ಒಂದು ಅವಕಾಶ ಕೊಡಿ, ಪ್ರತಿ ಕುಟುಂಬ ಸರಿಪಡಿಸದಿದ್ದರೆ ಜೆಡಿಎಸ್ ವಿಸರ್ಜನೆ: ಕುಮಾರಸ್ವಾಮಿ

ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನಡೆದ ಪಂಚರತ್ನ ರಥಯಾತ್ರೆ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ಒಂದು ಬಾರಿ ಜೆಡಿಎಸ್​ಗೆ ಅವಕಾಶ ನೀಡಿ, ಪ್ರತಿ ಕುಟುಂಬವನ್ನು ಸರಿಪಡಿಸದಿದ್ದರೆ ಜೆಡಿಎಸ್ ವಿಸರ್ಜನೆ ಮಾಡುವುದಾಗಿ ಹೇಳಿದ್ದಾರೆ.

ಒಂದು ಅವಕಾಶ ಕೊಡಿ, ಪ್ರತಿ ಕುಟುಂಬ ಸರಿಪಡಿಸದಿದ್ದರೆ ಜೆಡಿಎಸ್ ವಿಸರ್ಜನೆ: ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ Image Credit source: PTI
Follow us
Rakesh Nayak Manchi
|

Updated on:Apr 17, 2023 | 10:07 PM

ಬೆಳಗಾವಿ: ಪ್ರಸ್ತುತ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಜೆಡಿಎಸ್ ಪಕ್ಷಕ್ಕೆ ಒಂದು ಅವಕಾಶ ನೀಡುವಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಮನವಿ ಮಾಡಿದ್ದಾರೆ. ಜಿಲ್ಲೆಯ ಸವದತ್ತಿಯಲ್ಲಿ ನಡೆದ ಪಂಚರತ್ನ ರಥಯಾತ್ರೆ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ಜಾತಿ ವ್ಯಾಮೋಹಕ್ಕೆ ಒಳಗಾಗಬೇಡಿ, ರಾಷ್ಟ್ರೀಯ ಪಕ್ಷಗಳು ನಿಮ್ಮ ಬದುಕನ್ನು ಹೇಗಿಟ್ಟಿದ್ದಾರೆ ಯೋಚನೆ ಮಾಡಿ. ಒಂದು ಬಾರಿ ಜೆಡಿಎಸ್‌ಗೆ (JDS) ಅವಕಾಶ ನೀಡಿ. ಪ್ರತಿಯೊಂದು ಕುಟುಂಬವನ್ನು ಸರಿಪಡಿಸುತ್ತೇವೆ. ಒಂದೊಮ್ಮೆ ಸರಿಪಡಿಸದಿದ್ದರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇವೆ ಎಂದು ಹೇಳಿದರು.

ಸವದತ್ತಿ ಯಲ್ಲಮ್ಮ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೌರವ್ ಚೋಪ್ರಾ ಪರ ಮತಯಾಚನೆ ನಡೆಸಿದ ಕುಮಾರಸ್ವಾಮಿ, ಸೌರವ್ ಚೋಪ್ರಾ ಆಯ್ಕೆ ಮಾಡಿ ಕಳಿಸಿದರೆ ನಿಮ್ಮ ಬದುಕಲ್ಲಿ ಬದಲಾವಣೆ ಆಗುತ್ತದೆ. ಒಂದು ಬಾರಿ ಸೌರವ್ ಚೋಪ್ರಾ ಅವರಂತಹ ಯುವಕರನ್ನು ಆಯ್ಕೆ ಮಾಡುವ ಕೆಲಸ ಮಾಡಿ. ಜೆಡಿಎಸ್ ಟಾರ್ಗೆಟ್ 123ರಲ್ಲಿ ಮೊದಲ ಜಯ ಸವದತ್ತಿ ಯಲ್ಲಮ್ಮ ಕ್ಷೇತ್ರದ್ದಾಗಿರಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಸೌರವ್ ತಂದೆ ಆನಂದ ಚೋಪ್ರಾ ಬದುಕಿದ್ದಾಗ ಜೆಡಿಎಸ್‌ಗೆ ಕರೆತರಲು ಕಾರ್ಯಕರ್ತರಿಗೆ ಹೇಳಿದ್ದೆ. ಆ ಕಾಲ ಇಂದು ಬಂದಿದ್ದು ಅವರ ಮಗ ಜೆಡಿಎಸ್ ಸೇರಿದ್ದಾರೆ ಎಂದರು.

ಬೆಳಗಾವಿಯಲ್ಲಿ ನೇಕಾರರು, ಕೂಲಿಕಾರ್ಮಿಕರ, ಬಡಕುಟುಂಬಗಳ ಪರಿಸ್ಥಿತಿ ನೋಡಿದ್ದೇನೆ. ಎರಡು ತುತ್ತಿನ ಅನ್ನಕ್ಕೂ ಕಷ್ಟ ಪಡುವ ಸ್ಥಿತಿ ಕಂಡಿದ್ದೇನೆ. ಸವದತ್ತಿಗೆ ನೀರಾವರಿ ಯೋಜನೆ, ಉದ್ಯೋಗಾವಕಾಶ, ಆಸ್ಪತ್ರೆ, ಮನೆಗಳ ಅವಶ್ಯಕತೆ ಇದೆ, ಇದೆಲ್ಲವನ್ನೂ ಈಡೇರಿಸುವುದು ಪಂಚರತ್ನ ಯೋಜನೆಯ ಐದು ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದರಲ್ಲದೆ, ಸ್ವಾತಂತ್ರ್ಯ ಬಂದು 75 ವರ್ಷ ಆದರೂ ರಾಷ್ಟ್ರೀಯ ಪಕ್ಷಗಳು ನಿಮ್ಮ ಬದುಕಿನ ಜೊತೆ ಚೆಲ್ಲಾಟವಾಡುತ್ತಿವೆ ಎಂದು ಟೀಕಿಸಿದರು.

ಇದನ್ನೂ ಓದಿ: ಸಾವಿರ ಕೋಟಿ ಒಡೆಯ ಡಿಕೆ ಶಿವಕುಮಾರ್ ಆಸ್ತಿ ವಿವರ ಘೋಷಣೆ

ಬೆಳಗಾವಿಯಲ್ಲಿ ರೈತರು, ಕಬ್ಬು ಬೆಳೆಗಾರರು ಬದುಕಿದ್ದರೆ ಅದಕ್ಕೆ ಜೆಡಿಎಸ್ ಕಾರಣ. ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಲೈಸೆನ್ಸ್ ಕೊಡಲು ಕಾಂಗ್ರೆಸ್ ಸರ್ಕಾರದಲ್ಲಿ ಅಡಚಣೆ ಇತ್ತು. ದೇವೇಗೌಡರು ಪ್ರಧಾನಿಯಾದಾಗ ಬೆಳಗಾವಿ ಜಿಲ್ಲೆಯ ಕಾರ್ಖಾನೆಗಳಿಗೆ ಲೈಸೆನ್ಸ್ ನೀಡಲಾಯಿತು. ಬೆಳಗಾವಿಯನ್ನ ತನ್ನ ರಾಜ್ಯಕ್ಕೆ ಸೇರಿಸಬೇಕೆಂದು ನೆರೆಯ ಮಹಾರಾಷ್ಟ್ರ ಸರ್ಕಾರ ಪ್ರಯತ್ನ ಪಟ್ಟಿತು. 2006ರಲ್ಲಿ ಬೆಳಗಾವಿಯಲ್ಲಿ ಅಧಿವೇಶನ ಮಾಡಬೇಕೆಂದು ನಿರ್ಧಾರ ಮಾಡಿದ್ದು ನಾನು. ಸುವರ್ಣ ಸೌಧ ಕಟ್ಟಲು ನಿರ್ಧಾರ ಮಾಡಿದ್ದು ನಿಮ್ಮ ಕುಮಾರಸ್ವಾಮಿ. ಆದರೆ ಬಿಜೆಪಿ, ಕಾಂಗ್ರೆಸ್ ಸುವರ್ಣಸೌಧ ನಿಷ್ಕ್ರೀಯ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ಪಂಚರತ್ನ ಕಾರ್ಯಕ್ರಮದ ಯೋಜನೆಗಳ ಬಗ್ಗೆ ವಿವರವಾಗಿ ಹೇಳಿದ ಕುಮಾರಸ್ವಾಮಿ, ಬೆಳಗಾವಿ ಜಿಲ್ಲೆಯಲ್ಲಿ ನಿರಂತವಾಗಿ ಮಳೆ ಬಿದ್ದು ಹಲವು ಮನೆಗಳು ಕುಸಿದುಬಿದ್ದವು. ಬಿದ್ದ ಮನೆಗೆ ಐದು ಲಕ್ಷ ಕೊಡುತ್ತೇವೆ ಅಂತ ಹೇಳಿದ್ದರು, ಕೊಟ್ಟಿದ್ದಾರಾ? ಸೌರವ್ ಚೋಪ್ರಾ ಅವರನ್ನು ಆಯ್ಕೆ ಮಾಡಿದರೆ ಅವರನ್ನು ಮಂತ್ರಿ ಮಾಡಲು ಪ್ರಯತ್ನಿಸುತ್ತೇನೆ. ಸವದತ್ತಿ ತಾಲೂಕು ದತ್ತು ಪಡೆದು ಅಭಿವೃದ್ಧಿ ಮಾಡುತ್ತೇನೆ ಎಂದರು.

ದೇವೇಗೌಡರು ಸಿಎಂ ಆಗಿದ್ದಾಗ ಬೆಳಗಾವಿ ಜಿಲ್ಲೆಯ 18ಕ್ಕೂ 18 ಗೆಲುವು ಬಂದಿತ್ತು. ಸದ್ಯ ಜಿಲ್ಲೆಯಲ್ಲಿ ಈ ಬಾರಿ ಜೆಡಿಎಸ್‌ಗೆ ಕನಿಷ್ಠ 6 ರಿಂದ 8 ಸ್ಥಾನಗಳಲ್ಲಿ ಗೆಲುವು ಸಿಗುವ ವಿಶ್ವಾಸ ಇದೆ. ಶ್ರೀಮಂತ ಮಾಲೀಕರು, ಸಕ್ಕರೆ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಸಿಲುಕಿದ್ದೀರಿ ಅದರಿಂದ ಹೊರಗೆ ಬನ್ನಿ. ಕಾಂಗ್ರೆಸ್ ಸರ್ಕಾರದಲ್ಲಿ ಮಹದಾಯಿ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಲಾಠಿ ಚಾರ್ಜ್ ಮಾಡಲಾಯಿತು. ಸಿದ್ದರಾಮಯ್ಯ ಸರ್ಕಾರದಲ್ಲಿ ಡಿವೈಎಸ್‌‌ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸುವರ್ಣಸೌಧ ಎದುರು ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:07 pm, Mon, 17 April 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್