ಮಲ್ಲಿಕಾರ್ಜುನ ಖರ್ಗೆಗೆ ವಿನಯದಿಂದ ನಮಸ್ಕರಿಸಿದ ಬಸವರಾಜ ಬೊಮ್ಮಾಯಿ ಸರಳತೆಯನ್ನು ಮೆಚ್ಚಿದ ಅಸ್ಸಾಂ ಸಿಎಂ
ಒಬ್ಬರು ಬಿಜೆಪಿ ಮುಖ್ಯಮಂತ್ರಿ ಮತ್ತು ಇನ್ನೊಬ್ಬರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಈ ಫೋಟೊಗೆ ಶೀರ್ಷಿಕೆ ಕೊಡಿ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದ ಸಂವಾದವೊಂದರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಮುಗುಳ್ನಗುತ್ತಾ ನಮಸ್ಕರಿಸುತ್ತಿರುವ ಫೋಟೊ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಖರ್ಗೆಯವರಿಗೆ ಬೊಮ್ಮಾಯಿ ನಮ್ರತೆಯಿಂದ ಕೈ ಮುಗಿಯುತ್ತಿರುವ ಫೋಟೊ ಇದಾಗಿದೆ. ಆದಾಗ್ಯೂ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ (Siddaramaiah) ಅವರು ಬೊಮ್ಮಾಯಿ ಅವರನ್ನು ಭ್ರಷ್ಟ ಲಿಂಗಾಯತ ಸಿಎಂ ಎಂದು ಹೇಳಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಗ್ದಾಳಿಗೆ ಕಾರಣವಾಗಿದೆ. ಸೋಮವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಬೊಮ್ಮಾಯಿವರ ಸರಳತೆಯನ್ನು ಕೊಂಡಾಡಿದ್ದಾರೆ. ದರ್ಪ vs ಸರಳತೆ. ಕರ್ನಾಟಕದ ಮುಖ್ಯಮಂತ್ರಿಯ ಉನ್ನತ ಹುದ್ದೆಯಲ್ಲಿದ್ದರೂ ಅತ್ಯಂತ ನಮ್ರತೆ ಮತ್ತು ಸರಳತೆಯನ್ನು ಪ್ರದರ್ಶಿಸಿದ್ದಕ್ಕಾಗಿ ಬೊಮ್ಮಾಯಿ ಜೀ ಅವರಿಗೆ ಅಭಿನಂದನೆಗಳು ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.
Arrogance vs SIMPLICITY
Kudos to Shri @BSBommai ji for displaying utmost humility and simplicity despite occupying the high office of Chief Minister of Karnataka pic.twitter.com/cNN4aMclXC
— Himanta Biswa Sarma (@himantabiswa) April 24, 2023
ಒಬ್ಬರು ಬಿಜೆಪಿ ಮುಖ್ಯಮಂತ್ರಿ ಮತ್ತು ಇನ್ನೊಬ್ಬರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಈ ಫೋಟೊಗೆ ಶೀರ್ಷಿಕೆ ಕೊಡಿ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.
Arrogance vs SIMPLICITY
Kudos to Shri @BSBommai ji for displaying utmost humility and simplicity despite occupying the high office of Chief Minister of Karnataka pic.twitter.com/cNN4aMclXC
— Himanta Biswa Sarma (@himantabiswa) April 24, 2023
ಈ ಹಿಂದೆ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಥೆ ಅವರು ಕರ್ನಾಟಕವನ್ನು ಲೂಟಿ ಮಾಡಿದ್ದಕ್ಕಾಗಿ ಕ್ಷಮೆ ಕೋರಿ ಹೊರಹೋಗುವ PayCM ಎಂದು ಪ್ರತಿಕ್ರಿಯಿಸಿದ್ದರು.
ಬಿಜೆಪಿಯವರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ರಾಜ್ಯದಲ್ಲಿನ ಎಲ್ಲ ಭ್ರಷ್ಟಾಚಾರಕ್ಕೆ ಲಿಂಗಾಯತ ಸಿಎಂ ಮೂಲ ಕಾರಣ ಎಂದಿದ್ದರು. ಸಿದ್ದರಾಮಯ್ಯ ಕಾಮೆಂಟ್ ಗೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಲಿಂಗಾಯತ ಸಮುದಾಯವನ್ನು ಅವಮಾನಿಸಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ ಬೊಮ್ಮಾಯಿ ಅವರು ರಾಜಕೀಯ ಸೌಜನ್ಯದ ಅತ್ಯುತ್ತಮ ಉದಾಹರಣೆಯನ್ನು ಖರ್ಗೆ ಅವರಿಗೆ ತೋರಿಸಿದರು. ಲಿಂಗಾಯತ ಸಮುದಾಯವನ್ನು ಅವಮಾನಿಸುವುದು ಕಾಂಗ್ರೆಸ್‌ನ ಡಿಎನ್‌ಎ ಎಂದು ಟ್ವೀಟ್ ಮಾಡಿದ್ದಾರೆ.
ಖರ್ಗೆ ಅವರನ್ನು ಗೌರವಿಸುವ ಮುಖ್ಯಮಂತ್ರಿಯನ್ನು ನಿಂದನೆಯಾಗಿ ಪರಿವರ್ತಿಸಲಾಗಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಕರ್ನಾಟಕದ ಮತದಾರರು ಈ ನಾಯಕರಿಗೆ ಸರಿಯಾದ ಸ್ಥಾನವನ್ನು ತೋರಿಸುತ್ತಾರೆ ಎಂದು ಸಚಿವರು ಹೇಳಿದರು.
ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಬಿಜೆಪಿಯ ಲಿಂಗಾಯತ ನಾಯಕರಿಗೆ ನಿಜವಾದ ಶತ್ರುವನ್ನು ಕಾಣಲು ಸಾಧ್ಯವಾಗುತ್ತಿಲ್ಲ ಮತ್ತು ಕಾಂಗ್ರೆಸ್ ಲಿಂಗಾಯತ ವಿರೋಧಿ ಎಂದು ದೂಷಿಸುತ್ತಿರುವುದು ವಿಷಾದನೀಯ. ತಾನು ಹೇಳಿದ್ದು ಇಡೀ ಸಮುದಾಯದ ಬಗ್ಗೆ ಅಲ್ಲ ಅಲ್ಲ, ಒಬ್ಬ ನಿರ್ದಿಷ್ಟ ಸಿಎಂ ಬಗ್ಗೆ ಎಂ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ