Karnataka Assembly Polls: ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬಸವರಾಜ ಬೊಮ್ಮಾಯಿಗೆ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಎದುರಾದ ಕ್ಷಣ ಹೇಗಿತ್ತು ಗೊತ್ತಾ?

Karnataka Assembly Polls: ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬಸವರಾಜ ಬೊಮ್ಮಾಯಿಗೆ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಎದುರಾದ ಕ್ಷಣ ಹೇಗಿತ್ತು ಗೊತ್ತಾ?

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 26, 2023 | 1:33 PM

ರಾಜ್ಯದ ಪ್ರಮುಖ ನಾಯಕರೆಲ್ಲ ಇಂದು ಬೆಳಗಾವಿಯಲ್ಲಿ ಠಳಾಯಿಸುತ್ತಿರುವುದು ಕುತೂಹಲ ಮೂಡಿಸಿದೆ.

ಬೆಳಗಾವಿ: ಚುನಾವಣಾ ಸಂದರ್ಭದಲ್ಲಿ ಎದುರಾಳಿಗಳ ಪಕ್ಷಗಳ ಪ್ರಮುಖ ನಾಯಕರು ಪರಸ್ಪರ ಎದುರಾದರೆ ಹೇಗೆ ವರ್ತಿಸುತ್ತಾರೆ. ನಾವಂದುಕೊಳ್ಳುವ ಹಾಗೆ ಅವರು ಮುಖ ತಿರುಗಿಸಿಕೊಂಡೇನೂ ಹೋಗುವುದಿಲ್ಲ, ಬದಲಿಗೆ ಮುಗಳ್ನಕ್ಕು, ಪರಸ್ಪರ ಕೈಕುಲುಕುತ್ತಾ ಉಭಯಕುಶಲೋಪರಿ ವಿಚಾರಿಸುತ್ತಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಂದು ನಡೆದಿದ್ದು ಅದೇ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾದಾಗ ಆತ್ಮೀಯವಾಗಿ ಕೈಕುಲುಕಿ ಹರಟಿದರು. ರಾಜ್ಯದ ಪ್ರಮುಖ ನಾಯಕರೆಲ್ಲ ಇಂದು ಬೆಳಗಾವಿಯಲ್ಲಿ ಠಳಾಯಿಸುತ್ತಿರುವುದು ಕುತೂಹಲ ಮೂಡಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ