ಹೆಚ್​.ಡಿ ರೇವಣ್ಣ ಆಸ್ತಿ ವಿವರ ಬಹಿರಂಗ: ದೊಡ್ಡಗೌಡರ ಸೊಸೆ ಭವಾನಿ ಬಳಿ ಕೆಜಿಗಟ್ಟಲೆ ಬಂಗಾರ, ಬೆಳ್ಳಿ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆ ಸೋಮವಾರ ಹೊಳೆನರಸೀಪುರ ಜೆಡಿಎಸ್ ಅಭ್ಯರ್ಥಿಯಾಗಿ‌ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ನಾಮಪತ್ರ ಸಲ್ಲಿಸಿದ್ದಾರೆ.

ಹೆಚ್​.ಡಿ ರೇವಣ್ಣ ಆಸ್ತಿ ವಿವರ ಬಹಿರಂಗ: ದೊಡ್ಡಗೌಡರ ಸೊಸೆ ಭವಾನಿ ಬಳಿ ಕೆಜಿಗಟ್ಟಲೆ ಬಂಗಾರ, ಬೆಳ್ಳಿ
ಭವಾನಿ ರೇವಣ್ಣ, ಹೆಚ್​.ಡಿ ರೇವಣ್ಣ
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 17, 2023 | 8:45 PM

ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆ ಸೋಮವಾರ ಹೊಳೆನರಸೀಪುರ ಜೆಡಿಎಸ್ ಅಭ್ಯರ್ಥಿಯಾಗಿ‌ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ರೇವಣ್ಣ ಫ್ಯಾಮಿಲಿ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿರುವ ಲಕ್ಷ್ಮಿ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರೇವಣ್ಣಗೆ ಪತ್ನಿ ಭವಾನಿ ರೇವಣ್ಣ, ಪುತ್ರರಾದ ಪ್ರಜ್ವಲ್ ಹಾಗೂ ಸೂರಜ್ ಸಾಥ್​ ನೀಡಿದರು. ನಾಮಪತ್ರ ಸಲ್ಲಿಸಿರುವ ಹಿನ್ನೆಲೆ ಹೆಚ್​.ಡಿ. ರೇವಣ್ಣ ಆಸ್ತಿ ವಿವರ ಬಹಿರಂಗವಾಗಿದ್ದು, ಕೋಟಿ ಕೋಟಿ ಆಸ್ತಿಯನ್ನು ರೇವಣ್ಣ ಭವಾನಿ ದಂಪತಿ ಹೊಂದಿದ್ದಾರೆ.

ರೇವಣ್ಣ ಭವಾನಿ ದಂಪತಿ ಹೊಂದಿರುವ ಆಸ್ತಿ ವಿವರ ಹೀಗಿದೆ

  1. ಒಟ್ಟು ಆಸ್ತಿ: 43 ಕೋಟಿ,37 ಲಕ್ಷದ,56 ಸಾವಿರದ 441 ರೂ ಮೌಲ್ಯದ ಆಸ್ತಿಯನ್ನು ರೇವಣ್ಣ ಹೊಂದಿದ್ದಾರೆ.
  2. ಘೋಷಣೆ ಮಾಡಿರುವ ಆಸ್ತಿ: 38 ಕೋಟಿ,25 ಲಕ್ಷದ,22 ಸಾವಿರದ 777 ರೂ.
  3. ಚರಾಸ್ತಿ: ಸುಮಾರು 7.36 ಕೋಟಿ ರೂ.
  4. ಸ್ಥಿರಾಸ್ತಿ: 36.01 ಕೋಟಿ ರೂ.
  5. ಚರಾಸ್ತಿ (ಭವಾನಿ ರೇವಣ್ಣ ಬಳಿ): 8.66 ಕೋಟಿ ರೂ. ( ಪತಿಗಿಂತ ಒಂದು ಕೋಟಿ ಹೆಚ್ಚಿನ ಮೌಲ್ಯದ ಚರಾಸ್ಥಿ ಹೊಂದಿದ್ದಾರೆ.)
  6. ಸ್ಥಿರಾಸ್ತಿ (ಭವಾನಿ ರೇವಣ್ಣ ಬಳಿ): 29.58 ಕೋಟಿ ರೂ.
  7. ಚಿನ್ನಾಭರಣ (ಭವಾನಿ ರೇವಣ್ಣ ಬಳಿ): ಒಟ್ಟು ಸುಮಾರು 2.20 ಕೋಟಿ ರೂ. (46 ಕೆಜಿ ಬೆಳ್ಳಿ, ಸುಮಾರು 3 ಕೆಜಿ ಚಿನ್ನ, 25 ಕ್ಯಾರೆಟ್ ವಜ್ರದ ಆಭರಣ ಸೇರಿದಂತೆ)
  8. ಚಿನ್ನಾಭರಣ (ರೇವಣ್ಣ ಬಳಿ): 320 ಗ್ರಾಂ
  9. ಸಾಲ: ಕೋಟಿ ಕೋಟಿ ಆಸ್ತಿ ಇದ್ದರು ರೇವಣ್ಣ 9 ಕೋಟಿ ರೂ ಸಾಲ ಮಾಡಿದ್ದಾರೆ. (ತಾಯಿ ಚನ್ನಮ್ಮರಿಂದ 60 ಲಕ್ಷ, ತಂದೆ ದೇವೇಗೌಡರಿಂದ 31 ಲಕ್ಷ, ಸಹೋದರ ರಮೇಶ್​ರಿಂದ 4 ಕೋಟಿ ಮತ್ತು ಮನೆ ನಿರ್ಮಾಣಕ್ಕೆ 2 ಕೋಟಿ ಸಾಲ ಮಾಡಿದ್ದಾರೆ)
  10. ಸಾಲ: ಭವಾನಿ ರೇವಣ್ಣ ಕೂಡ 5.28 ಕೋಟಿ ರೂ. ಸಾಲಗಾರ್ತಿ.

ಇದನ್ನೂ ಓದಿ: Hassan: ಜೆಡಿಎಸ್ ಟಿಕೆಟ್ ಫೈಟ್; ಅಭ್ಯರ್ಥಿ ಘೋಷಣೆಗೂ ಮುನ್ನವೇ ಸ್ವರೂಪ್​ಗೆ ಬಿ ಫಾರಂ ನೀಡಿದ ಕುಮಾರಸ್ವಾಮಿ

ಹಾಸನ ಕ್ಷೇತ್ರದ ಟಿಕೆಟ್ ಅನ್ನು ಭವಾನಿ ರೇವಣ್ಣ ಅವರಿಗೆ ಕೊಡದಿದ್ದರೆ ತಮಗೂ ಹೊಳೆನರಸೀಪುರ ಕ್ಷೇತ್ರದ ಟಿಕೆಟ್ ಬೇಡ ಎಂದು ಹೆಚ್​ಡಿ ರೇವಣ್ಣ ಇತ್ತೀಚೆಗೆ ಪಟ್ಟುಹಿಡಿದಿದ್ದರು. ಮತ್ತೊಂದೆಡೆ, ಸಾಮಾನ್ಯ ಕಾರ್ಯಕರ್ತನಿಗೇ ಹಾಸನದ ಟಿಕೆಟ್ ನೀಡುತ್ತೇನೆ ಎಂಬ ನಿಲುವಿಗೆ ಬದ್ಧ ಎಂದು ಹೆಚ್​ಡಿ ಕುಮಾರಸ್ವಾಮಿ ಪುನರುಚ್ಚರಿಸಿದ್ದರು. ಇದೀಗ ಸ್ವರೂಪ್​ಗೆ ಬಿ ಫಾರಂ ನೀಡಿರುವುದು ಕುತೂಹಲ ಹೆಚ್ಚಿಸಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:45 pm, Mon, 17 April 23