ಜೆಡಿಎಸ್ ಗೆದ್ರೆ ಮುಸ್ಲಿಮರ ಮೀಸಲಾತಿಯನ್ನು ಮತ್ತೆ ವಾಪಾಸ್ ಕೊಡುವ‌ ಪ್ರಯತ್ನ ಮಾಡ್ತೇನೆ -ಹೆಚ್​ಡಿ ಕುಮಾರಸ್ವಾಮಿ

ಹೆಚ್​ಡಿ ಕುಮಾರಸ್ವಾಮಿ ಸ್ವಕೇತ್ರ ಚನ್ನಪಟ್ಟಣದಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಅವರು, ಜೆಡಿಎಸ್ ಸರ್ಕಾರ ಬಂದರೆ ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ವಾಪಾಸ್ ಕೊಡುವುದಾಗಿ ಭರವಸೆ ನೀಡಿದ್ದಾರೆ.

ಜೆಡಿಎಸ್ ಗೆದ್ರೆ ಮುಸ್ಲಿಮರ ಮೀಸಲಾತಿಯನ್ನು ಮತ್ತೆ ವಾಪಾಸ್ ಕೊಡುವ‌ ಪ್ರಯತ್ನ ಮಾಡ್ತೇನೆ -ಹೆಚ್​ಡಿ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ
Follow us
ಆಯೇಷಾ ಬಾನು
|

Updated on: May 08, 2023 | 1:33 PM

ರಾಮನಗರ: ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿದ್ದು H.D.ದೇವೇಗೌಡರು(HD Deve Gowda). ಮುಸ್ಲಿಮರ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಕಿತ್ತುಕೊಂಡಿದೆ. ಅದನ್ನು ಮತ್ತೆ ವಾಪಾಸ್ ಕೊಡುವ‌ ಪ್ರಯತ್ನ ಮಾಡ್ತೇನೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ(HD Kumaraswamy) ಕೇಳಿಕೆ ನೀಡಿದ್ದಾರೆ. ಚುನಾವಣೆ ಪ್ರಚಾರಕ್ಕೆ ಇಂದು ಕೊನೆ ದಿನವಾಗಿದ್ದು ಹೆಚ್​ಡಿ ಕುಮಾರಸ್ವಾಮಿ ಸ್ವಕೇತ್ರ ಚನ್ನಪಟ್ಟಣದಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಅವರು, ಜೆಡಿಎಸ್ ಸರ್ಕಾರ ಬಂದರೆ ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ವಾಪಾಸ್ ಕೊಡುವುದಾಗಿ ಭರವಸೆ ನೀಡಿದ್ದಾರೆ.

ನನ್ನ ದೇಹ ರಾಜ್ಯಾದ್ಯಂತ ಓಡಾಡ್ತಿದ್ರೂ ಮನಸ್ಸು ಚನ್ನಪಟ್ಟಣದಲ್ಲಿತ್ತು. ಇವತ್ತು ಪ್ರಚಾರ ಕೊನೆ ಆಗ್ತಿದೆ. ನಾನು ಇಲ್ಲದೇ ಇದ್ದರೂ ಚನ್ನಪಟ್ಟಣದಲ್ಲಿ ಸಂಘಟನೆ ಮಾಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿದ್ದು H.D.ದೇವೇಗೌಡರು. ಮುಸ್ಲಿಮರ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಕಿತ್ತುಕೊಂಡಿದೆ. ಅದನ್ನು ಮತ್ತೆ ವಾಪಾಸ್ ಕೊಡುವ‌ ಪ್ರಯತ್ನ ಮಾಡ್ತೇನೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಗೆದ್ದು ಮುಖ್ಯಮಂತ್ರಿ ಆಗ್ತೇನೆ. ರಾಮನಗರ ಜಿಲ್ಲೆ ಚನ್ನಪಟ್ಟಣವನ್ನು ಮಾದಿ ಕ್ಷೇತ್ರವಾಗಿ ಮಾಡ್ತೇನೆ ಎಂದರು.

ಇದನ್ನೂ ಓದಿ: ಬಂಗಾರಪೇಟೆಯಲ್ಲಿ 2.54 ಕೋಟಿ ರೂ. ಪತ್ತೆ ಕೇಸ್: ಕಾಂಗ್ರೆಸ್​ ಅಭ್ಯರ್ಥಿಗೆ ಐಟಿ ನೋಟಿಸ್

ಇನ್ನು ಶೇರು ಸರ್ಕಲ್ ಬಳಿ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ, ನನ್ನ ಚುನಾವಣೆಯನ್ನು ಮನೆಯ ಮಗನ ರೀತಿ ಗೆಲಸ್ತೀರಿ ಅಂತ ಇಡೀ ರಾಜ್ಯದಲ್ಲಿ ಏಕಾಂಗಿಯಾಗಿ ತಿರುಗಾಡಿದ್ದೇನೆ. ನಾಡಿನ ಜನತೆ ವಿಶ್ವಾಸ ಗಳಿಸಿದ್ದೇನೆ ಅಂತ ವಿಶ್ವಾಸ ಇಟ್ಟಿದ್ದೇನೆ. ಅದಕ್ಕೆ ಕೊನೆಯದಾಗಿ ಇಲ್ಲಿ ಬಂದಿದ್ದೇನೆ. ಹಾಸನದಲ್ಲಿ ಜನ್ಮ ತಾಳಿದ್ರೂ, ರಾಜಕೀಯ ಜನ್ಮ ಕೊಟ್ಟ ಜಿಲ್ಲೆ ಇದು. ಈ ಚುನಾವಣೆಯಲ್ಲಿ ಬಹಳಷ್ಟು ಅಪಪ್ರಚಾರ ಮಾಡಿದ್ದಾರೆ. ಕಳೆದ ಬಾರಿ 14 ತಿಂಗಳು ಮುಖ್ಯಮಂತ್ರಿ ಆಗಿದ್ದೆ. ಇಲ್ಲಿನ ಎದುರಾಳಿ ನನ್ನ ಇಳಿಸಲಿಕ್ಕೆ ಬಹಳಷ್ಟು ಪ್ರಯತ್ನ ಮಾಡಿದ್ರು. ಕ್ರಿಕೆಟ್ ಬೆಟ್ಟಿಂಗ್ ಹಣ ಉಪಯೋಗಿಸಿ, ಯುವಕರ ಬಾಳು ಹಾಳು ಮಾಡಿದ್ರು. ನನ್ನ ಆರೋಗ್ಯ ಲೆಕ್ಕಿಸದೇ 18 ಗಂಟೆ ಕೆಲಸ ಮಾಡಿದ್ದೇನೆ. ತಾಯಂದಿರು ಈ ಬಾರಿ ನಮಗೆ ಆಶೀರ್ವಾದ ಮಾಡ್ತೀನಿ ಅಂತ ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ನೀವು ಸೋಲ್ತೀರಿ ಅಂದ್ರು. ಹಳ್ಳಿ ಹಳ್ಳಿಗೆ ಹೋಗಬೇಕು ಅಂದ್ರು.

ಆದರೆ ಅದಕ್ಕೆ ನಾನ್ ಹೇಳಿದೆ, ಇದು ನನಗೆ ರಾಜಕೀಯ ಜನ್ಮ ಕೊಟ್ಟ ಸ್ಥಳ. ಚನ್ನಪಟ್ಟಣ ರಾಮನಗರ ನನಗೆ ಎರಡು ಕಣ್ಣುಗಳು ಇದ್ದ ಹಾಗೆ. ಇವೆರಡು ಕ್ಷೇತ್ರವನ್ನು ಅವಳಿ ನಗರ ಮಾಡಿ ಅಂತ ಮನವಿ ಕೂಡ ಮಾಡಿಕೊಂಡಿದ್ದಾರೆ. ಈ ಬಾರಿ ಯಾರೂ ನನ್ನ ಮುಖ್ಯಮಂತ್ರಿ ಆಗೋದಕ್ಕೆ ತಪ್ಪಿಸಲು ಆಗಲ್ಲ. 65 ವಯಸ್ಸಿನ ತಂದೆ ತಾಯಿಗಳಿಗೆ 5 ಸಾವಿರ ಮಾಸಾಶನ ಕೊಡುತ್ತೇನೆ. ವಿಧವೆ, ಗಂಡ ಬಿಟ್ಟವರಿಗೆ ತಿಂಗಳಿಗೆ 2 ಸಾವಿರ ಕೊಡುತ್ತೇವೆ. ಹಾಲಿನ ಸಬ್ಸಿಡಿ 8‌ ಮಾಡುತ್ತೇನೆ. ಕಳೆದ ಬಾರಿ ಸ್ತ್ರೀ ಶಕ್ತಿ ಸಾಲ ಮನ್ನ ಮಾಡುತ್ತೇನೆ ಅಂತ ಹೇಳಿದ್ದೇನೆ ಅಂತ ಅಪಪ್ರಚಾರ ಮಾಡಿದ್ದಾರೆ. ಆದರೆ ಕಳೆದ ಬಾರಿ ನಾನು ಸ್ತ್ರೀ ಶಕ್ತಿ ಸಾಲ ಮನ್ನ ಮಾಡ್ತೀನಿ ಅಂತ ಹೇಳಿರಲಿಲ್ಲ. ಸರಕಾರ ರಚನೆ ಆದ ತಕ್ಷಣವೇ ನಾನು ಸ್ತ್ರೀ ಶಕ್ತಿ ಸಾಲ ಮನ್ನ ಮಾಡ್ತೇನೆ ಎಂದರು.

ರಾಮನಗರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ