Karnataka Elections 2023: ವಿಧಾನಸಭಾ ಚುನಾವಣೆ 2023; ನಿರ್ಣಾಯಕ ಪಾತ್ರ ವಹಿಸಲಿರುವ ವಲಸಿಗರು!

ಚುನಾವಣೆಯಲ್ಲಿ ಒಂದು ಪಕ್ಷ ಗೆಲ್ಲಲು ಕನ್ನಡಿಗರ ವೋಟ್ ಮಾತ್ರ ಮುಖ್ಯವಾಗಿರುತ್ತದೆ ಎಂದು ತಿಳಿದರೆ ಅದು ತಪ್ಪು ಕಲ್ಪನೆ. ಈಗಾಗಲೇ ಕರ್ನಾಟಕದ ಹಲವು ಭಾಗಗಳಲ್ಲಿ ವಿವಿಧ ರಾಜ್ಯದಿಂದ ಕೆಲಸ, ವ್ಯಾಪಾರ, ಸಂಸಾರ ಹೀಗೆ ಹಲವು ಕಾರಣಗಳಿಗೆ ಬಂದು ನೆಲಿಸಿದ ಅದೆಷ್ಟೋ ಜನರಿದ್ದಾರೆ. ರಾಜ್ಯದಲ್ಲಿ ಒಂದು ಪಕ್ಷ ಗೆಲ್ಲಲು ಈ ವಲಸಿಗರು ವೋಟ್ ಬಹಳ ಮುಖ್ಯವಾಗಿರುತ್ತದೆ.

Karnataka Elections 2023: ವಿಧಾನಸಭಾ ಚುನಾವಣೆ 2023; ನಿರ್ಣಾಯಕ ಪಾತ್ರ ವಹಿಸಲಿರುವ ವಲಸಿಗರು!
Immigrants to play crucial role in 2023 Vidhan Sabha electionsImage Credit source: Firstpost
Follow us
ನಯನಾ ಎಸ್​ಪಿ
| Updated By: ಡಾ. ಭಾಸ್ಕರ ಹೆಗಡೆ

Updated on:Apr 03, 2023 | 11:34 AM

ಕರ್ನಾಟಕದಲ್ಲಿ ಚುನಾವಣೆ (Vidhan Sabha Elections 2023) ಅಬ್ಬರ ಜೋರಾಗಿದೆ. ಚುನಾವಣಾ ದಿನಾಂಕ ಪ್ರಕಟವಾದ ನಂತರ ಪಕ್ಷಗಳ ತಾಯಾರಿ, ಪ್ರಚಾರ (Election Campaign) ಹೆಚ್ಚಿದೆ. ಅದೇ ರೀತಿ ಕಾನೂನು ಬಂದೋಬಸ್ತು ಹೆಚ್ಚಾಗಿದೆ. ಇದೆಲ್ಲದರ ನಡುವೆ ಚುನಾವಣೆಯಲ್ಲಿ ಒಂದು ಪಕ್ಷ ಗೆಲ್ಲಲು ಕನ್ನಡಿಗರ ವೋಟ್ ಮಾತ್ರ ಮುಖ್ಯವಾಗಿರುತ್ತದೆ ಎಂದು ತಿಳಿದರೆ ಅದು ತಪ್ಪು ಕಲ್ಪನೆ. ಈಗಾಗಲೇ ಕರ್ನಾಟಕದ ಹಲವು ಭಾಗಗಳಲ್ಲಿ ವಿವಿಧ ರಾಜ್ಯದಿಂದ ಕೆಲಸ, ವ್ಯಾಪಾರ, ಸಂಸಾರ ಹೀಗೆ ಹಲವು ಕಾರಣಗಳಿಗೆ ಬಂದು ನೆಲಿಸಿದ ಅದೆಷ್ಟೋ ಜನರಿದ್ದಾರೆ. ರಾಜ್ಯದಲ್ಲಿ ಒಂದು ಪಕ್ಷ ಗೆಲ್ಲಲು ಈ ವಲಸಿಗರು ವೋಟ್ (Migrants vote) ಬಹಳ ಮುಖ್ಯವಾಗಿರುತ್ತದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ತೆಲುಗರ ಸಂಖ್ಯೆ ಹೆಚ್ಚಿದ್ದರೆ, ಬೆಳಗಾವಿ, ನಿಪ್ಪಾಣಿ, ಕಾರವಾರ ಕಡೆಗಳಲ್ಲಿ ಮರಾಠಿಗರ ಸಂಖ್ಯೆ ಹೆಚ್ಚಿದೆ. ಇನ್ನು ಬೆಂಗಳೂರಿನ ಬಗ್ಗೆ ಹೇಳುವುದಾದರೆ, ಶೇ. 44% ಕನ್ನಡಿಗರಿದ್ದರೆ, ಉಳಿದ ಶೇ.56% ಅಷ್ಟು ಇತರ ಭಾಷಿಕರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ, ಸುಮಾರು 16-17 ಲಕ್ಷ ತಮಿಳರು, 25-30 ಲಕ್ಷ ತೆಲುಗರು, 4-5 ಲಕ್ಷ ಕೇರಳದವರು ವಾಸವಾಗಿದ್ದಾರೆ. ಸುಮಾರು ಶೇ.11-12% ಅಷ್ಟು ರಾಜಸ್ಥಾನಿ, ಬಿಹಾರಿ, ಪಶ್ಚಿಮ ಬಂಗಾಳದ ಜನರು, ಒಟ್ಟಾರೆ ಉತ್ತರ ಭಾರತದ ಜನರು ಬೆಂಗಳೂರಿನಲ್ಲಿದ್ದಾರೆ.

ಇದರಲ್ಲಿ ಸಾಕಷ್ಟು ಜನರು ವೋಟರ್ ಐಡಿಯನ್ನು ಹೊಂದಿಲ್ಲ. ಆದರೆ ರಾಜಸ್ಥಾನಿಗಳು ಅದರಲ್ಲಿಯೂ ಜೈನ ಸಮುದಾಯದವರು ಬೆಂಗಳೂರಿನ ಸಾಕಷ್ಟು ಕಡೆಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ, ಏಕೆಂದರೆ ಜೈನ ಸಮುದಾಯದ 80% ಜೈನರ ಬಳಿ ವೋಟರ್ ಐಡಿ ಇದೆ. ಇನ್ನು ತೆಲುಗರ ಬಗ್ಗೆ ಹೇಳುವುದೇ ಬೇಡ, ಸುಮಾರು 14%-15% ಕ್ಕಿಂತಲೂ ಹೆಚ್ಚು ತೆಲುಗರು ಬೆಂಗಳೂರಿನಲ್ಲಿ ಇರುವುದರಿಂದ ಈ ಸಮುದಾಯದವರು ಚುನಾವಣೆಯಲ್ಲಿ ಅದರಲ್ಲೂ ಬೆಂಗಳೂರು ಭಾಗದಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ.

ಬೆಂಗಳೂರಿನ ಯಾವ ವಾರ್ಡ್ ಅಲ್ಲಿ ಯಾವ ಸಮುದಾಯದ ಮೇಲುಗೈ?

ಮೊದಲಿಗೆ ಬೆಂಗಳೂರು ದಕ್ಷಿಣವನ್ನು ನೋಡಿದರೆ, ಅದರಲ್ಲೂ ಬಸವನಗುಡಿ ಅಂಕಿಅಂಶ ಹೀಗಿದೆ. ಬಸವನಗುಡಿಯಲ್ಲಿ ಕನ್ನಡಿಗರ ನಂತರ ರಾಜಾಸ್ತಾನಿಗಳು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಜೊತೆಗೆ ತಮಿಳರು ವಾಸಿಸುತ್ತಿದ್ದಾರೆ. ಸುಮಾರು 18,000 ರಾಜಾಸ್ತಾನಿಗಳು ಬಸವನಗುಡಿ ಭಾಗದಲ್ಲಿದ್ದರೆ, 3,000-4,000 ತಮಿಳರಿದ್ದಾರೆ, ಹಾಗಾಗಿ 2023 ವಿಧಾನಸಭಾ ಚುನಾವಣೆಯಲ್ಲಿ ಅದರಲ್ಲೂ ಬಸವನಗುಡಿ ಹಾಗು ಚಿಕ್ಕಪೇಟೆ ಕ್ಷೇತ್ರದಲ್ಲಿ ರಾಜಸ್ಥಾನಿಗಳು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಗಾಂಧಿನಗರ ಕ್ಷೇತ್ರದಲ್ಲಿ ಸುಮಾರು 27,000 ದಿಂದ 28,000 ರಾಜಸ್ಥಾನಿ ಮತ್ತು ತಮಿಳರಿದ್ದಾರೆ, ಗಾಂಧಿನಗರದಲ್ಲಿ ಈ ಎರಡು ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತದೆ. ಪದ್ಮನಾಭನಗರ ಕ್ಷೇತ್ರದಲ್ಲಿ ಕಮ್ಮಾ ನಾಯ್ಡು ಸಮುದಾಯದವರು ಹೆಚ್ಚಿದ್ದು, ಇವರ ಮತ ಮುಖ್ಯವಾಗಿರುತ್ತದೆ.

ಇದನ್ನೂ ಓದಿ: ಜೆಡಿಎಸ್​​​​ ಶಾಸಕ ಶಿವಲಿಂಗೇಗೌಡ ರಾಜೀನಾಮೆ ಸಲ್ಲಿಕೆ

ಇನ್ನು ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಉತ್ತರ ಭಾರತದವರು ಹೆಚ್ಚು ಕಾಣಿಸಿಕೊಳ್ಳುತ್ತಾರೆ, ಜೊತೆಗೆ ತೆಲುಗರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಮಹದೇವಪುರದಲ್ಲೂ ಸುಮಾರು 8 ಲಕ್ಷ ಉತ್ತರ ಭಾರತ ಹಿಂದಿ ಭಾಷಿಕರಿದ್ದಾರೆ, ಅದರಲ್ಲೂ ಸುಮಾರು 7 ಲಕ್ಷ ಬಿಹಾರಿಗಳಿದ್ದಾರೆ. ವಿಜಯನಗರದಲ್ಲಿ 10,000-12,000 ರಾಜಾಸ್ತಾನಿಗಳು ವಾಸಿಸುತ್ತಿದ್ದಾರೆ. ಕೊನೆಯದಾಗಿ ಬ್ಯಾಟರಾಯನಪುರದಲ್ಲಿ ಅತಿ ಹೆಚ್ಚು ಬಿಹಾರಿಗಳನ್ನು ನೋಡಬಹುದು. ಸುಮಾರು 25,000-30,000 ಬಿಹಾರಿಗಳಿರುವ ಈ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರವೂ ಅಬ್ಬರದಿಂದ ಸಾಗುತ್ತಿದೆ.

Published On - 1:48 pm, Sun, 2 April 23