AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್​ಡಿ ಕುಮಾರಸ್ವಾಮಿ ಕುಟುಂಬದ ಆಸ್ತಿ ಘೋಷಣೆ: ರೈತನ ಮಗ ಹೊಂದಿರುವ ಕೃಷಿ ಜಮೀನೆಷ್ಟು ಗೊತ್ತಾ?

ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ತಮ್ಮ ಒಟ್ಟು ಕುಟುಂಬದ ಆಸ್ತಿ ಘೋಷಣೆ ಮಾಡಿದ್ದು, ಸುಮಾರು 189.27 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ ಕುಟುಂಬದ ಆಸ್ತಿ ಘೋಷಣೆ: ರೈತನ ಮಗ ಹೊಂದಿರುವ ಕೃಷಿ ಜಮೀನೆಷ್ಟು ಗೊತ್ತಾ?
ನಾಮಪತ್ರ ಸಲ್ಲಿಸಿದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ
ಗಂಗಾಧರ​ ಬ. ಸಾಬೋಜಿ
|

Updated on: Apr 17, 2023 | 9:53 PM

Share

ರಾಮನಗರ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ (HD Kumaraswamy) ಸೋಮವಾರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಚನ್ನಪಟ್ಟಣ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿರುವ ಹೆಚ್‌.ಡಿ. ಕುಮಾರಸ್ವಾಮಿ ತಮ್ಮ ಒಟ್ಟು ಕುಟುಂಬದ ಆಸ್ತಿ ಘೋಷಣೆ ಮಾಡಿದ್ದು, ಸುಮಾರು 189.27 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಕುಮಾರಸ್ವಾಮಿ, ಅನಿತಾ ದಂಪತಿ ಒಟ್ಟಾಗಿ 92.84 ಕೋಟಿ ರೂ ಸ್ಥಿರಾಸ್ತಿ ಹಾಗೂ 96.43 ಕೋಟಿ ರೂ ಚರಾಸ್ತಿ ಹೊಂದಿದ್ದಾರೆ.

ಹೆಚ್‌.ಡಿ. ಕುಮಾರಸ್ವಾಮಿ ಹೊಂದಿರುವ ಆಸ್ತಿ ವಿವರ ಹೀಗಿದೆ

ಒಟ್ಟು ಆಸ್ತಿ: ಸುಮಾರು 189.27 ಕೋಟಿ ರೂ

ಸ್ಥಿರಾಸ್ತಿ: 92.84 ಕೋಟಿ ರೂ (ಕುಮಾರಸ್ವಾಮಿ, ಅನಿತಾ ದಂಪತಿ ಒಟ್ಟಾಗಿ)

ಚರಾಸ್ತಿ: 96.43 ಕೋಟಿ ರೂ (ಕುಮಾರಸ್ವಾಮಿ, ಅನಿತಾ ದಂಪತಿ ಒಟ್ಟಾಗಿ)

ಪತ್ನಿ ಅನಿತಾ ಬಳಿ ಇರುವ ಆಸ್ತಿ: ಅನಿತಾ ಕುಮಾರಸ್ವಾಮಿ ಅವರು ವೈಯಕ್ತಿಕವಾಗಿ 125 ಕೋಟಿಯಷ್ಟು ಆಸ್ತಿ ಗಳಿಸಿದ್ದು, ಹೆಚ್​.ಡಿ ಕುಮಾರಸ್ವಾಮಿಗಿಂತ ಅವರ ಆಸ್ತಿಯೇ ಹೆಚ್ಚಿದೆ.

ಚಿನ್ನಾಭರಣ (ಕುಮಾರಸ್ವಾಮಿ ಬಳಿ): 750 ಗ್ರಾಂ ಚಿನ್ನ, 12.5ಕೆಜಿ ಬೆಳ್ಳಿ, 4 ಕ್ಯಾರಟ್ ವಜ್ರ

ಚಿನ್ನಾಭರಣ (ಪತ್ನಿ ಅನಿತಾ ಬಳಿ): 3.8 ಕೆಜಿ ಚಿನ್ನ, 17ಕೆ.ಜಿ.ಬೆಳ್ಳಿ, 50 ಕ್ಯಾರಟ್ ವಜ್ರ

ವಾಹನ (ಕುಮಾರಸ್ವಾಮಿ ಬಳಿ): ಕುಮಾರಸ್ವಾಮಿ ಹೆಸರಿನಲ್ಲಿ ಟ್ರ್ಯಾಕ್ಟರ್ ಮಾತ್ರ

ವಾಹನ (ಪತ್ನಿ ಅನಿತಾ ಬಳಿ): ಇನೋವಾ ಕ್ರಿಸ್ಟ ಹಾಗೂ ಎಂಟು ಮಾರುತಿ ಎಕೋ ಕಾರುಗಳು

ಕೃಷಿ ಜಮೀನು: 48 ಎಕರೆಗೂ ಹೆಚ್ಚು, 2021–22ನೇ ಸಾಲಿನಲ್ಲಿ ಇದರಿಂದ 47 ಲಕ್ಷದಷ್ಟು ಕೃಷಿ ಆದಾಯ ನೀಡಿದ್ದಾರೆ.

ಹೂಡಿಕೆ: ಅನಿತಾ ಬಳಿ ವಾಣಿಜ್ಯ ಆಸ್ತಿಗಳು ಹೆಚ್ಚಿದ್ದು, ಸಾಕಷ್ಟು ಕಂಪನಿಗಳಲ್ಲೂ ಹೂಡಿಕೆ ಮಾಡಿದ್ದಾರೆ.

ಇದನ್ನೂ ಓದಿ: ನಿಖಿಲ್‌ ಕುಮಾರಸ್ವಾಮಿ ಆಸ್ತಿ ಮೌಲ್ಯ 77 ಕೋಟಿ, ಲ್ಯಾಂಬೊರ್ಗಿನಿ ಸಹಿತ ಐದು ಕಾರುಗಳ ಒಡೆಯ; ಇನ್ನೂ ಏನೆಲ್ಲ ಇವೆ? ಇಲ್ಲಿದೆ ವಿವರ

ನನ್ನನ್ನು ಸೋಲಿಸಲು ಬಿಜೆಪಿ, ಕಾಂಗ್ರೆಸ್​ ಒಳಒಪ್ಪಂದ

ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ರಾಮನಗರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಳಒಪ್ಪಂದ ಮಾಡಿಕೊಂಡಿವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕಹೆಚ್​ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಜಿಲ್ಲೆಯ ಚನ್ನಪಟ್ಟಣದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ನನ್ನನ್ನು ಸೋಲಿಸಲು ರಾಷ್ಟ್ರೀಯ ಪಕ್ಷಗಳು ಒಳಪ್ಪಂದ ಮಾಡಿಕೊಂಡಿವೆ. ನಮ್ಮನ್ನು ಬಿ ಟೀಂ ಅಂತಾರೆ, ಶಿಕಾರಿಪುರದಲ್ಲಿ ಕಾಂಗ್ರೆಸ್​ ನಾಯಕರು ಏನು ಮಾಡಿದ್ದಾರೆ? ಬಿಜೆಪಿ ಅಭ್ಯರ್ಥಿ ಬಿವೈ ವಿಜಯೇಂದ್ರ ಅವರನ್ನು ಗೆಲ್ಲಿಸಲು ಕಾಂಗ್ರೆಸ್ಸಿಗರು ಡಮ್ಮಿ ಕ್ಯಾಂಡಿಡೇಟ್ ಹಾಕಿದ್ದಾರೆ. ಇದಕ್ಕೆಲ್ಲ ಜನ ಉತ್ತರ ನೀಡುತ್ತಾರೆ ಎಂದು ಕಿಡಿಕಾರಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ