AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಾಂಕಾ ಗಾಂಧಿ ವಾದ್ರಾ ದೋಸೆ ಹಾಕೋದನ್ನು ನೋಡಿದ್ದೀರಾ? ವಿಡಿಯೋ ಇಲ್ಲಿದೆ!

ಪ್ರಿಯಾಂಕಾ ಗಾಂಧಿ ವಾದ್ರಾ ದೋಸೆ ಹಾಕೋದನ್ನು ನೋಡಿದ್ದೀರಾ? ವಿಡಿಯೋ ಇಲ್ಲಿದೆ!

ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Apr 26, 2023 | 12:10 PM

Share

ಅವರು ಮೊದಲ ಬಾರಿಗೆ ದೋಸೆ ಮಾಡುವ ಸಾಹಸ ಮಾಡಿರಬಹುದು ಅನ್ನೋದು ವಿಡಿಯೋ ನೋಡಿದರೆ ಸ್ಪಷ್ಟವಾಗುತ್ತದೆ.

ಮೈಸೂರು: ಭಾರತದ ಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರೂ (Pandit Jawaharlal Nehru) ಅವರ ವಂಶದ ಕುಡಿಯೊಬ್ಬರು ಹಾಕಿದ ದೋಸೆಯನ್ನು ತಿನ್ನಬೇಕಾದರೆ ನೀವು ಮೈಸೂರಿನ ಮೈಲಾರಿ ಹೋಟೆಲ್ ಗೆ ಇವತ್ತೇ ಹೋಗಬೇಕು. ಆದರೆ ಸೀದು ಕರಕಲಾಗಿರುವ ದೋಸೆ ತಿನ್ನುವ ಎದೆಗಾರಿಕೆ ನಿಮ್ಮಲ್ಲಿರಬೇಕು! ಮೈಸೂರಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಮಾಡುತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ (priyanka Gandhi Vadra), ಪಕ್ಷದ ನಾಯಕರಾದ ಡಿಕೆ ಶಿವಕುಮಾರ್ (DK Shivakumar), ರಂದೀಪ್ ಸುರ್ಜೆವಾಲಾ ಮತ್ತು ಇತರ ಕೆಲವರೊಂದಿಗೆ ಮೈಲಾರಿ ಹೋಟೆಲ್ ನಲ್ಲಿ ತಿಂಡಿ ತಿಂದ ಬಳಿಕ ಅಡುಗೆ ಕೋಣೆಗೆ ಹೋಗಿ ದೋಸೆ ಮಾಡುವ ಪ್ರಯತ್ನ ಮಾಡಿದರು. ಹೋಟೆಲ್ ಮಾಲೀಕ ಮತ್ತು ಅವರ ಪತ್ನಿ ಪ್ರಿಯಾಂಕಾಗೆ ನೆರವಾದರೂ ದೋಸೆ ಸೀದು ಹೋದವು. ಅವರು ಮೊದಲ ಬಾರಿಗೆ ದೋಸೆ ಮಾಡುವ ಸಾಹಸ ಮಾಡಿರಬಹುದು ಅನ್ನೋದು ವಿಡಿಯೋ ನೋಡಿದರೆ ಸ್ಪಷ್ಟವಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 26, 2023 12:00 PM