ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಭಾಗ್ಯ ಇದ್ಯಾ? ದ್ವಾರಕನಾಥ್ ಗುರೂಜಿ ಹೇಳಿದ್ದಿಷ್ಟು

|

Updated on: May 19, 2023 | 5:28 PM

‘ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ತಪ್ಪಿಹೋಗುವ ಮಾತೆ ಇಲ್ಲ, ಡಿಕೆ ಶಿವಕುಮಾರ್ ಅವರ ಜಾತಕದಲ್ಲಿ, ಅವರು ಮುಖ್ಯಮಂತ್ರಿ ಆಗುವ ಯೋಗವಿದೆ ಎಂದು ದ್ವಾರಕಾನಾಥ ಗುರೂಜಿ ಎಂದೇ ಖ್ಯಾತರಾಗಿರುವ ವೆಲ್ಲೂರು ಶಂಕರನಾರಾಯಣ ದ್ವಾರಕಾನಾಥ್ ಗುರೂಜಿ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಭಾಗ್ಯ ಇದ್ಯಾ? ದ್ವಾರಕನಾಥ್ ಗುರೂಜಿ ಹೇಳಿದ್ದಿಷ್ಟು
ದ್ವಾರಕಾನಾಥ ಗುರೂಜಿ
Follow us on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಮೇ.13 ರಂದು ಈಗಾಗಲೇ ಹೊರಬಂದಿದ್ದು, ಕಾಂಗ್ರೆಸ್​ ಸಂಪೂರ್ಣ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿಯಲು ತಯಾರಿಗಿದೆ. ಅದರಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್(DK Shivakumar) ನಡುವೆ ತೀವ್ರ ಪೈಪೋಟಿ ಏರ್ಪಟಿದ್ದು, ಇದೀಗ ಹೈಕಮಾಂಡ್​ ಸಿದ್ದರಾಮಯ್ಯನವರಿಗೆ ಸಿಎಂ ಸ್ಥಾನ ನೀಡಿದೆ. ಈ ಕುರಿತು ಮಾತನಾಡಿದ ದ್ವಾರಕಾನಾಥ ಗುರೂಜಿ ಎಂದೇ ಖ್ಯಾತರಾಗಿರುವ ವೆಲ್ಲೂರು ಶಂಕರನಾರಾಯಣ ದ್ವಾರಕಾನಾಥ್ ಗುರೂಜಿ (Dwarakanath Guruji) ‘ಅವರಿಗೆ ಅಧಿಕಾರ ತಪ್ಪಿಹೋಗುವ ಮಾತೆ ಇಲ್ಲ, ಡಿಕೆ ಶಿವಕುಮಾರ್ ಅವರ ಜಾತಕದಲ್ಲಿ ಅವರು ಮುಖ್ಯಮಂತ್ರಿ ಆಗುವ ಯೋಗವಿದೆ ಎಂದಿದ್ದಾರೆ.

‘ಡಿಕೆ ಶಿವಕುಮಾರ್ ಅವರಿಗೆ 2.5 ವರ್ಷದ ನಂತರ ಅಧಿಕಾರದ ಯೋಗ ಇರೋದಿಲ್ಲ ಎನ್ನುವ ಕೆಲವರ ವಾದದ ಕುರಿತು ದ್ವಾರಕನಾಥ್ ಗುರೂಜಿಯವರು ‘ಈ ವಾದವನ್ನು ನಾನು ಸಾರ ಸಗಟಾಗಿ ತೆಗೆದು ಹಾಕುತ್ತೆನೆ. ಅವರಿಗೆ ರಾಜ ಯೋಗವಿದೆ ಅವರು ಈ ಕರ್ನಾಟಕ ರಾಜ್ಯದ ರಾಜನಾಗಿ ಆಡಳಿತ ನಡೆಸೆ ನಡೆಸುತ್ತಾರೆ. ನೀವು ಯಾವ ಜೋತಿಷಿಯನ್ನು ಬೇಕಾದ್ರು ಕರೆದುಕೊಂಡು ಬನ್ನಿ ನಾನು ಅವರಿಗೆ ಫ್ರೂ ಮಾಡುತ್ತೆನೆ ಎಂದಿದ್ದಾರೆ.

ಇದನ್ನೂ ಓದಿ:Karnataka Politics: ಪದಗ್ರಹಣ ಕಾರ್ಯಕ್ರಮಕ್ಕೆ ಎಲ್ಲರಿಗೂ ಆಹ್ವಾನ ನೀಡಿದ ಡಿಕೆ ಶಿವಕುಮಾರ್

ವಾಸ್ತು ಪ್ರಕಾರ ಪ್ರತ್ಯೇಕವಾಗಿ ಶಾಸಕಾಂಗ ಸಭೆಗೆ ಎಂಟ್ರಿಕೊಟ್ಟಿದ್ದ ಡಿಕೆಶಿ-ಸಿದ್ದು

ಇನ್ನು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ವೇಳೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕಾಂಗ ಸಭೆಗೆ ಪ್ರತ್ಯೇಕ ದ್ವಾರಗಳ ಮೂಲಕ ಎಂಟ್ರಿ ಕೊಟ್ಟಿದ್ದರು. ವಾಸ್ತು ಪ್ರಕಾರ ಕೆಪಿಸಿಸಿ ಕಛೇರಿಯ ಎಡಭಾಗದಲ್ಲಿರುವ ಪ್ರತ್ಯೇಕ ದ್ವಾರದಲ್ಲಿ ಡಿಕೆ ಶಿವಕುಮಾರ್ ಅವರು ಎಂಟ್ರಿಕೊಟ್ಟರೆ, ಎಲ್ಲಾ ಶಾಸಕರು ಬಂದ ಇಂದಿರಾಗಾಂಧಿ ಸಭಾಂಗಣದ ದ್ವಾರದಿಂದ ಸಿದ್ದರಾಮಯ್ಯ ಎಂಟ್ರಿ ಕೊಟ್ಟಿದ್ದರು. ಕಚೇರಿ ಸುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಶಾಸಕಾಂಗ ಪಕ್ಷದ ಸಭೆ ಬಳಿಕ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮತ್ತಿತರರು ರಾಜಭವನಕ್ಕೆ ತೆರಳಿದ್ದರು.

ಡಿ.ಕೆ.ಶಿವಕುಮಾರ್ ತ್ಯಾಗಕ್ಕೆ ದೊಡ್ಡ ಹುದ್ದೆ ಕೂಡ ಸಿಗಲಿದೆ; ಸುಶೀಲ್‌ಕುಮಾರ್ ಶಿಂಧೆ

ಇನ್ನು ಈ ಸಭೆಯಲ್ಲಿ ಮಾತನಾಡಿದ್ದ ಎಐಸಿಸಿ ವೀಕ್ಷಕ ಸುಶೀಲ್‌ಕುಮಾರ್ ಶಿಂಧೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತ್ಯಾಗವನ್ನು ಪಕ್ಷ ಮರೆಯಲ್ಲ. ಅವರ ತ್ಯಾಗಕ್ಕೆ ದೊಡ್ಡ ಹುದ್ದೆ ಕೂಡ ಸಿಗಲಿದೆ ಎಂದಿದ್ದರು. ಮಹಾರಾಷ್ಟ್ರದಲ್ಲಿ ನಾನು ಪಿಸಿಸಿ ಅಧ್ಯಕ್ಷರಾಗಿದ್ದಾಗ ಅಧಿಕಾರಕ್ಕೆ ಬಂದಿದ್ದೇವೆ. ಆಗ ನನಗೆ ಸಿಎಂ ಸ್ಥಾನ ಕೊಟ್ಟಿರಲಿಲ್ಲ, ಬಳಿಕ ರಾಜ್ಯಪಾಲರ ಹುದ್ದೆ ನೀಡಿದ್ದರು ಎಂದು ನೆನಪಿಸಿಕೊಂಡರು. ಇವರ ಮಾತು ಜೊತೆಗೆ ಇದೀಗ ದ್ವಾರಕನಾಥ್ ಗುರೂಜಿಯವರ ಹೇಳಿಕೆ ಬಾರಿ ಸಂಚಲನ ಮೂಡಿಸಿದೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ