AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿರ ಕೋಟಿ ಒಡೆಯ ಡಿಕೆ ಶಿವಕುಮಾರ್ ಆಸ್ತಿ ವಿವರ ಘೋಷಣೆ

ಕನಕಪುರ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ವೇಳೆ ತಮ್ಮ ಮತ್ತು ಕುಟುಂಬಸ್ಥರ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ.

ಸಾವಿರ ಕೋಟಿ ಒಡೆಯ ಡಿಕೆ ಶಿವಕುಮಾರ್ ಆಸ್ತಿ ವಿವರ ಘೋಷಣೆ
ಡಿಕೆ ಶಿವಕುಮಾರ್ ಮತ್ತು ಅವರ ಕುಟುಂಬಸ್ಥರ ಆಸ್ತಿ ವಿವರ
Rakesh Nayak Manchi
|

Updated on:Apr 17, 2023 | 9:22 PM

Share

ರಾಮನಗರ: ಕನಕಪುರ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ವೇಳೆ ತಮ್ಮ ಮತ್ತು ಕುಟುಂಬಸ್ಥರ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಸಾವಿರ ಕೋಟಿ ಒಡೆಯರಾಗಿರುವ ಡಿಕೆ ಶಿವಕುಮಾರ್ ಅವರ ಹೆಸರಿನಲ್ಲಿ ಚರಾಸ್ತಿ ಎಷ್ಟಿದೆ? ಚಿರಾಸ್ತಿ ಎಷ್ಟಿದೆ? ಇವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಏನೇನಿದೆ? ಎಷ್ಟೆಷ್ಟಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಡಿಕೆ ಶಿವಕುಮಾರ್ ಕುಟುಂಬದ ಚರಾಸ್ತಿ ವಿವರ

  • ಡಿಕೆ ಶಿವಕುಮಾರ್ ಹೆಸರಿನಲ್ಲಿ ಚರಾಸ್ತಿ ಮೌಲ್ಯ: 244.93 ಕೋಟಿ ರೂ.
  • ಪತ್ನಿ ಉಷಾ ಹೆಸರಿನಲ್ಲಿರುವ ಚರಾಸ್ತಿ ಮೌಲ್ಯ: 20.30 ಕೋಟಿ ರೂ.
  • ಡಿಕೆ ಶಿವಕುಮಾರ್ ಪುತ್ರ ಆಕಾಶ್ ಹೆಸರಿನಲ್ಲಿರುವ ಚರಾಸ್ತಿ ಮೌಲ್ಯ: 12.99 ಕೋಟಿ ರೂ.

ಡಿಕೆ ಶಿವಕುಮಾರ್ ಕುಟುಂಬದ ಸ್ಥಿರಾಸ್ತಿ ವಿವರ

  • ಡಿಕೆ ಶಿವಕುಮಾರ್ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ: 970 ಕೋಟಿ ರೂ.
  • ಪತ್ನಿ ಉಷಾ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ: 113.38 ಕೋಟಿ ರೂ.
  • ಪುತ್ರ ಆಕಾಶ್ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ: 54.33 ಕೋಟಿ ರೂ.

ಡಿಕೆ ಶಿವಕುಮಾರ್ ಮತ್ತು ಅವರ ಹೆಸರಿನಲ್ಲಿರುವ ಸಾಲ

  • ಡಿಕೆ ಶಿವಕುಮಾರ್ ಹೆಸರಿನಲ್ಲಿ ಇರುವ ಸಾಲ: 226 ಕೋಟಿ ರೂ.
  • ಪತ್ನಿ ಉಷಾ ಹೆಸರಿನಲ್ಲಿ ಇರುವ ಸಾಲ: 34 ಕೋಟಿ ರೂ.

ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಸಿಬಿಐ ತನಿಖೆ ಪ್ರಶ್ನಿಸಿದ ಅರ್ಜಿ ವಿಚಾರಣೆ ಅಂತ್ಯ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಡಿಕೆ ಶಿವಕುಮಾರ್ ಕುಟುಂಬದ ಒಟ್ಟು ಆಸ್ತಿ

  • ಡಿಕೆ ಶಿವಕುಮಾರ್ ಹೆಸರಿನಲ್ಲಿ ಇರುವ ಒಟ್ಟು ಆಸ್ತಿ ಮೌಲ್ಯ: 1,214.93 ಕೋಟಿ ರೂ.
  • ಪತ್ನಿ ಉಷಾ ಹೆಸರಿನಲ್ಲಿರುವ ಒಟ್ಟು ಆಸ್ತಿ ಮೌಲ್ಯ: 133 ಕೋಟಿ ರೂ.
  • ಮಗ ಆಕಾಶ್ ಹೆಸರಿನಲ್ಲಿರುವ ಒಟ್ಟು ಆಸ್ತಿ ಮೌಲ್ಯ: 66 ಕೋಟಿ ರೂ.
  • ಕುಟುಂಬದ ಒಟ್ಟು ಆಸ್ತಿ ಮೌಲ್ಯ: 1,414 ಕೋಟಿ ರೂ.

ಡಿಕೆ ಶಿವಕುಮಾರ್ ಬಳಿ ಬ್ರಾಂಡೆಡ್ ವಾಚ್​ಗಳು

  • ಯೂಬ್ಲೇಟ್ ವಾಚ್ ಮೌಲ್ಯ: 23 ಲಕ್ಷ
  • ರೋಲೆಕ್ಸ್ ವಾಚ್ ಮೌಲ್ಯ: 9 ಲಕ್ಷ ರೂ.

ಡಿಕೆ ಶಿವಕುಮಾರ್ ಆಸ್ತಿ ಮೌಲ್ಯ

  • 2013ರಲ್ಲಿ ಕುಟುಂಬದ ಆಸ್ತಿ ಮೌಲ್ಯ 251 ಕೋಟಿ
  • 2018ರಲ್ಲಿ ಒಟ್ಟು ಕುಟುಂಬದ ಆಸ್ತಿ‌ಮೌಲ್ಯ 840 ಕೋಟಿ
  • 2013ರಲ್ಲಿ ಕುಟುಂಬದ ಒಟ್ಟು ಆಸ್ತಿ ಮೌಲ್ಯ: 1,414 ಕೋಟಿ ರೂ.

ಡಿಕೆ ಶಿವಕುಮಾರ್ ವಾರ್ಷಿಕ ಆದಾಯ

  • ಡಿಕೆ ಶಿವಕುಮಾರ್ ವಾರ್ಷಿಕ ಆದಾಯ: 14.24 ಕೋಟಿ ರೂ.
  • ಪತ್ನಿ ಉಷಾ ವಾರ್ಷಿಕ ಆದಾಯ: 1.9 ಕೋಟಿ ರೂ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:22 pm, Mon, 17 April 23

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ