ಮಸೀದಿ ಬಳಿ ನಿಂತು ಮತಯಾಚನೆ: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪ

|

Updated on: May 02, 2023 | 9:01 AM

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದರೇ, ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಆದರೆ ಇದನ್ನು ಮರೆತ ಕೆಲ ರಾಜಕೀಯ ಪಕ್ಷಗಳು ಮಸೀದಿ ಬಳಿ ನಿಂತು ಮತಯಾಚಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿವೆ.

ಮಸೀದಿ ಬಳಿ ನಿಂತು ಮತಯಾಚನೆ: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪ
ಕಾಂಗ್ರೆಸ್​, ಎಸ್​ಡಿಪಿಐ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ (Model Code of Conduct) ಜಾರಿಯಲ್ಲಿದೆ. ಈ ಸಮಯದಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದರೇ, ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದೀಗ ನಗರದ ಡಿಜೆ ಹಳ್ಳಿಯ (DJ Halli) ಕೆಲ ಮಸೀದಿ (Mosque) ಬಳಿ ನಿಂತು ಕಾಂಗ್ರೆಸ್ (Congress), ಎಸ್​​ಡಿ‌ಪಿಐ (SDPI), ಬಿಎಸ್​ಬಿ (BSP), ಎಎಪಿ (APP) ಪಕ್ಷಗಳ ಕಾರ್ಯಕರ್ತರು ಪಕ್ಷದ ಪರ ಪ್ರಚಾರ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ. ಕಳೆದ ತಿಂಗಳು ಶುಕ್ರವಾರ ಏಪ್ರಿಲ್ 28 ರಂದು ಡಿಜೆ ಹಳ್ಳಿಯ ಟಿಪ್ಪು ಸರ್ಕಲ್ ಬಳಿಯ ಮೆಕ್ಕಾ ಮಸೀದಿ ಬಳಿ ನಮಾಜ್ ಸಮಯದಲ್ಲಿ ಎಸ್​​ಡಿಪಿಐ, ಕಾಂಗ್ರೆಸ್, ಬಿಎಸ್​ಪಿ ಕಾರ್ಯಕರ್ತರು ಪ್ರಚಾರ ಮಾಡಿದ್ದಾರೆ.

ಅದೇ ದಿಮ ಹುಸೇನಿಯಾ ಮಸೀದಿ ಬಳಿ ಎಎಪಿ, ಎಸ್​ಡಿಪಿಐ, ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ಮಾಡಿದ್ದಾರೆ. ಮಸೀದಿ ಒಳಗೆ ಹೋಗುವವರಿಗೆ, ಹೊರಗೆ ಬರುವವರಿಗೆ ತಮ್ಮ ಪಕ್ಷದ ಪರ ಮತಯಾಚನೆ ಮಾಡಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಧಾರ್ಮಿಕ ಸ್ಥಳದಲ್ಲಿ ಚುನಾವಣಾ ಪ್ರಚಾರ ನಡೆಸುವಂತಿಲ್ಲ

ನೀತಿ ಸಂಹಿತೆ ಜಾರಿಯಾದ ಮೇಲೆ ಕಟ್ಟುನಿಟ್ಟಾಗಿ ಪಾಲಿಸುವುದು ಪ್ರತಿಯೊಂಬ್ಬ ನಾಗರಿಕನ ಕರ್ತವ್ಯ ಒಂದು ವೇಳೆ ಉಲ್ಲಂಘಿಸಿದರೇ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ನೀತಿ ಸಂಹಿತೆ ಅಡಿಯಲ್ಲಿ ಅನೇಕ ನಿಬಂಧನೆಗಳಿದ್ದು ಅದರಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ನಡೆಸುವಂತಿಲ್ಲ ಕೂಡ ಒಂದು. ಏನಿದು ನಿಬಂಧನೆ ಇಲ್ಲಿದೆ ವಿವರ..

ಇದನ್ನೂ ಓದಿ: ಬೆಂಗಳೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಕ್ರಿಮಿನಲ್​ ಹಿನ್ನೆಲೆ ಬಹಿರಂಗ: ಇಲ್ಲಿದೆ ಜನನಾಯಕರ ಕೇಸ್​ ಹಿಸ್ಟರಿ

ಧಾರ್ಮಿಕ ಸಂಸ್ಥೆಗಳು (ದುರುಪಯೋಗ ತಡೆಗಟ್ಟುವಿಕೆ) ಕಾಯ್ದೆ-1988 ರ ಪ್ರಕಾರ ಧಾರ್ಮಿಕ ಸ್ಥಳವಾದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಇತರೆ ಧಾರ್ಮಿಕ ಸ್ಥಳದಲ್ಲಿ ಚುನಾವಣಾ ಪ್ರಚಾರ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.

ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಚುನಾವಣೆ ಪ್ರಚಾರ ಉದ್ದೇಶವಾಗಿ ಸಭೆ-ಸಮಾರಂಭ, ಉತ್ಸವ, ಮೆರವಣಿಗೆ ಹಾಗೂ ಜನ ಸಮೂಹ ಸೇರುವಿಕೆಯನ್ನು ನಿಷೇಧಿಸಿದ್ದು, ಧಾರ್ಮಿಕ ಸಂಸ್ಥೆಗಳ ವ್ಯವಸ್ಥಾಪಕರು, ಮುಖ್ಯಸ್ಥರು ರಾಜಕೀಯ ಪ್ರಚಾರಕ್ಕಾಗಿ ಈ ಸ್ಥಳವನ್ನು ಬಳಸಲು ಅನುಮತಿ ನೀಡಬಾರದೆಂದು ಸ್ಪಷ್ಟಪಡಿಸಲಾಗಿದೆ. ಇದಲ್ಲದೇ ಧಾರ್ಮಿಕ ಸಂಸ್ಥೆಯ ಅನುದಾನ ಅಥವಾ ಇತರೆ ಆಸ್ತಿಗಳನ್ನು ಸಹ ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ.
ಒಂದು ವೇಳೆ ಉಲ್ಲಂಘಿಸಿದ್ದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ 1951 ಮತ್ತು ಅನ್ವಯವಾಗುವ ಇತರೆ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ