಕುಮಾರಸ್ವಾಮಿ
ಈ ಬಾರಿ ಮಂಡ್ಯ ಜಿಲ್ಲೆಯ ಜನತೆ ಏನು ತೀರ್ಮಾನ ಮಾಡಿದ್ದಾರೆಂದು ತಿಳಿದಿದೆ. ಇವರ ದುರಹಂಕಾರದ ಮಾತುಗಳಿಗೆ ನಾನು ಉತ್ತರ ಕೊಡಬೇಕಾಗಿಲ್ಲ, ಮಂಡ್ಯ ಜನತೆ ಉತ್ತರ ಕೊಡುತ್ತಾರೆ. ನನ್ನ ವಿರುದ್ಧ ಮಂಡ್ಯದಲ್ಲಿ ನಿಲ್ಲುತ್ತೇನೆಂದು ಹೇಳುತ್ತಾರಲ್ಲ ಈಗ ಹೇಳಿ ಯಾರದ್ದು ದ್ವೇಷದ ರಾಜಕಾರಣ? ನಾನೇನು ಮಂಡ್ಯದಲ್ಲಿ ನಿಲ್ಲುತ್ತೇನೆಂದು ಹೇಳಿದ್ದೇನಾ? ನಾನು ನಿಲ್ಲದೆ ಇದ್ದರೂ ಮಂಡ್ಯ ಜಿಲ್ಲೆಯ ಜನ ನಿರ್ಧಾರ ಮಾಡಿದ್ದಾರೆ. ಮತ್ತೆ ಜಿಲ್ಲೆಯ 7 ಕ್ಷೇತ್ರಗಳಲ್ಲಿ 7 ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ ಎಂದರು.
ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನ ಇವತ್ತು ಇಲ್ಲ ನಾಳೆ ಘೋಷಣೆ ಮಾಡಲಿದ್ದೇವೆ ಎಂದು ಹೇಳಿದ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ಅರ್ಜಿ ಹಾಕಲಾಗಿದೆ ನಾನು ಗೊಂದಲ ಸೃಷ್ಟಿ ಮಾಡುವುದಿಲ್ಲ. ಈ ಬಾರಿ ಚನ್ನಪಟ್ಟಣ ಬಿಟ್ಟು ಬೇರೆಲ್ಲೂ ಚುನಾವಣೆ ಸ್ಪರ್ಧಿಸಲ್ಲ. ಚನ್ನಪಟ್ಟಣದಲ್ಲಿ ಸಾಮಾರ್ಥ್ಯವುಳ್ಳ ಅಭ್ಯರ್ಥಿ ಇದ್ದಿದ್ದರೆ ಆಗ ನಾನು ಮಂಡ್ಯದ ಕುರಿತು ಯೋಚಿಸುತ್ತಿದ್ದೆ. ಈಗ ಅನಿವಾರ್ಯತೆ ನನಿಗೆ ಕಂಡಿತ ಇಲ್ಲ. ದುರಹಂಕಾರದ ಪರಮಾವದಿ ಇದೆಲ್ಲ ಅದು ಎಲ್ಲರಿಗೂ ಗೊತ್ತಾಗುತ್ತದೆ ಎಂದರು ಹೇಳಿದ ಅವರು ಟಿಕೆಟ್ ವಂಚಿತ ಬಿಜೆಪಿಯ ಕೆಲ ಶಾಸಕರು ಕುಮಾರಸ್ವಾಮಿ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ.
ನಾನು ಮಂಡ್ಯದಿಂದ ಸ್ಪರ್ಧೆ ಮಾಡಿದರೆ ಕಾಂಗ್ರೆಸ್, ಬಿಜೆಪಿ, ರೈತ ಸಂಘ ಅರ್ಜಿ ಹಾಕಲ್ಲ. ನಮ್ಮ ಕುಟುಂಬವನ್ನ ಮುಗಿಸಲು ಸಜ್ಜಾಗಿದ್ದಾರೆ. ಮೇಲುಕೋಟೆಯಲ್ಲಿ ಏನಾಗಿದೆ ಎಂದು ಕಣ್ಮುಂದೆ ಇದೆ. ಕಾಂಗ್ರೆಸ್ನವರು ಅಭ್ಯರ್ಥಿ ಹಾಕದೆ ರೈತ ಸಂಘಕ್ಕೆ ಬೆಂಬಲ ನೀಡಿದ್ದಾರೆ. ಚುನಾವಣೆ ಬಳಿಕ ಅಮೆರಿಕಾಗೆ ಹೋಗಿ ಕೂರುವುದನ್ನ ನೀವು ನೋಡಿದ್ದೀರಾ? ನಿಖಿಲ್ ಕುಮಾರಸ್ವಾಮಿಯನ್ನ ಮೋಸದಿಂದ ಸೋಲಿಸಲು ಹೊರಟರು. ಆದರೆ ನಾಗಮಂಗಲದಲ್ಲಿ ಹೆಚ್ಚಿನ ಲೀಡ್ ಸಿಕ್ಕಿತ್ತು. ನನಿಗೋಸ್ಕರ ಜೆಡಿಎಸ್ನ ಗೆಲ್ಲಿಸಿ ಕೊಡಿ ಕೈ ಮುಗಿದು ಕೇಳಿ ಕೊಳ್ಳುತ್ತೇನೆ ಎಂದರು.
ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷವನ್ನು ಗೆಲ್ಲಿಸುವಂತೆ ಪಾಂಡವಪುರದಲ್ಲಿ ಮನವಿ ಮಾಡುತ್ತಿದ್ದರು. ಈ ವೇಳೆ ಕುಮಾರಸ್ವಾಮಿ ಬಳಿ ಬಂದ ಮಂಗಳಮುಖಿಯರು 25 ಸಾವಿರ ರೂ. ದೇಣಿಗೆ ನೀಡಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Tue, 18 April 23