ಬಿಜೆಪಿ ನಾಯಕ ಸಿಟಿ ರವಿ ಆಸ್ತಿ ಘೋಷಣೆ: ಎಷ್ಟು ಕೋಟಿಯ ಒಡೆಯ ಗೊತ್ತಾ?

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ. ರವಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಮತ್ತು ಕುಟುಂಬಸ್ಥರ ಹೆಸರಿನಲ್ಲಿರುವ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ.

ಬಿಜೆಪಿ ನಾಯಕ ಸಿಟಿ ರವಿ ಆಸ್ತಿ ಘೋಷಣೆ: ಎಷ್ಟು ಕೋಟಿಯ ಒಡೆಯ ಗೊತ್ತಾ?
ಸಿಟಿ ರವಿ
Follow us
Rakesh Nayak Manchi
|

Updated on:Apr 17, 2023 | 11:03 PM

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ. ರವಿ (CT Ravi) ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತಮ್ಮ ಹಾಗೂ ಕುಟುಂಬಸ್ಥರ ಹೆಸರಿನಲ್ಲಿರುವ ಸ್ವತ್ತುಗಳ (Assets) ವಿವಿರಗಳನ್ನು ಘೋಷಿಸಿದ್ದಾರೆ. ಈ ಬಾರಿ ಚಿಕ್ಕಮಗಳೂರು (Chikkamagaluru) ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿರುವ ಸಿಟಿ ರವಿ ಸಲ್ಲಿಸಿದ ಆಸ್ತಿ ವಿವರದ ಪ್ರಮಾಣ ಪತ್ರದಲ್ಲಿ ತಮ್ಮ ಸ್ಥಿರ, ಚರ ಆಸ್ತಿ ಹಾಗೂ ಸಾಲದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ವಿವರಗಳ ಪ್ರಕಾರ ಸಿಟಿ ರವಿ ಅವರು 4 ಕೋಟಿಯ ಒಡೆಯರಾಗಿದ್ದಾರೆ.

ಸಿ.ಟಿ. ರವಿ ಮತ್ತು ಅವರ ಪತ್ನಿ ಬಳಿ ಇರುವ ನಗದು ವಿವರ

  • ಸಿ.ಟಿ. ರವಿ ಅವರ ಬಳಿ ಇರುವ ನಗದು: 86,431 ರೂ.
  • ಸಿಟಿ ರವಿ ಪತ್ನಿ ಪಲ್ಲವಿ ಅವರ ಬಳಿ ಇರುವ ನಗದು: 7,89,257 ರೂ.

ಸಿಟಿ ರವಿ ಕುಟುಂಬದ ಚರಾಸ್ತಿ ಮತ್ತು ಚಿರಾಸ್ತಿ ವಿವರ

  • ಸಿ.ಟಿ. ರವಿ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ: 1,61,51,302 ರೂ.
  • ಸಿಟಿ ರವಿ ಹೆಸರಿನಲ್ಲಿರುವ ಚರಾಸ್ತಿ ಮೌಲ್ಯ: 2,38,87,384 ರೂ.
  • ಸಿಟಿ ರವಿ ಪತ್ನಿ ಪಲ್ಲವಿ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ: 96,27,829 ರೂ.
  • ಪತ್ನಿ ಪಲ್ಲವಿ ಹೆಸರಿನಲ್ಲಿರುವ ಚರಾಸ್ತಿ ಮೌಲ್ಯ: 84,22,597 ರೂ.

ಇದನ್ನೂ ಓದಿ: ಸಾವಿರ ಕೋಟಿ ಒಡೆಯ ಡಿಕೆ ಶಿವಕುಮಾರ್ ಆಸ್ತಿ ವಿವರ ಘೋಷಣೆ

ಸಿಟಿ ರವಿ ಕುಟುಂಬದ ಜಮೀನು ವಿವರಗಳು

ಸಿ.ಟಿ. ರವಿ ಹೆಸರಿನಲ್ಲಿ ಅರೆನೂರು ಗ್ರಾಮದಲ್ಲಿ 7 ಎಕರೆ ಜಮೀನು ಇದ್ದು, ಪತ್ನಿ ಪಲ್ಲವಿ ಹೆಸರಿನಲ್ಲಿ ಹುಳಿಯಾರಹಳ್ಳಿಯಲ್ಲಿ 1 ಎಕರೆ 35 ಗುಂಟೆ ಜಮೀನು ಇದೆ. ಪತ್ನಿ ಹೆಸರಿನ ಜಮೀನು ಅನ್ಯಕ್ರಾಂತ ಮಾಡಿಸಲಾಗಿದೆ.

ಸಿಟಿ ರವಿ ಕುಟುಂಬದ ಸಾಲ ಮತ್ತು ವಾಹನಗಳು

ಸಿ.ಟಿ. ರವಿಗಿಂತ ಅವರ ಪತ್ನಿ ಬ್ಯಾಂಕ್ ಹಾಗೂ ಇತರೆ ಸಂಸ್ಥೆಗಳಲ್ಲಿ ಹೆಚ್ಚು ಸಾಲ ಮಾಡಿದ್ದಾರೆ. ಸಿ.ಟಿ. ರವಿ 94,57,504 ರೂ. ಸಾಲ ಮಾಡಿದ್ದಾರೆ. ಇವರ ಪತ್ನಿ ಪಲ್ಲವಿ ರವಿ 2,16,99,595 ರೂ. ಸಾಲ ಪಡೆದುಕೊಂಡಿದ್ದಾರೆ. ಸಿ.ಟಿ. ರವಿ ಬಳಿ 9.55 ಲಕ್ಷ ರೂ. ಮೌಲ್ಯದ 2005 ಮಾಡಲ್‌ನ ಸ್ಕಾರ್ಪಿಯೋ ಕಾರು ಇದೆ. ಮಾತ್ರವಲ್ಲದೆ, 65,550 ರೂ. ಮೌಲ್ಯದ ಪಿಸ್ತೂಲ್ ಇದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:03 pm, Mon, 17 April 23