ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election) ದಿನಾಂಕ ಘೋಷಣೆಯ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗದ (Election Commission of India) ಅಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲೆಗಳ ಎಸ್ಪಿ ನೇತೃತ್ವದ ತಂಡ ದಾಳಿ ಮಾಡಿ ಮತ್ತು ಚೆಕ್ಪೋಸ್ಟ್ಗಳಲ್ಲಿ ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಗಿಫ್ಟ್ಗಳು ಮತ್ತು ಮದ್ಯವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇನ್ನು ಅಬಕಾರಿ ಇಲಾಖೆಯ (Excise Department) ಅಧಿಕಾರಿಗಳು ಮತ್ತು ಆದಾಯ ತೆರಿಗೆ ಇಲಾಖೆ (Income Tax Department) ಅಧಿಕಾರಿಗಳು ದಾಳಿ ವೇಳೆ ಹಣ, ಹೆಂಡ ಮತ್ತು ಗಿಫ್ಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಹೀಗೆ ವಶಪಡಿಸಿಕೊಂಡಿರುವ ಕುರಿತು ಚುನಾವಣಾ ಆಯೋಗ ಅಂಕಿ-ಅಂಶ ಹೊರಡಿಸಿದ್ದು, 7,07,79,207 ಸಾವಿರ ಕೋಟಿ ರೂ. ಹಣವನ್ನು ಸೀಜ್ ಮಾಡಲಾಗಿದೆ ಎಂದು ತಿಳಿಸಿದೆ.
ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರ ದಾಳಿ ವೇಳೆ 5,80,007 ರೂ. ಮೌಲ್ಯದ 1,156.11 ಲೀ ಮದ್ಯ, 21,76,950 ರೂ. ಮೌಲ್ಯದ ಡ್ರಗ್ಸ್ ಹಾಗೂ 9,59,68,772 ಮೌಲ್ಯದ ಗಿಫ್ಟ್ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತು 172 ಎಫ್ಐಆರ್ ದಾಖಲಾಗಿವೆ. ಇನ್ನು ಆದಾಯ ತೆರಿಗೆ 3,90,00,000 ಸಾವಿರ ಕೋಟಿ ರೂ. ಹಣವನ್ನು ಜಪ್ತಿ ಮಾಡಿದೆ.
ಅಬಕಾರಿ ಇಲಾಖೆಯು ಕರ್ನಾಟಕದ ವಿವಿಧ ಭಾಗಗಳಲ್ಲಿ ಮದ್ಯ ಮತ್ತು ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದೆ. 11,66,14,868 ರೂ. ಮೌಲ್ಯದ 1,93,051 ಲೀಟರ್ ಮದ್ಯ, 12 ಕೆಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. 1,81,610. ಸಾಗಾಟಕ್ಕೆ ಬಳಸುತ್ತಿದ್ದ 150 ವಿವಿಧ ರೀತಿಯ ವಾಹನಗಳನ್ನು ಇಲಾಖೆ ವಶಪಡಿಸಿಕೊಂಡಿದೆ. ನಗದು, ಸಾಮಾಗ್ರಿ, ಮದ್ಯ ಮತ್ತು ಡ್ರಗ್ಸ್ ಸೇರಿದಂತೆ ಒಟ್ಟು 39,38,44,847 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
ಇದನ್ನೂ ಓದಿ: ವಿಧಾನಸಭಾ ಚುನಾವಣಾ 2023; ನಿರ್ಣಾಯಕ ಪಾತ್ರ ವಹಿಸಲಿರುವ ವಲಸಿಗರು!
ಕರ್ನಾಟಕದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಎಲ್ಲಾ 224 ಕ್ಷೇತ್ರಗಳಿಗೂ ಒಂದೇ ಬಾರಿ ಮತದಾನ ನಡೆಯಲಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ಚುನಾವಣಾ ಕದನ ಪ್ರಮುಖವಾಗಿ ನಡೆಯಲಿದೆ.
ಚುನಾವಣಾ ಆಯೋಗ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಾದ್ಯಂತ 58, 282 ಮತಗಟ್ಟೆಗಳನ್ನು ತೆರಯಲಿದೆ. ಪ್ರತಿ ಮತಗಟ್ಟೆಗೆ ಸರಾಸರಿ ಮತದಾರರ ಸಂಖ್ಯೆಯನ್ನು 883 ಎಂದು ಗುರುತಿಸಲಾಗಿದೆ. ಅರ್ಧದಷ್ಟು ಮತದಾನ ಕೇಂದ್ರಗಳು ವೆಬ್ ಕಾಸ್ಟಿಂಗ್ ಸೌಲಭ್ಯವನ್ನು ಹೊಂದಿರುತ್ತವೆ ಮತ್ತು 1320 ಮತಗಟ್ಟೆಗಳನ್ನು ಮಹಿಳಾ ಅಧಿಕಾರಿಗಳು ನಿರ್ವಹಿಸಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ