AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಿಗದಿ, ಇಲ್ಲಿದೆ ಸಂಭವನೀಯ ಅಭ್ಯರ್ಥಿಗಳ 2ನೇ ಪಟ್ಟಿ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧ ಕಾಂಗ್ರೆಸ್​ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಲು ಸಿದ್ಧತೆ ನಡೆಸಿದ್ದು, ಈ ಸಂಬಂಧ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಿಗದಿಯಾಗಿದೆ.

ಕೊನೆಗೂ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಿಗದಿ, ಇಲ್ಲಿದೆ ಸಂಭವನೀಯ ಅಭ್ಯರ್ಥಿಗಳ  2ನೇ ಪಟ್ಟಿ
ರಮೇಶ್ ಬಿ. ಜವಳಗೇರಾ
|

Updated on: Apr 02, 2023 | 1:47 PM

Share

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ(Karnataka Assembly Elections 2023) ದಿನಾಂಕ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್‌ ಪಾಳಯದಲ್ಲಿ ಟಿಕೆಟ್‌ನದ್ದೇ ಗೊಂದಲ ಶುರುವಾಗಿದೆ. ಮೂಲ-ವಲಸಿಗ ಗುದ್ದಾಟದಿಂದ ಕೋಲಾಹಲವೇ ಸೃಷ್ಟಿಸಿದೆ. ಹೌದು.. ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕ್ಲಿಯರ್ ಮಾಡಿ ನಿಟ್ಟುಸಿರು ಬಿಟ್ಟಿದ್ದ ಕಾಂಗ್ರೆಸ್ ಮನೆಯಲ್ಲಿ ಇದೀಗ ಭಿನ್ನಮತ ಸ್ಫೋಟವಾಗಿದೆ. 2ನೇ ಪಟ್ಟಿಗೆ ಕೈ ಹಾಕಿಕರುವ ಕಾಂಗ್ರೆಸ್‌ಗೆ ನೂರು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯೇ ಕಗ್ಗಂಟಾಗಿದೆ. ಈ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ 100 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಸಂಬಂಧ ಕೊನೆಗೂ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ (congress election committee)ಸಭೆ ನಿಗದಿಯಾಗಿದೆ. ಹೀಗಾಗಿ ಎರಡನೇ ಪಟ್ಟಿಯಲ್ಲಿ ಯಾರಿಗೆಲ್ಲ ಟಿಕೆಟ್​ ಸಿಗಲಿ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Karnataka Assembly Election 2023 Live: ಜೆಡಿಎಸ್​​​​ ಶಾಸಕ ಶಿವಲಿಂಗೇಗೌಡ ರಾಜೀನಾಮೆ ಸಲ್ಲಿಕೆ

ಎರಡನೇ ಪಟ್ಟಿ ಘೋಷಣೆ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಏಪ್ರಿಲ್ 4ರಂದು ನವದೆಹಲಿಯಲ್ಲಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಾಕಿ ಉಳಿದಿರುವ 100 ಕ್ಷೇತ್ರಗಳ ಅಭ್ಯರ್ಥಿ ಅಂತಿಮಗೊಳಿಸುವ ಸಂಬಂಧ ಚರ್ಚೆ ನಡೆಯಲಿದೆ. ಈ ನೂರು ಕ್ಷೇತ್ರಗಳಲ್ಲಿ ಇಬ್ಬರಿಗಿಂತ ಹೆಚ್ಚು ಟಿಕೆಟ್​ ಆಕಾಂಕ್ಷಿಗಳು ಇದ್ದಾರೆ. ಈ ಹಿನ್ನಲೆಯಲ್ಲಿ ಯಾರಿಗೆ ಟಿಕೆಟ್​ ನೀಡಬೇಕು ಎನ್ನುವುದು ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಹೀಗಾಗಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ ಕೆಲ ಕ್ಷೇತ್ರಗಳ ಟಿಕೆಟ್​ ಆಕಾಂಕ್ಷಿಗಳ ಸಂಧಾನ ಸಭೆ ನಡೆಸುತ್ತಿದ್ದಾರೆ. ಇನ್ನು ಸಂಧಾನ ಯಶಸ್ವಿಯಾಗದ ಕ್ಷೇತ್ರಗಳ ಬಗ್ಗೆ ಹೈಕಮಾಂಡ್​​ ವರದಿ ನೀಡಿದೆ. ಅಲ್ಲದೇ ಆಕಾಂಕ್ಷಿಗಳಿಗೆ ರಣದೀಪ್​ ಸುರ್ಜೆವಾಲ ಸಂಪರ್ಕಿಸುವಂತೆ ಹೇಳಿ ಕೈತೊಳೆದುಕೊಂಡಿದ್ದಾರೆ.

ಕಾಂಗ್ರೆಸ್ ಇತ್ತೀಚೆಗೆ 124 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿ ಸಂಬಂಧ ಯಾವುದೇ ಬಂಡಾಯಗಳು ಎದುರಾಗಿಲ್ಲ. ಆದ್ರೆ, ಇದೀಗ ಎರಡನೇ ಪಟ್ಟಿ ಬಿಡುಗಡೆಗೆ ಕೆಲವು ಕ್ಷೇತ್ರಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಕಾಂಕ್ಷಿಗಳಿದ್ದು ಈ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಜಟಿಲವಾಗಲಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಎಚ್ಚರಿಕೆಯ ಹೆಜ್ಜೆ ಇಡಲು ಕಾಂಗ್ರೆಸ್ ನಾಯಕರು ನಿರ್ಧಾರ ಮಾಡಿದ್ದಾರೆ.

ಇನ್ನು ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಾಡಿದ್ದು ಟಿಕೆಟ್​ ಫೈನಲ್​ ಮಾಡುವ ಕುರಿತು ಸಭೆ ಮಾಡಲಿದ್ದು, ಇನ್ನು ಎರಡ್ಮೂರು ದಿನಗಳಲ್ಲಿ ಕಾಂಗ್ರೆಸ್​ನ 2ನೇ ಪಟ್ಟಿ ಬಿಡುಗಡೆ ಆಗಲಿದೆ. ಸಭೆ ನಡೆಸಿದ ಬಳಿಕ ಕಾಂಗ್ರೆಸ್​​ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ಮತ್ತೊಂದೆಡೆ ಡಿಕೆ ಶಿವಕುಮಾರ್ ಮಾತನಾಡಿದ್ದು, ಅಭ್ಯರ್ಥಿಗಳ 2ನೇ ಪಟ್ಟಿಗೆ ಮಲ್ಲಿಕಾರ್ಜುನ ಖರ್ಗೆ ಸಹಿ ಹಾಕಬೇಕು. ಬಳಿಕ ತೀರ್ಮಾನ ಆಗುತ್ತದೆ. ವಲಸಿಗ ಶಾಸಕರು, ಸಚಿವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಬಗ್ಗೆ ಮಾತನಾಡಲ್ಲ, ಮಾತಾಡಿದ್ರೆ ಅದೇ ದೊಡ್ಡ ಸುದ್ದಿ ಆಗುತ್ತದೆ. ಕಾಂಗ್ರೆಸ್​ನಲ್ಲಿ ಯಾವುದೇ ಬಂಡಾಯವಿಲ್ಲ, ಆಕಾಂಕ್ಷಿಗಳು ಹೆಚ್ಚಿದ್ದಾರೆ. ಯಾವುದೇ ಬ್ಲ್ಯಾಕ್​​ಮೇಲ್​ಗೆ ಹೆದರಲ್ಲ. ಬಿಜೆಪಿ ಹಾಗೂ ಜನತಾದಳ ಪಕ್ಷದಲ್ಲೇ ಬಂಡಾಯವಿದೆ ಎಂದರು.

ಹೀಗಿದೆ ಸಂಭವನೀಯ ಅಭ್ಯರ್ಥಿಗಳು

1.ನಿಪ್ಪಾಣಿ: ಕಾಕಾ ಸಾಹೇಬ್ ಪಾಟೀಲ್ 2.ಅಥಣಿ: ಗಜಾನನ ಮಂಗಸೂಳಿ 3.ರಾಯಬಾಗ: ಶ್ಯಾಮ್ ಘಾಟ್ಗಿ/ ಸೆಲ್ವಕುಮಾರ್ 4.ಅರಭಾವಿ: ಅರವಿಂದ ದಳವಾಯಿ 5.ಗೋಕಾಕ್: ಅಶೋಕ್ ಪೂಜಾರಿ/ 6.ಬೆಳಗಾವಿ ಉತ್ತರ: ಫಿರೋಜ್ ಸೇಠ್ 7.ಕಿತ್ತೂರು: ಡಿ‌.ಬಿ.ಇಮಾನ್ದಾರ್/ 8.ಸವದತ್ತಿ ಯಲ್ಲಮ್ಮ :ಉದಯ್ ಕುಮಾರ್ 9.ಮುದೋಳ್ : ಆರ್ ಬಿ ತಿಮ್ಮಾಪುರ 10.ತೆರದಾಳ : ಉಮಾಶ್ರೀ 11.ಬೀಳಗಿ: ಜಿ.ಟಿ ಪಾಟೀಲ್ 12.ಬಾಗಲಕೋಟೆ: ಎಚ್ ವೈ ಮೇಟಿ/ ಮೇಟಿ ಮಗಳು ಬಾಯಕ್ಕ 13. ದೇವರಹಿಪ್ಪರಗಿ- ಎಸ್.ಆರ್.ಪಾಟೀಲ್ 14: ಚನ್ನಪಟ್ಟಣ:ಯೋಗಿಶ್ವರ್ ಬರುವ ಸಾಧ್ಯತೆ 15. ವಿಜಯಪುರ- ಮುಖ್ಬಲ್ ಭಗವಾನ್ 16.ನಾಗಠಾಣ- ಕಾಂತಾ ನಾಯಕ್/ರಾಜು ಅಲ್ಗುರಾ 17.ಸಿಂದಗಿ- ಅಶೋಕ್ ಮನಗೂಳಿ 18. ಅಫಜಲಪುರ- ಅರುಣ್ ಕುಮಾರ್ 19 ಯಾದಗಿರಿ- ಅನುರಾಧ ಮಾಲಕರೆಡ್ಡಿ 20.ಗುರುಮಠ್ಕಲ್ – ಬಾಬುರಾವ್ ಚಿಂಚನಸೂರ್ 21. ಕಲ್ಬುರ್ಗಿ ಗ್ರಾಮೀಣ- ವಿಜಯ್ ಕುಮಾರ್ 22. ಕಲ್ಬುರ್ಗಿ ದಕ್ಷಿಣ-ಅಲ್ಲಮಪ್ರಭು ಪಾಟೀಲ್ 23. ಬಸವಕಲ್ಯಾಣ- ವಿಜಯ್ ಸಿಂಗ್,ಆನಂದ್ ದೇವಪ್ಪ,ಮಾಲಾ ನಾರಾಯಣ ರಾವ್ 24. ಔರಾದ್- ಭೀಮರಾವ್ ಸಿಂಧೆ 25. ಮಾನ್ವಿ- ಹಂಪಯ್ಯ ನಾಯಕ್ 26. ದೇವದುರ್ಗ- ಬಿ.ವಿ ನಾಯಕ್,/ ರಾಜಶೇಖರ ನಾಯಕ್ 27. ಲಿಂಗಸೂಗುರು- ಡಿ ಎಸ್ ಹುಲಗೇರಿ,ರುದ್ರಪ್ಪ 28.ಸಿಂಧನೂರು- ಹಂಪನಗೌಡ ಬಾದರ್ಲಿ 29. ಗಂಗಾವತಿ- ಇಕ್ಬಾಲ್ ಅನ್ಸಾರಿ 30. ನರಗುಂದ- ಬಿ ಆರ್ ಯಾವಗಲ್ 31,ಶಿರಹಟ್ಟಿ- ರಾಮಕೃಷ್ಣ ದೊಡ್ಡಮನಿ 32.ನವಲಗುಂದ- ಕೋನರೆಡ್ಡಿ 33.ಕುಂದಗೋಳ- ಕುಸುಮಾ ಶಿವಳ್ಳಿ/ ಷಣ್ಮುಖ ಶಿವಳ್ಳಿ 34.ಧಾರವಾಡ- ವಿನಯ್ ಕುಲಕರ್ಣಿ, ಶಿವಲೀಲಾ ಕುಲಕರ್ಣಿ, 35.ಕಲಘಟಗಿ- ಸಂತೋಷ ಲಾಡ್ 36. ಹುಧಾ ಸೆಂಟ್ರಲ್- ರಜತ್ ಉಲಾಗಡ್ಡಿಮಠ್ 37.ಹುಧಾ ಪಶ್ಚಿಮ- ಮೋಹನ್ ಲಿಂಬಿಕಾಯಿ 38.ಕುಮಟ- ನೀವೆದಿತಾ ಆಳ್ವಾ 39.ಶಿರಸಿ- ಭೀಮಣ್ಣ ನಾಯ್ಕ್, 40.ಶಿಗ್ಗಾಂವಿ- ವಿನಯ್ ಕುಲಕರ್ಣಿ, ಸೋಮಣ್ಣ ಬೇವಿನಮರದ್ 41.ಶಿರಗುಪ್ಪ- ಬಿ ಎಂ ನಾಗರಾಜ್, ಮುರುಳಿಕೃಷ್ಣ 42. ಕೂಡ್ಲಗಿ- ನಾಗರಾಜ್,ಡಾ. ಶ್ರೀನಿವಾಸ್ 43. ಬಳ್ಳಾರಿ ನಗರ- ನಾರಾ ಭರತ್ ರೆಡ್ಡಿ, ದಿವಾಕರ್ ಬಾಬು, 44. ಚಿತ್ರದುರ್ಗ- ವೀರೇಂದ್ರ / ರಘು ಆಚಾರ್ 45.ಮೊಳಕಾಲ್ಮೂರ್- ಎನ್ ವೈ. ಗೋಪಾಲಕೃಷ್ಣ,/ಯೋಗೇಶ್ ಬಾಬು 46.ಹೊಳಲ್ಕೆರೆ- ಎಚ್. ಆಂಜನೇಯ, ಸವಿತಾ ರಘು 47.ಜಗಳೂರ್- ರಾಜೇಶ್/ ದೇವೆಂದ್ರಪ್ಪ 48.ಹರಿಹರ- ರಾಮಪ್ಪ 49.ಚನ್ನಗಿರಿ- ವಡ್ನಾಳ್ ರಾಜಣ್ಣ /ಮಗ ಅಶೋಕ್ 50.ಹೊನ್ನಳ್ಳಿ- ಶಾಂತನಗೌಡ/ ಹೆಚ್, ಬಿ ಮಂಜಪ್ಪ 51.ಶಿವಮೊಗ್ಗ ಗ್ರಾಮೀಣ- ಪಲ್ಲವಿ,ನಾರಾಯಣಸ್ವಾಮಿ 52.ಶಿವಮೊಗ್ಗ-ಸುಂದರೇಶ್/ ಯೋಗೇಶ್ 53.ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ/ ಮಂಜುನಾಥ್ ಗೌಡ 54. ಶಿಕಾರಿಪುರ-ಗೋಣಿ ಮಾಹಂತೇಶ್/ ಕೌಲಿ ಗಂಗಾಧರಪ್ಪ 55.ಉಡುಪಿ- ಕೃಷ್ಣ ಮೂರ್ತಿ ಆಚಾರ್/ ದಿನೇಶ್ ಹೆಗಡೆ 56.ಕಾರ್ಕಳ- ಉದಯ್ ಕುಮಾರ್ ಶೆಟ್ಟಿ 57. ಮೂಡಗೆರೆ- ನಯನಾ ಮೋಟಮ್ಮ 58.ಚಿಕ್ಕಮಗಳೂರು-ಹೆಚ್ ಡಿ ತಮ್ಮಯ್ಯ/ ಹರೀಶ್ 59.ತರೀಕೆರೆ- ಗೋಪಿಕೃಷ್ಣ/ ಶ್ರೀನಿವಾಸ್ 60.ಕಡೂರು,ವೈ ಎಸ್ ವಿ ದತ್ತಾ/ಆನಂದ್ 61.ತುಮಕೂರು ಗ್ರಾಮೀಣ- ನಿಂಗಪ್ಪ/ಸೂರ್ಯ ಮುಕುಂದರಾಜ್ 62.ಕೋಲಾರ- ಸಿದ್ದರಾಮಯ್ಯ/ಗೋವಿಂದೆಗೌಡ 63.ಮುಳಬಾಗಿಲು- ನಾರಾಯಣಸ್ವಾಮಿ, ಮಾರಯ್ಯ 64. ಚಿಕ್ಕಬಳ್ಳಾಪುರ- ಕೊತ್ತುರು ಮಂಜುನಾಥ್, ವಿನಯ್ ಶ್ಯಾಮ್ 65.ಗುಬ್ಬಿ – ಶ್ರೀನಿವಾಸ್ 66.ತುಮಕೂರು- ರಫೀಕ್ ಅಹ್ಮದ್, ಅತೀಕ್ ಅಹ್ಮದ್,ಅಟ್ಯಿಕ ಬಾಬು 67.ಯಲಹಂಕ- ಕೇಶವ್ ರಾಜಣ್ಣ 68. ಕೆ ಆರ್ ಪುರಂ- ಡಿಕೆ ಮೋಹನ್ ಬಾಬು,ಉದಯಕುಮಾರ್ 69.ಯಶವಂತಪುರ- ಚಿಕ್ಕರಾಯಪ್ಪ 70.ದಾಸರಹಳ್ಳಿ- ಮುನಿರಾಜು/ಧನಂಜಯ ಗೌಡ 71. ಮಹಾಲಕ್ಷ್ಮಿ- ಕೇಶವಮೂರ್ತಿ 72.ಪುಲಕೇಶಿ ನಗರ- ಅಖಂಡ ಶ್ರೀನಿವಾಸ್ ಮೂರ್ತಿ 73.ಸಿವಿ ರಾಮನ್ ನಗರ- ಸಂಪತ್ ರಾಜ್ 74.ಚಿಕ್ಕಪೇಟೆ- ಆರ್ ವಿ ದೇವರಾಜ್, ಗಂಗಾಂಭಿಕಾ 75. ಪದ್ಮನಾಭ ನಗರ- ಪಿಜಿಆರ್ ಸಿಂದ್ಯಾ 76. ಬೊಮ್ಮನಹಳ್ಳಿ- ಉಮಾಪತಿಗೌಡ 77. ಬೆಂಗಳೂರು ದಕ್ಷಿಣ- ಸುಷ್ಮಾರಾಜಗೋಲ್ ರೆಡ್ಡಿ/ಆರ್ ಕೆ ರಮೇಶ್ 78.ಮೇಲುಕೋಟೆ- ದರ್ಶನ್ ಪುಟ್ಟಣ್ಣಯ್ಯ ಗೆ ಬೆಂಬಲ 79. ಮದ್ದೂರು- ಉದಯ್ ಗೌಡ 80.ಮಂಡ್ಯ- ಡಾ.ಕೃಷ್ಣ/ ರಾಧಾಕೃಷ್ಣ ರವಿ ಗಾಣಿಗ 81.ಕೆ ಆರ್ ಪೇಟೆ- ವಿಜಯ್ ರಾಮೇಗೌಡ, ದೇವರಾಜ್, 82. ಶ್ರವಣಬೆಳಗೊಳ- ಗೋಪಾಲ್ ಸ್ವಾಮಿ 83. ಅರಸಿಕೆರೆ- ಶಿವಲಿಂಗೇಗೌಡ 84.ಹಾಸನ-ಮಂಜೇಗೌಡ, ಸ್ವರೂಪ,ಬನವಾಸೆ ರಂಗಸ್ವಾಮಿ 85.ಬೇಲೂರು, ಗಂಡಸಿ ಶಿವರಾಮ್/ ರಾಜಶೇಖರ 86.ಅರಕಲಗೂಡು- ಶ್ರೀಧರ್ ಗೌಡ/ಕೃಷ್ಣ

87.ಅರಕಲಗೂಡು- ಶ್ರೀಧರ್ ಗೌಡ/ಕೃಷ್ಣೆಗೌಡ 88. ಪುತ್ತೂರು- ಶಕುಂತಲಾ ಶೆಟ್ಟಿ 89. ಮಂಗಳೂರು ಉತ್ತರ- ಮೊಹಿದ್ದಿನ್ ಬಾವಾ/ ಇನಾಯತ್ ಅಲಿ 90.ಮಂಗಳೂರು ದಕ್ಷಿಣ- ಪದ್ಮಾರಾಜ್ 91. ಮಡಿಕೇರಿ-ಜಿ.ವಿಜಯ/ಚಂದ್ರಮೌಳಿ/ ಮಂಥನಗೌಡ 92.ಚಾಮುಂಡೇಶ್ವರಿ- ಮರಿಗೌಡ,ಮಾವಿನಹಳ್ಳಿ‌ ಸಿದ್ದೆಗೌಡ 93.ಕೃಷ್ಣ ರಾಜ- ಸೋಮಶೇಖರ್, 94. ಚಾಮರಾಜ- ಹರೀಶ್ ಗೌಡ 95. ಕೊಳ್ಳೇಗಾಲ- ನಂಜುಂಡ ಸ್ವಾಮಿ,ಜಯಣ್ಣ ಬಾಲರಾಜ್ 96.ಶಿಡ್ಲಘಟ್ಟ-ರಾಜೀವ್ ಗೌಡ 97.ಹರಪ್ಪನಹಳ್ಳಿ:ಕೊಟ್ರೇಶ್/ ಎಂ.ಪಿ.ಪ್ರಕಾಶ್ ಮಗಳಿಗೆ 98.ಬಾದಾಮಿ-ದೇವರಾಜ್ ಪಾಟೀಲ್/ ಭೀಮಸೇನಾ ಚಿಮ್ಮನಕಟ್ಟಿ 99.ಬೆಳಗಾವಿ ದಕ್ಷಿಣ- 100.ರಾಯಚೂರು-ರವಿಬೋಸ್ ರಾಜ್/

ಇನ್ನಷ್ಟು ರಾಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ