AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hubballi: ಯಾಕೆ ಈ ಬಡಪಾಯಿ ಮೇಲೆ ಮುಗಿ ಬಿದ್ದಿದ್ದಾರೆ ಎನ್ನುತ್ತಲ್ಲೇ ಬಿಜೆಪಿ ನಾಯಕರ ಟಾರ್ಗೆಟ್​ಗೆ ಜಗದೀಶ್​ ಶೆಟ್ಟರ್ ತಿರುಗೇಟು

ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹೌದು ಇತ್ತಿಚೆಗೆ ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದ್ದ ಜಗದೀಶ್​ ಶೆಟ್ಟರ್​ ಅವರನ್ನ ಸೋಲಿಸಬೇಕು ಎಂದು ಬಿಜೆಪಿಯ ಗಟಾನುಗಟಿ ನಾಯಕರು ಪಣತೊಟ್ಟಿದ್ದಾರೆ. ​

Hubballi: ಯಾಕೆ ಈ ಬಡಪಾಯಿ ಮೇಲೆ ಮುಗಿ ಬಿದ್ದಿದ್ದಾರೆ ಎನ್ನುತ್ತಲ್ಲೇ ಬಿಜೆಪಿ ನಾಯಕರ ಟಾರ್ಗೆಟ್​ಗೆ  ಜಗದೀಶ್​ ಶೆಟ್ಟರ್ ತಿರುಗೇಟು
ಬಿಜೆಪಿ ವಿರುದ್ದ ಜಗದೀಶ್​ ಶೆಟ್ಟರ್​ ವಾಗ್ದಾಳಿ
ಕಿರಣ್ ಹನುಮಂತ್​ ಮಾದಾರ್
|

Updated on: Apr 26, 2023 | 2:05 PM

Share

ಹುಬ್ಬಳ್ಳಿ: ವಿಧಾನಸಭೆ ಚುನಾವಣೆ(Karnataka Assembly Election)ಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಹುಬ್ಬಳ್ಳಿ ಧಾರವಾಡ ಸೆಂಟ್ರಲ್(hubli Dharwad Central) ಕ್ಷೇತ್ರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹೌದು ಇತ್ತಿಚೆಗೆ ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದ್ದ ಜಗದೀಶ್​ ಶೆಟ್ಟರ್​(Jagadish Shettar) ಅವರನ್ನ ಸೋಲಿಸಬೇಕು ಎಂದು ಬಿಜೆಪಿಯ ಗಟಾನುಗಟಿ ನಾಯಕರು ಪಣತೊಟ್ಟಿದ್ದಾರೆ. ಅದರಂತೆ ಅಮಿತ್ ಶಾ(Amit Shah), ಹುಬ್ಬಳ್ಳಿ, ಯಾದಗಿರಿಯಲ್ಲಿ ಶೆಟ್ಟರ್​ ಅವರನ್ನ ಸೋಲಿಸಬೇಕೆಂದು ಹೇಳಿದ್ದು, ಇದರ ಜೊತೆಗೆ ಸ್ಮ್ರತಿ ಇರಾನಿ, ಯಡಿಯೂರಪ್ಪ ಕೂಡ ಅದನ್ನೇ ಹೇಳಿದ್ದಾರೆ. ಈ ಬಗ್ಗೆ ಆಂದೋಲನವನ್ನೇ ಬಿಜೆಪಿ ಶುರುಮಾಡಿದ್ದು, ಈ ಕುರಿತು ‘ಯಾಕೆ ಈ ಬಡಪಾಯಿ ಮೇಲೆ ಮುಗಿ ಬಿದ್ದಿದ್ದಾರೆ, ಸಣ್ಣ ವ್ಯಕ್ತಿ ಮೇಲೆ ಯಾಕೆ ಅಟ್ಯಾಕ್ ಮಾಡ್ತಾರೆ ಎಂದು ಶೆಟ್ಟರ್ ಪ್ರಶ್ನಿಸಿದ್ದಾರೆ.

ಇಂದು(ಏ.26) ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ನಾನು ಸವದಿ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದೇವೆ. ಆಯನೂರು ಮಂಜುನಾಥ ಕೂಡ ಜೆಡಿಎಸ್ ಸೇರಿದ್ದಾರೆ. ಇದರ ಜೊತೆಗೆ ಯಡಿಯೂರಪ್ಪ ಆಪ್ತ ಸಂತೋಷ್ ಕೂಡ ಜೆಡಿಎಸ್ ಸೇರಿದ್ದಾರೆ. ರಾಜಕೀಯದಲ್ಲಿ ಬೇರೆ ಪಕ್ಷಕ್ಕೆ ಹೋಗೋದು ಸಹಜ ಪ್ರಕ್ರಿಯೆ. ಬಿಜೆಪಿಯವರು ಜಗದೀಶ್ ಶೆಟ್ಟರ್ ಕಾಂಗ್ರೆಸ್​ಗೆ ಸೇರಿರೋದು ಅಪರಾಧ ಎನ್ನುವ ಹಾಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ:Karnataka Assembly Polls: ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬಸವರಾಜ ಬೊಮ್ಮಾಯಿಗೆ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಎದುರಾದ ಕ್ಷಣ ಹೇಗಿತ್ತು ಗೊತ್ತಾ?

ಶೆಟ್ಟರ್ ಐಡಿಯಾಲಜಿ(ಸಿದ್ದಾಂತ) ಬಿಟ್ಟು ಹೋಗಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರ ‘ ಯಡಿಯೂರಪ್ಪ ಅವರ ಬಗ್ಗೆ ನನಗೆ ಗೌರವ ಇದೆ. ಅವರೇ ಕೆಜಿಪಿ ಕಟ್ಟಿದ್ದರು. ಐಡಿಯಾಲಜಿ ಬಗ್ಗೆ ಮಾತಾಡೋಕೆ ಅವರಿಗೆ ನೈತಿಕತೆ ಇಲ್ಲ. ಕಾಂಗ್ರೆಸ್​ನಿಂದ ಬಂದು ಬಿಜೆಪಿ ಸರ್ಕಾರ ಮಾಡಿರೋದು ಯಾವ ಐಡಿಯಾಲಜಿ. ನಾನು ಪಕ್ಷದ್ರೋಹಿ ಕೆಲಸ ಮಾಡಿಲ್ಲ ಎನ್ನುವ ಮೂಲಕ ಯಡಿಯೂರಪ್ಪ ಅವರ ಟೀಕೆಗೆ ತಿರುಗೇಟು ನೀಡಿದ್ದಾರೆ.

‘ಯಡಿಯೂರಪ್ಪ ಬಗ್ಗೆ ನಾನು ಎಂದು ಟೀಕೆ ಮಾಡಿಲ್ಲ. ಇದೇ ಯಡಿಯೂರಪ್ಪ ಜಗದೀಶ್ ಶೆಟ್ಟರ್​ಗೆ ಟಿಕೆಟ್ ಕೊಡಬೇಕು ಎಂದಿದ್ರು. ಅವರು ನನ್ನ ಟಿಕೆಟ್ ಬಗ್ಗೆ ಬಹಳ ಪ್ರಯತ್ನ ಮಾಡಿದ್ದಾರೆ. ಅವರ ಟೀಕೆ ನನಗೆ ಆಶೀರ್ವಾದ. ಯಡಿಯೂರಪ್ಪ ಅವರು ನನಗೆ ಟಿಕೆಟ್ ಕೊಡಸ್ತೀನಿ‌ ಎಂದು ಅಸಹಾಯಕರಾದರು. ನಾನು ನೇರವಾಗಿ ಮಾತಾಡಿದ್ದು ಬಿಎಲ್ ಸಂತೋಷ್ ಬಗ್ಗೆ. ಆದ್ರೆ, ಅವರು ಈ ಬಗ್ಗೆ ಎಲ್ಲಿಯೂ ಮಾತಾಡಿಲ್ಲ. ಮತ್ತೊಬ್ಬರ ಹೆಗಲ ಮೇಲೆ ಗುಂಡು ಇಟ್ಟು ಹೊಡೆದಿದ್ದಾರೆ. ಯಡಿಯೂರಪ್ಪ ಮಾತಾಡೋಕೆ ಸಂತೋಷ್ ಕಾರಣ ಎಂದು ಬಿಎಲ್ ಸಂತೋಷ್ ವಿರುದ್ದ ಶೆಟ್ಟರ್ ಗರಂ ಆಗಿದ್ದಾರೆ.

ಇದನ್ನೂ ಓದಿ:ಲಕ್ಷ್ಮಣ ಸವದಿ ರಾಜಕೀಯ ಜೀವನ ಅಂತ್ಯಗೊಳಿಸಲು ರಮೇಶ್ ಜಾರಕಿಹೊಳಿ ಪಣ, ಪ್ರಮುಖ ಹುದ್ದೆ ಕಿತ್ತುಕೊಳ್ಳಲು ಮೆಗಾ ಪ್ಲಾನ್

ಒಬ್ಬ ಲಿಂಗಾಯತ ನಾಯಕನ ವಿರುದ್ದ ಮತ್ತೊಬ್ಬ ಲಿಂಗಾಯತ ನಾಯಕನನ್ನ ಬೈಸಿದ್ದಾರೆ. ಅವರ ಬೈಗುಳದಿಂದಲೇ ನಾನು ಗೆಲ್ತೀನಿ, ಯಡಿಯೂರಪ್ಪ ಕೆಜಿಪಿ ಕಟ್ಟಿದಾಗ ಬೊಮ್ಮಾಯಿಗೆ ಬೈದಿದ್ರು. ಈಗ ಅವರು ಸಿಎಂ. ನಾನು ಹಿಂದಿನ ಚುನಾವಣೆಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ತೀನಿ ಎನ್ನುವ ಮೂಲಕ ಶೆಟ್ಟರ್ ಭರವಸೆ ವ್ಯಕ್ತಪಡಿಸಿದ್ದಾರೆ. ​

ಜೋಶಿ ವಿರುದ್ದ ಶೆಟ್ಟರ್​ ವಾಗ್ದಾಳಿ

ಬಿಜೆಪಿಯಲ್ಲಿ 224 ಕ್ಷೇತ್ರವನ್ನ ಗೆಲ್ಲಿಸುವ ವ್ಯಕ್ತಿಗಳು ಇದ್ದಾರೆ. ಯಾರೇ ಬಂದರೂ ನನಗೆ ಭಯ ಇಲ್ಲ. ಅಂಡರ್ ಕರೆಂಡ್ ಏನಿದೆ ನನಗೆ ಗೊತ್ತಿದೆ. ಜೋಶಿ ಅವರೇ ಪಕ್ಷದಲ್ಲಿ ತತ್ವ ಸಿದ್ದಾಂತ ಏನಿದೆ. ಕೆಲ‌ಮಂತ್ರಿಗಳು ಸಿಡಿ ಸಲುವಾಗಿ ಸ್ಟೇ ತಗೊಂಡಿದ್ದಾರೆ. ಅಂತಹವರಿಗೆ ಟಿಕೆಟ್ ಕೊಟ್ಟಿದ್ದಾರೆ. ಜೋಶಿ ಅವರೇ ಅರ್ಥ ಮಾಡಿಕೊಳ್ಳಿ, ನಾನು ಸಣ್ಣ ಟಿಕೆಟ್ ಗೆ ಪಕ್ಷ ತೊರೆದು ಹೋಗಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದಿರುವುದಕ್ಕೆ ಹೋಗಿದ್ದಿನಿ ಎನ್ನುವ ಮೂಲಕ ಜೋಶಿ ಅವರ ಮೇಲೆ ಹರಿಹಾಯ್ದಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ