Jevargi Election Result: ಜೇವರ್ಗಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಅಜಯ್ ಸಿಂಗ್​​ಗೆ ಗೆಲುವು

|

Updated on: May 13, 2023 | 10:28 PM

Jevargi Assembly Election Result 2023 Live Counting Updates: ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಿವನಗೌಡ ಪಾಟೀಲ ರದ್ದೇವದಗಿ, ಕಾಂಗ್ರೆಸ್​ನಿಂದ ಡಾ.ಅಜಯ್ ಧರ್ಮಸಿಂಗ್ ಹಾಗೂ ಜೆಡಿಎಸ್​​ನಿಂದ ದೊಡ್ಡಪ್ಪಗೌಡ ಕಣದಲ್ಲಿದ್ದಾರೆ.

Jevargi Election Result: ಜೇವರ್ಗಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಅಜಯ್ ಸಿಂಗ್​​ಗೆ ಗೆಲುವು
ಡಾ. ಅಜಯ್ ಧರ್ಮಸಿಂಗ್
Image Credit source: Facebook
Follow us on

Jevargi Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆ(Karnataka Assembly Elections) ಫಲಿತಾಂಶ ಪ್ರಕಟಗೊಂಡಿದ್ದು, ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ (Jevargi Assembly Constituency) ಕಾಂಗ್ರೆಸ್​ನ ಡಾ. ಅಜಯ್ ಧರ್ಮಸಿಂಗ್ ಮೂರನೇ ಬಾರಿ ಗೆಲುವು ದಾಖಲಿಸಿದ್ದಾರೆ. ಇಲ್ಲಿ ಬಿಜೆಪಿಯಿಂದ ಶಿವನಗೌಡ ಪಾಟೀಲ ರದ್ದೇವದಗಿ, ಜೆಡಿಎಸ್​​ನಿಂದ ದೊಡ್ಡಪ್ಪಗೌಡ ಕಣದಲ್ಲಿದ್ದರು. ಇಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ವಿಶ್ವನಾಥ್‌ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಕಳೆದ ಬಾರಿಯ ವಿಧಾನಸಭೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್​ ಜಯಗಳಿಸಿತ್ತು. ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯ್ ಸಿಂಗ್ 16,056 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಜೇವರ್ಗಿ ಮತ್ತು ಯಡ್ರಾಮಿ ತಾಲೂಕುಗಳನ್ನೊಳಗೊಂಡ ಜೇವರ್ಗಿ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ಕುಟುಂಬ ಪ್ರಬಲ ಹಿಡಿತ ಸಾಧಿಸಿದೆ. ಸತತ ಮೂರನೇ ಬಾರಿಗೆ ಗೆಲುವು ದಾಖಲಿಸುವ ಉತ್ಸಾಹದಲ್ಲಿ ಡಾ. ಅಜಯ್ ಧರ್ಮಸಿಂಗ್ ಇದ್ದಾರೆ. ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ಪ್ರತಿನಿಧಿಸಿದ್ದ ಈ ಕ್ಷೇತ್ರ 5 ದಶಕಗಳಿಂದ ಕಾಂಗ್ರೆಸ್ ಹಿಡಿತದಲ್ಲಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಜೇವರ್ಗಿಯಲ್ಲಿ ಬಿಜೆಪಿಯಿಂದ ದೊಡ್ಡಪ್ಪಗೌಡ ಪಾಟೀಲ ನಾರಿಬೋಳ್, ಜೆಡಿಎಸ್​​ನಿಂದ ಕೇದಾರಲಿಂಗಯ್ಯ ಸ್ಪರ್ಧಿಸಿ ಸೋಲನುಭವಿಸಿದ್ದರು. ಒಟ್ಟಾರೆ 11 ಮಂದಿ ಕಣದಲ್ಲಿದ್ದರು. ಜತೆಗೆ ನೋಟಾ ಆಯ್ಕೆಯೂ ಜನರ ಮುಂದಿತ್ತು.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 12:02 am, Sat, 13 May 23