Karnataka Election Highlights: ಕರ್ನಾಟಕವನ್ನು ವಿಂಗಡಿಸುವ ನೀತಿಗಳನ್ನು ಕನ್ನಡಿಗರು ಸಹಿಸಬೇಡಿ: ಪ್ರಧಾನಿ ಮೋದಿ

ವಿವೇಕ ಬಿರಾದಾರ
| Updated By: Rakesh Nayak Manchi

Updated on:May 07, 2023 | 11:09 PM

Karnataka Assembly Election 2023 Live News Updates: ಕರ್ನಾಟಕ ವಿಧಾನಸಭೆ ಚುನಾವಣಗೆ 3 ದಿನ ಮಾತ್ರ ಬಾಕಿ ಉಳಿದಿದೆ. ಮೇ 10 ರಂದು ಮತದಾನ ನಡೆಯಲಿದ್ದು, 13 ರಂದು ಮತ ಎಣಿಕೆ ಆರಂಭವಾಗಲಿದೆ. ನಾಳೆ (ಮೇ.08) ರಂದು ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ರಾಜ್ಯ ರಾಜಕೀಯದಲ್ಲಿ ಅನೇಕ ವಿದ್ಯಮಾನಗಳು ನಡೆಯುತ್ತಿದ್ದು, ಈ ಕುರಿತಾದ ಕ್ಷಣ ಕ್ಷಣದ ಮಾಹಿತಿ ಟಿವಿ9 ಡಿಜಿಟಲ್​​ನಲ್ಲಿ...

Karnataka Assembly Election 2023 Live News Updates: ಕರ್ನಾಟಕ ವಿಧಾನಸಭೆ ಚುನಾವಣಗೆ 3 ದಿನ ಮಾತ್ರ ಬಾಕಿ ಉಳಿದಿದೆ. ಮೇ 10 ರಂದು ಮತದಾನ ನಡೆಯಲಿದ್ದು, 13 ರಂದು ಮತ ಎಣಿಕೆ ಆರಂಭವಾಗಲಿದೆ. ನಾಳೆ (ಮೇ.08) ರಂದು ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಹಿನ್ನೆಲೆ ಮೂರು ಪಕ್ಷಗಳು ಅಂತಿಮ ಹಂತದ ಕಸರತ್ತು ನಡೆಸಿವೆ. ಬಜೆಪಿ ಮತ್ತು ಕಾಂಗ್ರೆಸ್​ನ ರಾಜ್ಯ ಮತ್ತು ರಾಷ್ಟ್ರ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದಾರೆ. ನಿನ್ನೆ (ಮೇ.06) ಪ್ರಧಾನಿ ನರೇಂದ್ರ ಮೋದಿಯವರು ಸಿಲಿಕಾನ್​ ಸಿಟಿಯ ದಕ್ಷಿಣದಲ್ಲಿ 26 ಕಿಮೀ ಅತಿ ಉದ್ದದ ಭರ್ಜರಿ ರೋಡ್ ಶೋ ನಡೆಸಿದರು.​ ನಂತರ ಬದಾಮಿಯಲ್ಲಿ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು. ಇನ್ನು ಕಾಂಗ್ರೆಸ್​ ಪಾಳಯದಲ್ಲಿ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಕಾಂಗ್ರೆಸ್​​ ನಾಯಕಿ ಸೋನಿಯಾ ಗಾಂಧಿ ಹುಬ್ಬಳ್ಳಿಯಲ್ಲಿ, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಅಭ್ಯರ್ಥಿ ಜಗದೀಶ್​ ಶೆಟ್ಟರ್​​ ಪರ ಪ್ರಚಾರ ನಡೆಸಿದರು. ಇದರೊಂದಿಗೆ ಇಂದಿನ ಲೇಟೆಸ್ಟ್​​ ಅಪ್ಡೇಟ್ಸ್

LIVE NEWS & UPDATES

The liveblog has ended.
  • 07 May 2023 11:09 PM (IST)

    Karnataka Election Live: ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ಪುತ್ರ ಧನುಷ್​ ಕಾರಿಗೆ ಕಲ್ಲು

    ಮೈಸೂರು: ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ಪುತ್ರ ಧನುಷ್​ ಕಾರಿಗೆ ಕಲ್ಲು ಎಸೆಯಲಾಗಿದೆ. ಬೀಚನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಚುನಾವಣಾ ಪ್ರಚಾರ ವೇಳೆ ಈ ಘಟನೆ ನಡೆದಿದೆ. ಘಟನೆ ಖಂಡಿಸಿ ಬೀಚನಹಳ್ಳಿ ಗೇಟ್​ ಬಳಿ ಜೆಡಿಎಸ್​ನಿಂದ ಪ್ರತಿಭಟನೆ ನಡೆಯುತ್ತಿದ್ದು, ಸ್ಥಳಕ್ಕೆ ಸಾಲಿಗ್ರಾಮ ಪೊಲೀಸರ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

  • 07 May 2023 09:31 PM (IST)

    Karnataka Election Live: ದಾಖಲೆ ಇಲ್ಲದೆ ಆರೋಪ ಮಾಡುತ್ತಿರುವ ಕಾಂಗ್ರೆಸ್: ಅಮಿತ್ ಶಾ

    ಆನೇಕಲ್: ಯಾವುದೇ ದಾಖಲೆ ಇಲ್ಲದೇ ಕಾಂಗ್ರೆಸ್​ ಆರೋಪ ಮಾಡುತ್ತಿದೆ ಎಂದು ಅಮಿತ್ ಶಾ ಟೀಕಿಸಿದರು. 40% ಕಮಿಷನ್ ಆರೋಪ ಸಂಬಂಧ ಟಿವಿ9 ಜೊತೆ ಮಾತನಾಡಿದರು.

  • 07 May 2023 08:54 PM (IST)

    Karnataka Election Live: ಕಾಂಗ್ರೆಸ್ ಪಕ್ಷ ಅಧಿಕಾರವಿದ್ದಾಗ ಹಲವು ಭಾಗ್ಯಗಳನ್ನ ಜನರಿಗೆ ನೀಡಿದೆ: ಪ್ರಿಯಾಂಕಾ ಗಾಂಧಿ

    ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರವಿದ್ದಾಗ ಹಲವು ಭಾಗ್ಯಗಳನ್ನ ಜನರಿಗೆ ನೀಡಿದೆ. ಅನ್ನಭಾಗ್ಯ, ಕ್ಷೀರ ಭಾಗ್ಯ, ವಿದ್ಯಾ ಭಾಗ್ಯ, ಇಂದಿರಾ ಕ್ಯಾಂಟೀನ್​ನಂತ ಹಲವು ಜನಪರ ಯೋಜನೆಗಳು ನಿಮ್ಮ ಮುಂದಿದೆ. ಎಲ್ಲ ಸತ್ಯವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ, ನೀವೆ ಅವಲೋಕಿಸಿ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ಇಷ್ಟೆಲ್ಲಾ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳನ್ನ ಹೊಂದಿದೆ. 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಹೆಣ್ಣು‌ಮಕ್ಕಳ ಖಾತೆಗೆ 2 ಸಾವಿರ, ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ ಯುವನಿಧಿ ಕಾರ್ಯಕ್ರಮ, ಡಿಪ್ಲೋಮಾ ಪದವಿಧರದರಿಗೂ 1,500 ರೂ. ನೀಡುವ ಯೋಜನೆ, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಪ್ರತಿ ಸದಸ್ಯರಿಗೆ 10 ಕೆ.ಜಿ.ಅಕ್ಕಿ ನೀಡುವ ಯೋಜನೆ, ಎರಡೂವರೆ ಲಕ್ಷ ಸರ್ಕಾರಿ ನೌಕರಿಯನ್ನು ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ತುಂಬಲಿದೆ. ನಿಮ್ಮ ಅಗತ್ಯ ವಸ್ತುಗಳನ್ನು ನಿಮ್ಮ‌ಮನೆಗೆ ತಲುಪಿಸುವ ಹಲವು ಉದ್ಯೋಗಿಗಳನ್ನ ಯೋಜನೆ ಜಾರಿಗೆ ತರಲಿದ್ದೇವೆ ಎಂದರು.

  • 07 May 2023 08:49 PM (IST)

    Karnataka Election Live: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಯಾಗಿಲ್ಲ: ಸಿದ್ದರಾಮಯ್ಯ

    ಮೈಸೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಯಾಗಿಲ್ಲ. ಬಿಜೆಪಿಯವರು ಅಭಿವೃದ್ಧಿ ಮಾಡುವ ಬದಲು ಲೂಟಿ ಮಾಡಿದ್ದಾರೆ ಎಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ನರೇಂದ್ರ ಮೋದಿ ರಾಜ್ಯದಲ್ಲಿ ಲೂಟಿ ಮಾಡಲು ಬಿಟ್ಟಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಆಲಿಬಾಬ ಮತ್ತು 40 ಕಳ್ಳರ ಸರ್ಕಾರ. ಇಂತಹ ಆಲಿಬಾಬ ಮತ್ತು 40 ಕಳ್ಳರ ಸರ್ಕಾರ ಬೇಕಾ? ಮುಸ್ಲಿಮರು, ಕ್ರೈಸ್ತರಿಗೆ ಬಿಜೆಪಿ ಒಂದೇ ಒಂದು ಟಿಕೆಟ್ ನೀಡಿಲ್ಲ. ಅಲ್ಪಸಂಖ್ಯಾತರಿಗೆ ಟಿಕೆಟ್​ ನೀಡದೆ ಹೇಗೆ ಸಬ್​ಕಾ ಸಾಥ್ ಆಗುತ್ತದೆ ಎಂದು ಪ್ರಶ್ನಿಸಿದರು.

  • 07 May 2023 07:37 PM (IST)

    Karnataka Election Live: ನಂಜುಂಡೇಶ್ವರನ ದರ್ಶನ ಪಡೆದ ಮೋದಿ ದೆಹಲಿಗೆ ಪ್ರಯಾಣ

    ಮೈಸೂರು: ನಂಜುಂಡೇಶ್ವರನ ದರ್ಶನ ಪಡೆದ ಪ್ರಧಾನಿ ಮೋದಿ ಅವರು ದೆಹಲಿಗೆ ಪ್ರಯಾಣ ಕೈಗೊಳ್ಳಲು ಮುಂದಾಗಿದ್ದು, ದೇವಾಲಯದಿಂದ ಮಂಡಕಳ್ಳಿ ವಿಮಾನ ನಿಲ್ದಾಣದತ್ತ ಪ್ರಯಾಣ ಕೈಗೊಂಡಿದ್ದಾರೆ. ರಸ್ತೆಯ ಮೂಲಕ ಮಂಡಕಳ್ಳಿ ಏರ್‌ಪೋರ್ಟ್‌ಗೆ ಪ್ರಯಾಣಿಸುತ್ತಿದ್ದು, ಅಲ್ಲಿಂದ ಸೇನೆಯ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ.

  • 07 May 2023 07:11 PM (IST)

    Karnataka Election Live: ನಂಜುಂಡೇಶ್ವರನ ದರ್ಶನ ಪಡೆದ ಪ್ರಧಾನಿ ಮೋದಿ

    ಮೈಸೂರು: ನಂಜನಗೂಡಿನ ನಂಜುಂಡೇಶ್ವರನ ದೇವಸ್ಥಾನಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ದೇವಾಲಯದ ಆಡಳಿತ ಮಂಡಳಿ ಸ್ವಾಗತಕೋರಿತು. ನಂತರ ನಂಜುಂಡೇಶ್ವರನ ದರ್ಶನ ಪಡೆದ ಮೋದಿ ವಿಶೇಷ ಪೂಜೆ ಸಲ್ಲಿಸಿದರು.

  • 07 May 2023 07:09 PM (IST)

    Karnataka Election Live: ನಂಜುಂಡೇಶ್ವರ ದೇವಸ್ಥಾನಕ್ಕೆ ಮೋದಿ ಪ್ರಯಾಣ

    ಮೈಸೂರು: ನಂಜನಗೂಡು ಬಿಜೆಪಿ ಚುನಾವಣಾ ಸಮಾವೇಶ ಮುಗಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಎಲಚಿಗೆರೆ ಬೋರೆ ಗ್ರಾಮದಿಂದ ನಂಜುಂಡೇಶ್ವರ ದೇವಸ್ಥಾನಕ್ಕೆ ಪ್ರಯಾಣ ಕೈಗೊಂಡರು. 11 ಕಿ.ಮೀ. ಕಾರಿನಲ್ಲಿ ಪ್ರಯಾಣಿಸಿದರು.

  • 07 May 2023 06:10 PM (IST)

    Karnataka Election Live: ಕಾಂಗ್ರೆಸ್ ಬೈಗುಳ ಸಹಿಸುವ ಶಕ್ತಿ ಶ್ರೀಕಂಠೇಶ್ವರ ನೀಡಿದ್ದಾನೆ: ಮೋದಿ

    ಮೈಸೂರು: ಕಾಂಗ್ರೆಸ್​ನವರ ನಿಂರತರವಾಗಿ ನನ್ನ ವಿರುದ್ಧ ಬೈಯ್ಯುತ್ತಿದ್ದಾರೆ. ಅವರ ಬೈಗುಳ ಸಹಿಸಿಕೊಳ್ಳುವ ಶಕ್ತಿ ಶ್ರೀಕಂಠೇಶ್ವರ ನೀಡಿದ್ದಾನೆ ಎಂದು ನಂಜನಗೂಡಿನ ಎಲಚಗೆರೆ ಬೋರೆ ಸಮಾವೇಶದಲ್ಲಿ ಪ್ರಧಾನಿ ಮೋದಿ ಹೇಳಿದರು. ಹೃದಯಪೂರ್ವಕವಾಗಿ ಕರ್ನಾಟಕದ ಜನರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ ಅವರು, ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ ಮೋದಿಯವರು ನಮಸ್ಕಾರಗಳನ್ನು ತಿಳಿಸಿದ್ದಾರೆ ಎಂದು ಹೇಳುವಂತೆ ಮನವಿ ಮಾಡಿ. ಅವರು ನನಗೆ ಆಶೀರ್ವಾದ ಮಾಡುವರು ಎಂದು ಹೇಳಿ ಭಾಷಣ ಮುಕ್ತಾಯಗೊಳಿಸಿದರು.

  • 07 May 2023 06:07 PM (IST)

    Karnataka Election Live: ಕಾನೂನು ಸುವ್ಯವಸ್ಥೆಯಲ್ಲಿ ಕರ್ನಾಟಕ ನಂಬರ್ 1 ಮಾಡುತ್ತೇವೆ: ಮೋದಿ

    ಮೈಸೂರು: ದೇಶದ ಜೊತೆಗೆ ಕರ್ನಾಟಕ ಅಭಿವೃದ್ಧಿಯಲ್ಲಿ ನಂಬರ್​ 1 ರಾಜ್ಯ ಮಾಡುತ್ತೇವೆ. ನಂಬರ್​ 1 ಕರ್ನಾಟಕ ಅಂದರೆ ಎಲ್ಲ ಸಮುದಾಯಗಳ ಅಭಿವೃದ್ಧಿ, ಮಹಿಳೆಯರು, ಯುವಕರಿಗೆ ಉದ್ಯೋಗ ಸೃಷ್ಟಿಯಾಗುತ್ತವೆ ಎಂದರು. ಕರ್ನಾಟಕ ನಂಬರ್ 1 ಮಾಡುವುದೇ ನಮ್ಮ ಸಂಕಲ್ಪ ಆಗಿದೆ. ಸ್ಟಾರ್ಟ್​​ಪ್, ಶಿಕ್ಷಣ. ರಸ್ತೆ, ಮೆಟ್ರೋ, ಮೂಲಸೌಕರ್ಯ, ಮೆಟ್ರೋ, ಟಿಜಿಟಲ್ ಕ್ಷೇತ್ರದಲ್ಲಿ ನಂಬರ್ 1 ಮಾಡುವುದೇ ಸಂಕಲ್ಪ. ಕಾನೂನು ಸುವ್ಯವಸ್ಥೆಯಲ್ಲಿ ಕರ್ನಾಟಕ ನಂಬರ್ 1 ಮಾಡುತ್ತೇವೆ. ಸ್ನೇಹಿತರೇ ನಿಮ್ಮ ಅಮೂಲ್ಯವಾದ ಮತ ಬಿಜೆಪಿಗೆ ನೀಡಿ ಅಭಿವೃದ್ಧಿಗೆ ಸಹಕರಿಸಿ ಎಂದರು. ಈ ವೇಳೆ ಜೋರಾಗಿ ಮೋದಿ.. ಮೋದಿ.. ಘೋಷಣೆಗಳು ಮೊಳಗಿದಾಗ, ಮೈಸೂರಿನ ಜನರ ಪ್ರೀತಿಯನ್ನು ನಾನೆಂದೂ ಮರೆಯುವುದಿಲ್ಲ ಎಂದು ಹೇಳಿದರು.

  • 07 May 2023 06:03 PM (IST)

    Karnataka Election Live: ಸಮಾಜವನ್ನು ವಿಂಗಡಿಸುವುದೇ ಕಾಂಗ್ರೆಸ್​ ಪಕ್ಷದ ಇತಿಹಾಸ: ಮೋದಿ

    ಮೈಸೂರು: ಸಮಾಜವನ್ನು ವಿಂಗಡಿಸುವುದೇ ಕಾಂಗ್ರೆಸ್​ ಪಕ್ಷದ ಇತಿಹಾಸ. ಕಾಂಗ್ರೆಸ್​​ನ ಇಂತಹ ಕೆಟ್ಟ ಉದ್ದೇಶಗಳನ್ನು ಎಂದಿಗೂ ಕ್ಷಮಿಸಬೇಡಿ. ಅಂತಹ ಕಾಂಗ್ರೆಸ್​ ತಕ್ಕ ಪಾಠ ಕಲಿಸುವ ಸಮಯ ಈಗ ಬಂದಿದೆ ಎಂದು ಪ್ರದಾನಿ ನರೇಂದ್ರ ಮೋದಿ ಹೇಳಿದರು. ಮೇ 10ರಂದು ನಿಮ್ಮ ಅಮೂಲ್ಯವಾದ ಮತ ಕಮಲದ ಗುರುತಿಗೆ ನೀಡಿ. ಭಾರತ ಆರ್ಥಿಕತೆಯಲ್ಲಿ ಮೂರನೇ ಸ್ಥಾನಕ್ಕೆ ಕೊಂಡೊಯ್ಯುತ್ತೇವೆ. ದೇಶದ ಜೊತೆಗೆ ಕರ್ನಾಟಕ ಅಭಿವೃದ್ಧಿಯಲ್ಲಿ ನಂಬರ್​ 1 ರಾಜ್ಯ ಮಾಡುತ್ತೇವೆ ಎಂದರು.

  • 07 May 2023 06:00 PM (IST)

    Karnataka Election Live: ಕರ್ನಾಟಕವನ್ನು ವಿಂಗಡಿಸುವ ನೀತಿಗಳನ್ನು ಕನ್ನಡಿಗರು ಸಹಿಸಬೇಡಿ: ಮೋದಿ

    ಮೈಸೂರು: ಭಯೋತ್ಪಾದನೆ, ಅರಾಜಕತೆಯನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಗುಡುಗಿದ್ದಾರೆ. ಕರ್ನಾಟಕವನ್ನು ದೇಶದಿಂದ ಪ್ರತ್ಯೇಕ ಎಂದು ಪರಿಗಣಿಸುತ್ತಾರೆ. ಕರ್ನಾಟಕವನ್ನು ವಿಂಗಡಿಸುವ ಕೆಲಸದಲ್ಲಿ ನಿರತವಾಗಿದೆ. ಕನ್ನಡೀಗರು ಇಂತಹ ನೀತಿಗಳಿಗೆ ಎಂದು ಸಹಿಸಬೇಡಿ. ಪ್ರತಿ ಕನ್ನಡಿಗರು ಇಂತಹ ವಿಚ್ಛದ್ರಕಾರಿ ಕಾಂಗ್ರೆಸ್ ಬಗ್ಗೆ ಎಚ್ಚರವಾಗಿರಿ. ಕರ್ನಾಟಕ ಭಾರತದ ಅವಿಭಾಜ್ಯ ಅಂಗವಾಗಿದೆ. ರಾಷ್ಟ್ರಕವಿ ಕುವೆಂಪು ಅವರೇ ಹೇಳಿದ್ದಾರೆ ಎಂದರು.

  • 07 May 2023 05:56 PM (IST)

    Karnataka Election Live: ‘ದಿ ಕೇರಳ ಸ್ಟೋರಿ’ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ

    ಮೈಸೂರು: ನಂಜನಗೂಡಿನಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ‘ದಿ ಕೇರಳ ಸ್ಟೋರಿ’ ಬಗ್ಗೆ ಪ್ರಸ್ತಾಪಿಸಿದರು. ದೇಶದ ಅಭಿವೃದ್ಧಿಗೆ ಮಹಿಳೆಯರ ಕಲ್ಯಾಣ ಬಹಳ ಮುಖ್ಯವಾಗಿದೆ ಎಂದರು. ಇದೇ ವೇಳೆ ಗಾಂಧಿ ಕುಟುಂಬದ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ, ನನ್ನ ದೇಶದಲ್ಲಿ ಗಾಂಧಿ ಕುಟುಂಬ ವಿದೇಶಿ ಶಕ್ತಿಗೆ ಅವಕಾಶ ನೀಡಿದೆ. ಗೌಪ್ಯವಾಗಿ ವಿದೇಶಿ ಶಕ್ತಿಗಳಿಗೆ ಭಾರತದಲ್ಲಿ ಅವಕಾಶ ನೀಡುತ್ತಾರೆ. ನಾನು ತುಂಬಾ ನೋವಿನಿಮದ ಈ ಮಾತು ಹೇಳುತ್ತಿದ್ದೇನೆ. ಇಂತಹ ವಿಚಾರಗಳನ್ನು ನಾನು ಎಂದಿಗೂ ಸಹಿಸುವುದಿಲ್ಲ. ನನ್ನ ಭಾರತದಲ್ಲಿ ವಿದೇಶಿಯವರ ಮೂಗು ತೂರಿಸುವುದು ಬೇಕಾಗಿಲ್ಲ. ನನ್ನ ದೇಶ ಸುರಕ್ಷಿತವಾಗಿದೆ ಎಂದರು.

  • 07 May 2023 05:54 PM (IST)

    Karnataka Election Live: ಕಾಂಗ್ರೆಸ್ ಪಕ್ಷ ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡುತ್ತಿದೆ: ಮೋದಿ

    ಮೈಸೂರು: ಕಾಂಗ್ರೆಸ್ ಪಕ್ಷ ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡುತ್ತಿದೆ, ಹಿಂದುಳಿದ ವರ್ಗದವರಿಗೂ ಕಾಂಗ್ರೆಸ್​ನವರು ಅವಮಾನ ಮಾಡಿದ್ದಾರೆ ಎಂದು ಎಲಚಗೆರೆಬೋರೆ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ಬುಡಕಟ್ಟು ಸಮುದಾಯದ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ಏನೂ ಮಾಡಲಿಲ್ಲ ಎಂದರು. ಸುಡಾನ್​ನಲ್ಲಿ ಹಕ್ಕಿಪಿಕ್ಕಿ ಸಮುದಾಯ ಸಂಕಷ್ಟದಲ್ಲಿ ಸಿಲುಕಿದ್ದರು. ಅವರನ್ನು ಸುರಕ್ಷಿತವಾಗಿ ಕರೆತಂದಿದ್ದೇವೆ ಎಂದರು. ಕಾಂಗ್ರೆಸ್​​ ಇದ್ದರೆ ದೇಶದಲ್ಲಿ ಉಗ್ರರು ಬಾಲ ಬಿಚ್ಚುತ್ತಾರೆ. ಭಯೋತ್ಪಾದಕರ ಮೇಲೆ ಕಾಂಗ್ರೆಸ್​​ನವರ ಆಶೀರ್ವಾದ ಇದೆ ಎಂದರು.

  • 07 May 2023 05:50 PM (IST)

    Karnataka Election Live: ಬಂಡೀಪುರ ಭೇಟಿ ಬಗ್ಗೆ ವ್ಯಂಗ್ಯವಾಡಿದ ಕಾಂಗ್ರೆಸ್​ ವಿರುದ್ಧ ಮೋದಿ ಗುಡುಗು

    ಮೈಸೂರು: ಕೊವಿಡ್​ ಸಂದರ್ಭದಲ್ಲಿ ಕಾಂಗ್ರೆಸ್​​ನವರು ಕುಹಕವಾಡುತ್ತಿದ್ದರು. ಇಮ್ಯೂನಿಟಿ ಬಗ್ಗೆ ಕೆಲವು ಸಲಹೆ ನೀಡಿದರೆ ವ್ಯಂಗ್ಯವಾಡಿದ್ದರು ಎಂದು ಆಕ್ರೋಶ ಹೊರಹಾಕಿದ ಮೋದಿ, ರೈತರು ಬೆಳೆದ ಮಸಾಲೆಯ ಪದಾರ್ಥಗಳ ಬಗ್ಗೆ ಸಲಹೆ ನೀಡಲಾಗಿತ್ತು. ಆದರೆ ಕಾಂಗ್ರೆಸ್​ನವರು ಕರ್ನಾಟಕದ ರೈತರಿಗೆ ಅನುಮಾನ ಮಾಡಿದ್ದರು. ಬಜರಂಗದಳ ನಿಷೇಧಿಸುವುದಾಗಿ ಕಾಂಗ್ರೆಸ್​ ಪ್ರಣಾಲಿಕೆಯಲ್ಲಿ ಹೇಳಿದೆ. ಇಂತಹ ಕಾಂಗ್ರೆಸ್​ನ್ನು ಯಾವುದೇ ಕಾರಣಕ್ಕೂ ಕ್ಷಮಿಸಬೇಡಿ. ಕೆಲವು ದಿನಗಳ ಹಿಂದೆ ಬಂಡೀಪುರ ಅಭಯಾರಣ್ಯಕ್ಕೆ ಬಂದಿದ್ದೆ. ಕರ್ನಾಟಕದ ಸಾಮರ್ಥ್ಯ ವಿಶ್ವಕ್ಕೆ ಪರಿಚಯಿಸಲು ಬಂದಿದ್ದೆ. ಈ ಬಗ್ಗೆಯೂ ಕಾಂಗ್ರೆಸ್​ ನಾಯಕರು ನನ್ನ ವಿರುದ್ಧ ವ್ಯಂಗ್ಯವಾಡಿದ್ದರು ಎಂದರು.

  • 07 May 2023 05:47 PM (IST)

    Karnataka Election Live: ಕರ್ನಾಟಕದ ಅಭಿವೃದ್ಧಿಗಾಗಿ ಅನೇಕ ಕೊಡುಗೆ ನೀಡಿದ ಯಡಿಯೂರಪ್ಪ, ಬೊಮ್ಮಾಯಿ

    ಮೈಸೂರು: ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳು ಕರ್ನಾಟಕದ ಅಭಿವೃದ್ಧಿಗಾಗಿ ಅನೇಕ ಯೋಜನೆ ತಂದಿವೆ ಎಂದು ಮೋದಿ ಹೇಳಿದರು. ವಿಶ್ವದಲ್ಲಿ ಯೋಗದ ಕುರಿತು ಚರ್ಚೆ ನಡೆಯುತ್ತಿದೆ. ಇಡೀ ವಿಶ್ವದಲ್ಲಿ ಎಲ್ಲರೂ ಯೋಗ ಮಾಡುತ್ತಿದ್ದಾರೆ. ವಿಶ್ವಕ್ಕೆ ಯೋಗ ಪರಿಚಯಿಸಿದ್ದು ನರೇಂದ್ರ ಮೋದಿ ಅಲ್ಲ, ನಿಮ್ಮ ವೋಟ್​ನ ಶಕ್ತಿಯಿಂದ ವಿಶ್ವಕ್ಕೆ ಯೋಗ ಪರಿಚಯಗೊಂಡಿದೆ ಎಂದರು.

  • 07 May 2023 05:44 PM (IST)

    Karnataka Election Live: ಕಾಂಗ್ರೆಸ್​ನವರು ಹಣ ಲೂಟಿ ಮಾಡಿಕೊಂಡು ಆರಾಮವಾಗಿ ಇದ್ದರು: ಮೋದಿ

    ಮೈಸೂರು: ಕನ್ನಡೀಗರ ಪ್ರೀತಿಯ ನಡುವೆ ನಮಗೆ ಭಾಷೆ ಅಡ್ಡಿಯಾಗುತ್ತಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ, ಬಡವರ ಹೆಸರಿನಲ್ಲಿ ಕಾಂಗ್ರೆಸ್​ನವರು ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಈಗಲೂ ಅದೇ ಹೆಸರಿನಲ್ಲಿ ಚುನಾವಣೆಯಲ್ಲಿ ಭರವಸೆ ನೀಡುತ್ತಿದ್ದಾರೆ. ಕಾಂಗ್ರೆಸ್​ನವರು ಹಣ ಲೂಟಿ ಮಾಡಿಕೊಂಡು ಆರಾಮವಾಗಿ ಇದ್ದರು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಆಗುತ್ತಿದೆ. ದೇಶದಲ್ಲಿ ಹೊಸ ಏರ್​​ಪೋರ್ಟ್​ಗಳ ನಿರ್ಮಾಣ ಆಗುತ್ತಿದೆ. ಮೂಲಸೌಕರ್ಯ ಕ್ಷೇತ್ರದಲ್ಲಿ ಆಧುನೀಕರಣ ತಂದಿದ್ದೇವೆ ಎಂದರು.

  • 07 May 2023 05:42 PM (IST)

    Karnataka Election Live: ಕಾಂಗ್ರೆಸ್​ ಸರ್ಕಾರದಲ್ಲಿ 85% ಕಮಿಷನ್ ದಂಧೆ: ಮೋದಿ

    ಮೈಸೂರು: ಕಾಂಗ್ರೆಸ್​ ಸರ್ಕಾರದಲ್ಲಿ 85% ಕಮಿಷನ್ ದಂಧೆ ನಡೆಯುತ್ತಿತ್ತು. ಇದನ್ನು ನಾನು ಹೇಳಿಲ್ಲ, ಕಾಂಗ್ರೆಸ್​ನ ಪ್ರಧಾನಿಯೇ ಹೇಳಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಎಲಚಗೆರೆಬೋರೆ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಅನುದಾನ ಕಳಿಸಿದರೆ ಎಲ್ಲವೂ ನುಂಗುತ್ತಿದ್ದರು. ಫಲಾನುಭವಿಗಳಿಗೆ ತಲುಪಬೇಕಿದ್ದ ಹಣ ಕಾಂಗ್ರೆಸ್​ನವರೇ ತಿನ್ನುತ್ತಿದ್ದರು ಎಂದರು.

  • 07 May 2023 05:38 PM (IST)

    Karnataka Election Live: ರಕ್ಷಣಾ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆ: ಮೋದಿ

    ಮೈಸೂರು: ಏಷ್ಯಾದ ದೊಡ್ಡ ಹೆಲಿಕಾಪ್ಟರ್​​ ತಯಾರಿಕ ನಿರ್ಮಾಣ ಘಟಕವನ್ನು ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ಸ್ಥಾಪಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ನಂಜನಗೂಡಿನ ಎಲಚಗೆರೆಬೋರೆ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ರಕ್ಷಣಾ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆ ತಂದಿದ್ದೇವೆ. ಕರ್ನಾಟಕ ಸ್ಟಾರ್ಟ್​ಪ್​ಗಳ ರಾಜಧಾನಿಯಾಗಬೇಕೆಂಬುದು ನಮ್ಮ ಕನಸು. 9 ವರ್ಷಗಳಲ್ಲಿ 1600 ಕಿ.ಮೀ ರೈಲ್ವೆ ವಿದ್ಯುದ್ದೀಕರಣ ಮಾಡಿದ್ದೇವೆ. ದೇಶದಲ್ಲಿ ಹೊಸ ಹೆದ್ದಾರಿಗಳನ್ನು ನಿರ್ಮಾಣ ಮಾಡಿದ್ದೇವೆ ಎಂದರು.

  • 07 May 2023 05:32 PM (IST)

    Karnataka Election Live: ವಿಶ್ವದ ಪ್ರಮುಖ ಮೊಬೈಲ್​ ಕಂಪನಿಗಳು ಕರ್ನಾಟಕಕ್ಕೆ ಬರುತ್ತಿವೆ: ಮೋದಿ

    ಮೈಸೂರು: ಕಳೆದ 9 ವರ್ಷಗಳಿಂದ ಭಾರತ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ, ಭಾರತಕ್ಕೆ ವಿದೇಶಿ ಬಂಡವಾಳ ಹರಿದು ಬರುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಸಮಾವೇಶದಲ್ಲಿ ಮಾತನಾಡಿದ ಅವರು, ಮೊಬೈಲ್ ತಯಾರಿಕೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ, ವಿಶ್ವದ ಪ್ರಮುಖ ಮೊಬೈಲ್​ ಕಂಪನಿಗಳು ಕರ್ನಾಟಕಕ್ಕೆ ಬರುತ್ತಿವೆ. ಇಂತಹ ಅಭಿವೃದ್ಧಿ ಪ್ರತಿಯೊಬ್ಬ ಕನ್ನಡೀಗರಿಗೆ ಹೆಮ್ಮೆಯ ವಿಷಯವಾಗಿದೆ. ಆದರೆ ಕಾಂಗ್ರೆಸ್​, ಜೆಡಿಎಸ್​ನವರು ಎಂದೂ ಹೆಮ್ಮೆ ಪಡುವುದಿಲ್ಲ ಎಂದರು.

  • 07 May 2023 05:28 PM (IST)

    Karnataka Election Live: ಈ ಬಾರಿಯ ಕರ್ನಾಟಕದ ಚುನಾವಣೆ ಇತಿಹಾಸ ರಚಿಸಲಿದೆ: ಮೋದಿ

    ಮೈಸೂರು: ಈ ಚುನಾವಣೆ ಕರ್ನಾಟಕದ ಇತಿಹಾಸ ರಚಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಎಲಚಗೆರೆಬೋರೆ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ನಂಬರ್​ 1 ಮಾಡುವುದೇ ಬಿಜೆಪಿಯ ಗುರಿಯಾಗಿದೆ. ಕರ್ನಾಟಕದ ಎಲ್ಲ ಕಡೆಯೂ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂಬ ಒಂದೇ ಧ್ವನಿ, ಸಂಕಲ್ಪ ಕೇಳಿಬರುತ್ತಿದೆ. ಕರ್ನಾಟಕದ ಜನ ಡಬಲ್ ಇಂಜಿನ್ ಬಿಜೆಪಿ ಮೇಲೆ ಭರವಸೆ ಇಟ್ಟಿದೆ. ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದ ಜನರಿಗೆ 2 ಲಾಭವಿದೆ. ದೇಶದ ಜೊತೆಗೆ ಕರ್ನಾಟಕ ವೇಗದ ಗತಿಯಲ್ಲಿ ಅಭಿವೃದ್ಧಿಯಾಗುತ್ತಿದೆ, ವಿಶ್ವದಲ್ಲಿ ಅರ್ಥವ್ಯವಸ್ಥೆಯಲ್ಲಿ ಭಾರತ ಟಾಪ್ 5ನೇ ಸ್ಥಾನದಲ್ಲಿದೆ ಎಂದರು.

  • 07 May 2023 05:21 PM (IST)

    Karnataka Election Live: ನಂಜನಗೂಡಿನ ಜನತೆಗೆ ನನ್ನ ನಮಸ್ಕಾರಗಳು ಎಂದ ಪ್ರಧಾನಿ ಮೋದಿ

    ಮೈಸೂರು: ನಂಜನಗೂಡಿನ ಎಲಚಗೆರೆಬೋರೆಯಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ನಂಜನಗೂಡಿನ ಜನತೆಗೆ ನನ್ನ ನಮಸ್ಕಾರಗಳು ಎಂದರು. ತಾಯಿ ಚಾಮುಂಡೇಶ್ವರಿ, ನಂಜುಂಡೇಶ್ವರ, ಮಲೆಮಹದೇಶ್ವರಗೆ ನಮಸ್ಕಾರಗಳು, ಮಲೆ ಮಹದೇಶ್ವರ ಸ್ವಾಮಿ ಹಾಗೂ ಆದಿ ಚುಂಚನಗಿರಿ ಮಠಗಳಿಗೆ ನಮಿಸುತ್ತೇನೆ ಎಂದು ಹೇಳಿದರು.

  • 07 May 2023 05:16 PM (IST)

    Karnataka Election Live: ವೇದಿಕೆ ಮೇಲೆ ಆಗಮಿಸಿದ ಮೋದಿ

    ಮೈಸೂರು ಎಲಚಗೆರೆ ಬೋರೆ ಹೆಲಿಪ್ಯಾಡ್​ಗೆ ಆಗಮಿಸಿದ ಪ್ರದಾನಿ ಮೋದಿ ಅವರನ್ನು ಬಿಜೆಪಿ ಹಿರಿಯ ನಾಯಕ ವರುಣಾ ಕ್ಷೇತ್ರ ದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ, ರಾಮದಾಸ್, ನೇತೃತ್ವದ ನಾಯಕರ ತಂಡ ಸ್ವಾಗತಿಸಿತು. ಮಂಗಳ ವಾದ್ಯ, ಸ್ಥಳೀಯ ಕಲಾತಂಡದ ಪ್ರದರ್ಶನದೊಂದಿಗೆ ಮೋದಿಯವರು ಹೆಲಿಪ್ಯಾಡ್​ನಿಂದ 400 ಮೀಟರ್ ದೂರದಲ್ಲಿ ಬೃಹತ್ ಬಹಿರಂಗ ಸಭೆ ನಡೆದುಕೊಂಡೇ ಹೋಗಿ ವೇದಿಕೆ ಮೇಲೇರಿದರು. ಈ ವೇಳೆ ಮೋದಿ ಜಯಘೋಷಗಳು ಮೊಳಗಿದವು.

  • 07 May 2023 04:47 PM (IST)

    Karnataka Election Live: ನಂಜನಗೂಡಿಗೆ ಆಗಮಿಸಿದ ಪ್ರಧಾನಿ ಮೋದಿ

    ಮೈಸೂರು: ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ನಂಜನಗೂಡಿಗೆ ಆಗಮಿಸಿದ್ದಾರೆ. ಈಗಾಗಲೇ ಸಮಾವೇಶದ ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಮೋದಿ ಆಗಮನಕ್ಕಾಗಿ ಕಾಯುತ್ತಿದ್ದಾರೆ.

  • 07 May 2023 04:26 PM (IST)

    Karnataka Election Live: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ: ಸಿದ್ದರಾಮಯ್ಯ

    ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯ ಸರಗೂರು ಪಟ್ಟಣದಲ್ಲಿ ಮಾತನಾಡಿದ ಅವರು, ಮೋದಿ, ಅಮಿತ್ ಶಾ ಎಷ್ಟು ಬಾರಿ ಬಂದರೂ ರಾಜ್ಯದಲ್ಲಿ ಕಾಂಗ್ರೆಸ್ ಬರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ ಎಂದರು.

  • 07 May 2023 03:26 PM (IST)

    Karnataka Election Live: ಅಯನೂರಿನಿಂದ ನಂಜನಗೂಡಿಗೆ ಮೋದಿ ಪ್ರಯಾಣ

    ಶಿವಮೊಗ್ಗ: ತಾಲೂಕಿನ ಆಯನೂರಿನಲ್ಲಿ ಬಿಜೆಪಿ ಅಬ್ಬರದ ಪ್ರಚಾರ ನಡೆಸಿದ ಪ್ರಧಾನಿ ಮೋದಿ ಅವರು ಇದೀಗ ಮೈಸೂರು ಜಿಲ್ಲೆಯ ನಂಜನಗೂಡಿಗೆ ಪ್ರಯಾಣ ಬೆಳೆಸಿದ್ದಾರೆ. ಭಾರತೀಯ ವಾಯುಸೇನೆಯ MI-17 ಹೆಲಿಕಾಪ್ಟರ್ ಮೂಲಕ ಆಯನೂರು ಹೆಲಿಪ್ಯಾಡ್​ನಿಂದ ಶಿವಮೊಗ್ಗ ಏರ್​ಪೋರ್ಟ್​ಗೆ ತೆರಳಿ ಅಲ್ಲಿಂದ ಮೈಸೂರಿಗೆ ಪ್ರಯಾಣ ಮಾಡಲಿದ್ದಾರೆ.

  • 07 May 2023 03:24 PM (IST)

    Karnataka Election Live: ಪ್ರತಿ ಮನೆ ಮನೆಗೆ ಭೇಟಿ ನೀಡಿ ನನ್ನ ನಮಸ್ಕಾರ ತಿಳಿಸುವಂತೆ ಸೂಚಿಸಿದ ಪ್ರಧಾನಿ ಮೋದಿ

    ಶಿವಮೊಗ್ಗ: ನಿಮ್ಮ ಪ್ರತಿಯೊಬ್ಬರ ಒಂದು ವೋಟ್ ಅತ್ಯಂತ ಬಹಳ ಮುಖ್ಯವಾಗಿದೆ. ಕರ್ನಾಟಕವನ್ನು ಶಕ್ತಿಯುತ ಪ್ರಬಲ ರಾಜ್ಯ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಮೋದಿ ಹೇಳಿದರು. ನನ್ನದೊಂದು ವೈಯಕ್ತಿಕ ಕೆಲಸ ಮಾಡುವಂತೆ ಮನವಿ ಮಾಡಿದ ಅವರು, ‘ಪ್ರತಿ ಮನೆ ಮನೆಗೆ ಭೇಟಿ ನೀಡಿ ನನ್ನ ನಮಸ್ಕಾರ, ಪ್ರಣಾಮಗಳನ್ನು ತಿಳಿಸಿ’ ‘ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಬಂದಿದ್ದರು, ನಿಮಗೆ ನಮಸ್ಕಾರ ತಿಳಿಸಿದ್ದಾರೆ’ ನಿಮ್ಮೆಲ್ಲರ ಆಶೀರ್ವಾದದಿಂದ ದೇಶ & ಕರ್ನಾಟಕದ ಜನರ ಸೇವೆಗೆ ಶಕ್ತಿ ಬರುತ್ತೆ, ಕರ್ನಾಟಕದ ಜನೆ ಸೇವೆ ಮಾಡಲು ನನಗೆ ಮತ್ತಷ್ಟು ಶಕ್ತಿ ಲಭಿಸಲಿದೆ ಎಂದರು.

  • 07 May 2023 03:15 PM (IST)

    Karnataka Election Live: ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್​ ಕಂಟಕ: ಮೋದಿ

    ಶಿವಮೊಗ್ಗ: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹೂಡಿಕೆ ಪ್ರಮಾಣ ಹೆಚ್ಚಳವಾಗಿದೆ ಎಂದು ಸಮಾವೇಶದಲ್ಲಿ ಪ್ರಧಾನಿ ಮೋದಿ ಹೇಳಿದರು. ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಳಕ್ಕಾಗಿ ಕಾನೂನು ತಂದಿದ್ದೇವೆ. ಕಾಂಗ್ರೆಸ್​ ಅಂತಹ ಕಾನೂನು ತೆಗೆಯುವುದಾಗಿ ಹೇಳುತ್ತಿದ್ದೆ. ಈ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್​ ಕಂಟಕವಾಗುತ್ತಿದೆ ಎಂದು ಎಚ್ಚರಿಸಿದರು.

  • 07 May 2023 03:13 PM (IST)

    Karnataka Election Live: ಪ್ರತಿ ವರ್ಷ 30 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ: ಪ್ರಧಾನಿ ಮೋದಿ

    ಶಿವಮೊಗ್ಗ: ಜಿಲ್ಲೆಯಲ್ಲೂ ಅನೇಕ ಯುವಕರಿಗೆ ಸಾಲಸೌಲಭ್ಯ ನೀಡಿದ್ದೇವೆ ಎಂದು ಹೇಳಿದ ಮೋದಿ, 10 ಲಕ್ಷ ಉದ್ಯೋಗ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಯಾವುದೇ ಉದ್ಯೋಗ ಸೃಷ್ಟಿಸದೇ ಯುವಕರನ್ನು ಮೋಸ ಮಾಡಿತ್ತು. ಬಿಜೆಪಿ ಪ್ರತಿ ವರ್ಷ 30 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿದ್ದೇವೆ. ಕೊವಿಡ್ ಸಂದರ್ಭದಲ್ಲೂ 30 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿದ್ದೇವೆ ಎಂದರು.

  • 07 May 2023 03:11 PM (IST)

    Karnataka Election Live: ಯುವಕರ ಕಲ್ಯಾಣಕ್ಕೆ ಕಾಂಗ್ರೆಸ್​ ಸರ್ಕಾರದ ಕೊಡುಗೆ ಶೂನ್ಯ: ಮೋದಿ

    ಶಿವಮೊಗ್ಗ: ಯುವಕರ ಕಲ್ಯಾಣಕ್ಕೆ ಕಾಂಗ್ರೆಸ್​ ಸರ್ಕಾರ ಏನೂ ಮಾಡಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. BJP ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗಿದೆ. ಕಳೆದ 9 ವರ್ಷಗಳಲ್ಲಿ 300ಕ್ಕೂ ಹೆಚ್ಚು ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗಿದೆ. ಹೊಸದಾಗಿ ಅನೇಕ ವಿಶ್ವವಿದ್ಯಾಲಯಗಳನ್ನು ಸಹ ಆರಂಭಿಸಲಾಗಿದೆ. ಮುದ್ರಾ ಯೋಜನೆ ಮೂಲಕ ಯುವಕರಿಗೆ ಸಾಲಸೌಲಭ್ಯ ನೀಡಿದ್ದೇವೆ. ಉದ್ಯೋಗಕ್ಕಾಗಿ ಯುವಕರಿಗೆ 20 ಲಕ್ಷ ಕೋಟಿಗೂ ಹೆಚ್ಚು ಹಣ ನೀಡಿದ್ದೇವೆ ಎಂದರು.

  • 07 May 2023 03:08 PM (IST)

    Karnataka Election Live: ಭ್ರಷ್ಟಾಚಾರದ ಮೂಲಕ ಶ್ರೀಮಂತರಾದ ಕಾಂಗ್ರೆಸ್ ನಾಯಕರು: ಮೋದಿ

    ಶಿವಮೊಗ್ಗ: ಸ್ಟಾರ್ಟ್​ಪ್ ಕ್ಷೇತ್ರದಲ್ಲೂ ನಾವು ಸಾಕಷ್ಟು ಬೆಳೆದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಸಮಾವೇಶದಲ್ಲಿ ಮಾತನಾಡಿದ ಅವರು, ಸೈನಿಕ ಶಾಲೆಗಳನ್ನು ತೆರೆದಿದ್ದೇವೆ ಎಂದರು. ಕರ್ನಾಟಕದ ಅಭಿವೃದ್ಧಿ ಕಾಂಗ್ರೆಸ್​ ಪಕ್ಷ ಎಂದೂ ಬಯಸುವುದಿಲ್ಲ. ಭ್ರಷ್ಟಾಚಾರದ ಮೂಲಕ ಕಾಂಗ್ರೆಸ್​ ನಾಯಕರು ಶ್ರೀಮಂತರಾಗುತ್ತಿದ್ದಾರೆ. ಆದರೆ ಕರ್ನಾಟಕದ ಅಭಿವೃದ್ಧಿಗೆ ಒಳ್ಳೆಯ ಯೋಜನೆ ತಂದಿಲ್ಲ ಎಂದರು.

  • 07 May 2023 03:06 PM (IST)

    Karnataka Election Live: ಅಡಿಕೆ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಿದ ಬಿಜೆಪಿ ಸರ್ಕಾರ: ಮೋದಿ

    ಶಿವಮೊಗ್ಗ: ಅಡಿಕೆ‌ ಆಮದು ನೀತಿಯಲ್ಲಿ ಕಾಂಗ್ರೆಸ್​ಗೂ ಬಿಜೆಪಿಗೂ ಅಂತರವಿದೆ. ಅಡಿಕೆ ಬೆಳೆಗಾರರ ಸಂಕಷ್ಟ ಎದುರಾಗಿತ್ತು. ಯಡಿಯೂರಪ್ಪ ಗುಜರಾತ್​ಗೆ ನನ್ನ ನೋಡಲು ಬಂದಿದ್ದರು. ರೈತರ ರಕ್ಷಣೆ ಮಾಡುವಂತೆ ನನ್ನ ಕೇಳಿಕೊಂಡಿದ್ದರು. ವಿದೇಶದಿಂದ ಅಡಿಕೆ ಆಮದು ಮಾಡಿದರೆ ಇಲ್ಲಿನ ರೈತರಿಗೆ ಅನ್ಯಾಯವಾಗಲಿದೆ ಎಂದಿದ್ದರು. ನಾನು ದೆಹಲಿಗೆ ಹೋದ ಬಳಿಕ ನೀತಿಯಲ್ಲಿ ಬದಲಾವಣೆ ಮಾಡುವ ಮೂಲಕ ಅಡಿಕೆ ಆಮದು ಸುಂಕ ಹೆಚ್ಚಿಸಿದ್ದೇವೆ. ಇದರಿಂದ ಕರ್ನಾಟಕದ ರೈತರಿಗೆ ಅನುಕೂಲವಾಗಿದೆ ಎಂದರು.

  • 07 May 2023 03:03 PM (IST)

    Karnataka Election Live: ಸಾಲಮನ್ನಾ ಮಾಡುವುದಾಗಿ ಹೇಳಿ ಕಾಂಗ್ರೆಸ್​ ಹಣ ಲೂಟಿ ಮಾಡಿದೆ: ಮೋದಿ

    ಶಿವಮೊಗ್ಗ: 9 ವರ್ಷಗಳಲ್ಲಿ 2000ಕ್ಕೂ ಹೆಚ್ಚು ವಿವಿಧ ಬಿತ್ತನೆ ಬೀಜ ಉತ್ಪಾದನೆ ಮಾಡಲಾಗಿದೆ ಎಂದು ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಪಿಎಂ ಫಸಲ್ ಭೀಮಾ ಯೋಜನೆ ಮೂಲಕ ರೈತರಿಗೆ 1 ಲಕ್ಷ 30 ಕೋಟಿ ಹಣ ನೀಡಿದ್ದೇವೆ. ಸಾಲಮನ್ನಾ ಮಾಡುವುದಾಗಿ ಹೇಳಿ ಕಾಂಗ್ರೆಸ್​ ಹಣ ಲೂಟಿ ಮಾಡಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಿರಲಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ ಎಂದರು.

  • 07 May 2023 03:01 PM (IST)

    Karnataka Election Live: ಸುಳ್ಳು ಗ್ಯಾರಂಟಿಗಳನ್ನು ನೀಡಿ ಜನರಿಗೆ ಕಾಂಗ್ರೆಸ್ ಮೋಸ ಮಾಡುತ್ತಿದೆ: ಮೋದಿ

    ಶಿವಮೊಗ್ಗ: ಕಾಂಗ್ರೆಸ್​ನವರು ಸುಳ್ಳು ಗ್ಯಾರಂಟಿಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಟೀಕಿಸಿದ ಪ್ರಧಾನಿ ಮೋದಿ, ನಾನು ಗುಜರಾತ್ ಸಿಎಂ ಆಗಿದ್ದಾಗ ಯಡಿಯೂರಪ್ಪ ಕೂಡ ಸಿಎಂ ಇದ್ದರು. ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕಾಗಿ ಯಡಿಯೂರಪ್ಪನವರು ನಿಯೋಗ ತೆಗೆದುಕೊಂಡು ದೆಹಲಿಗೆ ಬಂದಿದ್ದರು. ಶಿವಮೊಗ್ಗದ ರೈತರ ಕಲ್ಯಾಣಕ್ಕಾಗಿ ಯಡಿಯೂರಪ್ಪ ಶ್ರಮಿಸಿದ್ದಾರೆ. 2014ರಲ್ಲಿ ನಿಮ್ಮ ಸೇವೆ ಮಾಡಲು ನನ್ನನ್ನು ದೆಹಲಿಗೆ ಕಳಿಸಿದ್ದೀರಿ. ಅಡಕೆ ಬೆಳೆಗಾರರಿಗೆ ಕಲ್ಯಾಣಕ್ಕೆ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಅಡಕೆ ಬೆಳಗಾರರು ಯಾವುದೇ ಕಾರಣಕ್ಕೂ ಆಂತಕಕ್ಕೆ ಒಳಗಾಗಬೇಡಿ. ಯೋಜನೆಗಳ ಮೂಲಕ ರೈತರ ಸಮಸ್ಯೆಗೆ ಪರಿಹಾರ ಕೈಗೊಂಡಿದ್ದೇವೆ ಎಂದರು.

  • 07 May 2023 02:59 PM (IST)

    Karnataka Election Live: ರಾಜ್ಯದ ಅಭಿವೃದ್ಧಿ ಮಾಡುವ ಗುರಿ ನನ್ನದು: ಮೋದಿ ಭರವಸೆ

    ಶಿವಮೊಗ್ಗ: ಯಾವುದೇ ರಾಜಕೀಯ ಪಕ್ಷ ಹನ್ನೊಂದು ಘಂಟೆ ಒಳಗೆ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. ಇದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದ ಪ್ರಧಾನಿ ಮೋದಿ, ನೀಟ್ ಪರೀಕ್ಪೆ ಇಂದು ಇತ್ತು. ಮೊದಲು ಮಕ್ಕಳ ಪರೀಕ್ಷೆ ಮುಖ್ಯ. ಈ ಹಿನ್ನಲೆಯಲ್ಲಿ ಬೆಳಗ್ಗೆ ಬೇಗ ರೋಡ್ ಶೋ ಮಾಡಿದ್ದೇವು. ಇವತ್ತು ಭಾನುವಾರವಾದರೂ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಜೀವನಪೂರ್ತಿ ಕರ್ನಾಟಕದ ಋಣಿಯಾಗಿರುವೆ. ಜನರ ಪ್ರೀತಿ ವಿಶ್ವಾಸ ಮರೆಯುವುದಿಲ್ಲ. ನಮ್ಮ ಪರೀಕ್ಷೆ ಮೇ 10 ರಂದು ಇದೆ. ಅಸಲಿ ಗ್ಯಾರಂಟಿ ನೀಡುತ್ತೇನೆ. ರಾಜ್ಯದ ಅಭಿವೃದ್ಧಿ ಮಾಡುವ ಗುರಿ ನನ್ನದು ಎಂದು ಭರವಸೆ ನೀಡಿದರು.

  • 07 May 2023 02:50 PM (IST)

    Karnataka Election Live: ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ: ಮೋದಿ

    ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ಮೋದಿ ವ ವಿಶ್ವಾಸ ವ್ಯಕ್ತಪಡಿಸಿ ‘ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ’ ಎಂದು ಪುನುರುಚ್ಚಿಸಿದರು. ಕರ್ನಾಟಕದ ಪ್ರತಿ ನಾಗರಿಕರ ನಿಮ್ಮ ಈ ಪ್ರೀತಿ ಅವಿಸ್ಮರಣೀಯ. ನಮ್ಮ ಈ ಪ್ರೀತಿಗೆ ಭಾಷೆ ಯಾವುದೇ ಕಾರಣಕ್ಕೂ ಅಡ್ಡಿಯಾಗುತ್ತಿಲ್ಲ ಎಂದು ಹೇಳಿದರು.

  • 07 May 2023 02:48 PM (IST)

    Karnataka Election Live: ಯಡಿಯೂರಪ್ಪ ಜೊತೆ ಫೋನ್​ಕಾಲ್​ನಲ್ಲಿ ಮಾತನಾಡಿದ ಮೋದಿ

    ಶಿವಮೊಗ್ಗ: ಈ ಹಿಂದೆ ರೈತ ಬಂಧು ಯಡಿಯೂರಪ್ಪ ಜನ್ಮದಿನದಂದು ಶಿವಮೊಗ್ಗಕ್ಕೆ ಬಂದಿದ್ದೆ ಎಂದು ಹೇಳಿದ ಮೋದಿ, ಇತ್ತೀಚೆಗೆ ಈಶ್ವರಪ್ಪ ಬಳಿ ಫೋನ್ ನಲ್ಲಿ ಮಾತನಾಡಿದ್ದೆ. ಶಿವಮೊಗ್ಗದ ಜನತೆ ನನಗೆ ವಿಶ್ವಾಸ ತೋರಿದ್ದಾರೆ. ನನಗೆ ಗೊತ್ತು ಬಿಜೆಪಿ ಸರಕಾರ ಮತ್ತೆ ಬರಲಿದೆ ಎಂದು ಯಡಿಯೂರಪ್ಪ ಹೇಳಿದ್ದಾಗಿ ತಿಳಿಸಿದರು. ಅಲ್ಲದೆ, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ ಅಂತಾನೂ ಹೇಳಿದರು.

  • 07 May 2023 02:45 PM (IST)

    Karnataka Election Live: ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ

    ಶಿವಮೊಗ್ಗ: ಆಯನೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಮಲೆನಾಡಿನ ಮಡಿಲು ಸೌಂದರ್ಯದ ಹೊನಲು ಶಿವಮೊಗ್ಗ, ರಾಷ್ಟ್ರಕವಿ ಕುವೆಂಪು ಜನ್ಮಭೂಮಿಯ ಜನರಿಗೆ ನನ್ನ ನಮಸ್ಕಾರಗಳು, ಸಿಗಂದೂರು ಚೌಡೇಶ್ವರಿ ಪಾದಗಳಿಗೆ ನನ್ನ ನಮನಗಳು, ಶಿವಮೊಗ್ಗದ ಕೋಟೆ ಆಂಜನೇಯನಿಗೆ ನಮನಗಳು ಎಂದು ಹೇಳಿ ಈ ಹಿಂದೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದನ್ನು ನೆನಪಿಸಿಕೊಂಡರು.

  • 07 May 2023 02:42 PM (IST)

    Karnataka Election Live: ಬಾರಿ 135 ಸ್ಥಾನ ಗೆದ್ದು ಸರ್ಕಾರ ರಚನೆ ಮಾಡುತ್ತೇವೆ: ಯಡಿಯೂರಪ್ಪ

    ಶಿವಮೊಗ್ಗ: ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಬಂದಿದ್ದು ನಮ್ಮೆಲ್ಲರ ಸೌಭಾಗ್ಯ ಎಂದು ಆಯನೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು. ಶಿವಮೊಗ್ಗ ಜಿಲ್ಲೆಯ 7ಕ್ಕೆ ಏಳು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು. ಶಿವಮೊಗ್ಗವನ್ನು ಮಾದರಿ ಜಿಲ್ಲೆಯಾಗಿ ಮಾಡಿದ್ದೇವೆ. ನೀವು ಭಾರತಕ್ಕೆ ಅಷ್ಟೇ ಪ್ರಧಾನಿ ಅಲ್ಲ, ನೀವು ವಿಶ್ವದ ನಾಯಕ. ಈ ಬಾರಿ 135 ಸ್ಥಾನ ಗೆದ್ದು ಸರ್ಕಾರ ರಚನೆ ಮಾಡುತ್ತೇವೆ ಎಂದರು.

  • 07 May 2023 02:12 PM (IST)

    Karnataka Election Live: ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುತ್ತಿರುವುದು ನನ್ನ ಪುಣ್ಯ: ಬಿವೈ ವಿಜಯೇಂದ್ರ 

    ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರು ಒಂದು ದಿನವೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರು ಹಗಲು ರಾತ್ರಿ ಎನ್ನದೆ ದೇಶದ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ.  ದೇಶದ ಸ್ವಾಭಿಮಾನಿ ಜನರು ತಲೆ ಎತ್ತಿ ನಡೆಯುವ ಕಾಲ ಬಂದಿದೆ. ರಾಹುಲ್ ಗಾಂಧಿಯಂತ ಪುಣ್ಯಾತ್ಮ ಪ್ರಧಾನಿಯಾಗಿದ್ದರೇ ದೇಶ ಏನ್ ಆಗುತ್ತಿತ್ತು. ಶ್ರೀಲಂಕಾ, ಪಾಕಿಸ್ತಾನಕ್ಕೂ ಮುಂಚೆ ಭಾರತ ದಿವಾಳಿಯಾಗುತ್ತಿತ್ತು. ಬಿಎಸ್​ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ‌ರಾಜೀನಾಮೆ ಕೊಟ್ಟು ಮನೆಯಲ್ಲಿ ಕೂರುತ್ತಾರೆ ಎಂದು ವಿರೋಧ ಪಕ್ಷದವರು ಭಾವಿಸಿದ್ದರು. ಆದರೆ ಯಡಿಯೂರಪ್ಪನವರು 140 ಸ್ಥಾನಗಳನ್ನು ಗೆಲ್ಲಿಸುವ ಸವಾಲು ಹಾಕಿದ್ದಾರೆ. ನಾನು ನನ್ನ ಜೀವನದ ಮೊದಲ ಚುನಾವಣೆ ಎದುರಿಸುತ್ತಿದ್ದೇನೆ. ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುತ್ತಿರುವುದು ನನ್ನ ಪುಣ್ಯ  ಎಂದು ಶಿವಮೊಗ್ಗ ತಾಲೂಕಿನ ಆಯನೂರಿನಲ್ಲಿ ಆಯೋಜಿಸಲಾಗಿರುವ ಬಿಜೆಪಿ ಸಮಾವೇಶದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

  • 07 May 2023 01:40 PM (IST)

    Karnataka Election Live: ಶಿವಮೊಗ್ಗಕ್ಕೆ ಆಗಮಿಸಿದ ಪ್ರಧಾನಿ ಮೋದಿ

    ಶಿವಮೊಗ್ಗ: ಚುನಾವಣಾ ಪ್ರಚಾರ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಇಲ್ಲಿಂದ ಹೆಲಿಕಪ್ಟಾರ್​ ಮೂಲಕ ಆಯನೂರಿಗೆ ತೆರಳಲಿದ್ದಾರೆ. ಅಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

  • 07 May 2023 01:23 PM (IST)

    Karnataka Election Live: ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಭಾರೀ ಅಂತರದಲ್ಲಿ ಸೋಲುತ್ತಾರೆ: ಅಮಿತ್​ ಶಾ

    ಬೆಂಗಳೂರು: ಕಾಂಗ್ರೆಸ್​ ಅಭ್ಯರ್ಥಿಗಳಾದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಭಾರೀ ಅಂತರದಲ್ಲಿ ಸೋಲುತ್ತಾರೆ. ಕಾಂಗ್ರೆಸ್​​ ಹಿಂದೆ ಘೋಷಿಸಿರುವ ಭರವಸೆಗಳನ್ನೇ ಮತ್ತೆ ಘೋಷಿಸಿದೆ. ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಇದೆ. ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಗೆಲ್ಲುತ್ತಾರೆ. ನರೇಂದ್ರ ಮೋದಿ ಪ್ರಚಾರ ನಡೆಸಿದ ಎಲ್ಲ ಕಡೆಯೂ ಬಿಜೆಪಿ ಗೆದ್ದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ.

  • 07 May 2023 12:47 PM (IST)

    Karnataka Election Live: ಕನಕಪುರ ಕೋಟೆಗೆ ಸಿಎಂ ಬೊಮ್ಮಾಯಿ ಎಂಟ್ರಿ

    ರಾಮನಗರ: ಕನಕಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ರಣಕಣ ರಂಗೇರಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಕೋಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತೆರಳಿದ್ದು, ಆರ್​. ಅಶೋಕ್​ ಪರ ಮತಯಾಚನೆ ನಡೆಸಲಿದ್ದಾರೆ. ಕನಕಪುರದ ಕೆಎಸ್​ಅರ್​ಟಿಸಿ ಡಿಪೋದಿಂದ ತಾಲೂಕು ಕಚೇರಿವರೆಗೂ ರೋಡ್​ ಶೋ ನಡೆಸಲಿದ್ದಾರೆ. ಸಿಎಂ ಬೊಮ್ಮಾಯಿ ಆಗಮನ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಿಎಂ ಬೊಮ್ಮಾಯಿಯವರಿಗೆ ಅಭ್ಯರ್ಥಿ ಆರ್​. ಅಶೋಕ್, ಮಾಜಿ ಎಮ್​ಎಲ್​ಸಿ ಅಶ್ವತ್ಥ್ ನಾರಾಯಣ್ ಗೌಡ ಸಾಥ್ ನೀಡಿದ್ದಾರೆ.

  • 07 May 2023 11:59 AM (IST)

    Karnataka Election Live: ಮಲೆನಾಡಿನಲ್ಲಿ ಇಂದು ಪ್ರಧಾನಿ ಮೋದಿ ಪ್ರಚಾರ

    ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರು ಇಂದು (ಮೇ.07)ಮಲೆನಾಡು ಶಿವಮೊಗ್ಗದ ಆಯನೂರಿನಲ್ಲಿ ಪ್ರಚಾರ ಮಾಡಲಿದ್ದಾರೆ. ಶಿವಮೊಗ್ಗ,ಚಿಕ್ಕಮಗಳೂರು ಕ್ಷೇತ್ರಗಳ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಈ ಹಿನ್ನೆಲೆ ಮಧ್ಯಾಹ್ನ 1-40ಕ್ಕೆ ಬೃಹತ್ ಸಮಾವೇಶ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಪ್ರಧಾನಿ ಮೋದಿಯವರಿಗೆ ಬಜರಂಗಬಲಿ ಆಕೃತಿ ಗಿಫ್ಟ್ ಕೊಡಲು ಜಿಲ್ಲಾ ಬಿಜೆಪಿ ಘಟಕ ಸಿದ್ದವಾಗಿದೆ.

  • 07 May 2023 11:54 AM (IST)

    Karnataka Election Live: ಬೆಳಗಾವಿಯಲ್ಲಿ ಅಮಿತ್​ ಶಾಗೆ ಪ್ರಮೋದ್ ಸಾವಂತ್ ಸಾಥ್​​​​

    ಬೆಳಗಾವಿ: ಬೆಳಗಾವಿ ದಕ್ಷಿಣ ಬಿಜೆಪಿ ಅಭ್ಯರ್ಥಿ ಅಭಯ್ ಪಾಟೀಲ್ ಪರ ಕೇಂದ್ರ ಸಚಿವ ಅಮಿತ್ ಶಾ ಪ್ರಚಾರ ನಡೆಸಿದ್ದು, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಾಥ್​​​​ ನೀಡಿದ್ದಾರೆ.

  • 07 May 2023 11:42 AM (IST)

    Karnataka Election Live: ಪ್ರಧಾನಿ ನರೇಂದ್ರ ಮೋದಿ ರೋಡ್​ ಶೋ ಅಂತ್ಯ

    ಬೆಂಗಳೂರು: ನಗರದಲ್ಲಿನ ಪ್ರಧಾನಿ ನರೇಂದ್ರ ಮೋದಿಯವರ ರೋಡ್​ ಶೋ ಮುಕ್ತಾಯವಾಗಿದ್ದುಹೆಚ್​ಎಎಲ್​ ಏರ್​ಪೋರ್ಟ್​ನತ್ತ ತೆರಳಿದ್ದಾರೆ.

  • 07 May 2023 11:18 AM (IST)

    Karnataka Election Live: ಕುಂದಾನಗರಿಯಲ್ಲಿ ಅಮಿತ್​ ಶಾ ರೋಡ್​ ಶೋ

    ಬೆಳಗಾವಿ: ನಿನ್ನೆ (ಮೇ.06) ಜಿಲ್ಲಾ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ ಇಂದು (ಮೇ.07)ಬೆಳಗಾವಿ ದಕ್ಷಿಣ ಕ್ಷೇತ್ರದ ವಡಗಾವಿಯ ಅರಳಿಕಟ್ಟೆಯಿಂದ ರೋಡ್ ಶೋ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಅಭಯ್​ ಪಾಟೀಲ್ ಪರ ಮತಯಾಚಿಸುತ್ತಿದ್ದಾರೆ. ರೋಡ್​ ಶೋ  ರೇಣುಕಾ ಹೋಟೆಲ್, ವಡಗಾವಿ ಮುಖ್ಯರಸ್ತೆ, ನಾಥ್ ಫೈ ವೃತ್ತ, ಶಹಾಪುರ ಖಡೇಬಜಾರ್ ಮಾರ್ಗವಾಗಿ ತೆರಳಿ ಶಹಾಪುರದ ಶಿವಚರಿತ್ರೆ ಬಳಿ ಮುಕ್ತಾಯವಾಗಲಿದೆ.

  • 07 May 2023 11:15 AM (IST)

    Karnataka Assembly Election 2023: ಕೇರಳದ ಚಂಡೆ ವಾದ್ಯ ಮೂಲಕ ಪ್ರಧಾನಿ ಮೋದಿಗೆ ಸ್ವಾಗತ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಕೇರಳದ ಕಲಾ ತಂಡ ಚಂಡೆ ವಾದ್ಯ ನುಡಿಸಿದರು.

  • 07 May 2023 10:41 AM (IST)

    Karnataka Election Live: ಪ್ರಧಾನಿ ಮೋದಿ ರೋಡ್​ ಶೋ ವೇಳೆ ಹನುಮಾನ್ ಚಾಲೀಸ್ ಪಠಣ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ರೋಡ್​ ಶೋ ವೇಳೆ ನೂರಾರು ಪಂಡಿತರು ಹನುಮಾನ್ ಚಾಲೀಸ ಮಂತ್ರ ಪಠಣೆ ಮಾಡಿದರು.

  • 07 May 2023 10:16 AM (IST)

    Karnataka Election Live: ಪ್ರಧಾನಿ ಮೋದಿ ರೋಡ್​ ಶೋ ಆರಂಭ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್​ ಶೋ ಆರಂಭವಾಗಿದೆ. ಇದಕ್ಕೂ ಮುನ್ನ ಕೆಂಪೇಗೌಡ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.

  • 07 May 2023 10:09 AM (IST)

    Karnataka Election Live: ಕೆಲವೇ ಕ್ಷಣದಲ್ಲಿ ಪ್ರಧಾನಿ ಮೋದಿ ರೋಡ್​ ಶೋ ಆರಂಭ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ರಾಜಭವನದಿಂದ ನ್ಯೂ ತಿಪ್ಪಸಂದ್ರಗೆ ಆಗಮಿಸಿದ್ದು, ಕೆಲವೇ ಕ್ಷಣಗಳಲ್ಲಿ ರೋಡ್​ಶೋ ಆರಂಭವಾಗಲಿದೆ.

  • 07 May 2023 10:03 AM (IST)

    Karnataka Election Live: ನನ್ನ ಬೆಳವಣಿಗೆ ಸಹಿಸದೆ ಕೆಲವರು ಷಡ್ಯಂತ್ರ ಮಾಡಿ ಪ್ರಕರಣದಲ್ಲಿ ಸಿಕ್ಕಿ ಹಾಕಿಸಿದರು: ಮಾಡಾಳ್​ ವಿರೂಪಾಕ್ಷಪ್ಪ

    ದಾವಣಗೆರೆ: ನನ್ನ ಬೆಳವಣಿಗೆ ಸಹಿಸದೆ ಕೆಲವರು ಷಡ್ಯಂತ್ರ ಮಾಡಿ ಆರೋಪಿ‌ ಮಾಡಿದರು. ಆದರೆ ಚುನಾವಣೆ ಮುಗಿದು 15 ದಿನಗಳಲ್ಲಿ ಲೋಕಾಯುಕ್ತ  ಪ್ರಕರಣದಿಂದ ಮುಕ್ತಿ ಆಗುವೆ. ಲೋಕಾಯುಕ್ತ ದಾಳಿ ಆದಾಗ ನಾನು ಚನ್ನಗಿರಿಯಲ್ಲಿದ್ದೆ. ಆದರೂ ನನ್ನ ಆರೋಪಿ ನಂಬರ್ ಓನ್ ಮಾಡಿದರು. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ನನಗೆ ‌ಜನರಿಂದ ಬೆಂಬಲ ವ್ಯಕ್ತವಾಯಿತು. ಇದನ್ನು ಸಹಿದ ಕೆಲವರು‌ ಕುತಂತ್ರ ಮಾಡಿ ಪ್ರಕರಣದಲ್ಲಿ ಸಿಕ್ಕಿ ಹಾಕಿಸಿದರು. ನನ್ನ ವಿರುದ್ಧ ಬೇಕಾದಷ್ಟು ಪಿತೂರಿ ಮಾಡಲಿ. ನಾವು ಚುನಾವಣಾ ಬೇಡ ಎಂದು ಮನೆಯಲ್ಲಿ ಕುಳಿತಾಗ ಜನರೇ ನನ್ನ ಪುತ್ರ ಮಾಡಾಳ್ ಮಲ್ಲಿಕಾರ್ಜುನ ನನ್ನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ನನ್ನ ಮಗ ಗೆಲ್ಲುತ್ತಾನೆ ಎಂದು ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ.

  • 07 May 2023 08:33 AM (IST)

    Karnataka Election Live: ಕೂಡಲಸಂಗಮಕ್ಕೆ ಇಂದು ಅಮಿತ್​ ಶಾ ಭೇಟಿ

    ಬಾಗಲಕೋಟೆ: ಇಂದು (ಮೇ.07) ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11.50ಕ್ಕೆ ಕೂಡಲಸಂಗಮಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಸಂಗಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿರುವ ಅಮಿತ್​ ಶಾ ಅವರು ನಂತರ ಇಳಕಲ್​ ನಗರಕ್ಕೆ ತೆರಳಲಿದ್ದಾರೆ.  ಇಳಕಲ್​ನ ವೀರಮಣಿ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಿ ಹುನಗುಂದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಅವರ ಪರ ಪ್ರಚಾರ ನಡೆಸಲಿದ್ದಾರೆ.

  • 07 May 2023 07:52 AM (IST)

    Karnataka Election Live: ಇಂದು ಮೈಸೂರಲ್ಲಿ ಸಿದ್ದರಾಮಯ್ಯ ಪ್ರಚಾರ

    ಮೈಸೂರು: ನಗರದಲ್ಲಿ ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಪ್ರಚಾರ, ಮತ್ತೊಂದು ಕಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತಬೇಟೆಯಾಡಲಿದ್ದಾರೆ. ಜಿಲ್ಲೆಯ ಕಾಂಗ್ರೆಸ್​ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಹೆಚ್​ಡಿ ಕೋಟೆ ಕ್ಷೇತ್ರದಲ್ಲಿ ಅನಿಲ್ ಚಿಕ್ಕಮಾದು ಪರ,  1.30ಕ್ಕೆ ಕೆ ಆರ್ ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ರವಿಶಂಕರ್ ಪರ,  ಸಂಜೆ 4 ಗಂಟೆಗೆ ಪಿರಿಯಾಪಟ್ಟಣದಲ್ಲಿ ಕೆ ವೆಂಕಟೇಶ್ ಪರ,  ಸಂಜೆ 6 ಗಂಟೆಗೆ ಹುಣಸೂರು ಕ್ಷೇತ್ರದಲ್ಲಿ ಹೆಚ್ ಪಿ ಮಂಜುನಾಥ್ ಪರ ಪ್ರಚಾರ ಮಾಡಲಿದ್ದಾರೆ. ಪ್ರಚಾರ ಮುಗಿಸಿ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.

  • 07 May 2023 07:42 AM (IST)

    Karnataka Assembly Election Live: ಕೋಟೆನಾಡಲ್ಲಿ ಇಂದು ನಟ ಸುದೀಪ್​ ಪ್ರಚಾರ

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಇಂದು (ಮೇ.07) ನಟ ಕಿಚ್ಚ ಸದೀಪ್ ಪ್ರಚಾರ ನಡೆಸಲಿದ್ದಾರೆ. ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಭರಮಸಾಗರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ಪರ ಹೊಳಲ್ಕೆರೆ, ಚಳ್ಳಕೆರೆ ಮತಕ್ಷೇತ್ರಗಳಲ್ಲಿ ರೋಡ್​ ಶೋ ನಡೆಸಲಿದ್ದಾರೆ. ಮಧ್ಯಾಹ್ನ 3ಕ್ಕೆ ಭರಮಸಾಗರ ಗ್ರಾಮದಲ್ಲಿ, ಮಧ್ಯಾಹ್ನ 4 ಗಂಟೆಗೆ ಚಳ್ಳಕೆರೆ ಪಟ್ಟಣದಲ್ಲಿ ಮತಾಯಾಚಿಸಲಿದ್ದಾರೆ.

  • 07 May 2023 07:34 AM (IST)

    Karnataka Assembly Election Live: ಇಂದು ಬೀದರ್​​ನಲ್ಲಿ ಶಿವರಾಜ್​ ಕುಮಾರ್​ ಪ್ರಚಾರ

    ಬೀದರ್​​: ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಅಶೋಕ್ ಖೇಣಿ ಪರ ಇಂದು (ಮೇ.07) ನಟ ಹ್ಯಾಟ್ರಿಕ್ ಹಿರೋ ಶಿವರಾಜ್​ ಕುಮಾರ್​ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 10:30ಕ್ಕೆ ಮನ್ನಾಏಖೇಳಿ ಮಧ್ಯಾಹ್ನ 12 ಕ್ಕೆ ನಿರ್ಣಾ 1:30ಕ್ಕೆ ಬೇಮಳಖೇಡಾದಲ್ಲಿ ರೋಡ್ ಶೋ ನಡೆಸುವುದರ ಮೂಲಕ ಮತಯಾಚಿಸಲಿದ್ದಾರೆ. ಶಿವರಾಜ್ ಕುಮಾರ್ ಅವರಿಗೆ ಗೀತಾ ಶಿವರಾಜ್ ಕುಮಾರ್ ಅವರು ಸಾಥ್​​ ನೀಡಲಿದ್ದಾರೆ.

  • 07 May 2023 07:30 AM (IST)

    Karnataka Assembly Election Live: ಇಂದು ಮೈಸೂರು ಜಿಲ್ಲೆಗೆ ಪ್ರಧಾನಿ ಮೋದಿ ಭೇಟಿ

    ಮೈಸೂರು:  ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಮೈಸೂರು ಜಿಲ್ಲೆ ನಂಜನಗೂಡು ಕ್ಷೇತ್ರಕ್ಕೆ ಭೇಟಿ ನೀಡಿ, ಹಳೇ ಮೈಸೂರು ಭಾಗದಲ್ಲಿ ಮತಬೇಟೆಯಾಡಲಿದ್ದಾರೆ. ನಂಜನಗೂಡು ತಾಲೂಕಿನ ಎಲಚಿಗೆರೆ ಬೋರೆ ಗ್ರಾಮದಲ್ಲಿ ಸಂಜೆ 4.30ಕ್ಕೆ ಆಯೋಜಿಸಲಾಗಿರುವ ಬೃಹತ್ ಸಮಾವೇಶದಲ್ಲಿ ಮೈಸೂರು, ಚಾಮರಾಜನಗರ, ಕೊಡುಗು ವ್ಯಾಪ್ತಿಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.

  • 07 May 2023 07:07 AM (IST)

    Karnataka Assembly Election Live: ಬೆಂಗಳೂರು ಉತ್ತರದಲ್ಲಿ ಇಂದು ಪ್ರಧಾನಿ ಮೋದಿ ರೋಡ್​ ಶೋ

    ಬೆಂಗಳೂರು: ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು (ಮೇ.07) ಎರಡನೇ ಹಂತದ ರೋಡ್​ ಶೋ ನಡೆಸಲಿದ್ದಾರೆ. ನ್ಯೂ ತಿಪ್ಪಸಂದ್ರ ರಸ್ತೆಯಿಂದ ಟ್ರಿನಿಟಿ ಸರ್ಕಲ್ ವರೆಗೆ ಬರೊಬ್ಬರಿ 6.5 ಕಿ.ಮೀ ಉದ್ದದ ರೋಡ್ ಶೋ ನಡೆಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಪ್ರಧಾನಿ ಮೋದಿಯವರು ನ್ಯೂ ತಿಪ್ಪಸಂದ್ರ ರಸ್ತೆಯ ಕೆಂಪೇಗೌಡ ಪ್ರತಿಮೆ ನಮನ ಸಲ್ಲಿಸಿ ರೋಡ್ ಶೋ ಆರಂಭಿಸಲಿದ್ದಾರೆ. ಬಳಿಕ ಹೆಚ್​ಎಎಲ್ 2ನೇ ಹಂತ, 80 ಅಡಿ ರಸ್ತೆಯ ಜಂಕ್ಷನ್, ಹೆಚ್​ಎಎಲ್ 2ನೇ ಹಂತ, 12ನೇ ಮುಖ್ಯರಸ್ತೆ ಜಂಕ್ಷನ್, ಓಲ್ಡ್ ಮದ್ರಾಸ್ ರಸ್ತೆ ಮಾರ್ಗವಾಗಿ ಟ್ರಿನಿಟಿ ಸರ್ಕಲ್ ತಲುಪಲಿದೆ. ಬೆಳಿಗ್ಗೆ 10 ರಿಂದ 11:30ರವರೆಗೆ ರೋಡ್ ಶೋ ನಡೆಯಲಿದೆ. ಇಂದಿನಿ ರೋಡ್ ಶೋಗೆ ಬಿಜೆಪಿಯಿಂದ ಭಾರಿ ತಯಾರಿ ನಡೆಸಿದೆ.

  • Published On - May 07,2023 6:56 AM

    Follow us
    ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
    ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
    ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
    ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
    ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
    ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
    ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
    ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
    ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
    ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
    ‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
    ‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
    ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
    ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
    ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
    ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
    ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
    ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
    ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
    ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್